AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕರ್ನಾಟಕದಲ್ಲಿ ದಾಖಲೆ ಬರೆದ ‘ರಾಮಾಯಣ’ ಸಿನಿಮಾ, ಗಳಿಸಿದ್ದೆಷ್ಟು ಕೋಟಿ?

‘ರಾಮಾಯಣ’ ಮೂಲತಃ ಬಾಲಿವುಡ್ ಸಿನಿಮಾ ಆಗಿದ್ದರೂ ಸಹ ದಕ್ಷಿಣ ಭಾರತದಲ್ಲಿ ಸಿನಿಮಾಕ್ಕೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬಾಲಿವುಡ್ ಸಿನಿಮಾಗಳು ದಕ್ಷಿಣದ ರಾಜ್ಯಗಳಲ್ಲಿ ಚೆನ್ನಾಗಿ ಓಡುವುದು ಕಡಿಮೆ ಆದರೆ ‘ರಾಮಾಯಣ’ ಸಿನಿಮಾ, ಇದಕ್ಕೆ ವ್ಯತಿರಿಕ್ತ. ಇದೀಗ ‘ರಾಮಾಯಣ’ ಸಿನಿಮಾವು ಕರ್ನಾಟಕದಲ್ಲಿ ದಾಖಲೆ ಬರೆದಿದೆ. ‘ರಾಮಾಯಣ’ ಸಿನಿಮಾ ಕರ್ನಾಟಕದ ಬಾಕ್ಸ್ ಆಫೀಸ್​​ನಲ್ಲಿ 100 ಕೋಟಿ ಗಳಿಕೆ ಮಾಡಿದೆ.

ಕರ್ನಾಟಕದಲ್ಲಿ ದಾಖಲೆ ಬರೆದ ‘ರಾಮಾಯಣ’ ಸಿನಿಮಾ, ಗಳಿಸಿದ್ದೆಷ್ಟು ಕೋಟಿ?
Ramayana Movie
ಮಂಜುನಾಥ ಸಿ.
|

Updated on: Nov 13, 2026 | 3:15 PM

Share

ಮುಖ್ಯಾಂಶಗಳು

  • ರಾಮಾಯಣ ಸಿನಿಮಾ ಭರ್ಜರಿ ಗಳಿಕೆ
  • ಕರ್ನಾಟಕದಲ್ಲಿ ದಾಖಲೆ ಬರೆದ ಸಿನಿಮಾ
  • 100 ಕೋಟಿ ಗಳಿಕೆ ಮಾಡಿರುವ ಸಿನಿಮಾ

ಯಶ್, ರಣ್​​ಬೀರ್ ಕಪೂರ್, ಸಾಯಿ ಪಲ್ಲವಿ ಸೇರಿದಂತೆ ಇನ್ನೂ ಹಲವು ಸ್ಟಾರ್ ನಟ-ನಟಿಯರು ನಟಿಸಿರುವ ‘ರಾಮಾಯಣ’ ಸಿನಿಮಾ ವಿಶ್ವದಾದ್ಯಂತ ಅದ್ಧೂರಿ ಪ್ರದರ್ಶನ ಕಾಣುತ್ತಿದೆ. ಇದೊಂದು ಮೂಲತಃ ಬಾಲಿವುಡ್ ಸಿನಿಮಾ ಆಗಿದ್ದರೂ ಸಹ ದಕ್ಷಿಣ ಭಾರತದಲ್ಲಿ ಸಿನಿಮಾಕ್ಕೆ ಅದ್ಭುತ ಪ್ರತಿಕ್ರಿಯೆ ವ್ಯಕ್ತವಾಗುತ್ತಿದೆ. ಬಾಲಿವುಡ್ ಸಿನಿಮಾಗಳು ದಕ್ಷಿಣದ ರಾಜ್ಯಗಳಲ್ಲಿ ಚೆನ್ನಾಗಿ ಓಡುವುದು ಕಡಿಮೆ ಆದರೆ ‘ರಾಮಾಯಣ’ ಸಿನಿಮಾ, ಇದಕ್ಕೆ ವ್ಯತಿರಿಕ್ತ. ಇದೀಗ ‘ರಾಮಾಯಣ’ ಸಿನಿಮಾವು ಕರ್ನಾಟಕದಲ್ಲಿ ದಾಖಲೆ ಬರೆದಿದೆ. ‘ರಾಮಾಯಣ’ ಸಿನಿಮಾ ಕರ್ನಾಟಕದ ಬಾಕ್ಸ್ ಆಫೀಸ್​​ನಲ್ಲಿ 100 ಕೋಟಿ ಗಳಿಕೆ ಮಾಡಿದೆ.

