‘ಓಂ’ ಸಿನಿಮಾ ಸ್ಟೈಲ್ನಲ್ಲಿ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ಗೆ ಶಿವರಾಜ್ಕುಮಾರ್ ಎಂಟ್ರಿ; ಇಲ್ಲಿದೆ ವಿಡಿಯೋ
ಶಿವರಾಜ್ಕುಮಾರ್ ಅವರು ಅನೇಕ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಇದರ ಜತೆಗೆ ಹೊಸಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ವಯಸ್ಸು 60 ಸಮೀಪಿಸಿದರೂ ಅವರ ಎನರ್ಜಿ ಕಡಿಮೆ ಆಗಿಲ್ಲ.
ನಟ ಶಿವರಾಜ್ಕುಮಾರ್ (Shivarajkumar) ನಟನೆಯ ‘ಓಂ’ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿತ್ತು. ಈ ಚಿತ್ರಕ್ಕೆ ಆ್ಯಕ್ಷನ್ ಕಟ್ ಹೇಳಿದ್ದು ಉಪೇಂದ್ರ ಅವರು. ‘ಓಂ’ ಸಿನಿಮಾ ಪ್ರಸಾರವಾದರೆ ತುಂಬಾನೇ ಶ್ರದ್ಧೆಯಿಂದ ಈ ಚಿತ್ರವನ್ನು ನೋಡುವವರು ಈಗಲೂ ಇದ್ದಾರೆ. ಈ ಸಿನಿಮಾ ಚಿತ್ರಮಂದಿರದಲ್ಲಿ ಸಾಕಷ್ಟು ಬಾರಿ ರೀ-ರಿಲೀಸ್ ಆಗಿದೆ. ಈ ಚಿತ್ರದಲ್ಲಿ ಶಿವಣ್ಣ ಅವರ ಎಂಟ್ರಿ ಐಕಾನಿಕ್. ಈಗ ಅದೇ ಸ್ಟೈಲ್ನಲ್ಲಿ ಶಿವರಾಜ್ಕುಮಾರ್ ಅವರು ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ (Dance Karnataka Dance) ವೇದಿಕೆ ಏರಿದ್ದಾರೆ. ಈ ಪ್ರೋಮೋಗೆ ಫ್ಯಾನ್ಸ್ ಕಡೆಯಿಂದ ಲೈಕ್ಸ್ ಸುರಿಮಳೆ ಬಂದಿದೆ.
ಶಿವರಾಜ್ಕುಮಾರ್ ಅವರು ಅನೇಕ ಸಿನಿಮಾ ಕೆಲಸಗಳಲ್ಲಿ ಬ್ಯುಸಿ ಇದ್ದಾರೆ. ಇದರ ಜತೆಗೆ ಹೊಸಹೊಸ ಸಿನಿಮಾಗಳನ್ನು ಒಪ್ಪಿಕೊಳ್ಳುತ್ತಿದ್ದಾರೆ. ವಯಸ್ಸು 60 ಸಮೀಪಿಸಿದರೂ ಅವರ ಎನರ್ಜಿ ಕಡಿಮೆ ಆಗಿಲ್ಲ. ಸಿನಿಮಾ ಜತೆಗೆ ಅವರು ಕಿರುತೆರೆಯಲ್ಲೂ ಬ್ಯುಸಿ ಆಗಿದ್ದಾರೆ. ಜೀ ಕನ್ನಡ ವಾಹಿನಿಯಲ್ಲಿ ಪ್ರಸಾರವಾಗುತ್ತಿರುವ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ 6’ಗೆ ಅವರು ಜಡ್ಜ್ ಆಗಿದ್ದಾರೆ. ಅವರ ಎಂಟ್ರಿ ನೋಡಿ ಸ್ಪರ್ಧಿಗಳು ಸೀಟಿ ಹೊಡೆದಿದ್ದಾರೆ.
ಜುಲೈ 12 ಶಿವರಾಜ್ಕುಮಾರ್ ಬರ್ತ್ಡೇ. ಈ ಕಾರಣಕ್ಕೆ ‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್’ನಲ್ಲಿ ಈ ಬಾರಿ ‘ಶಿವರಾಜೋತ್ಸವ’ ಮಾಡಲಾಗುತ್ತಿದೆ. ಸ್ಪರ್ಧಿಗಳು ವಿಶೇಷವಾಗಿ ಡ್ಯಾನ್ಸ್ ಮಾಡುವ ಮೂಲಕ ಶಿವಣ್ಣಗೆ ಗೌರವ ಸೂಚಿಸುತ್ತಿದ್ದಾರೆ. ಶಿವರಾಜ್ಕುಮಾರ್ ಅವರ ಎಂಟ್ರಿಗೆ ಸಂಬಂಧಿಸಿದಂತೆ ಪ್ರೋಮೋ ಒಂದನ್ನು ಹಂಚಿಕೊಳ್ಳಲಾಗಿದೆ.
View this post on Instagram
‘ಐ ಲವ್ ಯೂ.. ಯೂ ಮಸ್ಟ್ ಲವ್ ಮಿ’ ಎಂದು ಸಾಂಗ್ ಬರುತ್ತದೆ. ಆಗ ಶಿವರಾಜ್ಕುಮಾರ್ ಅವರು ಲೈಟರ್ ಹಚ್ಚಿದ್ದಾರೆ. ಅವರ ಎಂಟ್ರಿ ನೋಡಿ ಜಡ್ಜ್ ಸ್ಥಾನದಲ್ಲಿರುವ ರಕ್ಷಿತಾ ಪ್ರೇಮ್ ಅವರು ಖುಷಿಯಿಂದ ಕೂಗಿದ್ದಾರೆ. ಸದ್ಯ, ಈ ರೀಲ್ಸ್ ಸಖತ್ ವೈರಲ್ ಆಗುತ್ತಿದೆ.
ಇದನ್ನೂ ಓದಿ: ಶಿವರಾಜ್ಕುಮಾರ್ ಬರ್ತ್ಡೇ ಸ್ಪೆಷಲ್; ಜೀ ಪಿಚ್ಚರ್ನಲ್ಲಿ ನಿರಂತರವಾಗಿ 60 ಗಂಟೆ ಪ್ರಸಾರ ಕಾಣಲಿದೆ ಶಿವಣ್ಣನ ಸಿನಿಮಾ
‘ಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ ಸೀಸನ್ 6’ ಅನೇಕ ಟ್ಯಾಲೆಂಟ್ಗಳಿಗೆ ವೇದಿಕೆ ಆಗಿದೆ. ಹಲವು ಪ್ರತಿಭೆಗಳ ಅನಾವರಣ ಈ ವೇದಿಕೆಯಲ್ಲಿ ಆಗಿದೆ. ಶಿವರಾಜ್ಕುಮಾರ್, ರಕ್ಷಿತಾ ಪ್ರೇಮ್, ಸಂಗೀತ ನಿರ್ದೇಶಕ ಅರ್ಜುನ್ ಜನ್ಯ ಅವರು ಜಡ್ಜ್ ಸ್ಥಾನದಲ್ಲಿ ಕುಳಿತು ಸ್ಪರ್ಧಿಗಳಿಗೆ ಸ್ಫೂರ್ತಿದಾಯಕ ಮಾತುಗಳನ್ನು ಹೇಳುತ್ತಿದ್ದಾರೆ.
Published On - 10:40 am, Sat, 9 July 22