ಭಿನ್ನ ರೀತಿಯಲ್ಲಿ ಕಿರಣ್ ರಾಜ್ ಸಹಾಯ; ನಟನಿಗೆ ಹರಿದುಬಂತು ಧನ್ಯವಾದಗಳ ಮಹಾಪೂರ

ಬೀದಿ ಬದಿ ವ್ಯಾಪಾರ ಮಾಡುವ ಅನೇಕರು ಮಳೆಯಲ್ಲಿ ನೆನೆಯುವ ಪರಿಸ್ಥಿತಿ ಇದೆ. ಅಂಥವರನ್ನು ಗುರುತಿಸಿ ಕಿರಣ್ ರಾಜ್ ಸಹಾಯ ಮಾಡಿದ್ದಾರೆ. 

ಭಿನ್ನ ರೀತಿಯಲ್ಲಿ ಕಿರಣ್ ರಾಜ್ ಸಹಾಯ; ನಟನಿಗೆ ಹರಿದುಬಂತು ಧನ್ಯವಾದಗಳ ಮಹಾಪೂರ
ಕಿರಣ್ ರಾಜ್
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jul 18, 2022 | 4:16 PM

ನಟ ಕಿರಣ್ ರಾಜ್​ (Kiran Raj) ಅವರು ತಮ್ಮ ‘ಕಿರಣ್ ರಾಜ್ ಫೌಂಡೇಷನ್’ (Kiran Raj Foundation) ಮೂಲಕ ಕಷ್ಟದಲ್ಲಿರುವವರಿಗೆ ಸಹಾಯ ಮಾಡುತ್ತಿದ್ದಾರೆ. ಕೊವಿಡ್ ಸಂದರ್ಭದಲ್ಲಿ ಅವರು ಸಾಕಷ್ಟು ಮಂದಿಗೆ ನೆರವಿನ ಹಸ್ತ ಚಾಚಿದ್ದರು. ಊಟ ಇಲ್ಲದವರಿಗೆ ಊಟ ನೀಡಿದ್ದರು. ಧಾರಾವಾಹಿ ಹಾಗೂ ಸಿನಿಮಾಗಳ ಜತೆಗೆ ಈ ರೀತಿಯ ಕೆಲಸ ಮಾಡುವ ಮೂಲಕ ಅವರು ಪ್ರೇಕ್ಷಕರಿಗೆ ಇಷ್ಟವಾಗುತ್ತಾರೆ. ಈ ಬಾರಿ ಕಿರಣ್ ರಾಜ್ ಅವರು ಮತ್ತೆ ಸಹಾಯ ಹಸ್ತ ಚಾಚಿದ್ದಾರೆ. ಅಗತ್ಯ ಇರುವವರಿಗೆ ಅವರು ರೇನ್​ಕೋಟ್ ನೀಡಿದ್ದಾರೆ.

ಸದ್ಯ, ರಾಜ್ಯಾದ್ಯಂತ ಮಳೆ ಆಗುತ್ತಿದೆ. ಮಳೆಯಿಂದ ರಕ್ಷಣೆ ಪಡೆಯಲು ಹಣ ಇರುವವರು ಮಾರ್ಗ ಕಂಡುಕೊಳ್ಳುತ್ತಾರೆ. ಆದರೆ, ಕೆಲವರಿಗೆ ಛತ್ರಿ, ರೇನ್​ಕೋಟ್ ಖರೀದಿಸಲೂ ಹಣ ಇರುವುದಿಲ್ಲ. ಬೀದಿ ಬದಿ ವ್ಯಾಪಾರ ಮಾಡುವ ಅನೇಕರು ಮಳೆಯಲ್ಲಿ ನೆನೆಯುವ ಪರಿಸ್ಥಿತಿ ಇದೆ. ಅಂಥವರನ್ನು ಗುರುತಿಸಿ ಕಿರಣ್ ರಾಜ್ ಸಹಾಯ ಮಾಡಿದ್ದಾರೆ.

ಇದನ್ನೂ ಓದಿ
Image
Kiran Raj Birthday: ಕಿರಣ್ ರಾಜ್​ ಬರ್ತ್​ಡೇ: ಫ್ಯಾನ್ಸ್​ಗೆ ‘ಬಡ್ಡೀಸ್​’ ಸಿನಿಮಾ ನಟನ ಕಡೆಯಿಂದ ಗಿಫ್ಟ್​
Image
ಹಿಂದಿಗೆ ಡಬ್, ಮರಾಠಿಗೆ ರಿಮೇಕ್​ ಆದ ‘ಕನ್ನಡತಿ’: ಈ ಧಾರಾವಾಹಿಗೆ ಹೇಗಿದೆ ರೆಸ್ಪಾನ್ಸ್? ಇಲ್ಲಿದೆ ಉತ್ತರ
Image
‘ಬಡ್ಡೀಸ್​’ ಚಿತ್ರದಲ್ಲಿ ಆ್ಯಕ್ಷನ್​ ಹೀರೋ ಆಗಿ ಅಬ್ಬರಿಸ್ತಾರೆ ‘ಕನ್ನಡತಿ’ ನಟ ಕಿರಣ್​ ರಾಜ್​; ಜೂನ್​ 24ಕ್ಕೆ ರಿಲೀಸ್​
Image
ಹಿಂದಿಗೆ ಡಬ್​ ಆಗುತ್ತಿದೆ ‘ಕನ್ನಡತಿ’ ಧಾರಾವಾಹಿ; ಕಿರಣ್​ ರಾಜ್​-ರಂಜನಿ ರಾಘವನ್ ಫ್ಯಾನ್ಸ್​ಗೆ ಹೆಮ್ಮೆ​

