Prashanth Neel: ಕಿಚ್ಚ ಸುದೀಪ್​, ‘ವಿಕ್ರಾಂತ್ ರೋಣ’ ತಂಡಕ್ಕೆ ವಿಶ್ ಮಾಡಿದ ‘ಕೆಜಿಎಫ್​ 2’ ನಿರ್ದೇಶಕ ಪ್ರಶಾಂತ್​ ನೀಲ್​

Prashanth Neel | Kichcha Sudeep: ‘ವಿಕ್ರಾಂತ್ ರೋಣ’ ಸಿನಿಮಾಗೆ ದೊಡ್ಡ ಯಶಸ್ಸು ಸಿಗಲಿ ಎಂದು ಎಲ್ಲರೂ ಮನಸಾರೆ ಹರಸಿದ್ದಾರೆ. ಪ್ರಶಾಂತ್​ ನೀಲ್, ರಮ್ಯಾ, ಗಣೇಶ್​​ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ವಿಶ್​ ಮಾಡಿದ್ದಾರೆ.

Prashanth Neel: ಕಿಚ್ಚ ಸುದೀಪ್​, ‘ವಿಕ್ರಾಂತ್ ರೋಣ’ ತಂಡಕ್ಕೆ ವಿಶ್ ಮಾಡಿದ ‘ಕೆಜಿಎಫ್​ 2’ ನಿರ್ದೇಶಕ ಪ್ರಶಾಂತ್​ ನೀಲ್​
ಕಿಚ್ಚ ಸುದೀಪ್, ಪ್ರಶಾಂತ್ ನೀಲ್
Follow us
TV9 Web
| Updated By: ಮದನ್​ ಕುಮಾರ್​

Updated on: Jul 28, 2022 | 1:24 PM

ಕನ್ನಡದ ಸಿನಿಮಾಗಳು ಪ್ಯಾನ್​ ಇಂಡಿಯಾ ಮಟ್ಟದಲ್ಲಿ ಸದ್ದು ಮಾಡುತ್ತಿವೆ. ಒಂದು ಕಾಲದಲ್ಲಿ ಸ್ಯಾಂಡಲ್​ವುಡ್​ ಮಾರುಕಟ್ಟೆ ಚಿಕ್ಕದು ಎಂದು ಹೇಳಲಾಗುತ್ತಿತ್ತು. ಆದರೆ ಈಗ ಹಲವು ಸಿನಿಮಾಗಳು ಆ ಮಾತನ್ನು ಸುಳ್ಳು ಮಾಡಿವೆ. ‘ಕೆಜಿಎಫ್​: ಚಾಪ್ಟರ್​ 2’, ‘777 ಚಾರ್ಲಿ’ ಸಿನಿಮಾಗಳು ದೇಶಾದ್ಯಂತ ಸದ್ದು ಮಾಡಿವೆ. ಈಗ ಅಂಥದ್ದೇ ಭರವಸೆಯೊಂದಿಗೆ ‘ವಿಕ್ರಾಂತ್​ ರೋಣ’ (Vikrant Rona) ಸಿನಿಮಾ ಬಿಡುಗಡೆ ಆಗಿದೆ. ಈ ಚಿತ್ರದ ಬಗ್ಗೆ ಅನೇಕ ಸೆಲೆಬ್ರಿಟಿಗಳು ಸೋಶಿಯಲ್​ ಮೀಡಿಯಾದಲ್ಲಿ ಪೋಸ್ಟ್​ ಮಾಡುತ್ತಿದ್ದಾರೆ. ‘ಕೆಜಿಎಫ್​: ಚಾಪ್ಟರ್​ 2’ ಚಿತ್ರದ ನಿರ್ದೇಶಕ ಪ್ರಶಾಂತ್​ ನೀಲ್​ ಕೂಡ ಶುಭ ಹಾರೈಸಿದ್ದಾರೆ. ಕಿಚ್ಚ ಸುದೀಪ್​ (Kichcha Sudeep) ಮತ್ತು ಇಡೀ ‘ವಿಕ್ರಾಂತ್​ ರೋಣ’ ತಂಡಕ್ಕೆ ಶುಭವಾಗಲಿ ಎಂದು ಪ್ರಶಾಂ​ತ್​ ನೀಲ್​ (Prashanth Neel) ವಿಶ್​ ಮಾಡಿದ್ದಾರೆ.

