‘ರಾಮಾಯಣ’ ಸಿನಿಮಾ ಮಾಡಿದ್ದರಿಂದ ಹಣ ವ್ಯರ್ಥ ಎಂದ ನಟ ಮುಖೇಶ್ ಖನ್ನಾ
4 ಸಾವಿರ ಕೋಟಿ ರೂಪಾಯಿ ಬಜೆಟ್‌ನಲ್ಲಿ ನಿರ್ಮಾಣ ಆಗಿರುವ ‘ರಾಮಾಯಣ’ ಸಿನಿಮಾ ಬಗ್ಗೆ ಹಿರಿಯ ನಟ ಮುಖೇಶ್ ಖನ್ನಾ ಅವರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ‘ರಾಮಾಯಣ’ದ ಮೂಲ ಕಥೆಯನ್ನು ತಿರುಚಲಾಗಿದೆ ಎಂದು ಅವರು ಆಕ್ಷೇಪಿಸಿದ್ದಾರೆ. ಬೇರೆ ಸಿನಿಮಾಗಳ ಉದಾಹರಣೆಯನ್ನು ನೀಡಿ ಅವರು ತಮ್ಮ ನಿಲುವನ್ನು ತಿಳಿಸಿದ್ದಾರೆ.

ರಣಬೀರ್ ಕಪೂರ್, ಸಾಯಿ ಪಲ್ಲವಿ, ಯಶ್ ಮತ್ತು ರವಿ ದುಬೆ ಅಭಿನಯದ ಬಹುನಿರೀಕ್ಷಿತ ‘ರಾಮಾಯಣ’ ಸಿನಿಮಾದ ಬರೋಬ್ಬರಿ 4,000 ಕೋಟಿ ರೂಪಾಯಿ ಬಜೆಟ್ ಕುರಿತು ಹಿರಿಯ ನಟ ಮುಖೇಶ್ ಖನ್ನಾ ತೀವ್ರ ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ಮಹಾಕಾವ್ಯವನ್ನು ಪ್ರೇಕ್ಷಕರಿಗೆ ತಲುಪಿಸಲು ಇಷ್ಟೊಂದು ಬೃಹತ್ ಹೂಡಿಕೆಯ ಅಗತ್ಯವಿಲ್ಲ ಎಂದಿರುವ ಅವರು, ಇಂತಹ ಭಾರಿ ವೆಚ್ಚವನ್ನು ‘ಹಣದ ಪೋಲು’ ಎಂದು ಕರೆದಿದ್ದಾರೆ. ಪೌರಾಣಿಕ ಮತ್ತು ಧಾರ್ಮಿಕ ಗ್ರಂಥಗಳನ್ನು ಆಧರಿಸಿ ಸಿನಿಮಾ ಮಾಡುವ ನಿರ್ದೇಶಕರಿಗೆ ಹೆಚ್ಚಿನ ಜವಾಬ್ದಾರಿ ಇರಬೇಕು. ಕೋಟ್ಯಂತರ ಜನರ ಭಾವನೆ ಮತ್ತು ನಂಬಿಕೆಗೆ ಸಂಬಂಧಿಸಿದ ಕಥೆಗಳಲ್ಲಿ ಅನಗತ್ಯವಾಗಿ ಸೃಜನಾತ್ಮಕ ಸ್ವಾತಂತ್ರ್ಯ ತೆಗೆದುಕೊಳ್ಳಬಾರದು ಎಂದು ಅವರು ಎಚ್ಚರಿಸಿದ್ದಾರೆ.
