Vijay Devarakonda: ಹುಡುಗಿ ಬೆನ್ನಲ್ಲಿ ವಿಜಯ್​ ದೇವರಕೊಂಡ ಟ್ಯಾಟೂ; ನೆಚ್ಚಿನ ಹೀರೋ ಮುಂದೆ ಯುವತಿ ಆನಂದಭಾಷ್ಪ

Tattoo: ಅಪರೂಪದ ಅಭಿಮಾನಿಯನ್ನು ವಿಜಯ್​ ದೇವರಕೊಂಡ ಭೇಟಿ ಆಗಿದ್ದಾರೆ. ನೆಚ್ಚಿನ ನಟನನ್ನು ಕಂಡು ಆ ಯುವತಿ ಆನಂದಭಾಷ್ಪ ಸುರಿಸಿದ್ದಾರೆ.

TV9kannada Web Team

| Edited By: Madan Kumar

Jul 01, 2022 | 9:38 AM

ಟಾಲಿವುಡ್​ ನಟ ವಿಜಯ್​ ದೇವರಕೊಂಡ ಅವರಿಗೆ ದೊಡ್ಡ ಫ್ಯಾನ್​ ಫಾಲೋಯಿಂಗ್​ ಇದೆ. ‘ಅರ್ಜುನ್​ ರೆಡ್ಡಿ’, ‘ಗೀತ ಗೋವಿಂದಂ’ ಮುಂತಾದ ಸಿನಿಮಾಗಳ ಮೂಲಕ ಅವರು ಜನಪ್ರಿಯತೆ ಪಡೆದಿದ್ದಾರೆ. ಈಗ ಅವರ ‘ಲೈಗರ್​’ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಅನೇಕ ಯುವತಿಯರಿಗೆ ವಿಜಯ್ ದೇವರಕೊಂಡ ಎಂದರೆ ಪಂಚಪ್ರಾಣ. ಲೇಡಿ ಫ್ಯಾನ್​ ಒಬ್ಬರು ವಿಜಯ್ ದೇವರಕೊಂಡ ಅವರ ಚಿತ್ರವನ್ನು ಬೆನ್ನಿನ ಮೇಲೆ ಟ್ಯಾಟೂ ಹಾಕಿಸಿಕೊಂಡಿದ್ದಾರೆ. ಆ ಅಭಿಮಾನಿಯನ್ನು ಅವರು ಇತ್ತೀಚೆಗೆ ಭೇಟಿ ಆಗಿದ್ದಾರೆ. ನೆಚ್ಚಿನ ನಟನನ್ನು ಕಂಡ ಖುಷಿಗೆ ಆ ಯುವತಿ ಆನಂದಭಾಷ್ಪ ಸುರಿಸಿದ್ದಾರೆ. ಸದ್ಯ ಈ ವಿಡಿಯೋ ವೈರಲ್​ ಆಗಿದೆ. ‘ಲೈಗರ್​’ ಸಿನಿಮಾ ರೀತಿಯೇ ವಿಜಯ್​ ದೇವರಕೊಂಡ ಅವರ ‘ಜನ ಗಣ ಮನ’ ಚಿತ್ರ ಕೂಡ ಹೈಪ್​ ಸೃಷ್ಟಿಸಿದೆ.

ಇದನ್ನೂ ಓದಿ: JGM Movie: ‘ಜೆಜಿಎಮ್​’ ಚಿತ್ರೀಕರಣ ಆರಂಭ; ವಿಜಯ್ ದೇವರಕೊಂಡ ಜತೆ ತೆರೆ ಹಂಚಿಕೊಳ್ಳಲಿರುವ ಪೂಜಾ ಹೆಗ್ಡೆ

Samantha: ವಿಜಯ್ ದೇವರಕೊಂಡಗೆ ಲಿಪ್​ಲಾಕ್​ ಮಾಡಲಿದ್ದಾರೆ ಸಮಂತಾ; ಫ್ಯಾನ್ಸ್ ಕಾತರ ಹೆಚ್ಚಿಸಿದ ಹೊಸ ಸುದ್ದಿ

Follow us on

Click on your DTH Provider to Add TV9 Kannada