ವಕೀಲರೊಬ್ಬರ ಮೇಲೆ ಹಲ್ಲೆ, ಅಮೃತಹಳ್ಳಿ ಸ್ಟೇಶನ್ನಿನ 4 ಪೊಲೀಸರ ವಿರುದ್ಧ ಎಫ್ ಐ ಆರ್
ಗಲಾಟೆ ಸದ್ದು ಕೇಳಿ ಹೊರಗೋಡಿ ಬರುವ ಸುದರ್ಶನ್ ಪತ್ನಿಯವರನ್ನೂ ಪೊಲೀಸರು ಎಳೆದಾಡಿದ್ದಾರೆ. ವಕೀಲ ಅವರು ನೀಡಿದ ದೂರಿನ ಮೇರೆಗೆ ಅವರ ಮೇಲೆ ಹಲ್ಲೆ ನಡೆಸಿದ ನಾಲ್ವರು ಪೊಲೀಸರ ವಿರುದ್ಧ ಎಫ್ ಐ ಅರ್ ದಾಖಲಿಸಲಾಗಿದೆ.
Bengaluru: ವಕೀಲರು ಮತ್ತು ಪೊಲೀಸರ ನಡುವೆ ತಿಕ್ಕಾಟಗಳು ಆಗಾಗ ನಡೆಯುತ್ತಿರುತ್ತವೆ. ಈ ವಿಡಿಯೋ ನೋಡಿ. ಬಾರೊಂದರ ಬಳಿ ನಡೆದ ಗಲಾಟೆಗೆ ಸಂಬಂಧಿಸಿದಂತೆ ವಿಚಾರಣೆಗೆಂದು ಅಮೃತಹಳ್ಳಿಯ (Amrithalli) ನಾಲ್ವರು ಪೊಲೀಸರು ವಕೀಲ (advocate) ಸುದರ್ಶನ (Sudarshan) ಮನೆಗೆ ಬಂದಿದ್ದಾರೆ. ವಕೀಲರ ಮನೆ ಮುಂದೆ ವಕೀಲ ಮತ್ತು ಪೊಲೀಸರ ನಡುವೆ ಮಾತಿನ ಚಕಮಕಿ ನಡೆದು ಪೊಲೀಸರು ಸುದರ್ಶನ ಮೇಲೆ ಹಲ್ಲೆ ಮಾಡಲಾರಂಭಿಸುತ್ತಾರೆ. ಗಲಾಟೆ ಸದ್ದು ಕೇಳಿ ಹೊರಗೋಡಿ ಬರುವ ಸುದರ್ಶನ್ ಪತ್ನಿಯವರನ್ನೂ ಪೊಲೀಸರು ಎಳೆದಾಡಿದ್ದಾರೆ. ವಕೀಲ ಅವರು ನೀಡಿದ ದೂರಿನ ಮೇರೆಗೆ ಅವರ ಮೇಲೆ ಹಲ್ಲೆ ನಡೆಸಿದ ನಾಲ್ವರು ಪೊಲೀಸರ ವಿರುದ್ಧ ಎಫ್ ಐ ಅರ್ ದಾಖಲಿಸಲಾಗಿದೆ.
ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Latest Videos