ಸಿನಿಮಾದ ಆರ್ಥಿಕ ಯಶಸ್ಸಿಗಿಂತ ಮೂಲ ಕಥೆಗೆ ಎಷ್ಟರಮಟ್ಟಿಗೆ ನ್ಯಾಯ ಒದಗಿಸಲಾಗಿದೆ ಎಂಬುದು ಮುಖ್ಯ ಎಂದಿರುವ ಮುಖೇಶ್ ಖನ್ನಾ, ‘ನೀವು ಸಾವಿರ ಕೋಟಿ ಗಳಿಸಿದ್ದೀರಾ ಎಂಬುದು ನನಗೆ ಮುಖ್ಯವಲ್ಲ. ಆದರೆ, ಕಥೆಯಲ್ಲಿ ಸಾವಿರ ರೂಪಾಯಿಯಷ್ಟು ಸತ್ಯವನ್ನು ಮರೆಮಾಚಿದ್ದೀರಾ ಅಥವಾ ಸಾವಿರ ರೂಪಾಯಿಯಷ್ಟು ಸುಳ್ಳನ್ನು ಸೇರಿಸಿದ್ದೀರಾ ಎಂಬುದು ಮುಖ್ಯವಾಗುತ್ತದೆ. ಏಕೆಂದರೆ ಇದು ಸಾಮಾನ್ಯ ಕಥೆಯಲ್ಲ, ರಾಮಾಯಣದ ಕಥೆ. ನಮ್ಮ ಸಂಸ್ಕೃತಿಯಲ್ಲಿ ರಾಮಾಯಣ ಮತ್ತು ಮಹಾಭಾರತ ಎಂಬ ಎರಡು ಮಹಾನ್ ಗ್ರಂಥಗಳಿವೆ. ಅವುಗಳನ್ನು ಮುಟ್ಟುವಾಗ ಹೆಗಲ ಮೇಲೆ ದೊಡ್ಡ ಜವಾಬ್ದಾರಿ ಇರುತ್ತದೆ. ಅವುಗಳನ್ನು ತಿರುಚಲು ಸಾಧ್ಯವಿಲ್ಲ’ ಎಂದು ಹೇಳಿದ್ದಾರೆ.
ಕಾಲ್ಪನಿಕ ಕಥೆಗಳಿಗೂ ಮತ್ತು ಪೌರಾಣಿಕ ಮಹಾಕಾವ್ಯಗಳಿಗೂ ಇರುವ ವ್ಯತ್ಯಾಸವನ್ನು ವಿವರಿಸಿದ ಅವರು, ‘ಬಾಹುಬಲಿ ಕೂಡ ಒಂದು ಸಿನಿಮಾ ಮತ್ತು ಅದು ತುಂಬಾ ಚೆನ್ನಾಗಿತ್ತು. ಅದಕ್ಕೆ ನೀವು ಸಾವಿರ ಕೋಟಿಯಲ್ಲ, 50,000 ಕೋಟಿ ರೂಪಾಯಿ ಬೇಕಾದರೂ ಖರ್ಚು ಮಾಡಬಹುದು. ಏನೂ ವ್ಯತ್ಯಾಸವಾಗುವುದಿಲ್ಲ. ಏಕೆಂದರೆ ಅದು ಕಾಲ್ಪನಿಕ ಕಥೆ. ಅಲ್ಲಿ ನಿಮಗೆ ಸೃಜನಾತ್ಮಕ ಸ್ವಾತಂತ್ರ್ಯವಿರುತ್ತದೆ. ಆದರೆ ರಾಮಾಯಣದ ವಿಚಾರದಲ್ಲಿ ಹಾಗೆ ಮಾಡಲು ಸಾಧ್ಯವಿಲ್ಲ’ ಎಂದು ಅಭಿಪ್ರಾಯಪಟ್ಟಿದ್ದಾರೆ.
#WATCH | Mumbai, Maharashtra: On the recently released ‘Ramayana’ movie, actor Mukesh Khanna said, “A very prominent actor from our film industry remarked that a film like this hasn’t been made in the last 100 years. I suppose it must be that good. But here’s the issue: it doesn’t matter to me whether you’ve earned a thousand crores. What matters is whether you’ve concealed even a shred of the truth, or if you’ve introduced even a shred of falsehood. This isn’t just any ordinary story; it is the story of the Ramayana. We have two foundational scriptures, the Ramayana and the Mahabharata, and if you choose to engage with them, a great responsibility rests upon your shoulders; you cannot