‘ವಿಕ್ರಾಂತ್ ರೋಣ’ ಸಿನಿಮಾ ಕಡೆಯಿಂದ ಸಿಕ್ತು ಮತ್ತೊಂದು ಅಪ್​ಡೇಟ್​; ಹೊಸ ಸಾಂಗ್ ರಿಲೀಸ್​ಗೆ ಡೇಟ್ ಫಿಕ್ಸ್

‘ವಿಕ್ರಾಂತ್​ ರೋಣ’ ಸಿನಿಮಾದ ಮೊದಲ ಹಾಡು ‘ರಾ ರಾ ರಕ್ಕಮ್ಮ..’ ಸಖತ್ ಹೈಪ್ ಸೃಷ್ಟಿ ಮಾಡಿದೆ. ಈ ಲಿರಿಕಲ್ ಸಾಂಗ್ ಕೋಟ್ಯಂತರ ಬಾರಿ ವೀಕ್ಷಣೆ ಕಂಡಿದೆ.

‘ವಿಕ್ರಾಂತ್ ರೋಣ’ ಸಿನಿಮಾ ಕಡೆಯಿಂದ ಸಿಕ್ತು ಮತ್ತೊಂದು ಅಪ್​ಡೇಟ್​; ಹೊಸ ಸಾಂಗ್ ರಿಲೀಸ್​ಗೆ ಡೇಟ್ ಫಿಕ್ಸ್
ಸುದೀಪ್
TV9kannada Web Team

| Edited By: Rajesh Duggumane

Jun 30, 2022 | 10:03 PM

ಸುದೀಪ್ (Sudeep)ನಟನೆಯ ‘ವಿಕ್ರಾಂತ್ ರೋಣ’ ಸಿನಿಮಾ ರಿಲೀಸ್​ಗೆ ದಿನಗಣನೆ ಶುರುವಾಗಿದೆ. ಈ ಸಿನಿಮಾ ಬಗ್ಗೆ ಸೃಷ್ಟಿ ಆಗಿರುವ ಹೈಪ್ ದಿನಕಳೆದಂತೆ ಹೆಚ್ಚುತ್ತಿದೆ. ಚಿತ್ರತಂಡ ನಾನಾ ಕಡೆಗಳಲ್ಲಿ ತೆರಳಿ ಪ್ರಚಾರ ಮಾಡುತ್ತಿದೆ. ಈಗ ಚಿತ್ರತಂಡದಿಂದ ಹೊಸ ಅಪ್​ಡೇಟ್ ಒಂದು ಸಿಕ್ಕಿದೆ. ‘ವಿಕ್ರಾಂತ್​ ರೋಣ’ ಸಿನಿಮಾದ (Vikrant Rona Movie) ಹೊಸ ಸಾಂಗ್ ರಿಲೀಸ್​ಗೆ ಮುಹೂರ್ತ ನಿಗದಿ ಆಗಿದೆ. ಈ ಬಗ್ಗೆ ಚಿತ್ರತಂಡದಿಂದ ಅಧಿಕೃತ ಮಾಹಿತಿ ಹೊರ ಬಿದ್ದಿದೆ. ಈ ವಿಚಾರ ಕೇಳಿ ಫ್ಯಾನ್ಸ್ ಖುಷಿಪಟ್ಟಿದ್ದಾರೆ.

‘ವಿಕ್ರಾಂತ್​ ರೋಣ’ ಸಿನಿಮಾದ ಮೊದಲ ಹಾಡು ‘ರಾ ರಾ ರಕ್ಕಮ್ಮ..’ ಸಖತ್ ಹೈಪ್ ಸೃಷ್ಟಿ ಮಾಡಿದೆ. ಈ ಲಿರಿಕಲ್ ಸಾಂಗ್ ಕೋಟ್ಯಂತರ ಬಾರಿ ವೀಕ್ಷಣೆ ಕಂಡಿದೆ. ಅನೇಕ ಸೆಲೆಬ್ರಿಟಿಗಳು ಈ ಹಾಡಿಗೆ ಡ್ಯಾನ್ಸ್ ಮಾಡಿದ್ದಾರೆ. ಈ ಹಾಡಿನ ಗುಂಗು ಕಡಿಮೆ ಆಗುವ ಮೊದಲೇ ಚಿತ್ರತಂಡ ಹೊಸ ಸಾಂಗ್ ರಿಲೀಸ್ ಮಾಡುತ್ತಿದೆ. ‘Lullaby Song – Rajkumari’ ಸಾಂಗ್ ರಿಲೀಸ್ ಬಗ್ಗೆ ಚಿತ್ರತಂಡ ಮಾಹಿತಿ ನೀಡಿದೆ.

ಕನ್ನಡದಲ್ಲಿ ‘Lullaby Song – Rajkumari’ ಹಾಡು ಜುಲೈ 2ರಂದು ಸಂಜೆ 5:02 ಗಂಟೆಗೆ ರಿಲೀಸ್ ಆಗಲಿದೆ. ಮಲಯಾಳಂನಲ್ಲಿ ಜುಲೈ 3, ತೆಲುಗಿನಲ್ಲಿ ಜುಲೈ 4, ಹಿಂದಿಯಲ್ಲಿ ಜುಲೈ 5 ಹಾಗೂ ತಮಿಳಿನಲ್ಲಿ ಜುಲೈ 6ರಂದು ಸಂಜೆ 5:2ಕ್ಕೆ ಈ ಸಾಂಗ್ ಬಿಡುಗಡೆ ಆಗಲಿದೆ. ಈ ಹಾಡಿನ ಬಗ್ಗೆ ಸುದೀಪ್ ಮೆಚ್ಚುಗೆ ಸೂಚಿಸಿದ್ದು, ‘ನನ್ನ ಫೇವರಿಟ್ ಸಾಂಗ್’ ಎಂದು ಬರೆದುಕೊಂಡಿದ್ದಾರೆ. ಈ ಕಾರಣದಿಂದಲೂ ಹಾಡಿನ ಬಗ್ಗೆ ಅಭಿಮಾನಿಗಳಿಗೆ ಸಾಕಷ್ಟು ನಿರೀಕ್ಷೆ ಹುಟ್ಟಿದೆ.

ಇತ್ತೀಚೆಗೆ ‘ವಿಕ್ರಾಂತ್ ರೋಣ’ ಸಿನಿಮಾದ ಟ್ರೇಲರ್ ರಿಲೀಸ್ ಆಯಿತು. ಈ ಟ್ರೇಲರ್​ ಸಾಕಷ್ಟು ಸಸ್ಪೆನ್ಸ್​ನಿಂದ ಕೂಡಿದೆ. ಸಿನಿಮಾದಲ್ಲಿ ಸುದೀಪ್ ಪೊಲೀಸ್ ಪಾತ್ರ ಮಾಡಿದ್ದಾರೆ. ಸುದೀಪ್​ ಜತೆಗೆ ನಿರೂಪ್ ಭಂಡಾರಿ ಕೂಡ ನಟಿಸಿದ್ದಾರೆ. ಜಾಕ್ ಮಂಜು ನಿರ್ಮಾಣದ ಈ ಚಿತ್ರಕ್ಕೆ ಅನೂಪ್ ಭಂಡಾರಿ ಆ್ಯಕ್ಷನ್ ಕಟ್ ಹೇಳಿದ್ದಾರೆ.

ಇದನ್ನೂ ಓದಿ: ‘ವಿಕ್ರಾಂತ್ ರೋಣ’ ಚಿತ್ರದ ಪ್ರಚಾರದ ವೇಳೆ ಕಪ್ಪುಡುಗೆ ತೊಟ್ಟು ಮಿಂಚಿದ ಜಾಕ್ವೆಲಿನ್ ಫರ್ನಾಂಡಿಸ್

ಇದನ್ನೂ ಓದಿ

‘ವಿಕ್ರಾಂತ್ ರೋಣ’ ಸಿನಿಮಾ ಪ್ರಚಾರದ ಮಧ್ಯೆ ಇಡಿ ವಿಚಾರಣೆ ಎದುರಿಸಿದ ನಟಿ ಜಾಕ್ವೆಲಿನ್ ಫರ್ನಾಂಡಿಸ್​

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada