‘ರಾಮಾಯಣ’: ಥಾಯ್ಲೆಂಡ್ನಲ್ಲಿ ಇಂದ್ರನ ಪಾತ್ರಕ್ಕೆ ಭಾರಿ ಮೆಚ್ಚುಗೆ, ಏಕೆ?
ಥಾಯ್ಲೆಂಡ್ನಲ್ಲಿ ‘ರಾಮಾಯಣ’ ಸಿನಿಮಾ ಅದ್ಧೂರಿಯಾಗಿ ರಿಲೀಸ್ ಆಗಿದೆ. ಭಾರತದಂತೆ ಅಲ್ಲಿಯೂ ಸಹ ಜನ ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ. ಆದರೆ ಥಾಯ್ಲೆಂಡ್ನ ಜನರಿಗೆ ರಾವಣನಾಗಲಿ, ರಾಮ, ಸೀತೆ, ಲಕ್ಷ್ಮಣರಾಗಲಿ ಇಷ್ಟವಾಗುತ್ತಿಲ್ಲ ಅವರಿಗೆ ಹೆಚ್ಚು ಇಷ್ಟವಾಗುತ್ತಿರುವುದು ಇಂದ್ರ ದೇವ. ಅಸಲಿಗೆ ‘ರಾಮಾಯಣ’ ಸಿನಿಮಾನಲ್ಲಿ ಇಂದ್ರನ ಪಾತ್ರ ಬರುವುದು ಆರಂಭದ ಕೆಲ ನಿಮಿಷಗಳಷ್ಟೆ. ಆದರೆ ಥಾಯ್ಲೆಂಡ್ನ ಜನರಿಗೆ ಅದೇ ಹೆಚ್ಚು ಇಷ್ಟವಾಗಿದೆ ಅದಕ್ಕೆ ಕಾರಣವೂ ಇದೆ.

ಮುಖ್ಯಾಂಶಗಳು
- ಥಾಯ್ಲೆಂಡ್ನಲ್ಲಿ ರಾಮಾಯಣ ಹವಾ
- ಕುನಾಲ್ ಕಪೂರ್ ನಿರ್ವಹಿಸಿದ್ದ ಇಂದ್ರನ ಪಾತ್ರ
- ಥಾಯ್ಲೆಂಡ್ನಲ್ಲಿ ಸಿನಿಮಾ ಭರ್ಜರಿ ಪ್ರದರ್ಶನ
‘ರಾಮಾಯಣ’ ಸಿನಿಮಾ ವಿಶ್ವದಾದ್ಯಂತ ಅದ್ಭುತ ಪ್ರದರ್ಶನ ಕಾಣುತ್ತಿದೆ. ವಿದೇಶಗಳಲ್ಲಿ ಸಹ ಅದ್ಧೂರಿಯಾಗಿ ಸಿನಿಮಾ ರಿಲೀಸ್ ಆಗಿದ್ದು, ವಿದೇಶಿ ಪ್ರೇಕ್ಷಕರಿಗೂ ಸಹ ‘ರಾಮಾಯಣ’ ಇಷ್ಟವಾಗುತ್ತಿದೆ. ಅದರಲ್ಲೂ, ಸಿನಿಮಾ ನೋಡಿದವರೆಲ್ಲ ರಾವಣನ ಪಾತ್ರದಲ್ಲಿ ಯಶ್ ಅವರ ನಟನೆಯನ್ನು ಕೊಂಡಾಡುತ್ತಿದ್ದಾರೆ. ಹಾಗೆಯೇ ಶ್ರೀರಾಮನ ಪಾತ್ರದಲ್ಲಿ ರಣ್ಬೀರ್ ಕಪೂರ್ ಅವರ ನಟನೆಯನ್ನೂ ಸಹ ಕೊಂಡಾಡುತ್ತಿದ್ದಾರೆ. ಆದರೆ ನೆರೆಯ ಥಾಯ್ಲೆಂಡ್ನಲ್ಲಿ ಮಾತ್ರ ಸಿನಿಮಾ ನೋಡಿದವರು ಇಂದ್ರನ ಪಾತ್ರವನ್ನು ಹಾಗೂ ಇಂದ್ರನ ಪಾತ್ರದಲ್ಲಿ ನಟಿಸಿರುವ ನಟನನ್ನು ಕೊಂಡಾಡುತ್ತಿದ್ದಾರೆ.
