ಸದ್ದು ಮಾಡುತ್ತಿದೆ ‘ಚೇಸ್’ ಸಿನಿಮಾ ಟ್ರೇಲರ್; ಇದರಲ್ಲಿದೆ ನಿರೀಕ್ಷೆಗೂ ಮೀರಿದ ಸಸ್ಪೆನ್ಸ್
ಸಸ್ಪೆನ್ಸ್, ಕ್ರೈಂ, ಥ್ರಿಲ್ಲರ್ ಶೈಲಿಯಲ್ಲಿ ಮೂಡಿ ಬಂದಿರುವ, ವಿಲೋಕ್ ಆ್ಯಕ್ಷನ್ ಕಟ್ ಹೇಳಿರುವ ‘ಚೇಸ್’ ಸಿನಿಮಾ ಸದ್ಯ ಗಾಂಧಿ ನಗರದಲ್ಲಿ ಸದ್ದು ಮಾಡುತ್ತಿದೆ. ಕೆಲ ವರ್ಷಗಳ ನಿರ್ದೇಶಕರ ತಪಸ್ಸಿಗೆ ಫಲ ಸಿಗುವ ಸೂಚನೆ ಸಿಕ್ಕಿದೆ.
ಟ್ರೇಲರ್ ಸಿನಿಮಾದ ನೋಡುಗರಿಗೆ ಆಮಂತ್ರಣವಿದ್ದಂತೆ ಎಂಬ ಮಾತಿದೆ. ಒಂದಿಡೀ ಸಿನಿಮಾದ ಒಂದಿಷ್ಟು ಪಾರ್ಟ್ ಕಟ್ ಮಾಡಿ ಪೊಣಿಸುವುದು ಸುಲಭವಲ್ಲ. ಪ್ರೇಕ್ಷಕರ ತಲೆಯಲ್ಲಿ ಒಂದಷ್ಟು ಕ್ಯೂರಿಯಾಸಿಟಿ ಹುಟ್ಟಿಸಿ, ಥಿಯೇಟರ್ ಬಾಗಿಲಿಗೆ ಕರೆತರುವ ಶಕ್ತಿ ಟ್ರೇಲರ್ಗಿದೆ. ಅಂಥದ್ದೊಂದು ಕುತೂಹಲ ಹುಟ್ಟಿಸುತ್ತಿದೆ ‘ಚೇಸ್’ ಸಿನಿಮಾದ (Chase Movie) ಟ್ರೇಲರ್.
ಸಸ್ಪೆನ್ಸ್, ಕ್ರೈಂ, ಥ್ರಿಲ್ಲರ್ ಶೈಲಿಯಲ್ಲಿ ಮೂಡಿ ಬಂದಿರುವ, ವಿಲೋಕ್ ಆ್ಯಕ್ಷನ್ ಕಟ್ ಹೇಳಿರುವ ‘ಚೇಸ್’ ಸಿನಿಮಾ ಸದ್ಯ ಗಾಂಧಿ ನಗರದಲ್ಲಿ ಸದ್ದು ಮಾಡುತ್ತಿದೆ. ಕೆಲ ವರ್ಷಗಳ ನಿರ್ದೇಶಕರ ತಪಸ್ಸಿಗೆ ಫಲ ಸಿಗುವ ಸೂಚನೆ ಸಿಕ್ಕಿದೆ. ಸದ್ಯ ರಿಲೀಸ್ ಆದ ಟ್ರೇಲರ್ ಎಲ್ಲರ ಬಾಯಿಂದ ಹೊಗಳಿಕೆ ಪಡೆಯುತ್ತಿದೆ. ಅದಕ್ಕೆ ಉದಾಹರಣೆಯೆಂಬಂತೆ ರಿಲೀಸ್ ಆದ ಕೆಲವೇ ಗಂಟೆಗಳಿಗೆ ಸಾಕಷ್ಟು ವೀವ್ಸ್ ಪಡೆದುಕೊಂಡಿದೆ. ವಿಮರ್ಶಕರ ಮನಸ್ಸನ್ನು ಗೆದ್ದಿದೆ.
