‘ಮಹಾ’ ಸರಕಾರ ಪತನದಂಚಿಗೆ? ಮುಂದಿನ ರಾಜಕೀಯ ಚದುರಂಗದಾಟ ಏನು? ಎತ್ತ ಸಾಗಲಿದೆ – ಟಿವಿ9 ಡಿಜಿಟಲ್ ನಲ್ಲಿ ಚರ್ಚೆ
ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳನ್ನು ನೋಡಿದರೆ ಉದ್ಧವ್ ಠಾಕ್ರೆ ಅವರ ಸರಕಾರ ಡೋಲಾಯಮಾನ ಸ್ಥಿತಿಯಲ್ಲಿರುವಂತೆ ಕಾಣುತ್ತಿದೆ. ಈ ಕುರಿತಾದ ಚರ್ಚೆ ಮಧ್ಯಾಹ್ನ 3.30 ಕ್ಕೆ ನಡೆಯುವ ಈ ಕಾರ್ಯಕ್ರಮಕ್ಕೆ ನಿಮಗೆ ಸ್ವಾಗತ. TV 9 Kannada Digital Live
ಮಹಾರಾಷ್ಟ್ರದಲ್ಲಿ ನಡೆಯುತ್ತಿರುವ ರಾಜಕೀಯ ವಿದ್ಯಮಾನಗಳನ್ನು ನೋಡಿದರೆ ಉದ್ಧವ್ ಠಾಕ್ರೆ ಅವರ ಸರಕಾರ ಡೋಲಾಯಮಾನ ಸ್ಥಿತಿಯಲ್ಲಿರುವಂತೆ ಕಾಣುತ್ತಿದೆ. ಮಹಾರಾಷ್ಟ್ರ ರಾಜ್ಯ ರಾಜಕೀಯ ಕ್ಷಣ ಕ್ಷಣಕ್ಕೂ ತಿರುವು ಪಡೆಯುತ್ತಿದೆ. ಬಂಡಾಯ ಎದ್ದಿರುವ ಶಿವಸೇನೆಯ ಶಾಸಕರು ಏಕನಾಥ್ ಶಿಂಧೆ ಅವರನ್ನೇ ತಮ್ಮ ನಾಯಕ ಅಂತ ಹೇಳಿದ್ದಾರೆ. ಇನ್ನೊಂದೆಡೆ ರೆಬೆಲ್ ಶಾಸಕರ ಗುಂಪು ಸೇರಿದ್ದ ಶಿವಸೇನೆ ಶಾಸಕ ನಿತಿನ್ ದೇಶಮುಖ್ ಮರಳಿ ಸಿಎಂ ಉದ್ಧವ್ ಠಾಕ್ರೆ ಗುಂಪು ಸೇರಿದ್ದಾರೆ. ನನ್ನನ್ನು ಕಿಡ್ನಾಪ್ ಮಾಡಲಾಗಿತ್ತು. ಆದರೆ ನನ್ನ ನಿಷ್ಠೆ ಯಾವಾಗಲೂ ಶಿವಸೇನೆ ಹಾಗೂ ಉದ್ಧವ್ ಠಾಕ್ರೆ ಅವರಿಗೆ ಅಂತ ಹೇಳಿದ್ದಾರೆ. ಈ ನಡುವೆ ಕೋವಿಡ್ ಸೋಂಕಿಗೆ ತುತ್ತಾಗಿರುವ ಮುಖ್ಯಮಂತ್ರಿ ಉದ್ಧವ್ ಠಾಕ್ರೆ ನಾನು ರಾಜೀನಾಮೆ ನೀಡೋದಕ್ಕೆ ಸಿದ್ಧ ಎಂದಿದ್ದಾರೆ. ನನ್ನ ಪಕ್ಷದ ಒಬ್ಬನೇ ಒಬ್ಬ ಶಾಸಕ ಹೇಳಿದರೆ ನಾನು ರಾಜೀನಾಮೆ ನೀಡುತ್ತೇನೆ. ನಾನು ಯಾವತ್ತೂ ಅಧಿಕಾರಕ್ಕೆ ಅಂಟಿಕೊಂಡಿಲ್ಲ. ನಮ್ಮ ಪಕ್ಷದ ಇನ್ನೊಬ್ಬ ಶಾಸಕನನ್ನು ಸಿಎಂ ಮಾಡೋದಕ್ಕೆ ನಾನು ಸಿದ್ಧ ಅಂತಾನೂ ಸ್ಪಷ್ಟಪಡಿಸಿದ್ದಾರೆ. ಹಿಂದುತ್ವವು ನಮ್ಮ ಗುರುತಾಗಿದೆ ಮತ್ತು ಶಿವಸೇನೆ ಎಂದಿಗೂ ಹಿಂದೂತ್ವವನ್ನು ಬಿಡುವುದಿಲ್ಲ ಅಂತಾನೂ ಉದ್ಧವ್ ಠಾಕ್ರೆ ಹೇಳಿದ್ದಾರೆ.
ಈ ಕುರಿತಾದ ಚರ್ಚೆಯನ್ನು ಆ್ಯಂಕರ್ ಹರಿಪ್ರಸಾದ್ ಇಂದಿನ ಟಿವಿ9 ಡಿಜಿಟಲ್ ಲೈವ್ನಲ್ಲಿ ನಡೆಸಿಕೊಡಲಿದ್ದಾರೆ. ಮಧ್ಯಾಹ್ನ 3.30 ಕ್ಕೆ ನಡೆಯುವ ಈ ಕಾರ್ಯಕ್ರಮಕ್ಕೆ ನಿಮಗೆ ಸ್ವಾಗತ. TV 9 Kannada Digital Live
Also Read:
MVA Crisis: ಮಹಾರಾಷ್ಟ್ರ ಸರ್ಕಾರ ಪತನ ಸನ್ನಿಹಿತ, ಏಕನಾಥ ಶಿಂಧೆ ಬಣಕ್ಕೆ ಶಿವಸೇನೆಯ 42 ಶಾಸಕರ ಬೆಂಬಲ
ಕರ್ನಾಟಕದ ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ದೇಶದ ಇತರ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