ಕರ್ನಾಟದಲ್ಲಿ ಸಿನಿಮಾಗಳು 100 ಕೋಟಿ ಗಳಿಕೆ ಮಾಡುವುದು ಸುಲಭದ ಮಾತಲ್ಲ. ಅದರಲ್ಲೂ ಬಾಲಿವುಡ್ ಸಿನಿಮಾ ಒಂದು ಕರ್ನಾಟಕದಲ್ಲಿ 100 ಕೋಟಿ ಹಣ ಗಳಿಕೆ ಮಾಡುವುದು ಅಪರೂಪದಲ್ಲಿ ಅಪರೂಪ. ‘ಧುರಂಧರ್ 2’ ಸಿನಿಮಾ ಕರ್ನಾಟಕದಲ್ಲಿ 100 ಕೋಟಿ ಗಳಿಸಿತ್ತು. ಅದರ ಹೊರತು ಇದೀಗ ‘ರಾಮಾಯಣ’ ಸಿನಿಮಾ ಕರ್ನಾಟಕದಲ್ಲಿ 100 ಕೋಟಿ ಗಳಿಕೆ ಮಾಡಿದೆ ಅದೂ ಕೇವಲ ಎಂಟು ದಿನಗಳಲ್ಲಿ.

‘ರಾಮಾಯಣ’ ಸಿನಿಮಾ ಕರ್ನಾಟಕದಲ್ಲಿ ಇಷ್ಟು ಅದ್ಭುತ ಪ್ರದರ್ಶನ ಕಾಣುತ್ತಿರುವುದಕ್ಕೆ ಪ್ರಮುಖ ಕಾರಣ ಯಶ್. ಕನ್ನಡದ ನಟ ಯಶ್ ಅವರ ಕಾರಣಕ್ಕೆ ‘ರಾಮಾಯಣ’ ಸಿನಿಮಾವನ್ನು ಹೆಚ್ಚು ಜನ ವೀಕ್ಷಣೆ ಮಾಡುತ್ತಿದ್ದಾರೆ. ಜೊತೆಗೆ ಸಿನಿಮಾ ಸಹ ಉತ್ತಮ ಗುಣಮಟ್ಟದ್ದಾಗಿರುವ ಕಾರಣ ಹೆಚ್ಚಿನ ಮಂದಿ ಪ್ರೇಕ್ಷಕರು ಚಿತ್ರಮಂದಿರಗಳತ್ತ ಧಾವಿಸುತ್ತಿದ್ದಾರೆ. ಕರ್ನಾಟಕದಲ್ಲಿ ‘ರಾಮಾಯಣ’ ಸಿನಿಮಾವು ಕನ್ನಡ, ಹಿಂದಿ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ರಿಲೀಸ್ ಆಗಿದೆ. ದೊಡ್ಡ ಸಂಖ್ಯೆಯ ಸ್ಕ್ರೀನ್​​ಗಳು ‘ರಾಮಾಯಣ’ ಸಿನಿಮಾಕ್ಕೆ ಕರ್ನಾಟಕದಲ್ಲಿ ದೊರಕಿವೆ. ಕರ್ನಾಟಕದಲ್ಲಿ ‘ರಾಮಾಯಣ’ ಸಿನಿಮಾದ ವಿತರಣೆಯನ್ನು ಯಶ್ ಅವರ ಮಾನ್​​ಸ್ಟರ್ ಮೈಂಡ್ಸ್ ಸಂಸ್ಥೆಯೇ ಮಾಡಿದೆ ಎನ್ನಲಾಗುತ್ತಿದೆ.

