‘ಅನೇಕ ಬಾರಿ ದೇವರಿಗೆ ಬೈದುಕೊಂಡಿದ್ದೇನೆ’; ದಾಂಪತ್ಯ ಜೀವನ ಮುರಿದುಬಿದ್ದ ಬಗ್ಗೆ ಮಾತನಾಡಿದ ನಟಿ ಸೋನು ಗೌಡ
ಸೋನು ಗೌಡ ಅವರು ಈ ಮೊದಲು ಮದುವೆ ಆಗಿದ್ದರು. ಟಿವಿ9 ಕನ್ನಡದ ಜತೆ ಮಾತನಾಡಿದ ಸೋನು ಗೌಡ ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ನಡೆದ ಕೆಲ ಘಟನೆಗಳನ್ನೂ ನೆನಪಿಸಿಕೊಂಡಿದ್ದಾರೆ.
ನಟಿ ಸೋನು ಗೌಡ ಅವರು (Sonu Gowda) ಸ್ಯಾಂಡಲ್ವುಡ್ನಲ್ಲಿ ಅನೇಕ ಸಿನಿಮಾಗಳಲ್ಲಿ ನಟಿಸಿದ್ದಾರೆ. ಅವರು ವೈಯಕ್ತಿಕ ವಿಚಾರದಿಂದಲೂ ಆಗಾಗ ಸುದ್ದಿ ಆಗುತ್ತಾರೆ. ಸೋನು ಗೌಡ ಅವರು ಈ ಮೊದಲು ಮದುವೆ ಆಗಿದ್ದರು. ಆದರೆ, ಅವರ ದಾಂಪತ್ಯ ಜೀವನ ಮುರಿದು ಬಿತ್ತು. ಈಗ ಅವರು ಚಿತ್ರರಂಗದಲ್ಲಿ ಆ್ಯಕ್ಟೀವ್ ಆಗಿದ್ದಾರೆ. ‘ವೆಡ್ಡಿಂಗ್ ಗಿಫ್ಟ್’ ಚಿತ್ರದಲ್ಲಿ (Wedding Movie) ಪ್ರೇಮಾ ಜತೆ ಅವರು ನಟಿಸಿದ್ದಾರೆ. ಈ ಸಿನಿಮಾದ ಟ್ರೇಲರ್ ಹಾಗು ಹಾಡನ್ನು ಚಿತ್ರತಂಡ ರಿಲೀಸ್ ಮಾಡಿದೆ. ಈ ಕಾರ್ಯಕ್ರಮ ಮುಗಿದ ಬಳಿಕ ಟಿವಿ9 ಕನ್ನಡದ ಜತೆ ಮಾತನಾಡಿದ ಸೋನು ಗೌಡ ಅವರು ತಮ್ಮ ವೈಯಕ್ತಿಕ ಜೀವನದಲ್ಲಿ ನಡೆದ ಕೆಲ ಘಟನೆಗಳನ್ನೂ ನೆನಪಿಸಿಕೊಂಡಿದ್ದಾರೆ. ಅವರು ಹೇಳಿದ ಮಾತು ಈ ವಿಡಿಯೋದಲ್ಲಿ.
ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.
Published on: Jun 15, 2022 08:17 PM
Latest Videos