New Covid Guidelines: ರಾಜ್ಯದಲ್ಲಿ ಹೆಚ್ಚಿದ ಕೊರೊನಾ ಪ್ರಕರಣ; ಹೊಸ ಮಾರ್ಗಸೂಚಿ ಪ್ರಕಟಿಸಿದ ಆರೋಗ್ಯ ಇಲಾಖೆ
ರಾಜ್ಯದಲ್ಲಿ ದಿನೇದಿನೆ ಕೊರೊನಾ ಪ್ರಕರಣ ಹೆಚ್ಚಳವಾಗುತ್ತಿರುವ ಹಿನ್ನೆಲೆ ಆರೋಗ್ಯ ಇಲಾಖೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಮಾರ್ಗಸೂಚಿಯಲ್ಲಿ ಬೆಂಗಳೂರು ನಗರ ಹಾಗೂ ಜಿಲ್ಲಾ ವ್ಯಾಪ್ತಿಯ ಸರ್ಕಾರಿ, ಖಾಸಗಿ ಕಛೇರಿ ಹಾಗೂ ಶಾಲಾ ಕಾಲೇಜುಗಳಿಗೆ ಹೊಸ ಮಾರ್ಗಸೂಚಿಯನ್ನು ಅನುಸರಿಸುವಂತೆ ತಿಳಿಸಿದೆ.
ಬೆಂಗಳೂರು: ರಾಜ್ಯದಲ್ಲಿ ದಿನೇದಿನೆ ಕೊರೊನಾ ಪ್ರಕರಣ ಹೆಚ್ಚಳವಾಗುತ್ತಿರುವ ಹಿನ್ನೆಲೆ ಆರೋಗ್ಯ ಇಲಾಖೆ ಹೊಸ ಮಾರ್ಗಸೂಚಿ ಬಿಡುಗಡೆ ಮಾಡಿದ್ದು, ಮಾರ್ಗಸೂಚಿಯಲ್ಲಿ ಬೆಂಗಳೂರು ನಗರ ಹಾಗೂ ಜಿಲ್ಲಾ ವ್ಯಾಪ್ತಿಯ ಸರ್ಕಾರಿ, ಖಾಸಗಿ ಕಛೇರಿ ಹಾಗೂ ಶಾಲಾ ಕಾಲೇಜುಗಳಿಗೆ ಹೊಸ ಮಾರ್ಗಸೂಚಿಯನ್ನು ಅನುಸರಿಸುವಂತೆ ತಿಳಿಸಿದೆ. ಕೊವಿಡ್ ತಾಂತ್ರಿಕ ಸಲಹಾ ಸಮಿತಿಯ ಸಲಹೆ ಹಿನ್ನಲೆ ಹೊಸ ಮಾರ್ಗಸೂಚಿಯನ್ನು ಬಿಡುಗಡೆ ಮಾಡಲಾಗಿದೆ.
ಮಾರ್ಗಸೂಚಿಯಲ್ಲಿ ಒಳಗೊಂಡಿರುವ ಅಂಶಗಳು
-
- ಶಾಲೆಗಳಲ್ಲಿ ಕೋವಿಡ್ ಲಕ್ಷಣಗಳಿದ್ದರೆ ರಜೆ ನೀಡಬೇಕು
- ಶೀತ, ಕೆಮ್ಮು, ಜ್ವರ ಇದ್ದರೆ ಕಡ್ಡಾಯವಾಗಿ ರಜೆ ನೀಡಬೇಕು
- ಮಕ್ಕಳು ಜ್ವರ, ಶೀತ, ಕಡಿಮೆ ಆಗುವ ತನಕ ಶಾಲೆಗೆ ಬರುವುದು ಬೇಡ ಎಂದು ಸೂಚಿಸಿರುವ ಆರೋಗ್ಯ ಇಲಾಖೆ
- ಒಂದು ವೇಳೆ ಸೋಂಕು ದೃಢಪಟ್ಟರೆ ಶಾಲಾ ಕೊಠಡಿಯನ್ನ ಸ್ಯಾನಿಟೈಸ್ ಮಾಡಬೇಕು
- ಕೊರೋನಾ ಸೋಂಕು ದೃಢಪಟ್ಟಿರುವುದು ಶಾಲೆಗಳು ಮುಚ್ಚಿಡುವಂತಿಲ್ಲ
- ಒಂದು ವೇಳೆ ಆ ರೀತಿ ಮಾಡಿದರೆ ಶಾಲೆ ವಿರುದ್ದ ಕ್ರಮ ಕೈಗೊಳ್ಳಲಾಗುವುದು ಎಂದು ಆರೋಗ್ಯ ಇಲಾಖೆ ಆಯುಕ್ತ ಡಾ. ಡಿ. ರಂದೀಪ್ ಹೇಳಿದ್ದಾರೆ.
ಜೂನ್ 10ರ ನಂತರ ಕೋವಿಡ್ 19 ಪ್ರಕರಣಗಳ ಸಂಖ್ಯೆಯಲ್ಲಿ ಏರಿಕೆ ಕಂಡು ಬಂದ ಹಿನ್ನೆಲೆಯಲ್ಲಿ ಮಾರ್ಗಸೂಚಿಯನ್ನು ನವೀಕರಿಸಲಾಗಿದೆ.
ಲಸಿಕೆ ಪಡೆಯರಿ ಹಾಗೂ ಕೋವಿಡ್ ನಿಯಂತ್ರಣ ಪಾಲಿಸಿ.#COVID19 #Karnataka pic.twitter.com/lN8ywQyED9
— Dr Sudhakar K (@mla_sudhakar) June 28, 2022
ಬೆಂಗಳೂರಿಗೆ ಪ್ರತ್ಯೇಕ ಗೈಡ್‌ಲೈನ್ಸ್ ಹೊರಡಿಸಿದ ಆರೋಗ್ಯ ಇಲಾಖೆ
ಕಚೇರಿಗಳು, ಶಾಲಾ- ಕಾಲೇಜು ಹಾಗು ಅಪಾರ್ಟ್ಮೆಂಟ್‌ಗಳಿಗೆ ಸುತ್ತೋಲೆ
-
- ಅಪಾರ್ಟ್ಮೆಂಟ್‌ಗಳಲ್ಲಿ ಕೊರೊನಾ ಪಾಸಿಟಿವ್ ಆದ ಬ್ಲಾಕ್‌ಗಳನ್ನು ಕ್ಲಸ್ಟರ್ ಎಂದು ಪರಿಗಣಿಸಬೇಕು
- ಸೋಂಕಿನ ಲಕ್ಷಣ ಹೊಂದಿದವರಿಗೆ RAT ಟೆಸ್ಟ್ ಮಾಡಿಸಬೇಕು
- ಪಾಸಿಟಿವ್ ಬಂದ ವ್ಯಕ್ತಿಯನ್ನ ಹೋಂ ಐಸೋಲೇಷನ್ ಅಥವಾ ಕೋವಿಡ್ ಕೇರ್ ಸೆಂಟರ್‌ಗೆ ಕಳುಹಿಸಬೇಕು
- ಪಾಸಿಟಿವ್ ಇದ್ದವರ CT ವ್ಯಾಲ್ಯೂ 25 ಕ್ಕಿಂತ ಹೆಚ್ಚಿದ್ದರೆ ಜಿನೋಮ್ ಸೀಕ್ವೆನ್ಸಿಂಗ್‌ಗೆ ಒಳಪಡಿಸಬೇಕು
- ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು
Published On - 9:27 pm, Tue, 28 June 22