‘ಪುಷ್ಪ’ ಸಂಗೀತ ನಿರ್ದೇಶಕನ ಹೊರಗಿಟ್ಟು ರವಿ ಬಸ್ರೂರ್​​ಗೆ ಅವಕಾಶ ನೀಡಿದ ಸಲ್ಮಾನ್ ಖಾನ್

ಹಾಡಿನ ಟ್ರ್ಯಾಕ್​ಗಳು ಕಥೆಯ ಜತೆ ಸಿಂಕ್ ಆಗುವುದಿಲ್ಲ ಎನ್ನುವ ಭಾವನೆ ಸಲ್ಮಾನ್ ಖಾನ್​ಗೆ ಮೂಡಿದೆ. ಈ ಕಾರಣಕ್ಕೆ ಅವರು ದೇವಿಶ್ರೀ ಪ್ರಸಾದ್ ಅವರನ್ನು ಕೈಬಿಡಲು ಸಲ್ಮಾನ್ ಸೂಚಿಸಿದ್ದಾರೆ.

‘ಪುಷ್ಪ’ ಸಂಗೀತ ನಿರ್ದೇಶಕನ ಹೊರಗಿಟ್ಟು ರವಿ ಬಸ್ರೂರ್​​ಗೆ ಅವಕಾಶ ನೀಡಿದ ಸಲ್ಮಾನ್ ಖಾನ್
‘ಪುಷ್ಪ’ ಸಂಗೀತ ನಿರ್ದೇಶಕನ ಹೊರಗಿಟ್ಟು ರವಿ ಬಸ್ರೂರ್​​ಗೆ ಅವಕಾಶ ನೀಡಿದ ಸಲ್ಮಾನ್ ಖಾನ್
TV9kannada Web Team

| Edited By: Rajesh Duggumane

Jun 30, 2022 | 4:46 PM

‘ಪುಷ್ಪ’ (Pushpa Movie) ಹಾಗೂ ‘ಕೆಜಿಎಫ್ 2’ ಇವೆರಡೂ ಚಿತ್ರಗಳು ದೊಡ್ಡ ಮಟ್ಟದಲ್ಲಿ ಸದ್ದು ಮಾಡಿವೆ. ಗೊತ್ತಿದ್ದೋ ಗೊತ್ತಿಲ್ಲದೆಯೋ ಈ ಎರಡೂ ಚಿತ್ರಗಳ ನಡುವೆ ಒಂದು ಕಾಂಪಿಟೇಷನ್ ಬೆಳೆದಿದೆ. ‘ಪುಷ್ಪ ಚಿತ್ರ 10 ಕೆಜಿಎಫ್​ಗೆ ಸಮ’ ಎಂಬ ಟಾಲಿವುಡ್ ಮಂದಿಯ ಹೇಳಿಕೆಯೇ ಈ ಸ್ಪರ್ಧೆ ಹುಟ್ಟಿಕೊಳ್ಳಲು ಮೂಲ ಕಾರಣ. ಈಗ ಬಾಲಿವುಡ್​ನಲ್ಲಿ ‘ಪುಷ್ಪ’ ಸಂಗೀತ ನಿರ್ದೇಶಕನ ಎದುರು ‘ಕೆಜಿಎಫ್’ (KGF) ಮ್ಯೂಸಿಕ್ ಡೈರೆಕ್ಟರ್ ರವಿ ಬಸ್ರೂರ್​​​ಗೆ (Ravi Basrur) ಅವಕಾಶ ಸಿಕ್ಕಿದೆ. ಈ ಬಗ್ಗೆ ಅನೇಕ ಮಾಧ್ಯಮಗಳಲ್ಲಿ ವರದಿ ಆಗಿದೆ.

‘ಪುಷ್ಪ’ ಚಿತ್ರದ ಸಂಗೀತ ನಿರ್ದೇಶಕ ದೇವಿಶ್ರೀ ಪ್ರಸಾದ್ ಅವರು ದೊಡ್ಡ ಮಟ್ಟದಲ್ಲಿ ಹೆಸರು ಮಾಡಿದರು. ಈ ಚಿತ್ರದ ಹಾಡುಗಳು ಹಿಟ್ ಆದ ಬಳಿಕ ಅವರಿಗೆ ಹಲವು ಅವಕಾಶಗಳು ಸಿಕ್ಕವು. ಅವರು ಸಲ್ಮಾನ್ ಖಾನ್ ನಟನೆಯ ‘ಕಭಿ ಈದ್​ ಕಭಿ ದಿವಾಲಿ’ ಸಿನಿಮಾಗೆ ಸಂಗೀತ ಸಂಯೋಜನೆ ಮಾಡಬೇಕಿತ್ತು. ಅವರು ಕೆಲ ಟ್ರ್ಯಾಕ್​ಗಳನ್ನು ಕಂಪೋಸ್ ಕೂಡ ಮಾಡಿದ್ದರು. ಆದರೆ, ಸಲ್ಲುಗೆ ಅದು ಇಷ್ಟ ಆಗಿಲ್ಲ. ಈ ಹಾಡಿನ ಟ್ರ್ಯಾಕ್​ಗಳು ಕಥೆಯ ಜತೆ ಸಿಂಕ್ ಆಗುವುದಿಲ್ಲ ಎನ್ನುವ ಭಾವನೆ ಸಲ್ಮಾನ್ ಖಾನ್​ಗೆ ಮೂಡಿದೆ. ಈ ಕಾರಣಕ್ಕೆ ಅವರು ದೇವಿಶ್ರೀ ಪ್ರಸಾದ್ ಅವರನ್ನು ಕೈಬಿಡಲು ಸೂಚಿಸಿದ್ದಾರೆ.

