ಡಾಲಿ ಧನಂಜಯ್​-ಅಮೃತಾ ಅಯ್ಯಂಗಾರ್​ ನಡುವೆ ಏನು ನಡೆಯುತ್ತಿದೆ? ನೇರ ಉತ್ತರ ನೀಡಿದ ನಟಿ

Amrutha Iyengar | Daali Dhananjay: ಅಮೃತಾ ಅಯ್ಯಂಗಾರ್​ ಹಾಗೂ ಡಾಲಿ ಧನಂಜಯ್​ ನಡುವೆ ಹಲವು ವರ್ಷಗಳಿಂದ ಸ್ನೇಹ ಇದೆ. ಈ ಜೋಡಿಯ ಬಗ್ಗೆ ಕೇಳಿಬರುತ್ತಿರುವ ಗಾಸಿಪ್​ಗಳಿಗೆ ಅಮೃತಾ ಪ್ರತಿಕ್ರಿಯೆ ನೀಡಿದ್ದಾರೆ.

TV9kannada Web Team

| Edited By: Madan Kumar

Jun 16, 2022 | 9:03 AM

ನಟ ಡಾಲಿ ಧನಂಜಯ್​ (Daali Dhananjaya) ಅವರು ಬಹುಬೇಡಿಕೆಯ ಕಲಾವಿದನಾಗಿ ಗುರುತಿಸಿಕೊಂಡಿದ್ದಾರೆ. ಹಲವು ಸಿನಿಮಾಗಳಲ್ಲಿ ಅವರು ಬ್ಯುಸಿ ಆಗಿದ್ದಾರೆ. ನಟನಾಗಿ, ನಿರ್ಮಾಪಕನಾಗಿ, ಗೀತರಚನಕಾರನಾಗಿಯೂ ಅವರು ಡಿಮ್ಯಾಂಡ್​ ಸೃಷ್ಟಿಸಿಕೊಂಡಿದ್ದಾರೆ. ಈ ನಡುವೆ ಅವರು ನಟಿ ಅಮೃತಾ ಅಯ್ಯಂಗಾರ್​ (Amrutha Iyengar) ಜೊತೆ ಬ್ಯಾಕ್​ ಟು ಬ್ಯಾಕ್​ ಸಿನಿಮಾಗಳಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಇದರಿಂದ ಜನರಿಗೆ ಸಹಜವಾಗಿಯೇ ಅನುಮಾನ ಮೂಡಿದೆ. ಈ ಹಿಂದೆ ರಿಯಾಲಿಟಿ ಶೋನಲ್ಲಿ ಅವರು ಪ್ರಪೋಸ್​ ಮಾಡಿದಂತೆ ನಟಿಸಿದ್ದು ಕೂಡ ಸಖತ್​ ವೈರಲ್​ ಆಗಿತ್ತು. ಹಾಗಾದರೆ ಈ ಜೋಡಿಯ ನಡುವೆ ಏನು ನಡೆಯುತ್ತಿದೆ? ಈ ಪ್ರಶ್ನೆಗೆ ಅಮೃತಾ ಅಯ್ಯಂಗಾರ್​ ಅವರು ನೇರವಾಗಿ ಉತ್ತರ ನೀಡಿದ್ದಾರೆ. ‘ಅಬ್ಬಬ್ಬಾ’ ಚಿತ್ರದಲ್ಲಿ ನಟಿಸಿರುವ ಅಮೃತಾ ಅವರು ‘ಟಿವಿ9 ಕನ್ನಡ’ ಜತೆ ಮಾತಿಗೆ ಸಿಕ್ಕರು. ಈ ವೇಳೆ ತಮ್ಮ ಮತ್ತು ಧನಂಜಯ್​ ನಡುವಿನ ಆತ್ಮೀಯತೆಯ ಕುರಿತು ಅವರು ಪ್ರತಿಕ್ರಿಯೆ ನೀಡಿದ್ದಾರೆ.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Follow us on

Click on your DTH Provider to Add TV9 Kannada