ಲಂಡನ್ನಲ್ಲಿ ಖುಷ್ಬೂ; ಅವರ ಸ್ಲಿಮ್ ಬಾಡಿ ನೋಡಿ ಅಚ್ಚರಿ ಹೊರ ಹಾಕಿದ ಫ್ಯಾನ್ಸ್
‘ರಣಧೀರ’, ‘ಅಂಜದ ಗಂಡು’, ‘ಯುಗಪುರುಷ’, ‘ಶಾಂತಿ ಕ್ರಾಂತಿ’ ಮುಂತಾದ ಸಿನಿಮಾಗಳಲ್ಲಿ ನಟಿಸಿ ಕರುನಾಡಿನಲ್ಲಿ ಜನಪ್ರಿಯರಾದ ಖುಷ್ಬೂ ಅವರಿಗೆ ಈಗ 50ರ ಪ್ರಾಯ. ಈ ವಯಸ್ಸಿನಲ್ಲೂ ಅವರು ಫಿಟ್ನೆಸ್ಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ.
ನೂರಾರು ಸಿನಿಮಾಗಳಲ್ಲಿ ನಟಿಸಿರುವ ಬಹುಭಾಷಾ ಕಲಾವಿದೆ ಖುಷ್ಬೂ (Khushbu) ಅವರು ಈಗ ರಾಜಕೀಯದಲ್ಲಿ ಬ್ಯುಸಿ ಆಗಿದ್ದಾರೆ. ಚಿತ್ರರಂಗದಲ್ಲಿ ಅವರು ಹೆಚ್ಚಾಗಿ ಸಕ್ರಿಯರಾಗಿಲ್ಲ. ಈ ನಡುವೆ ಅವರು ಫಿಟ್ನೆಸ್ ಕಡೆಗೆ ಹೆಚ್ಚು ಗಮನ ಹರಿಸಿದ್ದಾರೆ. ಇದನ್ನು ಚಾಲೆಂಜ್ ಆಗಿ ತೆಗೆದುಕೊಂಡಿದ್ದಾರೆ ಅವರು. ಪರಿಣಾಮವಾಗಿ ಸಿಕ್ಕಾಪಟ್ಟೆ ಸ್ಲಿಮ್ ಆಗಿದ್ದಾರೆ. ಇತ್ತೀಚೆಗೆ ಅವರು ಸಾಕಷ್ಟು ಫೋಟೋಗಳನ್ನು ಹಂಚಿಕೊಳ್ಳುತ್ತಿದ್ದಾರೆ. ಈ ಫೋಟೋಗಳನ್ನು ನೋಡಿದರೆ ಒಮ್ಮೆಲೇ ಅವರ ಗುರುತು ಸಿಗುವುದು ಕೂಡ ಕಷ್ಟವಾಗುತ್ತಿದೆ. ಈಗ ಅವರು ಲಂಡನ್ಗೆ (London) ತೆರಳಿದ್ದಾರೆ. ಇದರ ಫೋಟೋಗಳನ್ನು ಅವರು ಹಂಚಿಕೊಂಡಿದ್ದಾರೆ. ಈ ಫೋಟೋ ನೋಡಿ ಎಲ್ಲರೂ ಅಚ್ಚರಿ ಹೊರಹಾಕಿದ್ದಾರೆ.
‘ರಣಧೀರ’, ‘ಅಂಜದ ಗಂಡು’, ‘ಯುಗಪುರುಷ’, ‘ಶಾಂತಿ ಕ್ರಾಂತಿ’ ಮುಂತಾದ ಸಿನಿಮಾಗಳಲ್ಲಿ ನಟಿಸಿ ಕರುನಾಡಿನಲ್ಲಿ ಜನಪ್ರಿಯರಾದ ಖುಷ್ಬೂ ಅವರಿಗೆ ಈಗ 50ರ ಪ್ರಾಯ. ಈ ವಯಸ್ಸಿನಲ್ಲೂ ಅವರು ಫಿಟ್ನೆಸ್ಗೆ ಹೆಚ್ಚು ಆದ್ಯತೆ ನೀಡುತ್ತಿದ್ದಾರೆ. ಮಿತಿ ಮೀರಿದ್ದ ಅವರ ದೇಹದ ತೂಕ ಇಳಿಕೆ ಆಗಿದೆ. ಅವರು ಬರೋಬ್ಬರಿ 15 ಕೆಜಿಗೂ ಅಧಿಕ ದೇಹತೂಕ ಇಳಿಸಿಕೊಂಡಿದ್ದಾರೆ. ಇದಕ್ಕೆ ಅವರ ಅಭಿಮಾನಿಗಳು ಮೆಚ್ಚುಗೆ ಸೂಚಿಸಿದ್ದಾರೆ. ಲಂಡನ್ನಲ್ಲಿರುವ ಅವರು ಹಾಕಿರುವ ಫೋಟೋ ವೈರಲ್ ಆಗುತ್ತಿದೆ.