ಈಗ ಕೇಳಿ ಬರುತ್ತಿರುವ ಲೇಟೆಸ್ಟ್ ಮಾಹಿತಿ ಎಂದರೆ, ರವಿ ಬಸ್ರೂರ್ ಅವರನ್ನು ಸಲ್ಮಾನ್ ಖಾನ್ ಅಪ್ರೋಚ್ ಮಾಡಿದ್ದಾರೆ. ರವಿ ಬಸ್ರೂರ್ ಈ ಆಫರ್​ಗೆ ಒಕೆ ಎಂದಿದ್ದಾರೆ ಎನ್ನಲಾಗಿದೆ. ‘ಕಭಿ ಈದ್​ ಕಭಿ ದಿವಾಲಿ’ ಚಿತ್ರಕ್ಕೆ ರವಿ ಬಸ್ರೂರ್ ಹಿನ್ನೆಲೆ ಸಂಗೀತ ಹಾಗೂ ಎರಡು ಟ್ರ್ಯಾಕ್​ಗೆ ಸಂಗೀತ ಸಂಯೋಜನೆ ಮಾಡಲಿದ್ದಾರೆ.

ಸಲ್ಮಾನ್ ಖಾನ್ ನಟನೆಯ ‘ಅಂತಿಮ್​’ ಚಿತ್ರಕ್ಕೆ ರವಿ ಬಸ್ರೂರ್ ಸಂಗೀತ ಸಂಯೋಜನೆ ಮಾಡಿದ್ದರು. ಆ ಸಂದರ್ಭದಲ್ಲಿ ಸಲ್ಮಾನ್ ಖಾನ್ ಹಾಗೂ ರವಿ ನಡುವೆ ಫ್ರೆಂಡ್​ಶಿಪ್ ಬೆಳೆದಿದೆ. ರವಿ ಬಸ್ರೂರ್ ಕಾರ್ಯ ವೈಖರಿಯನ್ನು ಸಲ್ಮಾನ್ ಖಾನ್ ಮೆಚ್ಚಿಕೊಂಡಿದ್ದಾರೆ. ಈ ಕಾರಣಕ್ಕೆ ಸಲ್ಲು ಈ ಅವಕಾಶವನ್ನು ರವಿಗೆ  ನೀಡಿದ್ದಾರೆ. ಸದ್ಯ ಈ ವಿಚಾರ ಸೋಶಿಯಲ್ ಮೀಡಿಯಾದಲ್ಲಿ ಸಖತ್ ಚರ್ಚೆ ಆಗುತ್ತಿದೆ. ‘ಪುಷ್ಪ’ ಚಿತ್ರಕ್ಕಿಂತ ‘ಕೆಜಿಎಫ್’ ಚಿತ್ರವೇ ಮೇಲು ಎನ್ನುವ ಚರ್ಚೆ ಮತ್ತೆ ಮುನ್ನೆಲೆಗೆ ಬಂದಿದೆ.

ಇದನ್ನೂ ಓದಿ: ‘ವಿಕ್ರಮ್​’ ಸಿನಿಮಾ ಸಕ್ಸಸ್​ ಪಾರ್ಟಿ ಆಯೋಜಿಸಿದ ಚಿರಂಜೀವಿ; ಗಮನ ಸೆಳೆದ ಸಲ್ಮಾನ್ ಖಾನ್

ಇದನ್ನೂ ಓದಿ

ಸಲ್ಮಾನ್ ಖಾನ್​ಗೆ ಅಂಕಲ್​ ಎಂದು ಕರೆದ ಸಾರಾ ಅಲಿ ಖಾನ್​; ನಟನ ರಿಯಾಕ್ಷನ್ ಹೇಗಿತ್ತು?

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada