‘ಧನಂಜಯ ಮಂಡಿಯೂರಿ ಪ್ರಪೋಸ್ ಮಾಡಿದ್ದರಿಂದ ಆದ ತೊಂದರೆಗಳು ಒಂದೆರಡಲ್ಲ’; ಎಲ್ಲವನ್ನೂ ವಿವರಿಸಿದ ಅಮೃತಾ

ಈಗ ‘ಹೊಯ್ಸಳ’ ಸಿನಿಮಾದಲ್ಲಿ ಇಬ್ಬರೂ ಒಟ್ಟಾಗಿ ನಟಿಸುತ್ತಿದ್ದಾರೆ. ಈ ಕಾರಣದಿಂದಲೋ ಏನೋ ಇಬ್ಬರ ಬಗ್ಗೆ ಹಲವು ಗಾಸಿಪ್​ಗಳಿವೆ. ಆದರೆ, ಇದನ್ನು ಅಮೃತಾ ಅಲ್ಲಗಳೆಯುತ್ತಾರೆ.

‘ಧನಂಜಯ ಮಂಡಿಯೂರಿ ಪ್ರಪೋಸ್ ಮಾಡಿದ್ದರಿಂದ ಆದ ತೊಂದರೆಗಳು ಒಂದೆರಡಲ್ಲ’; ಎಲ್ಲವನ್ನೂ ವಿವರಿಸಿದ ಅಮೃತಾ
ಅಮೃತಾ-ಧನಂಜಯ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Jul 02, 2022 | 10:03 AM

ಸಿನಿಮಾ ಇಂಡಸ್ಟ್ರಿಯಲ್ಲಿ (Cinema Industry) ಸುದ್ದಿ ಹಾಗೂ ಗಾಸಿಪ್ ಎರಡಕ್ಕೂ ಬರಗಾಲವಿಲ್ಲ. ನಟಿಯರ ಬಗ್ಗೆ, ಹೀರೋಗಳ ಬಗ್ಗೆ, ಸಿನಿಮಾ ಅಪ್​ಡೇಟ್​ ಬಗ್ಗೆ ಹಲವು ಗಾಸಿಪ್​ಗಳು ಹರಿದಾಡುತ್ತಲೇ ಇರುತ್ತವೆ. ನಟಿ ಅಮೃತಾ ಅಯ್ಯಂಗಾರ್ (Amrutha Iyengar) ಹಾಗೂ ಡಾಲಿ ಧನಂಜಯ (Dhananjay ) ರಿಲೇಶನ್​ಶಿಪ್​ ಬಗ್ಗೆ ಈ ಮೊದಲಿನಿಂದಲೂ ವದಂತಿಗಳು ಇವೆ. ಅವರಿಬ್ಬರೂ ಲವರ್ಸ್​, ಇಬ್ಬರೂ ಮದುವೆ ಆಗಲಿದ್ದಾರೆ ಎನ್ನುವ ಮಾತು ಈ ಮೊದಲಿನಿಂದಲೂ ಕೇಳಿ ಬರುತ್ತಿದೆ. ಆದರೆ, ಅಮೃತಾ ಅಯ್ಯಂಗಾರ್ ಈ ವಿಚಾರವನ್ನು ಅಲ್ಲಗಳೆಯುತ್ತಲೇ ಬಂದಿದ್ದಾರೆ. ಈಗ ಟಿವಿ9 ಕನ್ನಡದ ಜತೆಗೆ ಮಾತನಾಡಿರುವ ಅವರು ಮತ್ತೊಮ್ಮೆ ಈ ವಿಚಾರದ ಬಗ್ಗೆ ಮಾತನಾಡಿದ್ದಾರೆ. ‘ಓರ್ವ ನಟನಾಗಿ ಧನಂಜಯ ಇಷ್ಟವಾಗುತ್ತಾರೆ’ ಎಂದಿದ್ದಾರೆ ಅಮೃತಾ.

ಧನಂಜಯ ಹಾಗೂ ಅಮೃತಾ ಅಯ್ಯಂಗಾರ್ ಮೊದಲ ಬಾರಿಗೆ ಒಟ್ಟಾಗಿ ನಟಿಸಿದ್ದು ‘ಪಾಪ್​ಕಾರ್ನ್ ಮಂಕಿ ಟೈಗರ್’ ಚಿತ್ರದಲ್ಲಿ. ಆ ಬಳಿಕ ‘ಬಡವ ರಾಸ್ಕಲ್​’ ಚಿತ್ರದಲ್ಲಿ ಇಬ್ಬರೂ ಮತ್ತೆ ಒಂದಾದರು. ಈಗ ‘ಹೊಯ್ಸಳ’ ಸಿನಿಮಾದಲ್ಲಿ ಇಬ್ಬರೂ ಒಟ್ಟಾಗಿ ನಟಿಸುತ್ತಿದ್ದಾರೆ. ಈ ಕಾರಣದಿಂದಲೋ ಏನೋ ಇಬ್ಬರ ಬಗ್ಗೆ ಹಲವು ಗಾಸಿಪ್​ಗಳಿವೆ. ಆದರೆ, ಇದನ್ನು ಅಮೃತಾ ಅಲ್ಲಗಳೆಯುತ್ತಾರೆ.

‘ನಾನು ಬಡವ ರಾಸ್ಕಲ್​ ಸಿನಿಮಾದಿಂದಲೂ ಹೇಳುತ್ತಾ ಬಂದಿದ್ದೇನೆ, ಧನು ಅವರು ನನಗೆ ಸ್ಫೂರ್ತಿ. ಆ ರೀತಿಯಿಂದ ಅವರು ತುಂಬಾ ಇಷ್ಟ ಆಗುತ್ತಾರೆ. ನಮ್ಮಿಬ್ಬರದ್ದು ಮೈಸೂರು. ರಂಗಭೂಮಿಯಲ್ಲಿದ್ದಾಗ ಸೈಡ್​​ಗೆ ಹೋಗು ಎಂದು ನಾನು ನಿನಗೆ ಹೇಳಿರಬಹುದು ಎಂದು ಧನು ನನ್ನನ್ನು ಆಗಾಗಾ ರೇಗಿಸುತ್ತಿರುತ್ತಾರೆ’ ಎನ್ನುತ್ತಾರೆ ಅಮೃತಾ.

ಇದನ್ನೂ ಓದಿ
Image
Bairagee Movie Review: ಮಚ್ಚು ಲಾಂಗು ಇಲ್ಲದೆ ಕೈಯಲ್ಲೇ ದುಷ್ಟರನ್ನು ನಾಶ ಮಾಡುವ ಎನರ್ಜಿಟಿಕ್ ‘ಬೈರಾಗಿ’
Image
ಡಾಲಿ ಧನಂಜಯ್​-ಅಮೃತಾ ಅಯ್ಯಂಗಾರ್​ ನಡುವೆ ಏನು ನಡೆಯುತ್ತಿದೆ? ನೇರ ಉತ್ತರ ನೀಡಿದ ನಟಿ
Image
Family Pack Movie Review: ‘ಫ್ಯಾಮಿಲಿ ಪ್ಯಾಕ್’ ತುಂಬ ಮನರಂಜನೆ, ಸ್ವಲ್ಪ ಎಮೋಷನ್ಸ್, ಒಂದಷ್ಟು ಫ್ಯಾಂಟಸಿ
Image
ಅಮೃತಾ ಅಯ್ಯಂಗಾರ್​ಗೆ ಡಾಲಿ ಧನಂಜಯ ಪ್ರಪೋಸ್​; ಖುಷಿಯಿಂದ ಕಮೆಂಟ್​​ ಮಾಡಿದ ಫ್ಯಾನ್ಸ್​

