ಕೊನೆಗೂ ನಡೆಯಿತು ಹರ್ಷ-ಭುವಿ ಮದುವೆ, ಒದ್ದಾಡಿದ ವರು; ಈ ವಿವಾಹಕ್ಕೆ ಕನ್ನಡದ ಮಂತ್ರ

‘ಕನ್ನಡತಿ’ ಕಥೆ ಹೇಗೇಗೋ ಹೋಗುತ್ತಿದೆ ಎಂಬುದನ್ನು ಕೇಳಿ ಫ್ಯಾನ್ಸ್ ಸಾಕಷ್ಟು ಆಕ್ರೋಶ ಹೊರಹಾಕಿದ್ದರು. ಈ ಬೆನ್ನಲ್ಲೇ ಹರ್ಷ ಹಾಗೂ ಭುವಿಯ ಮದುವೆ ನಡೆದಿದೆ.

ಕೊನೆಗೂ ನಡೆಯಿತು ಹರ್ಷ-ಭುವಿ ಮದುವೆ, ಒದ್ದಾಡಿದ ವರು; ಈ ವಿವಾಹಕ್ಕೆ ಕನ್ನಡದ ಮಂತ್ರ
ಕೊನೆಗೂ ನಡೆಯಿತು ಹರ್ಷ-ಭುವಿ ಮದುವೆ, ಒದ್ದಾಡಿದ ವರು
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on: Jun 28, 2022 | 5:46 PM

‘ಕನ್ನಡತಿ’ ಧಾರಾವಾಹಿಯಲ್ಲಿ (Kannadathi Serial) ಕೊನೆಗೂ ಹರ್ಷ ಹಾಗೂ ಭುವಿ ಮದುವೆ ನಡೆದಿದೆ. ಹಲವು ದಿನಗಳಿಂದ ವೀಕ್ಷಕರು ಕಾದಿದ್ದ ಸಮಯ ಕೊನೆಗೂ ಕೂಡಿ ಬಂದಿದೆ. ಸಾಮಾನ್ಯವಾಗಿ ಧಾರಾವಾಹಿಗಳಲ್ಲಿ ಮದುವೆ ಎಂದರೆ ದೊಡ್ಡ ದೊಡ್ಡ ಸೆಟ್ ಹಾಕಲಾಗುತ್ತದೆ. ‘ಕನ್ನಡತಿ’ ಧಾರಾವಾಹಿಯಲ್ಲೂ ವಿವಾಹಕ್ಕೆ ದೊಡ್ಡ ಸೆಟ್ ಹಾಕಲಾಗಿತ್ತು. ಆದರೆ, ಮದುವೆ ನಡೆದಿದ್ದು ಮಾತ್ರ ಆಸ್ಪತ್ರೆಯಲ್ಲಿ. ಭುವಿಗೆ ಹರ್ಷ ತಾಳಿ ಕಟ್ಟುವುದನ್ನು ನೋಡಿ ವರುಧಿನಿ ಒದ್ದಾಡಿದ್ದಾಳೆ. ಪ್ಲ್ಯಾನ್ ಫ್ಲಾಪ್ ಆಯಿತು ಎನ್ನುವ ಬೇಸರದಲ್ಲಿ ಸಾನಿಯಾ ಇದ್ದಾಳೆ. ಈ ಮದುವೆಯನ್ನು ನೋಡಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

ಹರ್ಷ ಹಾಗೂ ಭುವಿ ಮದುವೆ ನಡೆಯುವಾಗ ವರುಧಿನಿ ಕೈ ಕತ್ತರಿಸಿಕೊಂಡಿದ್ದಳು. ಆಕೆಯನ್ನು ಭುವಿ ಆಸ್ಪತ್ರೆಗೆ ಕರೆದುಕೊಂಡು ಹೋದಳು. ಕಥೆ ಹೇಗೇಗೋ ಹೋಗುತ್ತಿದೆ ಎಂಬುದನ್ನು ಕೇಳಿ ಫ್ಯಾನ್ಸ್ ಸಾಕಷ್ಟು ಆಕ್ರೋಶ ಹೊರಹಾಕಿದ್ದರು. ಈ ಬೆನ್ನಲ್ಲೇ ಹರ್ಷ ಹಾಗೂ ಭುವಿಯ ಮದುವೆ ನಡೆದಿದೆ. ಆಸ್ಪತ್ರೆಯಲ್ಲಿ ಈ ಮದುವೆ ನಡೆಸಲಾಗಿದೆ ಅನ್ನೋದು ವಿಶೇಷ.

ಇದನ್ನೂ ಓದಿ
Image
ಆಸ್ಪತ್ರೆಯಲ್ಲೇ ನಡೆಯಲಿದೆ ಹರ್ಷ-ಭುವಿ ಮದುವೆ; ವಿವಾಹ ಮಾಡಲು ಬಂದ ರಾಮಾಚಾರಿ
Image
ಹಿಂದಿಗೆ ಡಬ್, ಮರಾಠಿಗೆ ರಿಮೇಕ್​ ಆದ ‘ಕನ್ನಡತಿ’: ಈ ಧಾರಾವಾಹಿಗೆ ಹೇಗಿದೆ ರೆಸ್ಪಾನ್ಸ್? ಇಲ್ಲಿದೆ ಉತ್ತರ
Image
ಹರ್ಷನಿಗಾಗಿ ಕೈ ಕತ್ತರಿಸಿಕೊಂಡ ವರುಧಿನಿ; ಮಂಟಪ ಬಿಟ್ಟು ಆಸ್ಪತ್ರೆಗೆ ಹೋದ ಭುವಿ
Image
‘ಕನ್ನಡತಿ’ ಧಾರಾವಾಹಿ: ಮದುವೆಗೂ ಮುನ್ನ ಹರ್ಷನ ಬಳಿ ಮಾಡಿದ್ದ 30 ಲಕ್ಷ ರೂಪಾಯಿ ಸಾಲ ತೀರಿಸಿದ ಭುವಿ

ಆಸ್ಪತ್ರೆಯ ಒಳಗೆ ಚಿಕ್ಕದಾಗಿ ಮದುವೆ ಅರೇಂಜ್​ಮೆಂಟ್ಸ್ ಮಾಡಲಾಗಿದೆ. ಭುವಿಯನ್ನು ವೀಲ್​ಚೇರ್ ಮೇಲೆ ಕೂರಿಸಲಾಗಿದೆ. ‘ರಾಮಾಚಾರಿ’ ಧಾರಾವಾಹಿ ನಾಯಕ ರಾಮಾಚಾರಿ ಈ ಮದುವೆಗೆ ಅರ್ಚಕನಾಗಿ ಬಂದಿದ್ದರು. ಅವನೇ ಮುಂದೆ ನಿಂತು ಮದುವೆ ಮಾಡಿಸಿದ್ದಾನೆ. ವಿಶೇಷ ಎಂದರೆ ಈ ಮದುವೆಯಲ್ಲಿ ಸಂಸ್ಕೃತದ ಮಂತ್ರಗಳನ್ನು ಹೇಳದೆ ಕನ್ನಡದಲ್ಲಿ ಮಂತ್ರಗಳನ್ನು ಹೇಳಲಾಯಿತು. ಈ ಪ್ರೋಮೋವನ್ನು ಕಲರ್ಸ್ ಕನ್ನಡ ವಾಹಿನಿ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದೆ.

ಈ ಮದುವೆ ನಡೆಯಬಾರದು ಎನ್ನುವ ಉದ್ದೇಶ ಇದ್ದಿದ್ದು ಸಾನಿಯಾ ಹಾಗೂ ವರುಧಿನಿಗೆ. ಇವರಿಬ್ಬರೂ ಕೂಡ ಈ ಮದುವೆಯಲ್ಲಿ ಭಾಗಿ ಆಗಿದ್ದರು. ಇವರ ಎದುರೇ ಈ ವಿವಾಹ ನಡೆದಿದೆ. ವರುಧಿನಿ ಈ ಮದುವೆ ನೋಡಲಾಗದೆ ಒದ್ದಾಡಿದ್ದಾಳೆ.

ಹರ್ಷನನ್ನು ಬಿಟ್ಟುಕೊಡುವಂತೆ ಭುವಿಗೆ ಕೇಳಿದ್ದಳು ವರುಧಿನಿ. ಆದರೆ, ಬಿಟ್ಟುಕೊಡುವುದಿಲ್ಲ ಎನ್ನುವ ಮಾತನ್ನು ವರುಧಿನಿಗೆ ನೇರವಾಗಿಯೇ ಹೇಳಿದ್ದಳು ಭುವಿ. ಹೀಗಾಗಿ, ಮುಂದಿನ ದಿನಗಳಲ್ಲಿ ಆಕೆಯ ವಿರುದ್ಧ ವರು ಸೇಡು ತೀರಿಸಿಕೊಳ್ಳಲು ಮುಂದಾದರೂ ಅಚ್ಚರಿ ಏನಿಲ್ಲ. ಇನ್ನು, ರತ್ನಮಾಲಾ ಒಡೆತನದ ಎಲ್ಲಾ ಕಂಪೆನಿಗೆ ಭುವಿಯೇ ಸಿಇಒ ಆಗಲಿದ್ದಾಳೆ. ಈ ವಿಚಾರ ಗೊತ್ತಾದರೆ ಸಾನಿಯಾ ಹೊಟ್ಟೆ ಉರಿದುಕೊಳ್ಳುವುದು ಪಕ್ಕಾ.

ಇದನ್ನೂ ಓದಿ: ಹರ್ಷನಿಗಾಗಿ ಕೈ ಕತ್ತರಿಸಿಕೊಂಡ ವರುಧಿನಿ; ಮಂಟಪ ಬಿಟ್ಟು ಆಸ್ಪತ್ರೆಗೆ ಹೋದ ಭುವಿ

ಆಸ್ಪತ್ರೆಯಲ್ಲೇ ನಡೆಯಲಿದೆ ಹರ್ಷ-ಭುವಿ ಮದುವೆ; ವಿವಾಹ ಮಾಡಲು ಬಂದ ರಾಮಾಚಾರಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