AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Vijay Sethupathi: ‘ಶುಗರ್​ಲೆಸ್’​ ಚಿತ್ರಕ್ಕೆ ವಿಜಯ್​ ಸೇತುಪತಿ ಅಭಿನಂದನೆ; ಪರಭಾಷೆ ಮಂದಿಯ ಗಮನ ಸೆಳೆದ ಕನ್ನಡ ಸಿನಿಮಾ

Sugarless Kannada Cinema: ವಿಶೇಷ ಕಥಾಹಂದರ ಇಟ್ಟುಕೊಂಡು ‘ಶುಗರ್​ಲೆಸ್​’ ಸಿನಿಮಾ ಮಾಡಲಾಗಿದೆ. ಈ ಚಿತ್ರದ ಗೆಲುವಿಗೆ ವಿಜಯ್​ ಸೇತುಪತಿ ಅಭಿನಂದನೆ ತಿಳಿಸಿದ್ದಾರೆ.

Vijay Sethupathi: ‘ಶುಗರ್​ಲೆಸ್’​ ಚಿತ್ರಕ್ಕೆ ವಿಜಯ್​ ಸೇತುಪತಿ ಅಭಿನಂದನೆ; ಪರಭಾಷೆ ಮಂದಿಯ ಗಮನ ಸೆಳೆದ ಕನ್ನಡ ಸಿನಿಮಾ
ವಿಜಯ್​ ಸೇತುಪತಿ, ಶುಗರ್​ಲೆಸ್​ ಸಿನಿಮಾ ಪೋಸ್ಟರ್​
TV9 Web
| Updated By: ಮದನ್​ ಕುಮಾರ್​|

Updated on: Jul 13, 2022 | 8:50 AM

Share

ಕನ್ನಡದ ಸಿನಿಮಾಗಳು (Kannada Cinema) ರಾಷ್ಟ್ರಮಟ್ಟದಲ್ಲಿ ಸದ್ದು ಮಾಡುತ್ತಿವೆ. ‘ಕೆಜಿಎಫ್​: ಚಾಪ್ಟರ್​ 2’ ಚಿತ್ರ ಮಾಡಿದ ಮೋಡಿ ಸಣ್ಣದೇನಲ್ಲ. ಹಾಗಂತ ಕೇವಲ ಹೈ ಬಜೆಟ್​ನ ಸಿನಿಮಾಗಳು ಮಾತ್ರ ಈ ರೀತಿ ಸದ್ದು ಮಾಡುತ್ತಿಲ್ಲ. ಬದಲಿಗೆ, ಒಳ್ಳೆಯ ಕಥಾವಸ್ತು ಇರುವ ಕನ್ನಡದ ಹಲವು ಸಿನಿಮಾಗಳು ಪರಭಾಷೆ ಮಂದಿಯ ಗಮನ ಸೆಳೆಯುತ್ತಿವೆ. ಇತ್ತೀಚೆಗೆ ‘777 ಚಾರ್ಲಿ’ ಸಿನಿಮಾ ಭಾರಿ ಯಶಸ್ಸು ಕಂಡಿತು. ಈಗಿನದ್ದು ‘ಶುಗರ್​ಲೆಸ್​’ (Sugarless Movie) ಸಿನಿಮಾದ ಸರದಿ. ಈ ಚಿತ್ರಕ್ಕೆ ಪ್ರೇಕ್ಷಕರಿಂದ ಮೆಚ್ಚುಗೆ ವ್ಯಕ್ತವಾಗುತ್ತಿದೆ. ಅಕ್ಕ-ಪಕ್ಕದ ರಾಜ್ಯಗಳ ಸೆಲೆಬ್ರಿಟಿಗಳು ಕೂಡ ಈ ಸಿನಿಮಾವನ್ನು ಹೊಗಳುತ್ತಿದ್ದಾರೆ. ದಕ್ಷಿಣ ಭಾರತದ ಸ್ಟಾರ್​ ನಟ ವಿಜಯ್​ ಸೇತುಪತಿ (Vijay Sethupathi) ಅವರು ‘ಶುಗರ್​ಲೆಸ್​’ ಚಿತ್ರಕ್ಕೆ ಅಭಿನಂದನೆ ತಿಳಿಸಿದ್ದಾರೆ.

ವಿಶೇಷ ಕಥಾಹಂದರ ಇಟ್ಟುಕೊಂಡು ‘ಶುಗರ್​ಲೆಸ್​’ ಸಿನಿಮಾ ಮಾಡಲಾಗಿದೆ. ಯೌವನದಲ್ಲೇ ಮಧುಮೇಹದಿಂದ ಬಳಲುವ ಯುವಕನ ಕುರಿತಾದ ಕಥೆ ಈ ಚಿತ್ರದಲ್ಲಿದೆ. ನಾಯಕನಾಗಿ ‘ದಿಯಾ’ ಸಿನಿಮಾ ಖ್ಯಾತಿಯ ಪೃಥ್ವಿ ಅಂಬಾರ್​ ನಟಿಸಿದ್ದಾರೆ. ನಿರ್ಮಾಪಕ ಕೆ.ಎಂ. ಶಶಿಧರ್​ ಅವರು ಬಂಡವಾಳ ಹೂಡುವುದರ ಜೊತೆಗೆ ನಿರ್ದೇಶಕವನ್ನೂ ಮಾಡಿ ಸೈ ಎನಿಸಿಕೊಂಡಿದ್ದಾರೆ. ಅವರ ಚೊಚ್ಚಲ ಆ್ಯಕ್ಷನ್​-ಕಟ್​ ಪ್ರಯತ್ನಕ್ಕೆ ಜನರು ಭೇಷ್​ ಎಂದಿದ್ದಾರೆ.