ಇದನ್ನೂ ಓದಿ:‘ರಾಮಾಯಣ’ದಲ್ಲಿ ಸೀತೆ ಆ್ಯಕ್ಷನ್ ದೃಶ್ಯ ಮಾಡಿದ್ದನ್ನು ಸಮರ್ಥಿಸಿಕೊಂಡ ಲಾರಾ ದತ್ತ

ಕರ್ನಾಟಕದಲ್ಲಿ ಪರ ಭಾಷೆ ಸಿನಿಮಾಗಳು 100 ಕೋಟಿ ಗಳಿಕೆ ಮಾಡಿರುವುದು ಬಹಳ ಕಡಿಮೆ. ‘ಬಾಹುಬಲಿ 2’, ‘ಪುಷ್ಪ 2’, ‘ಆರ್​​ಆರ್​​ಆರ್’ ಮತ್ತು ‘ಧುರಂಧರ್ 2’ ಸಿನಿಮಾಗಳು ಕರ್ನಾಟಕದಲ್ಲಿ 100 ಕೋಟಿ ಗಳಿಸಿದ ಇತರೆ ಭಾಷೆ ಸಿನಿಮಾಗಳಾಗಿವೆ. ಇದೀಗ ಈ ಪಟ್ಟಿಗೆ ‘ರಾಮಾಯಣ’ ಸಿನಿಮಾ ಸಹ ಸೇರಿದ್ದು, ಈ ಎಲ್ಲ ಸಿನಿಮಾಗಳಿಗಿಂತಲೂ ವೇಗವಾಗಿ 100 ಕೋಟಿ ಗಳಿಕೆಯನ್ನು ದಾಟಿದೆ. ‘ಕೆಜಿಎಫ್’, ‘ಕಾಂತಾರ’, ‘ಕಾಂತಾರ 1’, ‘ಕೆಜಿಎಫ್ 2’, ‘ಪ್ರೇಮದ ಊರಲಿ’, ‘ಸು ಫ್ರಂ ಸೋ’, ‘ಕಾಟೇರ’ ಸಿನಿಮಾಗಳು ಕರ್ನಾಟಕದಲ್ಲಿ 100 ಕೋಟಿ ಗಳಿಕೆ ಮಾಡಿರುವ ಕನ್ನಡದ ಸಿನಿಮಾಗಳಾಗಿವೆ.

ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Follow Us
ಮಂಜುನಾಥ ಸಿ.
ಮಂಜುನಾಥ ಸಿ.

ಮಂಜುನಾಥ ಸಿ, ಬೆಂಗಳೂರು ಗ್ರಾಮಾಂತರ, ವಿಜಯರಪುರ ಪಟ್ಟಣ ನಿವಾಸಿ. ಕಳೆದ ಏಳು ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯನಾಗಿದ್ದೇನೆ. ಕಳೆದ ಐದು ವರ್ಷದಿಂದ ಡಿಜಿಟಲ್ ಪತ್ರಿಕೋದ್ಯಮದಲ್ಲಿ ತೊಡಗಿಕೊಂಡಿದ್ದೇನೆ. ಈ ಹಿಂದೆ ಪ್ರಜಾವಾಣಿ, ಒನ್ ಇಂಡಿಯಾ ಕನ್ನಡ ಸಂಸ್ಥೆಗಳ ವಿವಿಧ ವಿಭಾಗಗಳಲ್ಲಿ ಕೆಲಸ ಮಾಡಿದ್ದೇನೆ. ಪ್ರಸ್ತುತ ಟಿವಿ9 ಕನ್ನಡ ಡಿಜಿಟಲ್​ನ ಸಿನಿಮಾ ವಿಭಾಗದಲ್ಲಿ ಕೆಲಸ ಮಾಡುತ್ತಿದ್ದೇನೆ. ಮೆಚ್ಚಿನ ಹವ್ಯಾಸ ಸಿನಿಮಾ ವೀಕ್ಷಣೆ, ಪುಸ್ತಕಗಳನ್ನು ಓದುವುದು.

