AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸ್ಯಾಂಡಲ್​ವುಡ್​ನಲ್ಲಿ ಆರು ತಿಂಗಳಲ್ಲಿ ತೆರೆಗೆ ಬಂತು 50ಕ್ಕೂ ಹೆಚ್ಚು ಸಿನಿಮಾ; ನಿರ್ಮಾಪಕರ ಜೇಬು ತುಂಬಿಸಿದ ಚಿತ್ರಗಳೆಷ್ಟು?

ಈ ವರ್ಷ ಕೊವಿಡ್ ಅಬ್ಬರ ಕಡಿಮೆ ಆಗಿದ್ದು, ಹಲವು ಚಿತ್ರಗಳು ಅಗ್ನಿಪರೀಕ್ಷೆಗೆ ಮುಂದಾದವು. ದೊಡ್ಡ ಚಿತ್ರಗಳ ಅಬ್ಬರದ ನಡುವೆ ಸಣ್ಣ ಬಜೆಟ್ ಚಿತ್ರಗಳು ಮಂಕಾದವು. ಕೆಲ ಚಿತ್ರಗಳು ಒಟಿಟಿಯಲ್ಲಿ ಗೆದ್ದು ಬೀಗಿದವು.

ಸ್ಯಾಂಡಲ್​ವುಡ್​ನಲ್ಲಿ ಆರು ತಿಂಗಳಲ್ಲಿ ತೆರೆಗೆ ಬಂತು 50ಕ್ಕೂ ಹೆಚ್ಚು ಸಿನಿಮಾ; ನಿರ್ಮಾಪಕರ ಜೇಬು ತುಂಬಿಸಿದ ಚಿತ್ರಗಳೆಷ್ಟು?
ನಿರ್ಮಾಪಕರ ಜೇಬು ತುಂಬಿಸಿದ ಚಿತ್ರಗಳಿವು
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Jul 05, 2022 | 3:59 PM

Share

2022ರಲ್ಲಿ ಆರು ತಿಂಗಳು ಪೂರ್ಣಗೊಂಡಿದೆ. ಕೊವಿಡ್ (Covid) ಕಾಟ ಕಡಿಮೆ ಇರುವುದರಿಂದ ಹಲವು ಸಿನಿಮಾಗಳು ಚಿತ್ರಮಂದಿರಗಳಲ್ಲಿ ರಿಲೀಸ್ ಆದವು. ಒಂದೇ ದಿನ 5ಕ್ಕೂ ಹೆಚ್ಚು ಚಿತ್ರಗಳು ರಿಲೀಸ್ ಆದ ಉದಾಹರಣೆ ಕೂಡ ಇದೆ. ‘ಕೆಜಿಎಫ್: ಚಾಪ್ಟರ್​ 2’ ಸಿನಿಮಾ (KGF: Chapter 2) ದೊಡ್ಡ ಮಟ್ಟದಲ್ಲಿ ಕಮಾಯಿ ಮಾಡಿದೆ. ಪುನೀತ್ ನಟನೆಯ ಜೇಮ್ಸ್’ (James Movie), ರಕ್ಷಿತ್ ಶೆಟ್ಟಿ ನಟನೆಯ ‘777 ಚಾರ್ಲಿ’ ಕೂಡ ಗೆದ್ದು ಬೀಗಿದೆ.

ಕಳೆದ ಆರು ತಿಂಗಳಲ್ಲಿ ಸ್ಯಾಂಡಲ್​ವುಡ್​ನಲ್ಲಿ 50ಕ್ಕೂ ಹೆಚ್ಚು ಸಿನಿಮಾಗಳು ರಿಲೀಸ್ ಆಗಿವೆ. ಕೊವಿಡ್ ಕಾರಣದಿಂದ ಕಳೆದ ವರ್ಷ ಹಲವು ಸಿನಿಮಾ ಕೆಲಸಗಳು ವಿಳಂಬವಾಗಿದ್ದವು. ಈ ವರ್ಷ ಕೊವಿಡ್ ಅಬ್ಬರ ಕಡಿಮೆ ಆಗಿದ್ದು, ಹಲವು ಚಿತ್ರಗಳು ಅಗ್ನಿಪರೀಕ್ಷೆಗೆ ಮುಂದಾದವು. ದೊಡ್ಡ ಚಿತ್ರಗಳ ಅಬ್ಬರದ ನಡುವೆ ಸಣ್ಣ ಬಜೆಟ್ ಚಿತ್ರಗಳು ಮಂಕಾದವು. ಕೆಲ ಚಿತ್ರಗಳು ಒಟಿಟಿಯಲ್ಲಿ ಗೆದ್ದು ಬೀಗಿದವು. ಆ ಬಗ್ಗೆ ಇಲ್ಲಿದೆ ಮಾಹಿತಿ.