simply tamper with them… The Ramayana is hardly a boring story that requires a Rs 4,000-crore budget just to make it accessible to today’s audience. If the Rs 4,000-crore expenditure ends up overshadowing the story itself, then I would call it a waste of money. As I stated earlier, in the pursuit of grandeur, the essence, the emotions, has been sacrificed.” (12.11)
— ANI (@ANI) November 12, 2026
ಕಥೆ ಗಟ್ಟಿಯಾಗಿದ್ದರೆ ಕಡಿಮೆ ಬಜೆಟ್‌ನಲ್ಲೂ ಉತ್ತಮ ಸಿನಿಮಾ ಮಾಡಬಹುದು ಎಂಬುದನ್ನು ಒತ್ತಿ ಹೇಳಿದ ಅವರು, ‘ರಾಮಾಯಣಕ್ಕೆ 4,000 ಕೋಟಿ ಖರ್ಚು ಮಾಡಲೇಬೇಕು ಎಂದೇನಿಲ್ಲ. ‘ಹನುಮಾನ್ ಅಂಶ್’ ಚಿತ್ರ ಕೇವಲ 2 ಕೋಟಿ ರೂಪಾಯಿ ಬಜೆಟ್‌ನಲ್ಲಿ ಯಶಸ್ವಿಯಾಗಿತು. ಏಕೆಂದರೆ ಅಲ್ಲಿ ಕಥೆ ಮುಖ್ಯವಾಗಿತ್ತು. ಇಂದಿನ ಪ್ರೇಕ್ಷಕರಿಗೆ ಅರ್ಥಮಾಡಿಸಲು 4,000 ಕೋಟಿ ಖರ್ಚು ಮಾಡುವಷ್ಟು ರಾಮಾಯಣದ ಕಥೆ ನೀರಸವಾಗಿಲ್ಲ. ಒಂದು ವೇಳೆ ಆ 4,000 ಕೋಟಿ ರೂಪಾಯಿ ನಿಮ್ಮ ಕಥೆಯನ್ನೇ ಮರೆಮಾಚುವಂತಿದ್ದರೆ, ನಾನು ಅದನ್ನು ಕಂಪನಿಯ ಹಣ ಪೋಲು ಎಂದೇ ಕರೆಯುತ್ತೇನೆ’ ಎಂದು ಕಿಡಿಕಾರಿದ್ದಾರೆ.
ಇದನ್ನೂ ಓದಿ: ‘ರಾಮಾಯಣ’ ಚಿತ್ರಕ್ಕಾಗಿ ಸಸ್ಯಾಹಾರಿಯಾಗಿದ್ದ ರಣಬೀರ್ ಕಪೂರ್: ಸೀಕ್ರೆಟ್ ಬಿಚ್ಚಿಟ್ಟ ಸಹ ನಟಿ
ಧಾರ್ಮಿಕ ಸಿನಿಮಾಗಳನ್ನು ನಿರ್ಮಿಸುವ ಮುನ್ನ ಅವುಗಳನ್ನು ಪರಿಶೀಲಿಸಲು ವಿದ್ವಾಂಸರನ್ನೊಳಗೊಂಡ ಪ್ರತ್ಯೇಕ ಸಮಿತಿಯನ್ನು ರಚಿಸಬೇಕು ಎಂದು ಖನ್ನಾ ಒತ್ತಾಯಿಸಿದ್ದಾರೆ. ‘ಇಂತಹ ಚಿತ್ರಗಳನ್ನು ತಡೆಯಲು ಸೆನ್ಸಾರ್ ಬೋರ್ಡ್ ಜವಾಬ್ದಾರಿಯುತವಾಗಿ ವರ್ತಿಸದಿದ್ದರೆ, ವಿದ್ವಾಂಸರನ್ನೊಳಗೊಂಡ ಆಯೋಗವನ್ನು ರಚಿಸಬೇಕು. ಆ ಸಮಿತಿಯು ಚಿತ್ರಕಥೆಯನ್ನು ಪರಿಶೀಲಿಸಿ ನಿರಾಕ್ಷೇಪಣಾ ಪತ್ರ ನೀಡುವವರೆಗೂ ಸಿನಿಮಾ ನಿರ್ಮಾಣಕ್ಕೆ ಅನುಮತಿ ನೀಡಬಾರದು. ಆಗ ಸೀತೆ ಯುದ್ಧ ಮಾಡುವಂತಹ ಅನಗತ್ಯ ದೃಶ್ಯಗಳನ್ನು ಸೇರಿಸಲು ಸಾಧ್ಯವಾಗುವುದಿಲ್ಲ. ರಾಮಾಯಣದಲ್ಲಿ ಸೀತೆ ಯುದ್ಧ ಮಾಡುವುದಿಲ್ಲ, ಇದನ್ನು ಎಲ್ಲಿಂದ ತಂದಿರಿ ಎಂದು ಸಮಿತಿಯವರು ಪ್ರಶ್ನಿಸುತ್ತಾರೆ’ ಎಂದು ಮುಖೇಶ್ ಖನ್ನಾ ತಮ್ಮ ನಿಲುವನ್ನು ಸಮರ್ಥಿಸಿಕೊಂಡಿದ್ದಾರೆ.
ಇನ್ನಷ್ಟು ಸಿನಿಮಾ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.