ಇದನ್ನೂ ಓದಿ
Image
ಅಂಕು ಡೊಂಕು ದಾರಿಯಲ್ಲಿ ಬಂದ ‘ಹೇ ಫಕೀರಾ’; ಪ್ರೇಕ್ಷಕರಿಗೆ ಇಷ್ಟವಾಯ್ತು ‘ವಿಕ್ರಾಂತ್ ರೋಣ’ ಹೊಸ ಹಾಡು
Image
‘ಘೋಸ್ಟ್​’ ಸ್ವಾಗತಿಸಿದ ಕಿಚ್ಚ ಸುದೀಪ್​; ಶಿವರಾಜ್​ಕುಮಾರ್ ಲುಕ್ ನೋಡಿ ಫ್ಯಾನ್ಸ್ ಫಿದಾ
Image
Gaalipata 2: ಯೋಗರಾಜ್​ ಭಟ್​ ಲೇಖನಿಯಲ್ಲಿ ಮತ್ತೊಂದು ಎಣ್ಣೆ ಸಾಂಗ್​; ‘ಗಾಳಿಪಟ 2’ ಚಿತ್ರದಲ್ಲಿ ಹಿಟ್​ ಕಾಂಬಿನೇಷನ್​
Image
ಜೊತೆಯಾಗಿ ಬಂದು ‘ಶುಗರ್​ಲೆಸ್​’ ಸಿನಿಮಾ ನೋಡಿದ ಮಿಲನಾ ನಾಗರಾಜ್​-ಡಾರ್ಲಿಂಗ್​ ಕೃಷ್ಣ ದಂಪತಿ

ಈ ಸಿನಿಮಾದಲ್ಲಿ ಪೃಥ್ವಿ ಅಂಬಾರ್​ ಅವರಿಗೆ ಜೋಡಿಯಾಗಿ ಪ್ರಿಯಾಂಕಾ ತಿಮ್ಮೇಶ್​ ನಟಿಸಿದ್ದಾರೆ. ಧರ್ಮಣ್ಣ ಅವರು ಪ್ರೇಕ್ಷಕರಿಗೆ ಕಾಮಿಡಿ ಕಚಗುಳಿ ಇಟ್ಟಿದ್ದಾರೆ. ವಿಮರ್ಶಕರು ಕೂಡ ‘ಶುಗರ್​ಲೆಸ್​’ಗೆ ಮನಸೋತಿದ್ದಾರೆ. ಇಷ್ಟೆಲ್ಲ ಸದ್ದು ಮಾಡುತ್ತಿರುವ ಚಿತ್ರದ ಬಗ್ಗೆ ಸ್ಟಾರ್​ ನಟ ವಿಜಯ್​ ಸೇತುಪತಿ ಅವರು ಟ್ವೀಟ್​ ಮಾಡಿದ್ದಾರೆ. ‘ಭಾರಿ ಯಶಸ್ಸು ಕಂಡ ಶುಗರ್​ಲೆಸ್​ ಚಿತ್ರಕ್ಕೆ ಅಭಿನಂದನೆಗಳು’ ಎಂದು ಬರೆದುಕೊಂಡಿರುವ ಅವರು, ಈ ಸಿನಿಮಾದ ಪೋಸ್ಟರ್​ ಶೇರ್​ ಮಾಡಿಕೊಂಡಿದ್ದಾರೆ. ಇದರಿಂದ ಚಿತ್ರತಂಡದ ಖುಷಿ ಹೆಚ್ಚಿದೆ.

ಪೃಥ್ವಿ ಅಂಬಾರ್​ ಅವರಿಗೆ ಜುಲೈ ತಿಂಗಳು ತುಂಬ ಸ್ಪೆಷಲ್​. ಶಿವರಾಜ್​ಕುಮಾರ್​ ಜೊತೆ ಅವರು ನಟಿಸಿದ ‘ಬೈರಾಗಿ’ ಚಿತ್ರ ಜುಲೈ 1ರಂದು ತೆರೆಕಂಡಿತು. ಜುಲೈ 8ಕ್ಕೆ ‘ಶುಗರ್​ಲೆಸ್​’ ಬಿಡುಗಡೆ ಆಯಿತು. ಎರಡು ಸಿನಿಮಾಗಳ ಮೂಲಕ ಅವರು ಚಿತ್ರಮಂದಿರದಲ್ಲಿ ಅಭಿಮಾನಿಗಳನ್ನು ರಂಜಿಸಿದ್ದಾರೆ. ಇನ್ನೂ ಅನೇಕ ಸಿನಿಮಾಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ. ಇತ್ತೀಚೆಗೆ ಕನ್ನಡ ಚಿತ್ರರಂಗದ ಹಲವು ಸೆಲೆಬ್ರಿಟಿಗಳಿಗಾಗಿ ‘ಶುಗರ್​ಲೆಸ್​’ ಸಿನಿಮಾದ ವಿಶೇಷ ಪ್ರದರ್ಶನ ಏರ್ಪಡಿಸಲಾಗಿತ್ತು.

ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
ಅಸ್ಥಿ ವಿಸರ್ಜನೆಗೂ ಪರದಾಟ: ಬೆಂಗಳೂರು ಏರ್​​ಪೋರ್ಟ್​​ನಲ್ಲಿ ಕುಟುಂಬ ಗೋಳಾಟ
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
NHMನಲ್ಲಿ 30000 ಹುದ್ದೆಗಳ ಮರು ನೇಮಕಾತಿ ಬಗ್ಗೆ ಸಚಿವ ದಿನೇಶ್ ಹೇಳಿದ್ದೇನು?
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!