ಫೆಬ್ರವರಿ 11ರಂದು ‘ಲವ್ ಮಾಕ್ಟೇಲ್ 2’ ಸಿನಿಮಾ ತೆರೆಗೆ ಬಂತು. ‘ಲವ್ ಮಾಕ್ಟೇಲ್​’ ಚಿತ್ರ ದೊಡ್ಡ ಮಟ್ಟದ ಯಶಸ್ಸು ಕಂಡ ಹಿನ್ನೆಲೆಯಲ್ಲಿ ‘ಲವ್ ಮಾಕ್ಟೇಲ್​ 2’ ಸಿನಿಮಾ ಬಗ್ಗೆ ನಿರೀಕ್ಷೆ ಇತ್ತು. ಆ ನಿರೀಕ್ಷೆ ಹುಸಿ ಆಗಲಿಲ್ಲ. ಈ ಸಿನಿಮಾಗೆ ಡಾರ್ಲಿಂಗ್ ಕೃಷ್ಣ ಅವರ ನಿರ್ದೇಶನ ಇದೆ. ಈ ಚಿತ್ರ ವಿಮರ್ಶೆ ಹಾಗೂ ಬಾಕ್ಸ್ ಆಫೀಸ್​ ಎರಡರಲ್ಲೂ ಗೆಲುವು ಕಂಡಿದೆ.

ಇದನ್ನೂ ಓದಿ
Image
ಬೆಂಗಳೂರಲ್ಲಿ ಅಪಘಾತ: ‘ಕೆಜಿಎಫ್ 2’ ನಟನ ಬೆಂಜ್ ಕಾರು ಸಂಪೂರ್ಣ ಜಖಂ; ಕೂದಲೆಳೆ ಅಂತರದಲ್ಲಿ ನಟ ಪಾರು
Image
‘ಕೆಜಿಎಫ್ 2’ ಯಶಸ್ಸು ನೋಡಿ ಮನಸ್ಸು ಬದಲಿಸಿದ ‘ಪುಷ್ಪ 2’ ತಂಡ; ನೂರಾರು ಕೋಟಿ ಕೊಟ್ಟರೂ ಒಪ್ಪಲಿಲ್ಲ ನಿರ್ಮಾಪಕರು?
Image
10 ತಲೆ ಹೊತ್ತು ಬಂದ ‘ನ್ಯಾನೋ ನಾರಾಯಣಪ್ಪ’; ಹೀರೋ ಆದ ‘ಕೆಜಿಎಫ್​’ ತಾತನ ಫಸ್ಟ್​ ಲುಕ್​ ಇಲ್ಲಿದೆ
Image
KGF: ಕಬಾಲಿ ನಿರ್ದೇಶಕನ ಮಾಸ್ಟರ್​ ಪ್ಲ್ಯಾನ್​: ಬರಲಿದೆ ಮತ್ತೊಂದು ಕೆಜಿಎಫ್..!

‘ಓಲ್ಡ್ ಮಾಂಕ್’ ಸಿನಿಮಾ ಫೆಬ್ರವರಿ 24ರಂದು ತೆರೆಗೆ ಬಂತು. ಈ ಚಿತ್ರಕ್ಕೆ ಶ್ರೀನಿ ನಿರ್ದೇಶನ ಮಾಡುವುದರ ಜತೆಗೆ ನಟಿಸಿದ್ದರು. ಈ ಚಿತ್ರಕ್ಕೆ ಅದಿತಿ ಪ್ರಭುದೇವ ನಾಯಕಿ. ಈ ಸಿನಿಮಾ ಕೂಡ ಗೆಲುವು ಕಂಡಿತು.

ಮಾರ್ಚ್​ 17 ಪುನೀತ್ ರಾಜ್​ಕುಮಾರ್ ನಟನೆಯ ‘ಜೇಮ್ಸ್’ ಸಿನಿಮಾ ತೆರೆಕಂಡಿತು. ಪುನೀತ್ ನಿಧನದ ನಂತರ ತೆರೆಕಂಡ ಸಿನಿಮಾ ಎಂಬ ಕಾರಣಕ್ಕೆ ಅಭಿಮಾನಿಗಳು ಭಾವನಾತ್ಮಕವಾಗಿ ಕನೆಕ್ಟ್ ಆದರು. ‘ಜೇಮ್ಸ್’ ಸಿನಿಮಾ ಬಾಕ್ಸ್ ಆಫೀಸ್​ನಲ್ಲಿ ಗೆದ್ದು ಬೀಗಿದೆ. ಈ ಚಿತ್ರ 150 ಕೋಟಿ ರೂಪಾಯಿ ಬಿಸ್ನೆಸ್ ಮಾಡಿದೆ ಎನ್ನಲಾಗಿದೆ.

