Kiran Raj Birthday: ಕಿರಣ್ ರಾಜ್​ ಬರ್ತ್​ಡೇ: ಫ್ಯಾನ್ಸ್​ಗೆ ‘ಬಡ್ಡೀಸ್​’ ಸಿನಿಮಾ ನಟನ ಕಡೆಯಿಂದ ಗಿಫ್ಟ್​

ಕಿರಣ್ ರಾಜ್​ ಮೊದಲಿನಿಂದಲೂ ಸಾಮಾಜಿಕ ಕೆಲಸ ಮಾಡುತ್ತಾ ಬಂದಿದ್ದಾರೆ. ಕೊವಿಡ್ ಸಂದರ್ಭದಲ್ಲಿ ಈ ಕಾರ್ಯವನ್ನು ಹೆಚ್ಚಿಸಿದ್ದರು. ಈಗಲೂ ಅವರ ಕಡೆಯಿಂದ ಒಳ್ಳೆಯ ಕೆಲಸ ಆಗುತ್ತಿದೆ. ಬರ್ತ್​ಡೇ ದಿನ ಕಿರಣ್ ರಾಜ್​ ಅವರು ವಿಶೇಷವಾಗಿ ಸಹಾಯ ಮಾಡುತ್ತಿದ್ದಾರೆ.

Kiran Raj Birthday: ಕಿರಣ್ ರಾಜ್​ ಬರ್ತ್​ಡೇ: ಫ್ಯಾನ್ಸ್​ಗೆ ‘ಬಡ್ಡೀಸ್​’ ಸಿನಿಮಾ ನಟನ ಕಡೆಯಿಂದ ಗಿಫ್ಟ್​
ಕಿರಣ್ ರಾಜ್
TV9kannada Web Team

| Edited By: Rajesh Duggumane

Jul 04, 2022 | 6:28 PM

ಹೀರೋಗಳ ಬರ್ತ್​ಡೇಗೆ ಫ್ಯಾನ್ಸ್ ಹೂವಿನ ಹಾರ, ಕೇಕ್ ಹಿಡಿದು ಬರುತ್ತಾರೆ. ಸ್ಟಾರ್​ಗಳಿಗೆ ವಿಶೇಷ ಗಿಫ್ಟ್ ಕೂಡ ಅಭಿಮಾನಿಗಳ ಕಡೆಯಿಂದ ಸಿಗುತ್ತದೆ. ಆದರೆ, ನಟ ಕಿರಣ್ ರಾಜ್ (Kiran Raj) ಈ ವಿಚಾರದಲ್ಲಿ ಭಿನ್ನವಾಗಿ ಕಾಣಿಸುತ್ತಾರೆ. ಜುಲೈ 5ರಂದು ಅವರ ಬರ್ತ್​ಡೇ (Kiran Raj Birthday). ಈ ವಿಶೇಷ ದಿನಕ್ಕೂ ಮೊದಲು ಅವರು ಫ್ಯಾನ್ಸ್​ಗೆ ಗಿಫ್ಟ್ ನೀಡುವ ಕೆಲಸ ಆರಂಭಿಸಿದ್ದಾರೆ. ಈ ಮೂಲಕ ಬರ್ತ್​ಡೇಯನ್ನು ಭಿನ್ನವಾಗಿ ಆಚರಿಸಿಕೊಳ್ಳುತ್ತಿದ್ದಾರೆ. ಅವರ ಕಾರ್ಯಕ್ಕೆ ಎಲ್ಲ ಕಡೆಗಳಲ್ಲೂ ಮೆಚ್ಚುಗೆ ವ್ಯಕ್ತವಾಗುತ್ತಿದೆ.

‘ಕನ್ನಡತಿ’ ಧಾರಾವಾಹಿ ಮೂಲಕ ಕಿರಣ್ ರಾಜ್ ಕರ್ನಾಟಕದಲ್ಲಿ ಹೆಚ್ಚು ಗುರುತಿಸಿಕೊಂಡರು. ನಂತರ ಸಿನಿಮಾಗಳಿಂದಲೂ ಅವರಿಗೆ ಆಫರ್ ಬಂತು. ಇತ್ತೀಚೆಗೆ ಅವರ ನಟನೆಯ ‘ಬಡ್ಡೀಸ್’ ಸಿನಿಮಾಗೆ ಫ್ಯಾನ್ಸ್​ ಕಡೆಯಿಂದ ಮೆಚ್ಚುಗೆ ಸಿಕ್ಕಿದೆ. ಹುಟ್ಟುಹಬ್ಬದ ಸಮಯದಲ್ಲೇ ಈ ಸಿನಿಮಾ ಯಶಸ್ಸು ಕಂಡಿರುವುದು ಅವರ ಖುಷಿಯನ್ನು ಹೆಚ್ಚಿಸಿದೆ. ಕಿರಣ್ ರಾಜ್​ ಈಗ ಅನೇಕರಿಗೆ ಸಹಾಯ ಮಾಡುತ್ತಾ ಮಾದರಿ ಆಗಿದ್ದಾರೆ.