‘ಹಿಟ್ ಚಿತ್ರಗಳನ್ನು ಕೊಡುವಾಗಲೇ ಲಾಕ್​ಡೌನ್​ ಆಯ್ತು. ಆ ಸಂದರ್ಭದಲ್ಲಿ ಸಖತ್ ಬೇಸರ ಆಗುತ್ತಿತ್ತು. ನಮ್ಮ ಆಯಸ್ಸು ಇದರಲ್ಲೇ ಕಳೆದು ಹೋಗುತ್ತಾ ಎಂದು ಅನಿಸುತ್ತಿತ್ತು. ಆಗ ಧನಂಜಯ ನನ್ನನ್ನು ಮೋಟಿವೇಟ್ ಮಾಡಿದರು. ಅವರ ಬಗ್ಗೆ ನನಗೆ ಸಾಕಷ್ಟು ಗೌರವ ಇದೆ’ ಎಂದಿದ್ದಾರೆ ಅಮೃತಾ.

ಇತ್ತೀಚೆಗೆ ಜೀ ಕನ್ನಡ ವಾಹಿನಿಯಲ್ಲಿ ನಡೆದ ‘ಗೋಲ್ಡನ್ ಗ್ಯಾಂಗ್​’ ಕಾರ್ಯಕ್ರಮದಲ್ಲಿ ಧನಂಜಯ ಅವರು ಅಮೃತಾಗೆ ಪ್ರಪೋಸ್ ಮಾಡುವ ನಾಟಕ ಆಡಿದ್ದರು. ಮಂಡಿ ಊರಿ ಅಮೃತಾಗೆ ಗುಲಾಬಿ ಹೂ ನೀಡಿದ್ದರು. ಇದರಿಂದ ಸಾಕಷ್ಟು ಸಮಸ್ಯೆ ಆಗಿತ್ತು ಎಂಬುದನ್ನು ಅಮೃತಾ ಹೇಳಿಕೊಂಡಿದ್ದಾರೆ. ‘ಶೋನಲ್ಲಿ ಪ್ರಪೋಸ್ ಮಾಡಿದ ಘಟನೆಯಿಂದ ಧನಂಜಯ ಹಾಗೂ ನನ್ನ ಕುಟುಂಬದಲ್ಲಿ ಸಾಕಷ್ಟು ತೊಂದರೆಗಳು ಆದವು. ಸ್ಟೇಜ್​ಮೇಲೆ ಎಂಗೇಜ್​ಮೆಂಟ್ ಆಗೋಯ್ತಾ ಎಂಬ ಸುದ್ದಿಗಳು ಬಂದಾಗ ಸ್ವಲ್ಪ ಕಷ್ಟ ಆಯ್ತು. ನಾನು ಹೊರಗೆ ಹೋದಾಗ ಸರ್ ಚೆನ್ನಾಗಿದಾರಾ ಎಂದು ಫ್ಯಾನ್ಸ್ ಪ್ರಶ್ನೆ ಮಾಡುತ್ತಾರೆ. ಏನು ಉತ್ತರಿಸಬೇಕು ಎಂಬುದೇ ಗೊತ್ತಾಗುವುದಿಲ್ಲ. ಪ್ರಪೋಸ್ ಮಾಡಿದ ಘಟನೆ ಪರ್ಸನಲ್ ಲೈಫ್​ಗೆ ಹೊಡೆತ ಕೊಟ್ಟಿದೆ’ ಎಂದಿದ್ದಾರೆ ಅಮೃತಾ ಅಯ್ಯಂಗಾರ್.

ಇದನ್ನೂ ಓದಿ: ಅಮೃತಾ ಅಯ್ಯಂಗಾರ್​ಗೆ ಡಾಲಿ ಧನಂಜಯ ಪ್ರಪೋಸ್​; ಖುಷಿಯಿಂದ ಕಮೆಂಟ್​​ ಮಾಡಿದ ಫ್ಯಾನ್ಸ್​

ಡಾಲಿ ಧನಂಜಯ್​-ಅಮೃತಾ ಅಯ್ಯಂಗಾರ್​ ನಡುವೆ ಏನು ನಡೆಯುತ್ತಿದೆ? ನೇರ ಉತ್ತರ ನೀಡಿದ ನಟಿ

Published On - 10:03 am, Sat, 2 July 22