ಯಶ್ ನಟನೆಯ, ಪ್ರಶಾಂತ್ ನೀಲ್ ನಿರ್ದೇಶನದ ‘ಕೆಜಿಎಫ್ 2’ ಸಿನಿಮಾಗೆ ಸಿಕ್ಕ ಯಶಸ್ಸು ತುಂಬಾನೇ ದೊಡ್ಡದು. ಈ ಚಿತ್ರ ವಿಶ್ವ ಬಾಕ್ಸ್ ಆಫೀಸ್​ನಲ್ಲಿ 1,250 ಕೋಟಿ ರೂಪಾಯಿ ಗಳಿಕೆ ಮಾಡಿದೆ. ಕನ್ನಡ ಚಿತ್ರರಂಗದಲ್ಲೇ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಸಿನಿಮಾ ಎಂಬ ಖ್ಯಾತಿ ಈ ಚಿತ್ರಕ್ಕೆ ಸಿಕ್ಕಿದೆ. ಬಾಲಿವುಡ್ ಬಾಕ್ಸ್​ ಆಫೀಸ್​​​ನಲ್ಲಿ ಅತಿ ಹೆಚ್ಚು ಗಳಿಕೆ ಮಾಡಿದ ಎರಡನೇ ಸಿನಿಮಾ ಎಂಬ ಖ್ಯಾತಿ ಈ ಚಿತ್ರಕ್ಕೆ ಸಿಕ್ಕಿದೆ.

ಜೂನ್ 10ರಂದು ರಿಲೀಸ್ ಆದ ರಕ್ಷಿತ್ ಶೆಟ್ಟಿ ನಟಿಸಿ, ನಿರ್ಮಿಸಿರುವ ‘777 ಚಾರ್ಲಿ’ ಸಿನಿಮಾ ಹಲವು ಕಡೆಗಳಲ್ಲಿ ಈಗಲೂ ಯಶಸ್ವಿ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾ 150 ಕೋಟಿ ರೂಪಾಯಿ ಬಿಸ್ನೆಸ್ ಮಾಡಿರುವ ಬಗ್ಗೆ ಚಿತ್ರತಂಡದವರೇ ಮಾಹಿತಿ ನೀಡಿದ್ದಾರೆ.

ಶಿವರಾಜ್​ಕುಮಾರ್ ಹಾಗೂ ಧನಂಜಯ ಅಭಿನಯದ ‘ಬೈರಾಗಿ’ ಸಿನಿಮಾ ಜುಲೈ 1ರಂದು ರಿಲೀಸ್ ಆಯಿತು. ಹಲವು ಕಡೆಗಳಲ್ಲಿ ಸಿನಿಮಾ ಪ್ರದರ್ಶನ ಕಾಣುತ್ತಿದೆ. ಈ ಸಿನಿಮಾ ತೆರೆಗೆ ಬರುವುದಕ್ಕೂ ಮೊದಲೇ ಟಿವಿ ಹಕ್ಕು 10 ಕೋಟಿ ರೂಪಾಯಿಗೆ ಮಾರಾಟ ಆಗಿತ್ತು. ಇದರಿಂದ ನಿರ್ಮಾಪಕರು ಲಾಭ ಕಂಡಿದ್ದಾರೆ.

ಇದಲ್ಲದೆ, ಇನ್ನೂ ಹಲವು ಸಿನಿಮಾಗಳು ರಿಲೀಸ್ ಆಗಿ ಚಿತ್ರಮಂದಿರದಲ್ಲಿ ಯಶಸ್ಸು ಕಾಣದಿದ್ದರೂ ಒಟಿಟಿ, ಡಬ್ಬಿಂಗ್ ಹಕ್ಕು ಮುಂತಾದ ಕಡೆಗಳಿಂದ ನಿರ್ಮಾಪಕರಿಗೆ ದುಡ್ಡು ತಂದುಕೊಟ್ಟಿವೆ. ಇದರಿಂದ ನಿರ್ಮಾಪಕರಿಗೆ ಹಾಕಿದ ದುಡ್ಡಿಗೆ ಮೋಸ ಆಗಿಲ್ಲ.

ಇದನ್ನೂ ಓದಿ: ‘ಪುಷ್ಪ’ ಸಂಗೀತ ನಿರ್ದೇಶಕನ ಹೊರಗಿಟ್ಟು ರವಿ ಬಸ್ರೂರ್​​ಗೆ ಅವಕಾಶ ನೀಡಿದ ಸಲ್ಮಾನ್ ಖಾನ್

ಬೆಂಗಳೂರಲ್ಲಿ ಅಪಘಾತ: ‘ಕೆಜಿಎಫ್ 2’ ನಟನ ಬೆಂಜ್ ಕಾರು ಸಂಪೂರ್ಣ ಜಖಂ; ಕೂದಲೆಳೆ ಅಂತರದಲ್ಲಿ ನಟ ಪಾರು