ನಿರ್ದೇಶಕ ಅನೂಪ್​ ಭಂಡಾರಿ, ನಿರ್ಮಾಪಕ ಜಾಕ್​ ಮಂಜು, ನಟ ಸುದೀಪ್​ ಅವರ ಕಾಂಬಿನೇಷನ್​ನಲ್ಲಿ ಮೂಡಿಬಂದಿರುವ ‘ವಿಕ್ರಾಂತ್​ ರೋಣ’ ಸಿನಿಮಾ ಇಂದು (ಜುಲೈ 28) ಭರ್ಜರಿಯಾಗಿ ರಿಲೀಸ್​ ಆಗಿದೆ. ಟ್ರೇಲರ್​ ಮೂಲಕ ಗಮನ ಸೆಳೆದ ಈ ಚಿತ್ರದ ಮೇಲೆ ಅಭಿಮಾನಿಗಳು ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು. ಇಂದು ಫಸ್ಟ್​ ಡೇ ಫಸ್ಟ್​ ಶೋ ನೋಡಿ ಫ್ಯಾನ್ಸ್​ ಖುಷಿಪಟ್ಟಿದ್ದಾರೆ. ‘ರಾ ರಾ ರಕ್ಕಮ್ಮ..’ ಹಾಡಿಗೆ ಕುಣಿಯುತ್ತಾ ಸಿನಿಪ್ರಿಯರು ಎಂಜಾಯ್ ಮಾಡಿದ್ದಾರೆ. ರಾಜಮೌಳಿ, ಪ್ರಶಾಂತ್​ ನೀಲ್​, ಕಾರ್ತಿ ಮುಂತಾದ ದೊಡ್ಡ ಸೆಲೆಬ್ರಿಟಿಗಳು ಈ ಚಿತ್ರಕ್ಕೆ ಶುಭ ಕೋರಿದ್ದಾರೆ.

ಇದನ್ನೂ ಓದಿ
Image
Vikrant Rona: ಕಿಚ್ಚ ಸುದೀಪ್ ನಟನೆಯ ‘ವಿಕ್ರಾಂತ್ ರೋಣ’ ಚಿತ್ರದ ಮೊದಲಾರ್ಧದ ವಿಮರ್ಶೆ ಇಲ್ಲಿದೆ
Image
Vikrant Rona: ವಿಶ್ವಾದ್ಯಂತ ಘರ್ಜಿಸುತ್ತಿರುವ ‘ವಿಕ್ರಾಂತ್​ ರೋಣ’; ಸುದೀಪ್​ ಎಂಟ್ರಿಗೆ ಫ್ಯಾನ್ಸ್​ ಫಿದಾ
Image
‘ವಿಕ್ರಾಂತ್​ ರೋಣ’ ರಿಲೀಸ್​ಗೂ ಮುನ್ನ ಸುದೀಪ್​ಗೆ ಪ್ರೀತಿಯಿಂದ ವಿಶ್ ಮಾಡಿದ ನಿರ್ದೇಶಕ ರಾಜಮೌಳಿ
Image
‘ವಿಕ್ರಾಂತ್​ ರೋಣ’ ಪ್ರೀ-ರಿಲೀಸ್​ ಇವೆಂಟ್​ನಲ್ಲಿ ಕತ್ರಿನಾ ಜಪ ಮಾಡಿದ ಸಲ್ಮಾನ್​ ಖಾನ್​; ಕಾರಣ ಏನು?

‘ದೃಶ್ಯ ವೈಭವದಂತಿರುವ ವಿಕ್ರಾಂತ್​ ರೋಣ ಚಿತ್ರದಿಂದ ಕಿಚ್ಚ ಸುದೀಪ್​ ಸರ್​ ಹಾಗೂ ನಿರ್ದೇಶಕ ಅನೂಪ್​ ಭಂಡಾರಿ ಅವರಿಗೆ ಎಲ್ಲ ಯಶಸ್ಸು ಸಿಗಲಿ. ಇಡೀ ತಂಡಕ್ಕೆ ಶುಭವಾಗಲಿ’ ಎಂದು ಪ್ರಶಾಂತ್​ ನೀಲ್​ ಅವರು ಟ್ವೀಟ್​ ಮಾಡಿದ್ದಾರೆ. ಅನೇಕ ಸಂದರ್ಭಗಳಲ್ಲಿ ಸುದೀಪ್​ ಅವರು ‘ಕೆಜಿಎಫ್​ 2’ ಚಿತ್ರದ ಸಾಧನೆಯನ್ನು ಹೊಗಳಿದ್ದುಂಟು. ಈಗ ಅವರಿಗೆ ಆ ಚಿತ್ರದ ನಿರ್ದೇಶಕರಿಂದ ಶುಭ ಹಾರೈಕೆ ಸಿಕ್ಕಿದೆ.

ರಕ್ಷಿತ್​ ಶೆಟ್ಟಿ, ರಿತೇಶ್​ ದೇಶಮುಖ್​, ಜೆನಿಲಿಯಾ ಡಿಸೋಜಾ, ಶರಣ್​, ಸಂತೋಷ್​ ಆನಂದ್​ರಾಮ್​, ಅರ್ಜುನ್​ ಜನ್ಯ, ‘ಪೈಲ್ವಾನ್​’ ನಿರ್ದೇಶಕ ಕೃಷ್ಣ, ಗೋಲ್ಡನ್​ ಸ್ಟಾರ್​ ಗಣೇಶ್​, ತರುಣ್​ ಸುಧೀರ್​, ರಮ್ಯಾ, ಸುನೀಲ್ ಶೆಟ್ಟಿ, ಆರ್​. ಚಂದ್ರು, ಕಬೀರ್​ ದುಹಾನ್​ ಸಿಂಗ್​ ಸೇರಿದಂತೆ ಅನೇಕ ಸೆಲೆಬ್ರಿಟಿಗಳು ‘ವಿಕ್ರಾಂತ್​ ರೋಣ’ ಚಿತ್ರಕ್ಕೆ ವಿಶ್ ಮಾಡಿದ್ದಾರೆ.

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