Read More
ಡಿಕೆ ಶಿವಕುಮಾರ್ ಕೈ ಹಿಡಿದು ನಮ್ಮ ಮೆಟ್ರೋ ಪಿಂಕ್ ಲೈನ್ ಉದ್ಘಾಟಿಸಿದ ಮೋದಿ
ಡಿಕೆ ಶಿವಕುಮಾರ್ ಕೈ ಹಿಡಿದು ನಮ್ಮ ಮೆಟ್ರೋ ಪಿಂಕ್ ಲೈನ್ ಉದ್ಘಾಟಿಸಿದ ಮೋದಿ
Live: ಬೆಂಗಳೂರಿನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಮೋದಿ ಚಾಲನೆ
Live: ಬೆಂಗಳೂರಿನಲ್ಲಿ ವಿವಿಧ ಅಭಿವೃದ್ಧಿ ಯೋಜನೆಗಳಿಗೆ ಮೋದಿ ಚಾಲನೆ
ನಮ್ಮ ಮೆಟ್ರೋ ಗುಲಾಬಿ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ
ನಮ್ಮ ಮೆಟ್ರೋ ಗುಲಾಬಿ ಮಾರ್ಗಕ್ಕೆ ಪ್ರಧಾನಿ ನರೇಂದ್ರ ಮೋದಿ ಚಾಲನೆ
ಪ್ರಧಾನಿ ಮೋದಿಯಿಂದ ಪಿಂಕ್ ಲೈನ್ ಮೆಟ್ರೊ ಉದ್ಘಾಟನೆ ನೇರಪ್ರಸಾರ
ಪ್ರಧಾನಿ ಮೋದಿಯಿಂದ ಪಿಂಕ್ ಲೈನ್ ಮೆಟ್ರೊ ಉದ್ಘಾಟನೆ ನೇರಪ್ರಸಾರ
ನಾಗ ಚೌತಿ ಹಬ್ಬದ ದಿನವೇ ದೇವಾಲಯದಲ್ಲಿ ಪ್ರತ್ಯಕ್ಷವಾದ ಹಾವು
ನಾಗ ಚೌತಿ ಹಬ್ಬದ ದಿನವೇ ದೇವಾಲಯದಲ್ಲಿ ಪ್ರತ್ಯಕ್ಷವಾದ ಹಾವು
ಬೆಂಗಳೂರು: ಮಾರಕಾಸ್ತ್ರಗಳಿಂದ ದಾಳಿ ನಡೆಸಿ ರಿಯಲ್ ಎಸ್ಟೇಟ್ ಉದ್ಯಮಿಯ ಕೊಲೆ
ಬೆಂಗಳೂರು: ಮಾರಕಾಸ್ತ್ರಗಳಿಂದ ದಾಳಿ ನಡೆಸಿ ರಿಯಲ್ ಎಸ್ಟೇಟ್ ಉದ್ಯಮಿಯ ಕೊಲೆ
ಮೆಟ್ರೋಗೆ ಅನುದಾನ ಸಮರ: ತೇಜಸ್ವಿ ಸೂರ್ಯ ಆರೋಪಕ್ಕೆ ಕೃಷ್ಣ ಭೈರೇಗೌಡ ಕೌಂಟರ್​
ಮೆಟ್ರೋಗೆ ಅನುದಾನ ಸಮರ: ತೇಜಸ್ವಿ ಸೂರ್ಯ ಆರೋಪಕ್ಕೆ ಕೃಷ್ಣ ಭೈರೇಗೌಡ ಕೌಂಟರ್​
ಪ್ರಶಾಂತಿ ಕುಟೀರ ಸುವರ್ಣ ಮಹೋತ್ಸವದಲ್ಲಿ ಮೋದಿ ಭಾಗಿ ನೇರಪ್ರಸಾರ
ಪ್ರಶಾಂತಿ ಕುಟೀರ ಸುವರ್ಣ ಮಹೋತ್ಸವದಲ್ಲಿ ಮೋದಿ ಭಾಗಿ ನೇರಪ್ರಸಾರ
ಮೋದಿ ಸಂಚರಿಸುವಲ್ಲೆಲ್ಲ ಕೈ-ಕಮಲ ಕಾರ್ಯಕರ್ತರ ಫ್ಲೆಕ್ಸ್​ಗಳು ಝಗಮಗ!
ಮೋದಿ ಸಂಚರಿಸುವಲ್ಲೆಲ್ಲ ಕೈ-ಕಮಲ ಕಾರ್ಯಕರ್ತರ ಫ್ಲೆಕ್ಸ್​ಗಳು ಝಗಮಗ!
ಲಾಭ ಪಡೆಯಲು ಕಳ್ಳಾಟ ಆಡಿದ್ರಾ ಆಸಿಯಾ? ಸೌಂದರ್ಯಾ ಛೀಮಾರಿ
ಲಾಭ ಪಡೆಯಲು ಕಳ್ಳಾಟ ಆಡಿದ್ರಾ ಆಸಿಯಾ? ಸೌಂದರ್ಯಾ ಛೀಮಾರಿ