KSOU: ಹಾರ್ಡ್ ಕಾಪಿ ಬದಲು ಸಾಫ್ಟ್ ಕಾಪಿಗಳನ್ನು ನೀಡಲು ನಿರ್ಧಾರ, ನಿರಾಶೆಗೊಂಡ ವಿದ್ಯಾರ್ಥಿಗಳು
ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷಕ್ಕೆ ಅಧ್ಯಯನ ಸಾಮಗ್ರಿಗಳ ಹಾರ್ಡ್ ಕಾಪಿಗಳ ಬದಲು ಸಾಫ್ಟ್ ಕಾಪಿಗಳನ್ನು ಮಾತ್ರ ನೀಡಲಾಗುವುದು ಎಂದು ಕೆಎಸ್ಒಯು ಸುತ್ತೋಲೆ ಹೊರಡಿಸಿದೆ. ಈ ನಿರ್ಧಾರದಿಂದ ವಿದ್ಯಾರ್ಥಿಗಳು ನಿರಾಶೆಗೊಂಡಿದ್ದಾರೆ.
ಬೆಂಗಳೂರು: ಪ್ರಸಕ್ತ ಸಾಲಿನ ಶೈಕ್ಷಣಿಕ ವರ್ಷಕ್ಕೆ ಅಧ್ಯಯನ ಸಾಮಗ್ರಿಗಳ ಹಾರ್ಡ್ ಕಾಪಿಗಳ ಬದಲು ಸಾಫ್ಟ್ ಕಾಪಿಗಳನ್ನು ಮಾತ್ರ ನೀಡಲಾಗುವುದು ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು (KSOU) ಸುತ್ತೋಲೆ (Circular) ಹೊರಡಿಸಿದೆ. ಈ ನಿರ್ಧಾರದಿಂದಾಗಿ ವಿವಿಧ ಕೋರ್ಸ್ಗಳಿಗೆ ಪ್ರವೇಶ ಕೋರಿರುವ ವಿದ್ಯಾರ್ಥಿಗಳಿಗೆ ನಿರಾಶೆಯಾಗಿದೆ.
2021-22ನೇ ಶೈಕ್ಷಣಿಕ ಸಾಲಿನ ವರ್ಷಕ್ಕೆ ಅಧ್ಯಯನ ಸಾಮಗ್ರಿಗಳ ಹಾರ್ಡ್ ಕಾಪಿಗಳನ್ನು ನೀಡಲಾಗುವುದಿಲ್ಲ, ಸಾಫ್ಟ್ ಕಾಪಿಗಳನ್ನೇ ಅಪ್ಲೋಡ್ ಮಾಡಲು ನಿರ್ಧರಿಸಲಾಗಿದೆ ಎಂದು ವಿಶ್ವವಿದ್ಯಾಲಯವು ಸುತ್ತೋಲೆ ಹೊರಡಿಸಿದೆ. ಇದರ ಜೊತೆಗೆ ವಿವಿಧ ಕೋರ್ಸ್ಗಳ ಶುಲ್ಕದಲ್ಲಿ ಶೇ.15ರಷ್ಟು ರಿಯಾಯಿತಿ ನೀಡುವುದಾಗಿ ಭರವಸೆ ನೀಡಿದ್ದು, ಇದು ಹಾರ್ಡ್ ಕಾಪಿಗಳನ್ನು ಪಡೆಯಲು ವಿದ್ಯಾರ್ಥಿಗಳ ವೆಚ್ಚವನ್ನು ಸರಿಹೊಂದಿಸುತ್ತದೆ ಎಂದು ಹೇಳಿದೆ.
ಇದನ್ನೂ ಓದಿ: TS SSC Result 2022: ಇಂದು ತೆಲಂಗಾಣ 10ನೇ ತರಗತಿ ಫಲಿತಾಂಶ ಪ್ರಕಟ: ನೋಡುವುದು ಹೇಗೆ?
ಅಧ್ಯಯನ ಸಾಮಗ್ರಿಗಳ ಸಾಫ್ಟ್ ಕಾಪಿಗಳನ್ನು student app ನಲ್ಲಿ ಅಪ್ಲೋಡ್ ಮಾಡಲಾಗುತ್ತಿದ್ದು, ವಿದ್ಯಾರ್ಥಿಗಳು ಕಾಪಿಗಳನ್ನು ಡೌನ್ಲೋಡ್ ಮಾಡಿಕೊಳ್ಳಬಹುದು ಎಂದು ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯವು ತನ್ನ ಸುತ್ತೋಲೆಯಲ್ಲಿ ತಿಳಿಸಿದೆ. ವಿವಿಯ ಈ ನಿರ್ಧಾರಕ್ಕೆ ಹಲವು ನಿರಾಶೆ ವ್ಯಕ್ತಪಡಿಸಿದ್ದಾರೆ.
”ಸ್ಟಡಿ ಮೆಟೀರಿಯಲ್ ಸೇರಿದಂತೆ ಕೋರ್ಸ್ ಶುಲ್ಕವಾಗಿ 9 ಸಾವಿರ ಪಾವತಿಸಿದ್ದೇನೆ. ಪ್ರತಿ ವಿಷಯದಲ್ಲಿ ಐದರಿಂದ ಆರು ಇ-ಪುಸ್ತಕಗಳಿವೆ. ಸಾಫ್ಟ್ ಕಾಪಿಗಳನ್ನು ಈಗ ಇತರ ವಿದ್ಯಾರ್ಥಿಗಳ ಅಧ್ಯಯನ ಸಾಮಗ್ರಿಗಳಿಂದ ಮುದ್ರಿಸಬೇಕು ಅಥವಾ ಫೋಟೋಕಾಪಿ ಮಾಡಬೇಕು. ಇದರಿಂದ ಸಾವಿರಾರು ರೂಪಾಯಿ ವೆಚ್ಚವಾಗಲಿದ್ದು, ವಿದ್ಯಾರ್ಥಿಗಳಿಗೆ ಹೆಚ್ಚುವರಿ ಹೊರೆಯಾಗಲಿದೆ. ವಿಶ್ವವಿದ್ಯಾಲಯದ ಈ ನಿರ್ಧಾರವು ಪರೀಕ್ಷಾ ಫಲಿತಾಂಶಗಳ ಮೇಲೆ ಮತ್ತು ವಿವಿಯ ಖ್ಯಾತಿಯ ಮೇಲೆ ಪರಿಣಾಮ ಬೀರಲಿದೆ” ಎಂದು ಪ್ರಾಥಮಿಕ ಶಿಕ್ಷಕರೊಬ್ಬರು ಹೇಳಿದ್ದಾಗಿ ಖಾಸಗಿ ಸುದ್ದಿ ಸಂಸ್ಥೆ ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
ಇದನ್ನೂ ಓದಿ: ಅತಿಥಿ ಶಿಕ್ಷಕರ ಗೌರವ ಸಂಭಾವನೆ ಹೆಚ್ಚಳ ಮಾಡಿ ಆದೇಶ; ಸಿಎಂ ಬೊಮ್ಮಾಯಿಗೆ ಧನ್ಯವಾದ ತಿಳಿಸಿದ ಶಿಕ್ಷಣ ಸಚಿವ ಬಿ.ಸಿ. ನಾಗೇಶ್