‘ಚೇಸ್’ ಸಿನಿಮಾ ಜುಲೈ 15 ರಂದು ರಿಲೀಸ್ ಆಗುತ್ತಿದೆ. ಜುಲೈ 15 ಬರಲು ಬಹಳ ದೂರವೇನೂ ಇಲ್ಲ. ಹೀಗಾಗಿಯೇ ಚಿತ್ರತಂಡ ಟ್ರೇಲರ್ ರಿಲೀಸ್ ಮಾಡಿ, ‘ಚೇಸ್’ನಲ್ಲಿ ಏನೆಲ್ಲಾ ಅಡಗಿದೆ ಎಂಬುದನ್ನು ಅನಾವರಣ ಮಾಡಲಾಗಿದೆ. ಇಷ್ಟು ದಿನದ ಕಾತುರಕ್ಕೂ ತಕ್ಕಂತೆ ಥ್ರಿಲ್ಲಿಂಗ್ ಎನಿಸುವ ಟ್ರೇಲರ್ ರಿಲೀಸ್ ಮಾಡಿದೆ. ಮರ್ಡರ್ ಮಿಸ್ಟರಿ, ಅದರ ಸುತ್ತ ಬಿಚ್ಚಿಕೊಳ್ಳುವ ಒಂದಷ್ಟು ಘಟನಾವಳಿ ಈ ಎಲ್ಲವೂ ನೋಡುಗರನ್ನು ಸೀಟಿನಂಚಿಗೆ ಕೂರಿಸುವುದರಲ್ಲಿ ಅನುಮಾನ ಇಲ್ಲ. ಈ ಸಿನಿಮಾದಲ್ಲಿ ಇನ್ನೇನೆಲ್ಲಾ ಅಡಗಿದೆ ಎಂಬ ಊಹೆ ಈಗಾಗಲೇ ಟ್ರೇಲರ್ ನೋಡಿದವರ ತಲೆಯಲ್ಲಿ ಸುಳಿದಾಡಲು ಶುರು ಮಾಡಿದೆ.
ಇದನ್ನೂ ಓದಿ: ‘ಪೆಟ್ರೋಮ್ಯಾಕ್ಸ್’ ಟ್ರೇಲರ್ನಲ್ಲಿ ಹರಿಪ್ರಿಯಾಗೆ ಅಶ್ಲೀಲತೆಯ ಅರ್ಥ ಹೇಳಿದ ನೀನಾಸಂ ಸತೀಶ್
ಈ ಚಿತ್ರವನ್ನು ಮನೋಹರ್ ಸುವರ್ಣ ನಿರ್ಮಾಣ ಮಾಡಿದ್ದಾರೆ. ಪ್ರಶಾಂತ್ ಶೆಟ್ಟಿ ಮತ್ತು ಪ್ರದೀಪ್ ಶೆಟ್ಟಿ ನಿರ್ಮಾಣದಲ್ಲಿ ಸಾಥ್ ಕೊಟ್ಟಿದ್ದಾರೆ. ಶಿವ್ ಶೆಟ್ಟಿ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯನಿರ್ವಹಿಸಿದ್ದಾರೆ. ಅನಂತ್ ರಾಜ್ ಅರಸ್ ಛಾಯಾಗ್ರಹಣ, ಕಾರ್ತಿಕ್ ಆಚಾರ್ಯ ಹಿನ್ನೆಲೆ ಸಂಗೀತ ಮತ್ತು ಸಂಗೀತ ನಿರ್ದೇಶನ, ಶ್ರೀ ಕ್ರೇಜಿಮೈಂಡ್ಸ್ ಸಂಕಲನ, ಅವಿನಾಶ್ ಎಸ್ ದಿವಾಕರ್ ಕಲಾ ನಿರ್ದೇಶನ, ಸುನೀಲ್ ಕಟಾಬು ಸಹ ನಿರ್ದೇಶನ, ಡಿಫರೆಂಟ್ ಡ್ಯಾನಿ, ಚೇತನ್ ರಮ್ಶಿ ಡಿಸೋಜಾ ಮತ್ತು ವಿನೋದ್ ಸಾಹಸ ನಿರ್ದೇಶನ, ವಿಜಯ ರಾಣಿ ಮತ್ತು ಸುಶಾಂತ್ ಪೂಜಾರಿ ನೃತ್ಯ ನಿರ್ದೇಶನ ಈ ಚಿತ್ರಕ್ಕಿದೆ. ರಾಧಿಕಾ ನಾರಾಯಣ್, ಅವಿನಾಶ್, ಶೀತಲ್ ಶೆಟ್ಟಿ, ಅರ್ಜುನ್ ಯೋಗಿ, ಸುಶಾಂತ್ ಪೂಜಾರಿ, ರಾಜೇಶ್ ನಟರಂಗ, ಅರವಿಂದ್ ರಾವ್, ಪ್ರಮೋದ್ ಶೆಟ್ಟಿ, ಅರವಿಂದ್ ಬೋಳಾರ್, ಶ್ವೇತಾ ಸಂಜೀವುಲು, ರೆಹಮಾನ್ ಹಾಸನ್, ವೀಣಾ ಸುಂದರ್, ಸುಧಾ ಬೆಳವಾಡಿ, ಉಷಾ ಭಂಡಾರಿ, ಸುಂದರ್, ಸತೀಶ್ ಸಿದ್ಧಾರ್ಥ ಮಾಧ್ಯಮಿಕ, ಪ್ರಿಯಾ ಶಟಮರ್ಶನ್ ಮುಂತಾದವರ ದೊಡ್ಡ ತಾರಾಗಣವಿದೆ.
Published On - 2:37 pm, Tue, 12 July 22