ಕಿರಣ್​ ರಾಜ್ ಫ್ಯಾನ್ಸ್​ಗೆ ಡಬಲ್ ಧಮಾಕಾ; ಅಭಿಮಾನಿಗಳಿಗೆ ಥ್ಯಾಂಕ್ಸ್ ಹೇಳಿದ ನಟ

ಕಿರಣ್ ರಾಜ್ ಫ್ಯಾನ್ಸ್​ಗೆ ಎರಡು ವಾರದಲ್ಲಿ ಎರಡು ಖುಷಿ ಸುದ್ದಿ ಸಿಕ್ಕಿದೆ. ಈ ಸಂತಸದ ಸಮಯದಲ್ಲಿ ಅವರು ಟಿವಿ9 ಕನ್ನಡ ಡಿಜಿಟಲ್ ಜತೆ ಮಾತನಾಡಿದ್ದಾರೆ.

ಕಿರಣ್​ ರಾಜ್ ಫ್ಯಾನ್ಸ್​ಗೆ ಡಬಲ್ ಧಮಾಕಾ; ಅಭಿಮಾನಿಗಳಿಗೆ ಥ್ಯಾಂಕ್ಸ್ ಹೇಳಿದ ನಟ
ಕಿರಣ್ ರಾಜ್
TV9kannada Web Team

| Edited By: Rajesh Duggumane

Jun 30, 2022 | 9:04 PM

ನಟ ಕಿರಣ್ ರಾಜ್ (Kiran Raj) ಅಭಿಮಾನಿಗಳಿಗೆ ಡಬಲ್ ಧಮಾಕಾ ಸಿಕ್ಕಿದೆ. ಕಳೆದ ವಾರ (ಜೂನ್ 24) ಅವರ ನಟನೆಯ ‘ಬಡ್ಡೀಸ್’ ಸಿನಿಮಾ (Buddies Movie) ತೆರೆಗೆ ಬಂದಿದೆ. ಈ ಚಿತ್ರಕ್ಕೆ ಫ್ಯಾನ್ಸ್ ಕಡೆಯಿಂದ ಪಾಸಿಟಿವ್ ವಿಮರ್ಶೆ ಸಿಕ್ಕಿದೆ. ಇನ್ನು ಅವರು ಹರ್ಷ ಆಗಿ ಕಾಣಿಸಿಕೊಂಡಿರುವ ‘ಕನ್ನಡತಿ’ ಧಾರಾವಾಹಿ ಮಹತ್ವದ ಘಟ್ಟ ದಾಟಿದೆ. ಹರ್ಷ ಹಾಗೂ ಭುವಿ ಮದುವೆ ನೆರವೇರಿದೆ. ಅವರ ಫ್ಯಾನ್ಸ್​ಗೆ ಎರಡು ವಾರದಲ್ಲಿ ಎರಡು ಖುಷಿ ಸುದ್ದಿ ಸಿಕ್ಕಿದೆ. ಈ ಸಂತಸದ ಸಮಯದಲ್ಲಿ ಕಿರಣ್ ರಾಜ್ ಅವರು ಟಿವಿ9 ಕನ್ನಡ ಡಿಜಿಟಲ್ ಜತೆ ಮಾತನಾಡಿದ್ದಾರೆ. ಈ ಸಂದರ್ಭದಲ್ಲಿ ಫ್ಯಾನ್ಸ್​ಗೆ ಥ್ಯಾಂಕ್ಸ್ ಹೇಳಿದ್ದಾರೆ.

