Ramya Raghupathi: ‘ಮಹಿಳೆಯರ ಜತೆ ನರೇಶ್​ ಕೆಟ್ಟದಾಗಿ ಮಾತಾಡಿದ 400 ಕಾಲ್​ ರೆಕಾರ್ಡಿಂಗ್​ ಇದೆ’: ಗಂಡನಿಗೆ ರಮ್ಯಾ ರಘುಪತಿ ತಿರುಗೇಟು

Naresh | Pavitra Lokesh: ನಟ ನರೇಶ್​ ವ್ಯಕ್ತಿತ್ವದ ಬಗ್ಗೆ ಅವರ ಪತ್ನಿ ರಮ್ಯಾ ರಘುಪತಿ ಹಲವು ಆರೋಪ ಮಾಡುತ್ತಿದ್ದಾರೆ. ಇಬ್ಬರ ನಡುವಿನ ಜಗಳ ತಾರಕಕ್ಕೇರಿದೆ.

TV9kannada Web Team

| Edited By: Madan Kumar

Jul 01, 2022 | 7:10 AM

ಟಾಲಿವುಡ್​ ನಟ ನರೇಶ್​ ಮತ್ತು ಅವರ ಪತ್ನಿ ರಮ್ಯಾ ರಘುಪತಿ (Ramya Raghupathi) ನಡುವಿನ ಕಿತ್ತಾಟ ಬೇರೆ ಬೇರೆ ಸ್ವರೂಪ ಪಡೆದುಕೊಳ್ಳುತ್ತಿದೆ. ಇಷ್ಟು ದಿನ ಖಾಸಗಿಯಾಗಿ ಉಳಿದಿದ್ದ ಅವರಿಬ್ಬರ ಮನಸ್ತಾಪ ಈಗ ಜಗಜ್ಜಾಹೀರಾಗಿದೆ. ಪತಿ-ಪತ್ನಿ ಪರಸ್ಪರ ಆರೋಪ ಪ್ರತ್ಯಾರೋಪ ಮಾಡಿಕೊಳ್ಳುತ್ತಿದ್ದಾರೆ. ನರೇಶ್ ((Naresh)​ ಓರ್ವ ಹೆಣ್ಣುಬಾಕ ಎಂದು ರಮ್ಯಾ ಆರೋಪಿಸಿದ್ದರು. ‘ಹಾಗಿದ್ದರೂ ನನ್ನ ಮೇಲೆ ಓರ್ವ ಮಹಿಳೆ ಕೂಡ ಯಾಕೆ ಆರೋಪ ಮಾಡಿಲ್ಲ’ ಎಂದು ನರೇಶ್​ ಪ್ರಶ್ನೆ ಹಾಕಿದ್ದರು. ಅದಕ್ಕೆ ಉತ್ತರಿಸಿರುವ ರಮ್ಯಾ ರಘುಪತಿ ಅವರು ಈಗ ತಿರುಗೇಟು ನೀಡಿದ್ದಾರೆ. ‘ಆತನ 300-400 ಕೆಟ್ಟ ಕಾಲ್​ ರೆಕಾರ್ಡಿಂಗ್​ (Call Recording) ಇದೆ. ಅದನ್ನು ನ್ಯಾಯಾಲಯಕ್ಕೆ ನೀಡಿದ್ದೇವೆ’ ಎಂದು ಅವರು ಹೇಳಿದ್ದಾರೆ. ತಮ್ಮ ಮೇಲೆ ನರೇಶ್​ ಹೊರಿಸಿದ ಅನೇಕ ಆರೋಪಗಳನ್ನು ರಮ್ಯಾ ಅವರು ತಳ್ಳಿ ಹಾಕಿದ್ದಾರೆ.

ಇದನ್ನೂ ಓದಿ: ‘ನನಗೂ-ನರೇಶ್​​ಗೂ ಡಿವೋರ್ಸ್ ಆಗಿಲ್ಲ’; ಮೂರನೇ ಹೆಂಡತಿ ರಮ್ಯಾ ರಘುಪತಿ ಮಾತು

‘ನಮ್ಮಿಬ್ಬರ ನಡುವೆ ಗೆಳೆತನ ಇರುವುದು ನಿಜ’; ಪವಿತ್ರಾ ಲೋಕೇಶ್ ವಿಚಾರವಾಗಿ ಮೊದಲ ಬಾರಿಗೆ ಮೌನ ಮುರಿದ ನರೇಶ್​

Follow us on

Click on your DTH Provider to Add TV9 Kannada