AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Coffee Nadu Chandu: ‘ಕಾಫಿ ನಾಡು ಚಂದು ಬಿಗ್​ ಬಾಸ್​ಗೆ ಬರಲಿ’: ಪರಮೇಶ್ವರ್​ ಗುಂಡ್ಕಲ್​ ಬಳಿ ಬೇಡಿಕೆ ಇಟ್ಟ ಫ್ಯಾನ್ಸ್​

Coffee Nadu Chandu | Bigg Boss Kannada: ಕಾಫಿ ನಾಡು ಚಂದು ಅವರು ಬಿಗ್​ ಬಾಸ್​ಗೆ ಹೋದರೆ ವೀಕ್ಷಕರಿಗೆ ಸಖತ್​ ಮನರಂಜನೆ ಸಿಗಲಿದೆ ಎಂಬುದು ಕೆಲವರ ಲೆಕ್ಕಾಚಾರ. ಹಾಗಾಗಿ ಅವರ ಹೆಸರನ್ನು ಜನರು ಶಿಫಾರಸ್ಸು ಮಾಡುತ್ತಿದ್ದಾರೆ.

Coffee Nadu Chandu: ‘ಕಾಫಿ ನಾಡು ಚಂದು ಬಿಗ್​ ಬಾಸ್​ಗೆ ಬರಲಿ’: ಪರಮೇಶ್ವರ್​ ಗುಂಡ್ಕಲ್​ ಬಳಿ ಬೇಡಿಕೆ ಇಟ್ಟ ಫ್ಯಾನ್ಸ್​
ಕಾಫಿನಾಡು ಚಂದು
TV9 Web
| Updated By: ಮದನ್​ ಕುಮಾರ್​|

Updated on:Jul 18, 2022 | 1:27 PM

Share

ಬಿಗ್​ ಬಾಸ್​ ಎಂದರೆ ವೀಕ್ಷಕರಿಗೆ ಸಖತ್ ಇಷ್ಟ. ಬೇರೆಲ್ಲ ರಿಯಾಲಿಟಿ ಶೋಗಿಂತ ಈ ಕಾರ್ಯಕ್ರಮ ಸಿಕ್ಕಾಪಟ್ಟೆ ಭಿನ್ನವಾಗಿರುತ್ತದೆ. ಬಿಗ್​ ಬಾಸ್​ ಎಪಿಸೋಡ್​ಗಳು ಹೇಗಿರುತ್ತವೆ ಎಂಬುದಕ್ಕಿಂತಲೂ ಈ ಬಾರಿ ಭಾಗವಹಿಸುವ ಸ್ಪರ್ಧಿಗಳು ಯಾರು ಎಂಬುದನ್ನು ತಿಳಿಯುವ ಕೌತುಕವೇ ಹೆಚ್ಚಾಗಿರುತ್ತದೆ. ಪ್ರತಿ ಬಾರಿ ಬಿಗ್​ ಬಾಸ್​ (BBK 9) ಆರಂಭಕ್ಕೂ ಮುನ್ನ ಈ ಬಗ್ಗೆ ಸೋಶಿಯಲ್​ ಮೀಡಿಯಾದಲ್ಲಿ ಸಖತ್​ ಚರ್ಚೆ ನಡೆಯುತ್ತದೆ. ಸಾಮಾಜಿಕ ಜಾಲತಾಣದಲ್ಲಿ ಸೆನ್ಸೇಷನ್​ ಸೃಷ್ಟಿ ಮಾಡಿದ ವ್ಯಕ್ತಿಗಳು ಬಿಗ್​ ಬಾಸ್​ ಮನೆಗೆ ಎಂಟ್ರಿ ನೀಡುತ್ತಾರೆ ಎಂಬುದು ವೀಕ್ಷಕರ ಊಹೆ. ಹಾಗಾಗಿ ಈ ಬಾರಿ ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ರಲ್ಲಿ (Bigg Boss Kannada Season 9) ಕಾಫಿ ನಾಡು ಚಂದು ಕೂಡ ಚಾನ್ಸ್​ ಪಡೆಯಬಹುದು ಎಂದು ಕೆಲವರು ಊಹಿಸಿದ್ದಾರೆ. ಅಷ್ಟೇ ಅಲ್ಲ, ಚಂದುಗೆ (Coffee Nadu Chandu) ಅವಕಾಶ ಕೊಡಬೇಕು ಎಂದು ನೆಟ್ಟಿಗರು ಪರಮೇಶ್ವರ್​ ಗುಂಡ್ಕಲ್​ ಬಳಿ ಮನವಿ ಕೂಡ ಮಾಡಿದ್ದಾರೆ!

