Pavitra Lokesh: ‘ಸುಚೇಂದ್ರ ಪ್ರಸಾದ್​ ಜತೆ ನನ್ನ ಮದುವೆ ಆಗಿಲ್ಲ, 11 ವರ್ಷ ಒಟ್ಟಿಗೆ ಇದ್ದೆ ಅಷ್ಟೇ’: ನಟಿ ಪವಿತ್ರಾ ಲೋಕೇಶ್​

Pavitra Lokesh | Naresh: ಪವಿತ್ರಾ ಲೋಕೇಶ್​ ಅವರು ದುಡ್ಡಿಗಾಗಿ ನರೇಶ್​ ಜೊತೆ ಇದ್ದಾರೆ ಎಂದು ಸುಚೇಂದ್ರ ಪ್ರಸಾದ್​ ಹೇಳಿರುವ ಬಗ್ಗೆ ಕೆಲವು ಮಾಧ್ಯಮಗಳಲ್ಲಿ ವರದಿ ಆಗಿತ್ತು. ಅದಕ್ಕೆ ಪವಿತ್ರಾ ಲೋಕೇಶ್​ ತಿರುಗೇಟು ನೀಡಿದ್ದಾರೆ.

Pavitra Lokesh: ‘ಸುಚೇಂದ್ರ ಪ್ರಸಾದ್​ ಜತೆ ನನ್ನ ಮದುವೆ ಆಗಿಲ್ಲ, 11 ವರ್ಷ ಒಟ್ಟಿಗೆ ಇದ್ದೆ ಅಷ್ಟೇ’: ನಟಿ ಪವಿತ್ರಾ ಲೋಕೇಶ್​
ಪವಿತ್ರಾ ಲೋಕೇಶ್​, ಸುಚೇಂದ್ರ ಪ್ರಸಾದ್​
Follow us
TV9 Web
| Updated By: ಮದನ್​ ಕುಮಾರ್​

Updated on: Jul 01, 2022 | 2:23 PM

ಖ್ಯಾತ ನಟಿ ಪವಿತ್ರಾ ಲೋಕೇಶ್​ (Pavitra Lokesh) ಅವರ ಬಗ್ಗೆ ಅನೇಕ ಆರೋಪಗಳು ಇತ್ತೀಚೆಗೆ ಕೇಳಿಬಂದಿದ್ದವು. ಅವರ ಬಗ್ಗೆ ಸುಚೇಂದ್ರ ಪ್ರಸಾದ್ (Suchendra Prasad)​ ಅವರು ಕೂಡ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ್ದರು. ಆ ಎಲ್ಲ ವಿಚಾರಗಳಿಗೆ ಸ್ಪಷನೆ ನೀಡುವ ಸಲುವಾಗಿ ಪವಿತ್ರಾ ಲೋಕೇಶ್​ ಸುದ್ದಿಗೋಷ್ಠಿ ನಡೆಸಿದ್ದಾರೆ. ತಮ್ಮ ವಿರುದ್ಧ ಕೇಳಿಬಂದ ಅನೇಕ ಆರೋಪಗಳಿಗೆ ಅವರು ಸ್ಪಷ್ಟನೆ ನೀಡಿದ್ದಾರೆ. ಕೆಲವು ಶಾಕಿಂಗ್​ ವಿಷಯಗಳನ್ನು ಅವರು ಬಹಿರಂಗಪಡಿಸಿದ್ದಾರೆ. ತೆಲುಗು ನಟ ನರೇಶ್​ (Naresh) ಜೊತೆ ಪವಿತ್ರಾ ಲೋಕೇಶ್​ ಅವರು ಮದುವೆ ಆಗಿದ್ದಾರೆ ಎಂಬ ಗಾಳಿಸುದ್ದಿ ಇತ್ತೀಚೆಗೆ ಕೇಳಿಬಂದಿತ್ತು. ಆ ಕುರಿತಾಗಿ ಇಷ್ಟು ದಿನ ಮೌನ ವಹಿಸಿದ್ದ ಪವಿತ್ರಾ ಲೋಕೇಶ್​ ಅವರು ಈಗ ಪ್ರತಿಕ್ರಿಯೆ ನೀಡಿದ್ದಾರೆ.

ಪವಿತ್ರಾ ಲೋಕೇಶ್​ ಅವರು ದುಡ್ಡಿಗಾಗಿ ನರೇಶ್​ ಜೊತೆ ಇದ್ದಾರೆ ಎಂದು ಸುಚೇಂದ್ರ ಪ್ರಸಾದ್​ ಹೇಳಿರುವ ಬಗ್ಗೆ ಕೆಲವು ಮಾಧ್ಯಮಗಳಲ್ಲಿ ವರದಿ ಆಗಿತ್ತು. ಅದಕ್ಕೆ ಪವಿತ್ರಾ ಲೋಕೇಶ್​ ತಿರುಗೇಟು ನೀಡಿದ್ದಾರೆ. ‘ನಾನು ಸುಚೇಂದ್ರ ಪ್ರಸಾದ್​ ಜೊತೆ 11 ವರ್ಷ ಒಟ್ಟಿಗೆ ಇದ್ದೆ. ಈಗ 5 ವರ್ಷದಿಂದ ಅವರ ಜೊತೆ ಇಲ್ಲ. 11 ವರ್ಷ ನಾನು-ಅವರು ಜೊತೆಗಿದ್ದಾಗ ಅವರ ಬಳಿ ಏನೂ ಇರಲಿಲ್ಲ. ದುಡ್ಡು, ಕಾರು, ಮನೆ ಕೂಡ ಇರಲಿಲ್ಲ. ದುಡ್ಡಿಗಾಗಿ ಇರೋದಾಗಿದ್ದರೆ ಕೇವಲ ಒಂದು ವರ್ಷ ಆ ಸಂಬಂಧ ಉಳಿಯುತ್ತಿತ್ತು 11 ವರ್ಷ ಇರುತ್ತಿರಲಿಲ್ಲ’ ಎಂದು ಪವಿತ್ರಾ ಲೋಕೇಶ್​ ಹೇಳಿದ್ದಾರೆ.

‘ಸುಚೇಂದ್ರ ಪ್ರಸಾದ್​ ಅವರು ನನ್ನನ್ನು ಮದುವೆ ಕೂಡ ಆಗಿಲ್ಲ. ನಾನು ಆ ಮನುಷ್ಯನಿಗೆ ಗೌರವ ಕೊಟ್ಟು, ಅವರ ಎಜ್ಯುಕೇಷನ್​ಗೆ ಬೆಲೆ ಕೊಟ್ಟು, ಅವರ ವ್ಯಕ್ತಿತ್ವಕ್ಕೆ ಚ್ಯುತಿ ಬಾರದ ರೀತಿಯಲ್ಲಿ ನಾನು ಬಾಯಿ ಮುಚ್ಚಿಕೊಂಡಿದ್ದೆ. ಒಬ್ಬ ವ್ಯಕ್ತಿ ಬದುಕಬೇಕು ಎಂದರೆ ಹಣ ಸಂಪಾದಿಸಲು ಒಂದು ಕೆಲಸ ಇರಬೇಕು. ಗಂಜಿ ತಿಂದುಕೊಂಡು ಬದುಕು ಎಂದರೆ ಇರೋಕೆ ಆಗತ್ತಾ? ನಾನು ಸಿನಿಮಾ ಕಲಾವಿದೆ. ನಾನು ರಸ್ತೆಯಲ್ಲಿ ನಡೆದುಕೊಂಡು ಓಡಾಡೋಕೆ ಆಗಲ್ಲ. ನನಗೊಂದು ಕಾರು ಬೇಕು. ಅದನ್ನು ಆಸೆ ಎಂದು ಸುಚೇಂದ್ರ ಪ್ರಸಾದ್​ ಹೇಳಿದರೆ ಅದು ಮೂರ್ಖತನ ಆಗುತ್ತದೆ’ ಎಂದಿದ್ದಾರೆ ಪವಿತ್ರಾ ಲೋಕೇಶ್.

ಇದನ್ನೂ ಓದಿ
Image
Ramya Raghupathi: ‘ಮಹಿಳೆಯರ ಜತೆ ನರೇಶ್​ ಕೆಟ್ಟದಾಗಿ ಮಾತಾಡಿದ 400 ಕಾಲ್​ ರೆಕಾರ್ಡಿಂಗ್​ ಇದೆ’: ಗಂಡನಿಗೆ ರಮ್ಯಾ ರಘುಪತಿ ತಿರುಗೇಟು
Image
‘200 ನಟಿಯರ ಜತೆ ನಟಿಸಿದ್ದೇನೆ, ಒಬ್ಬರಾದರೂ ನನ್ನ ಬಗ್ಗೆ ಕೆಟ್ಟದಾಗಿ ಮಾತಾಡ್ತಾರಾ ಕೇಳಿ’; ನರೇಶ್ ಚಾಲೆಂಜ್
Image
‘ನನಗೂ-ನರೇಶ್​​ಗೂ ಡಿವೋರ್ಸ್ ಆಗಿಲ್ಲ’; ಮೂರನೇ ಹೆಂಡತಿ ರಮ್ಯಾ ರಘುಪತಿ ಮಾತು
Image
ಪವಿತ್ರಾ ಲೋಕೇಶ್ ನಮ್ಮ ಮನೆಗೆ ಬಂದಾಗ ಬೆಳ್ಳಿ ತಟ್ಟೆಯಲ್ಲಿ ಊಟ ಹಾಕಿದ್ವಿ; ನರೇಶ್ ಹೆಂಡತಿಯ ಮಾತು

‘ನನ್ನ ಮತ್ತು ಸುಚೇಂದ್ರ ಪ್ರಸಾದ್​ ಬಗ್ಗೆ ಇನ್ನೊಮ್ಮೆ ಮಾತಾಡೋಣ. ಅದಕ್ಕೆ ಇದು ಸರಿಯಾದ ಸಮಯ ಅಲ್ಲ. ನನ್ನ ಬಗ್ಗೆ ಕೆಟ್ಟದಾಗಿ ಅಪಪ್ರಚಾರ ಮಾಡಲಾಗುತ್ತಿದೆ. ಅದಕ್ಕಾಗಿ ಸ್ಪಷ್ಟನೆ ನೀಡಲು ಮಾಧ್ಯಮಗಳ ಎದುರು ಬಂದಿದ್ದೇನೆ’ ಎಂದು ಪವಿತ್ರಾ ಲೋಕೇಶ್​ ಹೇಳಿದ್ದಾರೆ.

ಇದನ್ನೂ ಓದಿ: ‘ನಮ್ಮಿಬ್ಬರ ನಡುವೆ ಗೆಳೆತನ ಇರುವುದು ನಿಜ’; ಪವಿತ್ರಾ ಲೋಕೇಶ್ ವಿಚಾರವಾಗಿ ಮೊದಲ ಬಾರಿಗೆ ಮೌನ ಮುರಿದ ನರೇಶ್​

Pavitra Lokesh: ಪವಿತ್ರಾ ಲೋಕೇಶ್​ ಸಂಬಂಧದ ಬಗ್ಗೆ ನರೇಶ್​ 3ನೇ ಪತ್ನಿ ರಮ್ಯಾ ರಘುಪತಿ ಮೊದಲ ಪ್ರತಿಕ್ರಿಯೆ

ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಪ್ರದೇಶ ಬಿಜೆಪಿ ಅಧ್ಯಕ್ಷರ ಆಯ್ಕೆಗೆ ಪ್ರಕ್ರಿಯೆ ಶುರುವಾಗಲಿದೆ: ಚೌಹಾನ್
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಕೇಂದ್ರದಲ್ಲಿ ಮಂತ್ರಿಯಾಗುವ ಮೊದಲು ಚೌಹಾನ್ ಮಧ್ಯ ಪ್ರದೇಶ ಸಿಎಂ ಅಗಿದ್ದರು
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ಜನಪ್ರತಿನಿಧಿಗಳಿಗೆ ಚುನಾವಣೆಯಲ್ಲಿಲ್ಲದ ಭದ್ರತೆ ಗೆದ್ದಮೇಲೆ ಯಾಕೆ ಬೇಕು?
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
ತಾರೆಯರ ಕಲರವ; ಹೇಗಿದೆ ನೋಡಿ ತಾರಾ-ಸುಧಾರಾಣಿ ಡ್ಯಾನ್ಸ್
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ
‘ನಾನು ಕರ್ನಾಟಕದ ಹುಡುಗಿ’; ಪ್ರೀತಿಯಿಂದ ಕನ್ನಡದಲ್ಲೇ ಮಾತನಾಡಿದ ಶಿಲ್ಪಾ