Meena: ಮೀನಾ ಪತಿ ವಿದ್ಯಾಸಾಗರ್ ಸಾವಿಗೆ ಕಾರಣ ಏನು? ಕೊವಿಡ್ ಕುರಿತ ಅನುಮಾನಕ್ಕೆ ಖುಷ್ಬೂ ಪ್ರತಿಕ್ರಿಯೆ
Meena Husband Vidyasagar Death: ಬಹುಭಾಷಾ ನಟಿ ಮೀನಾ ಅವರ ಪತಿ ವಿದ್ಯಾಸಾಗರ್ ನಿಧನಕ್ಕೆ ಕೊರೊನಾ ಕಾರಣ ಎಂದು ಕೆಲವೆಡೆ ವರದಿ ಆಯಿತು. ಅದು ಖುಷ್ಬೂ ಗಮನಕ್ಕೆ ಬಂದಿದ್ದು, ಆ ಕುರಿತು ಅವರು ಪ್ರತಿಕ್ರಿಯೆ ನೀಡಿದ್ದಾರೆ.
ಖ್ಯಾತ ನಟಿ ಮೀನಾ (Meena) ಅವರ ಪತಿ ವಿದ್ಯಾಸಾಗರ್ ಇತ್ತೀಚೆಗೆ ನಿಧನರಾಗಿರುವುದು ನೋವಿನ ಸಂಗತಿ. ಚೆನ್ನೈನ ಆಸ್ಪತ್ರೆಯಲ್ಲಿ ಅವರು ಕೊನೆಯುಸಿರು ಎಳೆದರು. ಶ್ವಾಸಕೋಶದ ಸೋಂಕಿನಿಂದ ಅವರು ಮೃತಪಟ್ಟರು ಎಂಬ ಮಾಹಿತಿ ಇದೆ. ಅದರ ನಡುವೆ ಕೊವಿಡ್ ಮೇಲೆ ಕೂಡ ಅನುಮಾನ ವ್ಯಕ್ತವಾಗಿದ್ದು ಸಹಜ. ಯಾಕೆಂದರೆ, ಕೆಲವೇ ತಿಂಗಳ ಹಿಂದೆ ಮೀನಾ ಅವರ ಇಡೀ ಕುಟುಂಬಕ್ಕೆ ಕೊರೊನಾ ಸೋಂಕು ತಗುಲಿತ್ತು. ಆ ಕಾರಣದಿಂದಲೇ ವಿದ್ಯಾಸಾಗರ್ ಅವರ ಶ್ವಾಸಕೋಶಕ್ಕೆ ಹಾನಿ ಆಗಿರಬಹುದು ಎಂದು ಅನೇಕರು ಊಹಿಸುತ್ತಿದ್ದಾರೆ. ಈ ನಡುವೆ ನಟಿ ಖುಷ್ಬೂ ಸುಂದರ್ (Khushbu Sundar) ಅವರು ಸೋಶಿಯಲ್ ಮೀಡಿಯಾದಲ್ಲಿ ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ. ವಿದ್ಯಾಸಾಗರ್ ಸಾವಿಗೆ (Vidyasagar Death) ಕೊರೊನಾ ಕಾರಣ ಅಲ್ಲ ಎಂಬುದನ್ನು ಅವರು ಒತ್ತಿ ಹೇಳಿದ್ದಾರೆ.
ಬಹುಭಾಷಾ ನಟಿ ಮೀನಾ ಅವರ ಪತಿ ವಿದ್ಯಾಸಾಗರ್ ನಿಧನಕ್ಕೆ ಕೊರೊನಾ ಕಾರಣ ಎಂದು ಕೆಲವು ಮಾಧ್ಯಮಗಳಲ್ಲಿ ವರದಿ ಆಯಿತು. ಅದು ಖುಷ್ಬೂ ಗಮನಕ್ಕೆ ಬಂದಿದೆ. ಆ ಕುರಿತು ಅವರು ಟ್ವೀಟ್ ಮಾಡಿದ್ದಾರೆ. ‘ಮಾಧ್ಯಮದವರು ತುಂಬ ಜವಾಬ್ದಾರಿಯುತವಾಗಿ ಇರಬೇಕು ಎಂದು ಮನವಿ ಮಾಡಿಕೊಳ್ಳುತ್ತೇನೆ. ಮೀನಾ ಪತಿಗೆ ಮೂರು ತಿಂಗಳ ಹಿಂದೆ ಕೊವಿಡ್ ಆಗಿತ್ತು. ಅದರಿಂದ ಅವರ ಶ್ವಾಸಕೋಶದ ಸ್ಥಿತಿ ಹದಗೆಟ್ಟಿತ್ತು. ಆದರೆ ಕೊವಿಡ್ನಿಂದಲೇ ಅವರು ಮೃತರಾದರು ಎಂದು ಹೇಳುವ ಮೂಲಕ ತಪ್ಪು ಮಾಹಿತಿ ಮತ್ತು ಭಯವನ್ನು ಹುಟ್ಟುಹಾಕಬೇಡಿ. ನಾವು ಎಚ್ಚರಿಕೆಯಿಂದ ಇರಬೇಕು’ ಎಂದು ಅವರು ಬರೆದುಕೊಂಡಿದ್ದಾರೆ.
I very humbly request the media to be little responsible. Meena’s husband had covid 3 months back. Covid worsened his lung condition. Pls do not send out a wrong message & create any kind of fear or cause flutter by saying we lost Sagar to covid. Yes we need to cautious, but pls.
— KhushbuSundar (@khushsundar) June 29, 2022
ಕೊವಿಡ್ ಬಂದಾಗ ಮೀನಾ ಹೇಳಿದ್ದೇನು?
2022ರ ಆರಂಭದಲ್ಲಿ ಮೀನಾ ಅವರ ಇಡೀ ಕುಟುಂಬಕ್ಕೆ ಕೊವಿಡ್ ತಗುಲಿತ್ತು. ಆ ಬಗ್ಗೆ ಅವರು ಸೋಶಿಯಲ್ ಮೀಡಿಯಾಲ್ಲಿ ಬರೆದುಕೊಂಡಿದ್ದರು. ಕೊವಿಡ್ ಬಂದುಹೋದ ಬೆನ್ನಲ್ಲೇ ವಿದ್ಯಾಸಾಗರ್ ಅವರಿಗೆ ಈ ರೀತಿ ಆರೋಗ್ಯ ಸಮಸ್ಯೆ ಎದುರಾಗಿದ್ದರಿಂದ ಅನುಮಾನ ಮೂಡಿದೆ.
View this post on Instagram
‘2022ರಲ್ಲಿ ನಮ್ಮ ಮನೆಗೆ ಬಂದ ಮೊದಲ ಅತಿಥಿ ಮಿಸ್ಟರ್ ಕೊರೊನಾ. ಅದಕ್ಕೆ ನನ್ನ ಇಡೀ ಕುಟುಂಬ ಇಷ್ಟ ಆಗಿದೆ. ಆದರೆ ಅದು ಉಳಿದುಕೊಳ್ಳಲು ನಾನು ಬಿಡುತ್ತಿಲ್ಲ. ಎಚ್ಚರಿಕೆಯಿಂದಿರಿ ಜನಗಳೇ.. ಸುರಕ್ಷತೆ ಮತ್ತು ಆರೋಗ್ಯ ಕಾಪಾಡಿಕೊಳ್ಳಿ. ಜವಾಬ್ದಾರಿಯಿಂದ ನಡೆದುಕೊಳ್ಳಿ. ಕೊರೊನಾ ಹರಡಲು ಬಿಡಬೇಡಿ’ ಎಂದು ಮೀನಾ ಪೋಸ್ಟ್ ಮಾಡಿದ್ದರು.
ಇದನ್ನೂ ಓದಿ: ‘ನನ್ನ ಹೀರೋ, ನನ್ನ ಗೆಳೆಯ’: ಕಮಲ್ ಹಾಸನ್ ಜತೆಗೆ ಫೋಟೋ ಕ್ಲಿಕ್ಕಿಸಿಕೊಂಡು ಖುಷಿಪಟ್ಟ ಖುಷ್ಬೂ ಸುಂದರ್
30 ವರ್ಷಗಳ ಬಳಿಕ ಖುಷ್ಬೂ ಎದುರು ಹೋಗಿ ನಿಂತ ‘ರಣಧೀರ’ ಬಾಲಕ; ನಟಿಯ ರಿಯಾಕ್ಷನ್ ಹೇಗಿತ್ತು?
Published On - 9:00 am, Fri, 1 July 22