ಬೀದಿಬದಿ ವ್ಯಾಪಾರಿಗಳು, ಸಿಗ್ನಲ್​​ನಲ್ಲಿ ವಸ್ತುಗಳನ್ನು ಮಾರಾಟ ಮಾಡುವವರು ಸಾಕಷ್ಟು ಜನರಿದ್ದಾರೆ. ಅವರ ದುಡಿಮೆ ಕಡಿಮೆ ಇರುತ್ತದೆ. ಇಂತಹವರನ್ನು ಗುರುತಿಸಿರುವ ಕಿರಣ್ ರಾಜ್ ಮಳೆಯಿಂದ ರಕ್ಷಣೆ ನೀಡುವ ರೇನ್​ಕೋಟ್​​ಗಳನ್ನು ನೀಡಿದ್ದಾರೆ. ಅವರಿಂದ ಸಹಾಯ ಪಡೆದವರು ಧನ್ಯವಾದ ಅರ್ಪಿಸುತ್ತಿದ್ದಾರೆ.

ಈ ಕೆಲಸವನ್ನು ಕಿರಣ್ ರಾಜ್ ಮಾತ್ರ ಮಾಡಿಲ್ಲ. ಸಾಮಾಜಿಕ ಕೆಲಸ ಮಾಡಲು ಆಸಕ್ತಿ ಇರುವ ಕಾಲೇಜು ವಿದ್ಯಾರ್ಥಿಗಳ ಮೂಲಕ ಈ ಒಳ್ಳೆಯ ಕೆಲಸ ಮಾಡಿಸಲಾಗಿದೆ. ‘ಇಂತಹ ಕಾರ್ಯಗಳಲ್ಲಿ ವಿದ್ಯಾರ್ಥಿಗಳು ಭಾಗವಹಿಸುತ್ತಿರುವುದು ಖುಷಿ ತಂದಿದೆ. ಜೀವನದಲ್ಲಿ ಮುಂದೆ ಇಂತಹ ಸಹಾಯ ಮಾಡುವ ಗುಣಗಳನ್ನು ಮೈಗೂಡಿಸಿಕೊಳ್ಳಲು ಇಂತಹ ಕಾರ್ಯಗಳು ಅವರಿಗೆ ಅನುಕೂಲವಾಗಲಿದೆ. ಸಾಮಾಜಿಕ ಕಾರ್ಯಗಳಲ್ಲಿ ಪಾಲ್ಗೊಳ್ಳಲು ಮನಸ್ಸಿರುವ ವಿದ್ಯಾರ್ಥಿಗಳು ಕಿರಣ್ ರಾಜ್ ಫೌಂಡೇಶ್​ಅನ್ನು ಸಂಪರ್ಕಿಸಬಹುದು’ ಎನ್ನುತ್ತಾರೆ ನಟ ಕಿರಣ್ ರಾಜ್.

View this post on Instagram

A post shared by Kiran Raj (@itskiranraj)

ಇದನ್ನೂ ಓದಿ: Kiran Raj Birthday: ಕಿರಣ್ ರಾಜ್​ ಬರ್ತ್​ಡೇ: ಫ್ಯಾನ್ಸ್​ಗೆ ‘ಬಡ್ಡೀಸ್​’ ಸಿನಿಮಾ ನಟನ ಕಡೆಯಿಂದ ಗಿಫ್ಟ್​

ಇತ್ತೀಚೆಗೆ ಕಿರಣ್ ರಾಜ್ ಅವರು ಬರ್ತ್​ಡೇ ಆಚರಿಸಿಕೊಂಡರು. ಈ ವೇಳೆ ತಮ್ಮ ಅಭಿಮಾನಿಗಳಿಗೆ ಉಡುಗೊರೆ ಹಾಗೂ ಬಡವರಿಗೆ ಬ್ಲಾಂಕೆಟ್​ ಸಹಾಯ ಮಾಡಿದ್ದರು. ಈ ಮೂಲಕ ಬರ್ತ್​ಡೇಯನ್ನು ಭಿನ್ನವಾಗಿ ಆಚರಿಸಿಕೊಂಡಿದ್ದರು. ಈ ಕೆಲಸಕ್ಕೆ ಎಲ್ಲ ಕಡೆಗಳಿಂದ ಮೆಚ್ಚುಗೆ ವ್ಯಕ್ತವಾಗಿದೆ. ತಮ್ಮ ದುಡಿಮೆಯ ಒಂದು ಪಾಲನ್ನು ಅವರು ಸಾಮಾಜಿಕ ಕೆಲಸಕ್ಕೆ ಬಳಕೆ ಮಾಡಿಕೊಳ್ಳುತ್ತಿದ್ದಾರೆ ಅನ್ನೋದು ವಿಶೇಷ.

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