‘ವಿಕ್ರಾಂತ್​ ರೋಣ ಪಾರ್ಟ್​ 2 ಐಡಿಯಾ ಇದೆ, ಅದು ಬೇರೆ ಪ್ರಪಂಚದಲ್ಲಿ ನಡೆಯುತ್ತೆ’: ಅನೂಪ್​ ಭಂಡಾರಿ

Vikrant Rona Part 2: ‘ವಿಕ್ರಾಂತ್ ರೋಣ’ ಚಿತ್ರ ಯಶಸ್ವಿ ಆಗಿದೆ. ಈ ಸಿನಿಮಾದ ‘ಪಾರ್ಟ್​ 2’ ಆಲೋಚನೆ ಬಗ್ಗೆ ನಿರ್ದೇಶಕ ಅನೂಪ್​ ಭಂಡಾರಿ ಅವರು ಮಾಹಿತಿ ಹಂಚಿಕೊಂಡಿದ್ದಾರೆ.

‘ವಿಕ್ರಾಂತ್​ ರೋಣ ಪಾರ್ಟ್​ 2 ಐಡಿಯಾ ಇದೆ, ಅದು ಬೇರೆ ಪ್ರಪಂಚದಲ್ಲಿ ನಡೆಯುತ್ತೆ’: ಅನೂಪ್​ ಭಂಡಾರಿ
| Updated By: ಮದನ್​ ಕುಮಾರ್​

Updated on:Jul 31, 2022 | 6:20 PM

ಯಾವುದೇ ಸಿನಿಮಾ ಸೂಪರ್​ ಹಿಟ್​ ಆದರೆ ಅದರ ಸೀಕ್ವೆಲ್ (Sequel)​ ಬಗ್ಗೆ ಪ್ರಶ್ನೆ ಮೂಡುವುದು ಸಹಜ. ‘ವಿಕ್ರಾಂತ್​ ರೋಣ’ (Vikrant Rona) ವಿಚಾರದಲ್ಲೂ ಹಾಗೆಯೇ ಆಗುತ್ತಿದೆ. ಈ ಸಿನಿಮಾ ನೋಡಿ ಪ್ರೇಕ್ಷಕರು ಎಂಜಾಯ್​ ಮಾಡುತ್ತಿದ್ದಾರೆ. ಕಿಚ್ಚ ಸುದೀಪ್​ ಅಭಿಮಾನಿಗಳಿಗೆ ಸಖತ್​ ಇಷ್ಟವಾಗಿದೆ. ಬಾಕ್ಸ್​ ಆಫೀಸ್​ನಲ್ಲಿ ಬಹುಕೋಟಿ ರೂಪಾಯಿ ಕಲೆಕ್ಷನ್​ ಮಾಡಿರುವ ಈ ಚಿತ್ರಕ್ಕೆ ‘ಪಾರ್ಟ್​ 2’ ಬರಲಿದೆಯಾ ಎಂಬ ಕೌತುಕ ಮೂಡಿದೆ. ಅದಕ್ಕೆ ನಿರ್ದೇಶಕ ಅನೂಪ್​ ಭಂಡಾರಿ (Anup Bhandari) ಉತ್ತರ ನೀಡಿದ್ದಾರೆ. ‘ಸೀಕ್ವೆಲ್​ ಬಗ್ಗೆ ಒಂದು ಲೈನ್​ ಇದೆ. ಅದು ತುಂಬ ದೊಡ್ಡ ಮಟ್ಟದಲ್ಲಿ, ಬೇರೆ ಪ್ರಪಂಚದಲ್ಲಿ ನಡೆಯುತ್ತದೆ. ಅದು ಕಮರೊಟ್ಟು ಜಾಗದಲ್ಲಿ ನಡೆಯುವ ಕಥೆಯಲ್ಲ’ ಎಂದು ಅವರು ಹೇಳಿದ್ದಾರೆ.

 

Published On - 6:20 pm, Sun, 31 July 22

Follow us