Video: ನಾಲ್ಕು ವರ್ಷದ ವಿದೇಶಿ ಜೀವನಕ್ಕೆ ಗುಡ್ ಬೈ; ಅಮೆರಿಕ ತೊರೆಯಲು ಮುಂದಾದ ಭಾರತೀಯ ಕುಟುಂಬ
ಉದ್ಯೋಗಕ್ಕೆಂದು ವಿದೇಶಕ್ಕೆ ತೆರಳಿದಾಗ ಅನೇಕರು ಸ್ವಲ್ಪ ವರ್ಷಗಳ ಬಳಿಕ ಹುಟ್ಟೂರಿಗೆ ಮರಳುವುದು ಸಹಜ. ಆದರೆ ಇದೀಗ ಅಮೆರಿಕದಲ್ಲಿ ಕಳೆದ ನಾಲ್ಕು ವರ್ಷಗಳಿಂದ ವಾಸಿಸುತ್ತಿದ್ದ ಕುಟುಂಬವೊಂದು ಭಾರತಕ್ಕೆ ಮರಳಲು ಮುಂದಾಗಿದೆ. ಮಹಿಳೆಯೊಬ್ಬರು ತಮ್ಮ ಈ ನಿರ್ಧಾರದ ಹಿಂದಿನ ಕಾರಣವನ್ನು ಬಹಿರಂಗ ಪಡಿಸಿದ್ದಾರೆ. ಈ ಕುರಿತಾದ ಸ್ಟೋರಿ ಇಲ್ಲಿದೆ.

ವಿದೇಶಕ್ಕೆ (foreign) ತೆರಳಿದ್ರೆ ಲೈಫ್ ಸೆಟ್ಲ್ ಆಯ್ತು ಎಂದು ಭಾವಿಸುತ್ತಾರೆ. ದಿನಗಳು ವರ್ಷಗಳು ಉರುಳಿದ್ದಂತೆ ನಮ್ಮ ಊರೇ ಬೆಸ್ಟ್ ಎಂದು ಕೊಳ್ತಾರೆ. ಆದರೆ ಕೆಲವೊಮ್ಮೆ ಈ ವಿದೇಶಿ ಜೀವನಕ್ಕೆ ಗುಡ್ ಬೈ ಹೇಳುತ್ತಾರೆ. ಹೌದು, ಅಮೆರಿಕದಲ್ಲಿ ನಾಲ್ಕು ವರ್ಷಗಳ ಕಾಲ ಕಳೆದ ನಂತರ, ಸ್ವೀಟಿ ರಂಜನ್ ತನ್ನ ಕುಟುಂಬದೊಂದಿಗೆ ಶಾಶ್ವತವಾಗಿ ಭಾರತಕ್ಕೆ ಮರಳುತ್ತಿದ್ದಾರೆ. ಅಮೆರಿಕವನ್ನು ಬಿಟ್ಟು ಬರೋದಕ್ಕಿಂತ ಇಲ್ಲಿನ ತನ್ನ ಗಾರ್ಡನ್ ಬಿಟ್ಟು ಬರುವುದರ ಬಗ್ಗೆ ಹೆಚ್ಚು ದುಃಖಿತಳಾಗಿದ್ದೇನೆ ಎಂದು ಹೇಳಿದ್ದಾರೆ. ಈ ವಿಡಿಯೋ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ವಿದೇಶ ತೊರೆಯಲು ಮುಂದಾದ ಭಾರತೀಯ ಕುಟುಂಬ
ಕಂಟೆಂಟ್ ಕ್ರಿಯೇಟರ್ ಆಗಿರುವ ಸ್ವೀಟಿ ರಂಜನ್ (sweety_ranjan) ತಮ್ಮ ಇನ್ಸ್ಟಾಗ್ರಾಮ್ ಖಾತೆಯಲ್ಲಿ ವಿಡಿಯೋ ಹಂಚಿಕೊಂಡಿದ್ದಾರೆ. ಈ ಕ್ಲಿಪಿಂಗ್ ನಲ್ಲಿ ಅಮೆರಿಕವನ್ನು ತೊರೆದು ಭಾರತಕ್ಕೆ ಮರಳುತ್ತಿರುವುದಾಗಿ ಘೋಷಿಸಿದ್ದಾರೆ. ತನ್ನ ನಿರ್ಧಾರವನ್ನು ಸ್ವಾಗತಿಸಿದವರಿಗೆ ಧನ್ಯವಾದ ಹೇಳಲು ಬಯಸುತ್ತೇನೆ ಎಂದು ಹೇಳಿದ್ದಾರೆ.
ಪತಿಯ ವರ್ಗಾವಣೆಯಿಂದ ಭಾರತಕ್ಕೆ ಶಿಫ್ಟ್
ನಾವು ಅಮೆರಿಕದಿಂದ ಭಾರತಕ್ಕೆ ಏಕೆ ಹಿಂತಿರುಗುತ್ತಿದ್ದೇವೆ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, ನನ್ನ ಪತಿ ರವೀಶ್ ಅವರನ್ನು ವರ್ಗಾವಣೆ ಮಾಡಲಾಗಿದೆ, ಆದ್ದರಿಂದ ನಾವು ಭಾರತಕ್ಕೆ ಹಿಂತಿರುಗುತ್ತಿದ್ದೇವೆ ಎಂದು ಹೇಳಿಕೊಂಡಿದ್ದಾರೆ.
ವೈರಲ್ ವಿಡಿಯೋ ಇಲ್ಲಿದೆ
View this post on Instagram
ಅಮೆರಿಕವನ್ನು ಬಿಡುವ ಬಗ್ಗೆ ಕಿಂಚಿತ್ತೂ ಬೇಸರವಿಲ್ಲ
ನಾವು ಅಮೆರಿಕದಲ್ಲಿ ಏನನ್ನೂ ಮಾರಾಟ ಮಾಡುವುದಿಲ್ಲ. ಇಲ್ಲಿ ನಾವು ಕಾರನ್ನು ಮಾತ್ರ ಮಾರಾಟ ಮಾಡುತ್ತೇವೆ. ಉಳಿದ ನಮ್ಮ ಎಲ್ಲಾ ವಸ್ತುಗಳು ಹಡಗಿನ ಮೂಲಕ ನಮಗೆ ಬರುತ್ತವೆ. ಅಮೆರಿಕವನ್ನು ಬಿಡಲು ನನಗೆ ಅಷ್ಟು ಬೇಸರವಿಲ್ಲ. ನಾನು ಮಾಡಿದ ತೋಟದ ಬಗ್ಗೆ ಬೇಸರವಿದೆ. ನನ್ನ ಮಗ ಇಲ್ಲಿಯೇ ಇದ್ದು ಅಧ್ಯಯನ ಮಾಡುತ್ತಾನೆ. ಈ ಎರಡು ವಿಷಯಗಳು ನನ್ನನ್ನು ತೀರಾ ಭಾವನಾತ್ಮಕವಾಗಿಸುತ್ತದೆ. ಆದರೆ ಯಾರಿಗೆ ಗೊತ್ತು, ಮುಂದೊಂದು ದಿನ ಇನ್ನೂ ದೊಡ್ಡ ಗಾರ್ಡನ್ ಮಾಡಬಹುದು. ಯಾರಿಗೂ ಅವರವರ ಭವಿಷ್ಯ ತಿಳಿದಿಲ್ಲ. ನಾನು ಹಾರೈಸುವುದೊಂದೇ ನಿಮ್ಮ ಪ್ರೀತಿ ಹಾಗೂ ಬೆಂಬಲದಿಂದ ಎಲ್ಲವೂ ಒಂದು ದಿನ ಖಂಡಿತವಾಗಿಯೂ ಆಗುತ್ತದೆ ಎಂದು ಇಲ್ಲಿ ಹೇಳಿರುವುದನ್ನು ಕಾಣಬಹುದು.
ಇದನ್ನೂ ಓದಿ: ದೀಪಾವಳಿ ಹಬ್ಬಕ್ಕೆ ವಿದೇಶದಿಂದ ಬಂದ ಮಗಳು, ಈ ಸರ್ಪ್ರೈಸ್‌ಗೆ ಹೆತ್ತವರು ಭಾವುಕ
ಈ ವಿಡಿಯೋ ಅಧಿಕ ವೀಕ್ಷಣೆಗಳನ್ನು ಪಡೆದುಕೊಂಡಿವೆ. ಒಬ್ಬ ಬಳಕೆದಾರ ಮಗ ಇರುವ ಕಾರಣ ಮತ್ತೆ ಮರಳುವ ಪ್ಲ್ಯಾನ್ ಇದ್ಯಾ ಎಂದು ಕೇಳಿದ್ದಾರೆ. ಮತ್ತೊಬ್ಬರು, ಪ್ರಯಾಣ ಸುಖಕರವಾಗಿರಲಿ ಎಂದಿದ್ದಾರೆ. ಇನ್ನೊಬ್ಬರು, ನಾನು ನಿಮ್ಮ ಗಾರ್ಡನ್ ನ್ನು ಮಿಸ್ ಮಾಡಿಕೊಳ್ತೇನೆ ಎಂದು ಕಾಮೆಂಟ್ ಮಾಡಿದ್ದಾರೆ. ಮಾಡಿದ್ದಾರೆ.
ಇನ್ನಷ್ಟು ವೈರಲ್ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
