Kannada News » Photo gallery » Bold look of Haripriya and Sathish Ninasam Starrer Petromax Kannada Trailer
‘ಪೆಟ್ರೋಮ್ಯಾಕ್ಸ್’ ಟ್ರೇಲರ್ನಲ್ಲಿ ಹರಿಪ್ರಿಯಾಗೆ ಅಶ್ಲೀಲತೆಯ ಅರ್ಥ ಹೇಳಿದ ನೀನಾಸಂ ಸತೀಶ್
TV9kannada Web Team | Edited By: Rajesh Duggumane
Updated on: Jul 07, 2022 | 8:05 PM
Petromax Trailer: ನೀನಾಸಂ ಸತೀಶ್ ಹಾಗೂ ಹರಿಪ್ರಿಯಾ ಅವರು ‘ಪೆಟ್ರೋಮ್ಯಾಕ್ಸ್’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದಾರೆ. ಈ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಡಬಲ್ ಮೀನಿಂಗ್ ಡೈಲಾಗ್ನಿಂದಲೇ ಈ ಟ್ರೇಲರ್ ಆರಂಭವಾಗುತ್ತದೆ.
Jul 07, 2022 | 8:05 PM
ನಿರ್ದೇಶಕ ವಿಜಯ್ ಪ್ರಸಾದ್ ಅವರು ‘ನೀರ್ದೋಸೆ’ ಚಿತ್ರವನ್ನು ನಿರ್ದೇಶಿಸಿ ಗಮನ ಸೆಳೆದಿದ್ದಾರೆ. ಈ ಚಿತ್ರದಲ್ಲಿ ಪೋಲಿ ಡೈಲಾಗ್ಗಳ ಜತೆಗೆ ಸಮಾಜಕ್ಕೆ ಒಂದು ಸಂದೇಶ ನೀಡುವ ಕೆಲಸ ಆಗಿತ್ತು. ಈಗ ವಿಜಯ್ ಪ್ರಸಾದ್ ‘ಪೆಟ್ರೋಮ್ಯಾಕ್ಸ್’ ಟ್ರೇಲರ್ ಮೂಲಕ ಗಮನ ಸೆಳೆಯುವ ಪ್ರಯತ್ನ ಮಾಡಿದ್ದಾರೆ.
1 / 7
ನೀನಾಸಂ ಸತೀಶ್ ಹಾಗೂ ಹರಿಪ್ರಿಯಾ ಅವರು ‘ಪೆಟ್ರೋಮ್ಯಾಕ್ಸ್’ ಸಿನಿಮಾದಲ್ಲಿ ಒಟ್ಟಾಗಿ ನಟಿಸಿದ್ದಾರೆ. ಈ ಚಿತ್ರದ ಟ್ರೇಲರ್ ರಿಲೀಸ್ ಆಗಿದೆ. ಡಬಲ್ ಮೀನಿಂಗ್ ಡೈಲಾಗ್ನಿಂದಲೇ ಈ ಟ್ರೇಲರ್ ಆರಂಭವಾಗುತ್ತದೆ.
2 / 7
ಈ ವೇಳೆ ಅಶ್ಲೀಲತೆ ಎಂಬುದರ ಶಬ್ದದ ಅರ್ಥ ಕೇಳುತ್ತಾರೆ ಹರಿಪ್ರಿಯಾ. ‘ಸ್ವಂತ ಮನೆ ಇದ್ದರೂ ಹೆತ್ತ ತಂದೆ-ತಾಯಿಯನ್ನು ಮಕ್ಕಳು ವೃದ್ಧಾಶ್ರಮಕ್ಕೆ ಬಿಡುತ್ತಾರಲ್ಲ ಅದು ಅಶ್ಲೀಲ. ‘ಒಳಗೆ ಜಾತಿ ಜಾತಿ ಎಂದು ಹೇಳುತ್ತಾ ಹೊರಗೆ ನಾವೆಲ್ಲ ಒಂದು ಎಂದು ಹೇಳ್ತೀವಲ್ಲ ಅದು ಅಶ್ಲೀಲನೇ ಅಲ್ಲವೇ’ ಎಂದು ಸತೀಶ್ ಪ್ರಶ್ನೆ ಮಾಡಿದ್ದಾರೆ.
3 / 7
ಡಬಲ್ ಮೀನಿಂಗ್ ಡೈಲಾಗ್‌ಗಳು, ಹಾಸ್ಯ ‘ಪೆಟ್ರೋಮ್ಯಾಕ್ಸ್ ಟ್ರೇಲರ್ನಲ್ಲಿ ಹೈಲೈಟ್ ಆಗಿದೆ. ಸತೀಶ್ ಪಿಕ್ಚರ್ ಹೌಸ್, ಸ್ಟುಡಿಯೋ 18, ಪೆಟ್ರೋಮ್ಯಾಕ್ಸ್ ಪಿಕ್ಚರ್ಸ್ ಬ್ಯಾನರ್ ಮೂಲಕ ಈ ಸಿನಿಮಾ ನಿರ್ಮಾಣ ಆಗಿದೆ.
4 / 7
ಸತೀಶ್ ನೀನಾಸಂ-ಹರಿಪ್ರಿಯಾ ಜೊತೆಗೆ ಚಿತ್ರದಲ್ಲಿ ಕಾರುಣ್ಯ ರಾಮ್, ನಾಗಭೂಷಣ್, ವಿಜಯಲಕ್ಷೀಸಿಂಗ್, ಅಚ್ಯುತ್ ಕುಮಾರ್ ಸೇರಿ ಹಲವು ಕಲಾವಿದರು ಅಭಿನಯಿಸಿದ್ದಾರೆ.