ಫ್ಯಾನ್ಸ್​ಗೆ ಧನ್ಯವಾದ

ಕಿರಣ್ ರಾಜ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಈ ಬಳಗ ಸದಾ ಕಿರಣ್ ರಾಜ್ ಬೆಂಬಲಕ್ಕೆ ನಿಲ್ಲುತ್ತದೆ. ಈ ವಿಚಾರದಲ್ಲಿ ಅವರಿಗೆ ಖುಷಿ ಇದೆ. ‘ನಾನು ಫ್ಯಾನ್ಸ್​​ಗೆ ಎರಡೆರಡು ಖುಷಿ ನೀಡಿದ್ದೇನೆ ಅನ್ನೋದು ನಿಜ. ಅದೇ ರೀತಿ ಅವರು ಕೂಡ ನನಗೆ ಖುಷಿ ನೀಡಿದ್ದಾರೆ. ‘ಬಡ್ಡೀಸ್​’ ಸಿನಿಮಾ ನೋಡಿ ಅಭಿಮಾನಿಗಳು ಹ್ಯಾಪಿ ಆಗಿದ್ದಾರೆ. ಐಎಂಡಿಬಿ ಹಾಗೂ ಬುಕ್​ ಮೈ ಶೋನಲ್ಲಿ ಸಿನಿಮಾಗೆ ಒಳ್ಳೆಯ ರೇಟಿಂಗ್ ಸಿಕ್ಕಿದೆ. ಅವರ ಪ್ರೀತಿ ನೋಡಿ ನಾನು ಕಂಪ್ಲೀಟ್ ಬ್ಲ್ಯಾಂಕ್ ಆಗಿದ್ದೇನೆ. ‘ಬಡ್ಡೀಸ್’ ಚಿತ್ರದಲ್ಲಿ ನನ್ನ ನಟನೆಯನ್ನು ಅವರು ಮೆಚ್ಚಿಕೊಂಡಿದ್ದಾರೆ. ಇದು ಖುಷಿಯ ವಿಚಾರ. ಅರ್ಧ ಪ್ರಮೋಷನ್ ಮಾಡಿದ್ದೇ ಫ್ಯಾನ್ಸ್. ಅವರಿಗೆ ಥ್ಯಾಂಕ್ಸ್ ಹೇಳಲೇಬೇಕು. ಕನ್ನಡತಿ ಧಾರಾವಾಹಿಯಲ್ಲೂ ಅಷ್ಟೇ ಫ್ಯಾನ್ಸ್​ ಏನು ಅಂದುಕೊಂಡಿದ್ದರೋ ಅದೇ ಆಗಿದೆ. ಕನ್ನಡದ ಮದುವೆ ಬಗ್ಗೆ ಮೆಚ್ಚುಗೆ ಕೇಳಿ ಬಂದಿದೆ’ ಎಂಬುದು ಕಿರಣ್ ರಾಜ್ ಮಾತು.

ಉತ್ತರ ಕರ್ನಾಟಕ ಮಂದಿಗೆ ಸಿನಿಮಾ ಇಷ್ಟ ಆಗಿದೆ

‘ಬಡ್ಡೀಸ್’ ಚಿತ್ರಕ್ಕೆ ಕಿರಣ್ ರಾಜ್ ಸಾಕಷ್ಟು ಪ್ರಚಾರ ನೀಡಿದ್ದರು. ಉತ್ತರ ಕರ್ನಾಟಕದ ಭಾಗಕ್ಕೆ ತೆರಳಿ ಸಿನಿಮಾ ಪ್ರಮೋಷನ್​ ಮಾಡಿದ್ದರು. ಅವರು ಹೇಗೆ ಪ್ರತಿಕ್ರಿಯಿಸುತ್ತಿದ್ದಾರೆ ಎಂಬ ಬಗ್ಗೆ ಕಿರಣ್ ರಾಜ್ ಮಾತನಾಡಿದ್ದಾರೆ. ‘ಉತ್ತರ ಕರ್ನಾಟಕದ ಮಂದಿ ಹೀರೋಯಿಸಂ ಇಷ್ಟಪಡುತ್ತಾರೆ. ಈ ಕಾರಣಕ್ಕೆ ಬಡ್ಡೀಸ್ ಸಿನಿಮಾ ಅವರಿಗೆ ಇಷ್ಟ ಆಗಿದೆ. ಹೊಸಬರ ಸಿನಿಮಾ ಎಂಬ ಕಾರಣಕ್ಕೆ ಕಡಿಮೆ ಚಿತ್ರಮಂದಿರ ಸಿಕ್ಕಿದೆ. ಆದರೆ, ಅನೇಕ ಕಡೆಗಳಲ್ಲಿ ಸಿನಿಮಾ ಹೌಸ್​ಫುಲ್ ಪ್ರದರ್ಶನ ಕಾಣುತ್ತಿದೆ. ಎರಡನೇ ವಾರಕ್ಕೆ ಚಿತ್ರಮಂದಿರಗಳು ಹೆಚ್ಚುತ್ತಿವೆ’ ಎಂದು ಖುಷಿ ಹಂಚಿಕೊಳ್ಳುತ್ತಾರೆ ಅವರು.

ಜವಾಬ್ದಾರಿ ಹೆಚ್ಚಿದೆ

‘ನಾನು ಮೆರಿಟ್ ನಂಬಿಕೊಂಡು ಬಂದವನು. ಶ್ರಮ ಹಾಕಿ ಕೆಲಸ ಮಾಡಿದರೆ ಪ್ರತಿಫಲ ಸಿಕ್ಕೇ ಸಿಗುತ್ತದೆ. ನನಗೆ ಈ ಗೆಲುವಿನಿಂದ ನನ್ನ ಆತ್ಮವಿಶ್ವಾಸ ಹೆಚ್ಚುತ್ತಾ ಹೋಗುತ್ತಿದೆ. ಜನರು ಇಷ್ಟಪಡುತ್ತಿದ್ದಾರೆ. ಜನರ ವಿಶ್ವಾಸವನ್ನು ನಾನು ಗಳಿಕೆ ಮಾಡುತ್ತಿದ್ದೇನೆ. ನನ್ನ ಜವಾವ್ದಾರಿ ಹೆಚ್ಚುತ್ತಿದೆ’ ಎಂದಿದ್ದಾರೆ ಕಿರಣ್ ರಾಜ್.