View this post on Instagram
ಖುಷ್ಬೂ ಅವರಿಗೆ ಕಾಣಿಸಿಕೊಂಡಿತ್ತು ಕೊರೊನಾ
ಕೊವಿಡ್ ಮೂರನೇ ಅಲೆ ಕಾಣಿಸಿಕೊಂಡಿದೆ. ಕೊವಿಡ್ ಪ್ರಕರಣ ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಎಲ್ಲಾ ಸರ್ಕಾರಗಳು ಸಾಕಷ್ಟು ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳುತ್ತಿವೆ. ಈ ಮಧ್ಯೆ ಸಾಕಷ್ಟು ಸೆಲೆಬ್ರಿಟಿಗಳಿಗೆ, ರಾಜಕಾರಣಿಗಳಿಗೆ ಕೊವಿಡ್ ಅಂಟುತ್ತಿದೆ. ಸಿನಿಮಾ ಕೆಲಸಗಳಿಗಾಗಿ ನಾನಾ ಕಡೆ ಸುತ್ತಾಟ ನಡೆಸುವ ಹಲವರು ಕೊವಿಡ್ ಸೋಂಕಿಗೆ ತುತ್ತಾಗಿದ್ದಾರೆ. ನಟಿ ಹಾಗೂ ರಾಜಕಾರಣಿ ಖುಷ್ಬೂ ಸುಂದರ್ಗೂ ಈಗ ಕೊರೊನಾ ವೈರಸ್ ಅಂಟಿತ್ತು. ಈ ಬಗ್ಗೆ ಸೋಶಿಯಲ್ ಮೀಡಿಯಾದಲ್ಲಿ ಅವರು ಬರೆದುಕೊಂಡಿದ್ದರು.
‘ಕೊವಿಡ್ ಎರಡು ಅಲೆಯನ್ನು ತಪ್ಪಿಸಿಕೊಂಡೆ. ಆದರೆ, ಈಗ ಕೊವಿಡ್ ಪಾಸಿಟಿವ್ ಆಗಿದೆ. ನಿನ್ನೆ ಸಂಜೆಯವರೆಗೂ ನನಗೆ ಕೊವಿಡ್ ನೆಗೆಟಿವ್ ಆಗಿತ್ತು. ಆದರೆ, ಈಗ ಪಾಸಿಟಿವ್ ವರದಿ ಬಂದಿದೆ. ನಾನು ಐಸೋಲೇಷನ್ನಲ್ಲಿದ್ದೇನೆ. ಒಂಟಿಯಾಗಿರುವುದನ್ನು ನಿಜಕ್ಕೂ ದ್ವೇಷಿಸುತ್ತೇನೆ. ಮುಂದಿನ ಐದು ದಿನಗಳಕಾಲ ನನಗೆ ಮನರಂಜನೆ ನೀಡಿ. ಕೊವಿಡ್ ಲಕ್ಷಣ ಇದ್ದರೆ ಪರೀಕ್ಷೆ ಮಾಡಿಸಿಕೊಳ್ಳಿ’ ಎಂದು ಖುಷ್ಬೂ ಟ್ವೀಟ್ ಮಾಡಿದ್ದರು. ಆ ಬಳಿಕ ಅವರು ಚೇತರಿಸಿಕೊಂಡಿದ್ದರು.
ಕನ್ನಡ ಚಿತ್ರರಂಗದ ಬಗ್ಗೆ ಹಾಗೂ ಇಲ್ಲಿನ ಕಲಾವಿದರ ಬಗ್ಗೆ ಇರುವ ಗೌರವ ಖುಷ್ಬೂಗೆ ಕಿಂಚಿತ್ತೂ ಕಡಿಮೆ ಆಗಿಲ್ಲ. ಸಾಕಷ್ಟು ಕಡೆಗಳಲ್ಲಿ ಅವರು ಸ್ಯಾಂಡಲ್ವುಡ್ ಹಾಗೂ ಸ್ಯಾಂಡಲ್ವುಡ್ ಕಲಾವಿದರ ಬಗ್ಗೆ ಮಾತನಾಡಿದ್ದಿದೆ. ನವೆಂಬರ್ 9ರಂದು ಖುಷ್ಬೂ ಬೆಂಗಳೂರಿನಲ್ಲಿರುವ ಪುನೀತ್ ರಾಜ್ಕುಮಾರ್ ಮನೆಗೆ ಆಗಮಿಸಿದ್ದರು. ಈ ವೇಳೆ ಅಪ್ಪು ಪತ್ನಿ ಅಶ್ವಿನಿ ಪುನೀತ್ ರಾಜ್ಕುಮಾರ್ಗೆ ಸಾಂತ್ವನ ಹೇಳಿದ್ದರು.
ಇದನ್ನೂ ಓದಿ: Khushbu: ಬೆಂಗಳೂರಿಗೆ ಆಗಮಿಸಿ ಅಶ್ವಿನಿ ಪುನೀತ್ ರಾಜ್ಕುಮಾರ್ಗೆ ಸಾಂತ್ವನ ಹೇಳಿದ ಖುಷ್ಬೂ
Samantha: ಅಬ್ಬಬ್ಬಾ, ಸಮಂತಾ ಖರೀದಿಸಿದ ಈ ಎರಡು ಜಾಕೆಟ್ನ ಬೆಲೆ ಇಷ್ಟೊಂದಾ?