ಥಾಯ್ಲೆಂಡ್ನಲ್ಲಿ ‘ರಾಮಾಯಣ’ ಸಿನಿಮಾ ಅದ್ಧೂರಿಯಾಗಿ ರಿಲೀಸ್ ಆಗಿದೆ. ಭಾರತದಂತೆ ಅಲ್ಲಿಯೂ ಸಹ ಜನ ಮುಗಿಬಿದ್ದು ಸಿನಿಮಾ ನೋಡುತ್ತಿದ್ದಾರೆ. ಆದರೆ ಥಾಯ್ಲೆಂಡ್ನ ಜನರಿಗೆ ರಾವಣನಾಗಲಿ, ರಾಮ, ಸೀತೆ, ಲಕ್ಷ್ಮಣರಾಗಲಿ ಇಷ್ಟವಾಗುತ್ತಿಲ್ಲ ಅವರಿಗೆ ಹೆಚ್ಚು ಇಷ್ಟವಾಗುತ್ತಿರುವುದು ಇಂದ್ರ ದೇವ. ಅಸಲಿಗೆ ‘ರಾಮಾಯಣ’ ಸಿನಿಮಾನಲ್ಲಿ ಇಂದ್ರನ ಪಾತ್ರ ಬರುವುದು ಆರಂಭದ ಕೆಲ ನಿಮಿಷಗಳಷ್ಟೆ. ಆದರೆ ಥಾಯ್ಲೆಂಡ್ನ ಜನರಿಗೆ ಅದೇ ಹೆಚ್ಚು ಇಷ್ಟವಾಗಿದೆ ಅದಕ್ಕೆ ಕಾರಣವೂ ಇದೆ.
ಥಾಯ್ಲೆಂಡ್ನಲ್ಲಿ ಇಂದ್ರ ದೇವರ ಆರಾಧನೆ ಮಾಡಲಾಗುತ್ತದೆ. ಅಲ್ಲಿ ಇಂದ್ರ ದೇವನಿಗೆ ‘ಪ್ರಾಹ್ ಇನ್’ ಮತ್ತು ಥಾ ಸಕಾ’ ಎಂಬ ಹೆಸರುಗಳಿವೆ. ಹಲವು ಕಡೆ ಇಂದ್ರ ದೇವ ಐರಾವತದ ಮೇಲೆ ಕುಳಿತ ಮೂರ್ತಿಗಳಿವೆ. ಇಂದ್ರ ದೇವನನ್ನು ಬೌದ್ಧ ಧರ್ಮದ ರಕ್ಷಕ ಎಂದು ಪೂಜಿಸಲಾಗುತ್ತದೆ. ಥಾಯ್ಲೆಂಡ್ನ ಹಲವೆಡೆ ಇಂದ್ರ ದೇವನ ದೇವಾಲಯಗಳು ಸಹ ಇವೆ. ಹಾಗಾಗಿ ‘ರಾಮಾಯಣ’ದ ಇಂದ್ರನ ಪಾತ್ರ ಥಾಯ್ಲೆಂಡ್ ಜನಕ್ಕೆ ಹೆಚ್ಚು ಇಷ್ಟವಾಗಿದೆ.
ಇದನ್ನೂ ಓದಿ:‘ರಾಮಾಯಣ’ ಸಿನಿಮಾ ಶೂಟಿಂಗ್ ಸಮಯದಲ್ಲಿ ಕಣ್ಣೀರು ಹಾಕಿದ್ದ ಸಾಯಿ ಪಲ್ಲವಿ
‘ರಾಮಾಯಣ’ ಸಿನಿಮಾನಲ್ಲಿ ಇಂದ್ರ ದೇವನ ಪಾತ್ರದಲ್ಲಿ ಬಾಲಿವುಡ್ ನಟ ಕುನಾಲ್ ಕಪೂರ್ ನಟನೆ ಮಾಡಿದ್ದಾರೆ. ಬಾಲಿವುಡ್ನಲ್ಲಿ ಹಲವು ವರ್ಷಗಳಿಂದಲೂ ನಟಿಸುತ್ತಿರುವ ಕುನಾಲ್ ಕಪೂರ್ ಅವರು ಇಂದ್ರ ದೇವನ ಪಾತ್ರದಲ್ಲಿ ಅದ್ಭುತವಾಗಿ ನಟಿಸಿದ್ದು, ಇದೀಗ ಥಾಯ್ಲೆಂಡ್ ಜನ, ಕುನಾಲ್ ಅವರ ಕುರಿತು ಪೋಸ್ಟ್ಗಳನ್ನು ಹಂಚಿಕೊಳ್ಳುತ್ತಿದ್ದು, ಅವರನ್ನು ಥಾಯ್ಲೆಂಡ್ಗೆ ಬರಬೇಕೆಂದು ಆಹ್ವಾನಿಸುತ್ತಿದ್ದಾರೆ.
ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ




