ಬೆಂಗಳೂರಿನಲ್ಲಿ ದಿನೇದಿನೆ ಕೊರೊನಾ ಸೋಂಕು ಹೆಚ್ಚಳ ಹಿನ್ನೆಲೆ: ಮುಂದಿನ ವಾರದಿಂದಲೇ ಜಾರಿಯಾಗುತ್ತಾ ಮಾಸ್ಕ್​ ಫೈನ್​?

ಬೆಂಗಳೂರು ನಗರ ವ್ಯಾಪ್ತಿಗಷ್ಟೇ ಮಾಸ್ಕ್ ಫೈನ್​​​​ ಜಾರಿ ಸಾಧ್ಯತೆಯಿದೆ. ಮಾಸ್ಕ್ ಕಡ್ಡಾಯ ಮಾಡಿದರೂ ಜನ ಮಾಸ್ಕ್ ಹಾಕದ ಹಿನ್ನೆಲೆ, ಮಾಸ್ಕ್​ ಫೈನ್​​ಗೆ ಕೊವಿಡ್ ತಾಂತ್ರಿಕ ಸಲಹಾ ಸಮಿತಿ ಸಲಹೆ ನೀಡಿದೆ. 

ಬೆಂಗಳೂರಿನಲ್ಲಿ ದಿನೇದಿನೆ ಕೊರೊನಾ ಸೋಂಕು ಹೆಚ್ಚಳ ಹಿನ್ನೆಲೆ: ಮುಂದಿನ ವಾರದಿಂದಲೇ ಜಾರಿಯಾಗುತ್ತಾ ಮಾಸ್ಕ್​ ಫೈನ್​?
ಪ್ರಾತಿನಿಧಿಕ ಚಿತ್ರ
Follow us
TV9 Web
| Updated By: ಗಂಗಾಧರ​ ಬ. ಸಾಬೋಜಿ

Updated on:Jun 30, 2022 | 11:34 AM

ಬೆಂಗಳೂರು: ನಗರದಲ್ಲಿ ದಿನೇದಿನೆ ಕೊರೊನಾ (Coron) ಸೋಂಕು ಹೆಚ್ಚಳ ಹಿನ್ನೆಲೆ ಮುಂದಿನ ವಾರದಿಂದಲೇ ಮಾಸ್ಕ್​ ಫೈನ್​ ಜಾರಿಯಾಗುವ ಸಾಧ್ಯತೆಯಿದೆ ಎನ್ನಲಾಗುತ್ತಿದೆ. ಮಾಸ್ಕ್​ ಧರಿಸದಿದ್ದರೆ ದಂಡ ವಿಧಿಸಲು ಸರ್ಕಾರ ಚಿಂತನೆ ನಡೆಸುತ್ತಿದ್ದು, ಬೆಂಗಳೂರು ನಗರ ವ್ಯಾಪ್ತಿಗಷ್ಟೇ ಮಾಸ್ಕ್ ಫೈನ್​​​​ ಜಾರಿ ಸಾಧ್ಯತೆಯಿದೆ. ಮಾಸ್ಕ್ ಕಡ್ಡಾಯ ಮಾಡಿದರೂ ಜನ ಮಾಸ್ಕ್ ಹಾಕದ ಹಿನ್ನೆಲೆ, ಮಾಸ್ಕ್​ ಫೈನ್​​ಗೆ ಕೊವಿಡ್ ತಾಂತ್ರಿಕ ಸಲಹಾ ಸಮಿತಿ ಸಲಹೆ ನೀಡಿದೆ. ಬೆಂಗಳೂರಿನಲ್ಲಿಯೇ ಕೊರೊನಾ ಸ್ಪೋಟವಾಗುತ್ತಿರುವ ಹಿನ್ನಲೆ ಕಳೆದ ಎರಡು ದಿನಗಳ ಹಿಂದೆಯಷ್ಟೇ ಬೆಂಗಳೂರು ನಗರ ಹಾಗೂ ಜಿಲ್ಲೆಗ ಪ್ರತ್ಯೇಕ ಮಾರ್ಗಸೂಚಿ ನೀಡಲಾಗಿದೆ. ಸದ್ಯ ಪ್ರತ್ಯೇಕ್ ಮಾರ್ಗಸೂಚಿಯಿಂದಲೂ ಕೊರೊನಾ ನಿಯಮ ಸರಿಯಾದ ಪಾಲನೆ ಇಲ್ಲ. ಜನರು ಮಾಸ್ಕ್ ಕಡ್ಡಾಯ ಮಾಡಿದರು ಮಾಸ್ಕ್ ಹಾಕುತ್ತಿಲ್ಲ. ಹೀಗಾಗಿ ಕೊವಿಡ್ ತಾಂತ್ರಿಕ ಸಲಹಾ ಸಮಿತಿ ಮಾಸ್ಕ್ ಪೈನ್​ಗೆ ಸಲಹೆ ನೀಡಿದೆ.