ಎರಡೂ ಕಡೆ ಬ್ಯುಸಿ

ಕಿರಣ್ ರಾಜ್​ ಕಿರುತೆರೆ ಹಾಗೂ ಹಿರಿತೆರೆ ಎರಡನ್ನೂ ಸರಿದೂಗಿಸಿಕೊಂಡು ಹೋಗುತ್ತಿದ್ದಾರೆ. ಈ ಬಗ್ಗೆ ಮಾತನಾಡಿರುವ ಅವರು, ‘ಭರ್ಜರಿ ಗಂಡು ಸಿನಿಮಾ ರಿಲೀಸ್​ಗೆ ರೆಡಿ ಇದೆ. ತೆಲುಗಿನಲ್ಲೂ ಸಿನಿಮಾ ಮಾಡಿದ್ದೇನೆ. ನಿಜ ಹೇಳಬೇಕು ಎಂದರೆ ಧಾರಾವಾಹಿ ಹಾಗೂ ಸಿನಿಮಾ ಎರಡನ್ನೂ ಬ್ಯಾಲೆನ್ಸ್ ಮಾಡಿಕೊಂಡು ಹೋಗುವುದು ಕಷ್ಟ ಆಗುತ್ತಿದೆ. ರಾತ್ರಿ-ಹಗಲು ಎನ್ನದೆ ಶೂಟ್ ಮಾಡ್ತಾ ಇದೀನಿ. ಸಿಕ್ಕ ಅವಕಾಶವನ್ನು ನನಗೆ ಮಿಸ್ ಮಾಡಿಕೊಳ್ಳಲು ಇಷ್ಟವಿಲ್ಲ’ ಎನ್ನುತ್ತಾರೆ ಕಿರಣ್ ರಾಜ್​.

‘ಕನ್ನಡತಿ’ ತಂದುಕೊಟ್ಟ ಖ್ಯಾತಿ

‘ಕನ್ನಡತಿ’ ಧಾರಾವಾಹಿಯಿಂದ ಕರ್ನಾಟಕದ ಮಂದಿಗೆ ಹರ್ಷನಾಗಿ ಕಿರಣ್ ರಾಜ್​ ಹೆಚ್ಚು ಪರಿಚಿತರಾದರು. ಈ ಧಾರಾವಾಹಿ ಅವರಿಗೆ ಸಾಕಷ್ಟು ಫೇಮ್ ತಂದುಕೊಡ್ತು. ‘ಕರ್ನಾಟಕದ ಜನರಿಗೆ ನಾನು ಪರಿಚಯ ಆಗಿದ್ದೇ ‘ಕನ್ನಡತಿ’ ಧಾರಾವಾಹಿಯಿಂದ. ಇಲ್ಲದಿದ್ದರೆ ಯಾರು ನನ್ನನ್ನು ಕರೆದು ಸಿನಿಮಾದಲ್ಲಿ ಅವಕಾಶ ನೀಡುತ್ತಿದ್ದರು? ನಾನು ಒಳ್ಳೆಯ ನಟನಾಗಿದ್ದರೂ ಪ್ಲಾಟ್​ಫಾರ್ಮ್ ಸಿಕ್ಕಿಲ್ಲ ಎಂದರೆ ನಟನೆ ಬಂದರೂ ವೇಸ್ಟ್​ ಅಲ್ಲವೇ’ ಎನ್ನುತ್ತಾರೆ ಕಿರಣ್ ರಾಜ್.

ಇದನ್ನೂ ಓದಿ: ಮತ್ತೊಂದು ಚಿತ್ರ ಒಪ್ಪಿಕೊಂಡ ನಟ ಕಿರಣ್ ರಾಜ್; ‘ಭರ್ಜರಿ ಗಂಡು’ ನಿರ್ದೇಶಕನ ಜತೆ ಹೊಸ ಸಿನಿಮಾ

ಇದನ್ನೂ ಓದಿ

‘ಬಡ್ಡೀಸ್’ ಸಿನಿಮಾ ಪ್ರಚಾರ ವಾಹನಕ್ಕೆ ಅಪಘಾತ; ‘ದೃಷ್ಟಿ ಜಾಸ್ತಿನೆ ಆಗಿರಬೇಕು’ ಎಂದ ನಟ ಕಿರಣ್ ರಾಜ್

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada