Gold Price Today: ಬೆಂಗಳೂರು, ಚೆನ್ನೈ ಸೇರಿ ಹಲವೆಡೆ ಚಿನ್ನದ ಬೆಲೆ ಏರಿಕೆ; ಬೆಳ್ಳಿ ದರ 300 ರೂ. ಕುಸಿತ

Silver Price Today: ಬೆಳ್ಳಿ ಬೆಲೆ ಇಂದು 300 ರೂ. ಕುಸಿತವಾಗಿದೆ. ಭಾರತದಲ್ಲಿ ನಿನ್ನೆ 1 ಕೆಜಿ ಬೆಳ್ಳಿಯ ದರ 60,500 ರೂ. ಇದ್ದುದು ಇಂದು 60,200 ರೂ. ಆಗಿದೆ.

Gold Price Today: ಬೆಂಗಳೂರು, ಚೆನ್ನೈ ಸೇರಿ ಹಲವೆಡೆ ಚಿನ್ನದ ಬೆಲೆ ಏರಿಕೆ; ಬೆಳ್ಳಿ ದರ 300 ರೂ. ಕುಸಿತ
ಸಾಂಂದರ್ಭಿಕ ಚಿತ್ರ
Follow us
| Updated By: ಸುಷ್ಮಾ ಚಕ್ರೆ

Updated on: Jun 24, 2022 | 5:58 AM

ಬೆಂಗಳೂರು: ಭಾರತದಲ್ಲಿ ನಿನ್ನೆ ಕುಸಿತವಾಗಿದ್ದ ಚಿನ್ನದ ಬೆಲೆ (Gold Rate) ಇಂದು 230 ರೂ. ಏರಿಕೆಯಾಗಿದೆ. ಬೆಳ್ಳಿಯ ಬೆಲೆಯಲ್ಲಿ (Silver Price) ಇಂದು 1 ಕೆಜಿಗೆ 300 ರೂ. ಕುಸಿತವಾಗಿದೆ. ನೀವು ಕೂಡ ಬಂಗಾರ ಖರೀದಿಸಲು ಯೋಚಿಸಿದ್ದರೆ ಭಾರತದ ಪ್ರಮುಖ ನಗರಗಳಲ್ಲಿ ಇಂದಿನ ಚಿನ್ನದ ಬೆಲೆ ಎಷ್ಟಿದೆ? ಎಂಬ ಮಾಹಿತಿ ಇಲ್ಲಿದೆ.

ಭಾರತದಲ್ಲಿ ಚಿನ್ನದ ಬೆಲೆ ಇಂದು ಮತ್ತೆ ಏರಿಕೆಯಾಗಿದೆ. ನಿನ್ನೆ 22 ಕ್ಯಾರೆಟ್ ಚಿನ್ನದ ಬೆಲೆ 47,450 ರೂ. ಇದ್ದುದು 47,650 ರೂ. ಆಗಿದೆ. ಹಾಗೇ, 24 ಕ್ಯಾರೆಟ್ ಚಿನ್ನದ ಬೆಲೆ 51,760 ರೂ. ಇದ್ದುದು 51,990 ರೂ. ಆಗಿದೆ. ಚಿನ್ನದ ಬೆಲೆ ಏರಿಳಿತದ ವಿಚಾರದಲ್ಲಿ ಅಂತಾರಾಷ್ಟ್ರೀಯ ಟ್ರೆಂಡ್, ಚಿನ್ನದ ಮೇಲಿನ ಆಮದು ಸುಂಕ ಮತ್ತು ಡಾಲರ್ ಎದುರು ರೂ. ಮೌಲ್ಯ ನಿರ್ಣಾಯಕವಾಗುತ್ತದೆ.

ಗುಡ್ ರಿಟರ್ನ್ಸ್​ ಮಾಹಿತಿ ಪ್ರಕಾರ, ಬೆಂಗಳೂರು, ಚೆನ್ನೈ, ಹೈದರಾಬಾದ್ ಸೇರಿ ಪ್ರಮುಖ ನಗರಗಳಲ್ಲಿ 22 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ. ಚೆನ್ನೈ- 47,700 ರೂ. ಮುಂಬೈ- 47,650 ರೂ, ದೆಹಲಿ- 47,650 ರೂ, ಕೊಲ್ಕತ್ತಾ- 47,650 ರೂ, ಬೆಂಗಳೂರು- 47,700 ರೂ, ಹೈದರಾಬಾದ್- 47,650 ರೂ, ಕೇರಳ- 47,650 ರೂ, ಪುಣೆ- 47,680 ರೂ, ಮಂಗಳೂರು- 47,700 ರೂ, ಮೈಸೂರು- 47,700 ರೂ. ಇದೆ.

ಇದನ್ನೂ ಓದಿ: Gold Price Today: ಭಾರತದಲ್ಲಿ ಚಿನ್ನದ ಬೆಲೆ ಮತ್ತೆ ಕುಸಿತ; ಬೆಳ್ಳಿ ದರವೂ 500 ರೂ. ಇಳಿಕೆ

ಹಾಗೇ, 24 ಕ್ಯಾರೆಟ್ ಚಿನ್ನದ ಇಂದಿನ ಬೆಲೆ ಹೀಗಿದೆ: ಚೆನ್ನೈ- 52,040 ರೂ, ಮುಂಬೈ- 51,990 ರೂ, ದೆಹಲಿ- 51,990 ರೂ, ಕೊಲ್ಕತ್ತಾ- 51,990 ರೂ, ಬೆಂಗಳೂರು- 52,040 ರೂ, ಹೈದರಾಬಾದ್- 51,990 ರೂ, ಕೇರಳ- 51,990 ರೂ, ಪುಣೆ- 52,070 ರೂ, ಮಂಗಳೂರು- 52,040 ರೂ, ಮೈಸೂರು- 52,040 ರೂ. ಆಗಿದೆ.

ಇಂದಿನ ಬೆಳ್ಳಿಯ ದರ: ಬೆಳ್ಳಿ ಬೆಲೆ ಇಂದು 300 ರೂ. ಕುಸಿತವಾಗಿದೆ. ಭಾರತದಲ್ಲಿ ನಿನ್ನೆ 1 ಕೆಜಿ ಬೆಳ್ಳಿಯ ದರ 60,500 ರೂ. ಇದ್ದುದು ಇಂದು 60,200 ರೂ. ಆಗಿದೆ. ಭಾರತದ ಪ್ರಮುಖ ನಗರಗಳ ಬೆಳ್ಳಿ ದರವನ್ನು ಗಮನಿಸುವುದಾದರೆ, ಬೆಂಗಳೂರು- 66,000 ರೂ, ಮೈಸೂರು- 66,000 ರೂ., ಮಂಗಳೂರು- 66,000 ರೂ., ಮುಂಬೈ- 60,200 ರೂ, ಚೆನ್ನೈ- 66,000 ರೂ, ದೆಹಲಿ- 60,200 ರೂ, ಹೈದರಾಬಾದ್- 66,000 ರೂ, ಕೊಲ್ಕತ್ತಾ- 60,200 ರೂ. ಆಗಿದೆ.