ಇದನ್ನೂ ಓದಿ: Udaipur Murder: ಉದಯ್​ಪುರ ಶಿರಚ್ಛೇದ ಪ್ರಕರಣ: ಕನ್ಹಯ್ಯಾ ಲಾಲ್ ದೇಹದಲ್ಲಿತ್ತು 26 ಗಾಯದ ಗುರುತುಗಳು

ಬೆಂಗಳೂರಿನಲ್ಲಿ ಕೇಸಗಳ ಸಂಖ್ಯೆ ಸಾವಿರದ ಗಡಿ ಸಮಿಪಿಸುತ್ತಿರುವ ಹಿನ್ನಲೆ ಮಾಸ್ಕ್ ಪೈನ್ ಹಾಕುವಂತೆ ಸಲಹೆ ನೀಡಿದೆ. ತಜ್ಞರ ಸಲಹೆ ಹಿನ್ನಲೆ ಆರೋಗ್ಯ ಇಲಾಖೆ ಸರ್ಕಾರಕ್ಕೆ ಮಾಸ್ಕ್ ಪೈನ್ ಸಲಹೆಯ ಬಗ್ಗೆ ವರದಿ ನೀಡಿದೆ. ಆರೋಗ್ಯ ಇಲಾಖೆ ವರದಿ ಬೆನ್ನಲೆ ಸರ್ಕಾರ ಉನ್ನತಮಟ್ಟದ ಸಭೆಗೂ ಚಿಂತನೆ ನಡೆಸಲಾಗುತ್ತಿದೆ. ಇನ್ನೇರಡು ದಿನಗಳಲ್ಲಿ ಕೊರೊನಾ ಏರಿಕೆಯ ಪ್ರಮಾಣ ಪರಿಗಣಿಸಿ ಮಾಸ್ಕ್ ಪೈನ್ ಬಗ್ಗೆ ಆದೇಶ ಹೊರಡಿಸಲು ಸರ್ಕಾರ ಮುಂದಾಗಿದೆ. ಸಿಲಿಕಾನ್ ಸಿಟಿ ಬೆಂಗಳೂರಿಗೆ ಮಾಸ್ಕ್ ಪೈನ್ ಜಾರಿಯ ಆತಂಕ ಜನರಿಗೆ ಎದುರಾಗಿದೆ. ನಾಲ್ಕನೇ ಅಲೆ ಆತಂಕದ ಜೊತೆ ಮಾಸ್ಕ್ ಪೈನ್ ಜಾರಿಯ ಶಾಕ್ ಜನರಿಗೆ ತಟ್ಟಲ್ಲಿದೆ.

ಬೆಂಗಳೂರಿನಲ್ಲಿ ಕಳೆದ 10 ದಿನಗಳಲ್ಲಿ ಕೊರೊನಾ ಸೋಂಕಿತರ (Covid-19) ಸಂಖ್ಯೆ ದುಪ್ಪಟ್ಟಾಗಿದೆ. ನಗರ ವ್ಯಾಪ್ತಿಯಲ್ಲಿ ಜೂನ್ 1ರಿಂದ 16ರವರೆಗೆ ಒಟ್ಟು 31 ಮಂದಿ ಸೋಂಕಿನಿಂದ ಆಸ್ಪತ್ರೆಗಳಿಗೆ ದಾಖಲಾಗಿದ್ದರು. ಜೂನ್ 17ರಿಂದ 27ರ ಅವಧಿಯಲ್ಲಿ ಆಸ್ಪತ್ರೆಗೆ ಸೇರಿರುವ ಸೋಂಕಿತರ ಸಂಖ್ಯೆ 72ಕ್ಕೆ ಹೆಚ್ಚಾಗಿದೆ. ಬೃಹತ್ ಬೆಂಗಳೂರು ಮಹಾನಗರ ಪಾಲಿಕೆ (Bruhat Bengaluru Mahanagara Palike – BBMP) ಬಿಡುಗಡೆ ಮಾಡಿರುವ ಬುಲೆಟಿನ್​ನಲ್ಲಿ ಈ ಮಾಹಿತಿ ನಮೂದಾಗಿದೆ.

ಹೊಸ ಮಾರ್ಗಸೂಚಿ ಬಿಡುಗಡೆ

ರಾಜ್ಯದಲ್ಲಿ ದಿನೇದಿನೆ ಕೊರೊನಾ ಪ್ರಕರಣ ಹೆಚ್ಚಳವಾಗುತ್ತಿರುವ ಹಿನ್ನೆಲೆ ಆರೋಗ್ಯ ಇಲಾಖೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದೆ. ವಿವರಗಳಿಗೆ ಇಲ್ಲಿ ಕ್ಲಿಕ್ ಮಾಡಿ.

ಇದನ್ನೂ ಓದಿ: KSOU: ಹಾರ್ಡ್ ಕಾಪಿ ಬದಲು ಸಾಫ್ಟ್ ಕಾಪಿಗಳನ್ನು ನೀಡಲು ನಿರ್ಧಾರ, ನಿರಾಶೆಗೊಂಡ ವಿದ್ಯಾರ್ಥಿಗಳು

Published On - 11:25 am, Thu, 30 June 22

ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