ಈ ಬಗ್ಗೆ ಮಾತನಾಡಿರುವ ಕಿರಣ್ ರಾಜ್, ‘ಜುಲೈ 5 ನನ್ನ  ಹುಟ್ಟುಹಬ್ಬ. ಸಾಮಾಜಿಕ ಜಾಲತಾಣಗಳಲ್ಲಿ ಅಭಿಮಾನಿಗಳು ಕಾಮನ್ ಡಿಪಿ ಹಾಕಿಕೊಳ್ಳುವ ಮೂಲಕ ನನಗೆ ವಿಶೇಷವಾಗಿ ವಿಶ್ ಮಾಡುತ್ತಾ ಬಂದಿದ್ದಾರೆ. ಅಂತಹ ಅಭಿಮಾನಿಗಳನ್ನು ಗುರುತಿಸಿ ನಾನೇ ಅವರಿಗೆ ನನ್ನ ಹುಟ್ಟುಹಬ್ಬದ ಸಂದರ್ಭದಲ್ಲಿ ಉಡುಗೊರೆ ನೀಡಲಿದ್ದೇನೆ’ ಎನ್ನುತ್ತಾರೆ ಕಿರಣ್ ರಾಜ್.

ಕಿರಣ್ ರಾಜ್​ ಮೊದಲಿನಿಂದಲೂ ಸಾಮಾಜಿಕ ಕೆಲಸ ಮಾಡುತ್ತಾ ಬಂದಿದ್ದಾರೆ. ಕೊವಿಡ್ ಸಂದರ್ಭದಲ್ಲಿ ಈ ಕಾರ್ಯವನ್ನು ಹೆಚ್ಚಿಸಿದ್ದರು. ಈಗಲೂ ಅವರ ಕಡೆಯಿಂದ ಒಳ್ಳೆಯ ಕೆಲಸ ಆಗುತ್ತಿದೆ. ಬರ್ತ್​ಡೇ ದಿನ ಕಿರಣ್ ರಾಜ್​ ಅವರು ವಿಶೇಷವಾಗಿ ಸಹಾಯ ಮಾಡುತ್ತಿದ್ದಾರೆ. ಕಿರಣ್ ರಾಜ್ ತಮ್ಮ ಜನ್ಮದಿನದ ಸಂದರ್ಭದಲ್ಲಿ ಕರ್ನಾಟಕದ ವಿವಿಧ ಊರುಗಳಲ್ಲಿರುವ ಅನಾಥಾಶ್ರಮ, ವೃದ್ಧಾಶ್ರಮಗಳಲ್ಲಿ ಅನ್ನದಾನ, ಬ್ಲಾಂಕೆಟ್‌ ವಿತರಣೆ ಮುಂತಾದ ಉತ್ತಮ ಕಾರ್ಯಗಳನ್ನು ನಡೆಸಲಿದ್ದಾರೆ.

ಇತ್ತೀಚೆಗೆ ಅವರ ನಟನೆಯ ‘ಬಡ್ಡೀಸ್’ ಸಿನಿಮಾ ತೆರೆಗೆ ಬಂದಿದೆ. ಈ ಚಿತ್ರಕ್ಕೆ ಫ್ಯಾನ್ಸ್ ಕಡೆಯಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಕಿರಣ್ ರಾಜ್ ಹೀರೋ ಆಗಿ ನಟಿಸಿರುವ ಮೊದಲ ಸಿನಿಮಾ ಇದು. ಮೊದಲ ಸಿನಿಮಾಗೆ ಇಷ್ಟು ಒಳ್ಳೆಯ ಪ್ರತಿಕ್ರಿಯೆ ಸಿಕ್ಕಿರುವ ಬಗ್ಗೆ ಅವರಿಗೆ ಖುಷಿ ಇದೆ. ‘ಕನ್ನಡತಿ’ ಧಾರಾವಾಹಿಯಲ್ಲಿ ಹರ್ಷ ಹಾಗೂ ಭುವಿ ಮದುವೆ ನಡೆದಿದ್ದು, ಫ್ಯಾನ್ಸ್ ಖುಷಿಪಟ್ಟಿದ್ದಾರೆ.

ಇದನ್ನೂ ಓದಿ:  ‘ಹರ್ಷ ಮತ್ತು ಭುವಿ ಪಾತ್ರಗಳನ್ನು ನಿಜ ಜೀವನಕ್ಕೆ ಕನೆಕ್ಟ್​ ಮಾಡಬೇಡಿ’; ಕಿರಣ್ ರಾಜ್ ವಿಶೇಷ ಮನವಿ

ಇದನ್ನೂ ಓದಿ

ಕಿರಣ್ ರಾಜ್ ಚಾರ್ಲಿ ಶ್ವಾನ ದತ್ತು ಪಡೆದಿದ್ದು ಕೂಡ ಸಿನಿಮೀಯ ರೀತಿಯಲ್ಲೇ; ಹೊರಬಿತ್ತು ಅಚ್ಚರಿಯ ವಿಚಾರ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada