AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ನಮ್ಮಿಬ್ಬರ ನಡುವೆ ಗೆಳೆತನ ಇರುವುದು ನಿಜ’; ಪವಿತ್ರಾ ಲೋಕೇಶ್ ವಿಚಾರವಾಗಿ ಮೊದಲ ಬಾರಿಗೆ ಮೌನ ಮುರಿದ ನರೇಶ್​

ನರೇಶ್​ ಓರ್ವ ಹೆಣ್ಣುಬಾಕ ಎಂಬರ್ಥದಲ್ಲಿ ರಮ್ಯಾ ಮಾತನಾಡಿದ್ದರು. ಇದು ನರೇಶ್​ಗೆ ಮುಜುಗರ ತಂದಿದೆ. ಈಗ ಅವರು ಈ ವಿಚಾರವಾಗಿ ಸ್ಪಷ್ಟನೆ ನೀಡಿದ್ದಾರೆ.

‘ನಮ್ಮಿಬ್ಬರ ನಡುವೆ ಗೆಳೆತನ ಇರುವುದು ನಿಜ’; ಪವಿತ್ರಾ ಲೋಕೇಶ್ ವಿಚಾರವಾಗಿ ಮೊದಲ ಬಾರಿಗೆ ಮೌನ ಮುರಿದ ನರೇಶ್​
ನರೇಶ್​-ಪವಿತ್ರಾ
TV9 Web
| Updated By: ರಾಜೇಶ್ ದುಗ್ಗುಮನೆ|

Updated on: Jun 30, 2022 | 3:43 PM

Share

ಟಾಲಿವುಡ್ ನಟ ನರೇಶ್ (Naresh) ಹಾಗೂ ಅವರ ಮೂರನೇ ಪತ್ನಿ ರಮ್ಯಾ ರಘುಪತಿ ಅವರ ಕೌಟುಂಬಿಕ ಕಹಲ ಬೀದಿಗೆ ಬಂದಿದೆ. ನರೇಶ್​ ಅವರು ಪವಿತ್ರಾ ಲೋಕೇಶ್ (Pavitra Lokesh) ಅವರನ್ನು ಮದುವೆ ಆಗಿದ್ದಾರೆ ಎಂಬ ವದಂತಿ ಹಬ್ಬಿತ್ತು. ಇದಾದ ಬೆನ್ನಲ್ಲೇ ರಮ್ಯಾ ಅವರು ಮಾಧ್ಯಮದ ಎದುರು ಬಂದು ಕೆಲವು ವಿಚಾರಗಳನ್ನು ಹಂಚಿಕೊಂಡಿದ್ದರು. ಈ ಸಂದರ್ಭದಲ್ಲಿ ನರೇಶ್​ ಓರ್ವ ಹೆಣ್ಣುಬಾಕ ಎಂಬರ್ಥದಲ್ಲಿ ರಮ್ಯಾ ಮಾತನಾಡಿದ್ದರು. ಈ ಹೇಳಿಕೆ ಸಾಕಷ್ಟು ಸೆನ್ಸೇಷನ್ ಸೃಷ್ಟಿ ಮಾಡಿತ್ತು. ಈಗ ನರೇಶ್ ಅವರು ಈ ವಿಚಾರದಲ್ಲಿ ಸ್ಪಷ್ಟನೆ ನೀಡಿದ್ದಾರೆ. ರಮ್ಯಾ ವಿರುದ್ಧ ಪ್ರತ್ಯಾರೋಪ ಮಾಡಿದ್ದಾರೆ.

ಟಿವಿ9 ಕನ್ನಡದ ಜತೆಗೆ ಮಾತನಾಡಿದ್ದ ರಮ್ಯಾ ಅವರು, ‘2010ರಲ್ಲಿ ನಾನು ನರೇಶ್ ಅವರನ್ನು ಮದುವೆ ಆದೆ. ನರೇಶ್​ಗೆ ಹಲವು ಅಕ್ರಮ ಸಂಬಂಧಗಳು ಇದ್ದವು. ನಾನು ಇದನ್ನು ಪತ್ತೆ ಹಚ್ಚಿದ ಸ್ವಲ್ಪ ದಿನ ಸರಿ ಇರುತ್ತಿದ್ದರು. ಮತ್ತೆ ಹಾಗೇ ಮಾಡುತ್ತಿದ್ದರು’ ಎನ್ನುವ ಆರೋಪ ಮಾಡಿದ್ದರು. ಇದು ನರೇಶ್​ಗೆ ಮುಜುಗರ ತಂದಿದೆ. ಈಗ ಅವರು ಈ ವಿಚಾರವಾಗಿ ಸ್ಪಷ್ಟನೆ ನೀಡಿದ್ದಾರೆ. ಅಲ್ಲದೆ, ರಮ್ಯಾ ವಿರುದ್ಧ ಸಾಕಷ್ಟು ಆರೋಪಗಳನ್ನು ಮಾಡಿದ್ದಾರೆ.

‘ಬೆಂಗಳೂರಿನಲ್ಲಿ ನನಗೆ ಮೋಸ ಮಾಡಲು ರೆಡಿ ಆಗಿದ್ದಾರೆ. ಹೀಗಾಗಿ ಇಲ್ಲಿಯವರಿಗೆ ಮೇಸೇಜ್ ನೀಡಲು ಬಂದಿದ್ದೇನೆ. ರಮ್ಯಾ ಮಾಡ್ತಿರೋ ಆರೋಪಗಳೆಲ್ಲವು ಸುದ್ಧ ಸುಳ್ಳು. ಆಕೆ ಮೋಸಗಾತಿ. ನನಗೆ ಸರಿಯಾಗಿ ಊಟ ಕೂಡ ಹಾಕಿಲ್ಲ. ಏಳು ವರ್ಷಗಳಿಂದ ನಾವು ಜೊತೆಯಲ್ಲಿ ಇಲ್ಲ. ತುಂಬಾ ದಿನಗಳಿಂದ ಆಕೆ ಬೆಂಗಳೂರಿನಲ್ಲೇ ಇದ್ದಾಳೆ’ ಎಂದಿದ್ದಾರೆ ನರೇಶ್​.

ಇದನ್ನೂ ಓದಿ
Image
‘ನನಗೂ-ನರೇಶ್​​ಗೂ ಡಿವೋರ್ಸ್ ಆಗಿಲ್ಲ’; ಮೂರನೇ ಹೆಂಡತಿ ರಮ್ಯಾ ರಘುಪತಿ ಮಾತು
Image
Pavitra Lokesh: ಪವಿತ್ರಾ ಲೋಕೇಶ್​ ಸಂಬಂಧದ ಬಗ್ಗೆ ನರೇಶ್​ 3ನೇ ಪತ್ನಿ ರಮ್ಯಾ ರಘುಪತಿ ಮೊದಲ ಪ್ರತಿಕ್ರಿಯೆ
Image
ಪವಿತ್ರಾ ಲೋಕೇಶ್ ನಮ್ಮ ಮನೆಗೆ ಬಂದಾಗ ಬೆಳ್ಳಿ ತಟ್ಟೆಯಲ್ಲಿ ಊಟ ಹಾಕಿದ್ವಿ; ನರೇಶ್ ಹೆಂಡತಿಯ ಮಾತು
Image
Pavitra Lokesh: ಸೈಬರ್​ ಠಾಣೆ ಮೆಟ್ಟಿಲೇರಿದ ನಟಿ ಪವಿತ್ರಾ ಲೋಕೇಶ್​; ಗಾಸಿಪ್​ ಹಬ್ಬಿಸಿದವರ ವಿರುದ್ಧ ಕಾನೂನು ಸಮರ

‘ರಮ್ಯಾ ಬೇರೆಯವ್ರ ಜೊತೆ ಸಂಬಂಧವನ್ನ ಹೊಂದಿದ್ದಾರೆ. ಬೆಂಗಳೂರಿನಲ್ಲಿ  ಸಿಕ್ಕಾಪಟ್ಟೆ ಸಾಲಗಳನ್ನು ಮಾಡಿದ್ದಾರೆ. ಪವಿತ್ರಾ ಲೋಕೆಶ್​ ಜೊತೆ ನನ್ನ ಗೆಳೆತನ ನಿಜ. ನಾವಿಬ್ಬರೂ ಬೆಸ್ಟ್ ಫ್ರೆಂಡ್ಸ್​. ನಾನು ಶ್ರೀರಾಮನಲ್ಲ ಕೃಷ್ಣನೇ’ ಎಂದು ನರೇಶ್​ ಹೇಳಿದ್ದಾರೆ.

ಟಿವಿ9 ಕನ್ನಡದ ಜತೆಗೆ ಮಾತನಾಡುತ್ತಾ ಪವಿತ್ರಾ ಲೋಕೇಶ್ ಬಗ್ಗೆ ರಮ್ಯಾ ಮಾತನಾಡಿದ್ದರು. ‘ನಾಲ್ಕು ವರ್ಷಗಳ ಹಿಂದೆ ಪವಿತ್ರಾ ಲೋಕೇಶ್ ಅವರು ನಮ್ಮ ಮನೆಗೆ ಬಂದಿದ್ದರು. ಈ ವೇಳೆ ನಾವು ಅವರಿಗೆ ಬೆಳ್ಳಿ ತಟ್ಟೆಯಲ್ಲಿ ಊಟ ಹಾಕಿದ್ದೆವು. ಪವಿತ್ರಾ ಹಾಗೂ ಲೋಕೇಶ್ ಮದುವೆ ಆಗಿದ್ದಾರೆ ಎಂಬ ವಿಚಾರ ಹರಿದಾಡುತ್ತಿದೆ. ಇದು ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಸುದ್ದಿ. ಇದನ್ನು ಅವರು ಖಚಿತಪಡಿಸಿಲ್ಲ. ಹೀಗಾಗಿ, ವದಂತಿಯನ್ನು ಸುದ್ದಿ ಎಂದು ಹೇಳಲು ಸಾಧ್ಯವಿಲ್ಲ’ ಎನ್ನುತ್ತಾರೆ ರಮ್ಯಾ.

ಇದನ್ನೂ ಓದಿ: ಪವಿತ್ರಾ ಲೋಕೇಶ್ ನಮ್ಮ ಮನೆಗೆ ಬಂದಾಗ ಬೆಳ್ಳಿ ತಟ್ಟೆಯಲ್ಲಿ ಊಟ ಹಾಕಿದ್ವಿ; ನರೇಶ್ ಹೆಂಡತಿಯ ಮಾತು

Pavitra Lokesh: ಪವಿತ್ರಾ ಲೋಕೇಶ್​ ಸಂಬಂಧದ ಬಗ್ಗೆ ನರೇಶ್​ 3ನೇ ಪತ್ನಿ ರಮ್ಯಾ ರಘುಪತಿ ಮೊದಲ ಪ್ರತಿಕ್ರಿಯೆ