ಬಿಗ್​ ಬಾಸ್​ ಕನ್ನಡ 9ನೇ ಸೀಸನ್​ಗಾಗಿ ‘ಕಲರ್ಸ್​ ಕನ್ನಡ’ ವಾಹಿನಿ ಸಕಲ ಸಿದ್ಧತೆ ಮಾಡಿಕೊಳ್ಳುತ್ತಿದೆ. ದೊಡ್ಮನೆ ಸೆಟ್​ ವರ್ಕ್​ ಪ್ರಗತಿಯಲ್ಲಿದೆ. ಈಗಾಗಲೇ ಪ್ರೋಮೋ ಶೂಟ್​ ಮಾಡಲಾಗಿದೆ. ಕಿಚ್ಚ ಸುದೀಪ್​ ಅವರೇ ಈ ಸಲ ಕೂಡ ನಿರೂಪಣೆಯ ಜವಾಬ್ದಾರಿ ಹೊತ್ತುಕೊಂಡಿದ್ದಾರೆ. ಈ ಎಲ್ಲ ವಿಚಾರಗಳ ಬಗ್ಗೆ ಅಪ್​ಡೇಟ್​ ನೀಡಲು ಕಲರ್ಸ್​ ಕನ್ನಡ ವಾಹಿನಿಯ ಬಿಸ್ನೆಸ್​ ಹೆಡ್​ ಪರಮೇಶ್ವರ್​ ಗುಂಡ್ಕಲ್​ ಅವರು ಒಂದೆರಡು ಫೋಟೋಗಳನ್ನು ಹಂಚಿಕೊಂಡಿದ್ದರು. ಅದಕ್ಕೆ ಕಮೆಂಟ್​ ಮಾಡಿರುವ ನೆಟ್ಟಿಗರು ಕಾಫಿ ನಾಡು ಚಂದು ಬಗ್ಗೆ ಪ್ರಸ್ತಾಪ ಮಾಡಿದ್ದಾರೆ.

ಚಿಕ್ಕಮಗಳೂರು ಮೂಲದ ಚಂದು ಅವರು ವೃತ್ತಿಯಲ್ಲಿ ಆಟೋ ಡ್ರೈವರ್​ ಆಗಿದ್ದಾರೆ. ಸೋಶಿಯಲ್​ ಮೀಡಿಯಾದಲ್ಲಿ ಅನೇಕ ವಿಡಿಯೋಗಳನ್ನು ಹಂಚಿಕೊಂಡು ಅವರು ಫೇಮಸ್​ ಆಗಿದ್ದಾರೆ. ತಮ್ಮದೇ ಆದ ಶೈಲಿಯಲ್ಲಿ ಹಲವರಿಗೆ ಬರ್ತ್​ಡೇ ವಿಶ್​ ಮಾಡುವ ಮೂಲಕ ಅವರು ನೋಡುಗರಲ್ಲಿ ನಗು ಉಕ್ಕಿಸಿದ್ದಾರೆ. ಸಾಮಾಜಿಕ ಜಾಲತಾಣದಲ್ಲಿ ಅವರ ವಿಡಿಯೋಗಳು ವೈರಲ್​ ಆಗಿವೆ. ಅವರ ಶೈಲಿಯಲ್ಲೇ ಬರ್ತ್​ಡೇ ವಿಶ್​ ಮಾಡುವುದು ಟ್ರೆಂಡ್​ ಆಗಿದೆ!

ಇದನ್ನೂ ಓದಿ
Image
BBK 9: ಈ ಬಾರಿ ಕನ್ನಡ ಬಿಗ್​ ಬಾಸ್​ನಲ್ಲಿ ಯಾರೆಲ್ಲ ಇರಬೇಕು? ಈಗಲೇ ಶುರುವಾಗಿದೆ ಚರ್ಚೆ
Image
BBK 9: ‘ಕನ್ನಡ ಬಿಗ್​ ಬಾಸ್​’ 9ನೇ ಸೀಸನ್​ ಕೆಲಸ ಶುರು; ಬಿಗ್​ ಅಪ್​ಡೇಟ್​ ನೀಡಿದ ಪರಮೇಶ್ವರ್​ ಗುಂಡ್ಕಲ್​
Image
‘ಬಿಗ್​ ಬಾಸ್​’ನಲ್ಲಿ ಮದುವೆ ಆದ ಜೋಡಿಗೆ ಚಾನೆಲ್​ನವರಿಂದ ಸಿಕ್ಕಿತ್ತು 50 ಲಕ್ಷ ರೂ.; ಎರಡೇ ತಿಂಗಳಿಗೆ ಡಿವೋರ್ಸ್​
Image
ಬಿಗ್​ ಬಾಸ್​ ಗೆದ್ದವರ ಹಿಂದೆ ಲಾಬಿ ಇದೆಯೋ ಇಲ್ಲವೋ? ನೇರವಾಗಿ ಮಾತಾಡಿದ ಸ್ಪರ್ಧಿ ಕರಣ್​ ಕುಂದ್ರಾ

ಇಷ್ಟೆಲ್ಲ ಫೇಮಸ್​ ಆಗಿರುವ ಕಾಫಿ ನಾಡು ಚಂದು ಅವರು ಬಿಗ್​ ಬಾಸ್​ಗೆ ಹೋದರೆ ವೀಕ್ಷಕರಿಗೆ ಸಖತ್​ ಮನರಂಜನೆ ಸಿಗಲಿದೆ ಎಂಬುದು ಕೆಲವರ ಲೆಕ್ಕಾಚಾರ. ಹಾಗಾಗಿ ‘ಈ ಬಾರಿ ಕಾಫಿ ನಾಡು ಚಂದು ಅವರಿಗೆ ಅವಕಾಶ ನೀಡಿ’ ಎಂದು ನೆಟ್ಟಿಗರು ಕಮೆಂಟ್​ ಮಾಡುತ್ತಿದ್ದಾರೆ. ಆದರೆ ‘ಬಿಗ್​ ಬಾಸ್​ ಕನ್ನಡ ಸೀಸನ್​ 9’ರಲ್ಲಿ ಯಾರಿಗೆಲ್ಲ ಚಾನ್ಸ್​ ಸಿಗಲಿದೆ ಎಂಬುದು ಸದ್ಯಕ್ಕಂತೂ ಸಸ್ಪೆನ್ಸ್​ ಆಗಿ ಉಳಿದುಕೊಂಡಿದೆ.

Published On - 1:27 pm, Mon, 18 July 22

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