Pavitra Lokesh: ‘ಗಂಡ ಸರಿಯಿಲ್ಲ ಅಂತಾರೆ, ಆದ್ರೂ ಜತೆಯೇ ಇರ್ಬೇಕು ಅಂತಾರೆ’: ರಮ್ಯಾ ರಘುಪತಿ ಬಗ್ಗೆ ಪವಿತ್ರಾ ನೇರ ಮಾತು
Pavitra Lokesh | Naresh: ‘ತಾನು ಪ್ರಚಾರ ಪಡೆಯಬೇಕು ಎಂಬ ಕಾರಣಕ್ಕೆ ರಮ್ಯಾ ರಘುಪತಿ ಅವರು ಬೆಂಗಳೂರಿನಲ್ಲಿ ಮಾತಾಡ್ತಾ ಇದ್ದಾರೆ. ನನ್ನನ್ನು ಟಾರ್ಗೆಟ್ ಮಾಡ್ತಿದ್ದಾರೆ’ ಎಂದು ಪವಿತ್ರಾ ಲೋಕೇಶ್ ಆರೋಪಿಸಿದ್ದಾರೆ.
ತೆಲುಗು ನಟ ನರೇಶ್ (Naresh) ಹಾಗೂ ಅವರ ಪತ್ನಿ ರಮ್ಯಾ ರಘುಪತಿ (Ramya Raghupathi) ಸಂಸಾರದ ಜಗಳ ಬೀದಿಗೆ ಬಂದಿದೆ. ಇಬ್ಬರ ನಡುವೆ ನಟಿ ಪವಿತ್ರಾ ಲೋಕೇಶ್ ಹೆಸರು ಕೂಡ ಕೇಳಿಬಂದಿದೆ. ಸೋಶಿಯಲ್ ಮೀಡಿಯಾದಲ್ಲಿ ಪವಿತ್ರಾ ಲೋಕೇಶ್ ಬಗ್ಗೆ ಅನೇಕ ಗಾಸಿಪ್ಗಳು ಹರಿದಾಡಿವೆ. ಆ ಕುರಿತು ಅವರು ಸ್ಪಷ್ಟನೆ ನೀಡಿದ್ದಾರೆ. ಈ ವೇಳೆ ರಮ್ಯಾ ರಘುಪತಿ ಬಗ್ಗೆ ಪವಿತ್ರಾ ಲೋಕೇಶ್ (Pavitra Lokesh) ಕೆಲವು ಖಡಕ್ ಪ್ರಶ್ನೆಗಳನ್ನು ಮುಂದಿಟ್ಟಿದ್ದಾರೆ. ‘ತನ್ನ ಗಂಡ ಸರಿಯಿಲ್ಲ ಅಂತಾರೆ. ಆದರೂ ಅವರ ಜೊತೆಯೇ ಇರಬೇಕು ಅಂತಾರೆ. ಹಾಗಿದ್ದರೆ ಜೊತೆಗೆ ಇರಬಹುದಲ್ಲ. ನನ್ನನ್ನು ಯಾಕೆ ಇದರಲ್ಲಿ ತಳ್ಳುತ್ತಿದ್ದಾರೆ? ಈಗ ಅವರಿಬ್ಬರೂ ಯಾಕೆ ಬೇರೆ ಆಗಿದ್ದಾರೆ ಎಂಬುದಕ್ಕೆ ಅವರೇ ಉತ್ತರ ನೀಡಬೇಕು. ನನ್ನನ್ನು ಯಾಕೆ ಟಾರ್ಗೆಟ್ ಮಾಡ್ತಿದ್ದಾರೆ ಅನ್ನೋದು ಕೂಡ ಅವರು ಹೇಳಬೇಕು’ ಎಂದಿದ್ದಾರೆ ಪವಿತ್ರಾ ಲೋಕೇಶ್.
ಇದನ್ನೂ ಓದಿ: Pavitra Lokesh: ‘ಸುಚೇಂದ್ರ ಪ್ರಸಾದ್ ಜತೆ ನನ್ನ ಮದುವೆ ಆಗಿಲ್ಲ, 11 ವರ್ಷ ಒಟ್ಟಿಗೆ ಇದ್ದೆ ಅಷ್ಟೇ’: ನಟಿ ಪವಿತ್ರಾ ಲೋಕೇಶ್
Pavitra Lokesh: ಸೈಬರ್ ಠಾಣೆ ಮೆಟ್ಟಿಲೇರಿದ ನಟಿ ಪವಿತ್ರಾ ಲೋಕೇಶ್; ಗಾಸಿಪ್ ಹಬ್ಬಿಸಿದವರ ವಿರುದ್ಧ ಕಾನೂನು ಸಮರ