JGM Movie: ‘ಜೆಜಿಎಮ್​’ ಚಿತ್ರೀಕರಣ ಆರಂಭ; ವಿಜಯ್ ದೇವರಕೊಂಡ ಜತೆ ತೆರೆ ಹಂಚಿಕೊಳ್ಳಲಿರುವ ಪೂಜಾ ಹೆಗ್ಡೆ

JGM Movie: ‘ಜೆಜಿಎಮ್​’ ಚಿತ್ರೀಕರಣ ಆರಂಭ; ವಿಜಯ್ ದೇವರಕೊಂಡ ಜತೆ ತೆರೆ ಹಂಚಿಕೊಳ್ಳಲಿರುವ ಪೂಜಾ ಹೆಗ್ಡೆ
‘ಜೆಜಿಎಮ್’ ಚಿತ್ರತಂಡ

Vijay Deverakonda | Pooja Hegde: ವಿಜಯ್ ದೇವರಕೊಂಡ ಹಾಗೂ ಪೂಜಾ ಹೆಗ್ಡೆ ಮೊದಲ ಬಾರಿಗೆ ತೆರೆಹಂಚಿಕೊಳ್ಳುತ್ತಿರುವ ‘ಜೆಜಿಎಮ್​’ ಚಿತ್ರದ ಚಿತ್ರೀಕರಣ ಆರಂಭವಾಗಿದೆ. ಪುರಿ ಜಗನ್ನಾಥ್ ಚಿತ್ರಕ್ಕೆ ಆಕ್ಷನ್ ಕಟ್ ಹೇಳುತ್ತಿದ್ದಾರೆ.

TV9kannada Web Team

| Edited By: shivaprasad.hs

Jun 04, 2022 | 7:06 PM

ವಿಜಯ್ ದೇವರಕೊಂಡ (Vijay Deverakonda) ನಟನೆಯ ‘ಜೆಜಿಎಮ್’ (‘ಜನಗಣಮನ’: JGM Movie) ಈಗಾಗಲೇ ಕುತೂಹಲ ಮೂಡಿಸಿದೆ. ಇದೀಗ ಕರಾವಳಿ ಮೂಲದ ಬೆಡಗಿ ಪೂಜಾ ಹೆಗ್ಡೆ (Pooja Hegde) ಚಿತ್ರತಂಡ ಸೇರಿಕೊಂಡಿದ್ದಾರೆ. ವಿಜಯ್ ಹಾಗೂ ಪೂಜಾ ಮೊದಲ ಬಾರಿಗೆ ತೆರೆ ಹಂಚಿಕೊಳ್ಳುತ್ತಿದ್ದು, ಪುರಿ ಜಗನ್ನಾಥ್ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಇಂದು (ಶನಿವಾರ) ‘ಜೆಜಿಎಮ್​’ ಚಿತ್ರೀಕರಣವನ್ನು ಆರಂಭಿಸಲಾಗಿದ್ದು, ಕಾರ್ಯಕ್ರಮದ ವಿಡಿಯೋವನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಬಾಕ್ಸಾಫೀಸ್ ವಿಶ್ಲೇಷಕ ತರಣ್ ಆದರ್ಶ್ ಈ ಬಗ್ಗೆ ಟ್ವೀಟ್ ಹಂಚಿಕೊಂಡಿದ್ದು, ‘ವಿಶ್ವದ ಹಲವು ಭಾಗಗಳಲ್ಲಿ ‘ಜೆಜಿಎಮ್​’ ಚಿತ್ರೀಕರಣವಾಗಲಿದೆ. ಇದೀಗ ಮುಂಬೈನಲ್ಲಿ ಸಿನಿಮಾದ ಮುಹೂರ್ತ ಕಾರ್ಯಕ್ರಮ ನಡೆದಿದೆ’ ಎಂದು ಮಾಹಿತಿ ನೀಡಿದ್ದಾರೆ. ಚಿತ್ರೀಕರಣ ಆರಂಭದ ವಿಡಿಯೋವನ್ನು ಪುರಿ ಜಗನ್ನಾಥ್ ಯುಟ್ಯೂಬ್​ ಚಾನಲ್​ನಲ್ಲಿ ಹಂಚಿಕೊಳ್ಳಲಾಗಿದೆ.

ಚಿತ್ರೀಕರಣ ಆರಂಭದ ವಿಡಿಯೋ ಇಲ್ಲಿದೆ:

‘ಜೆಜಿಎಮ್​’ ಚಿತ್ರಕ್ಕೆ ಪುರಿ ಜಗನ್ನಾಥ್ ಕತೆ, ಚಿತ್ರಕತೆ, ಸಂಭಾಷಣೆ ಬರೆದು ನಿರ್ದೇಶನದ ಜವಾಬ್ದಾರಿ ಹೊತ್ತಿದ್ದಾರೆ. ಚಾರ್ಮೆ ಕೌರ್, ವಂಶಿ ಪೈಡಿಪಲ್ಲಿ ಹಾಗೂ ಪುರಿ ಜಗನ್ನಾಥ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. ಚಿತ್ರವು ತೆಲುಗು, ಕನ್ನಡ, ಹಿಂದಿ, ಮಲಯಾಳಂ ಹಾಗೂ ತಮಿಳಿನಲ್ಲಿ ಮುಂದಿನ ವರ್ಷದ ಆಗಸ್ಟ್​​ 3ರಂದು ತೆರೆಕಾಣಲಿದೆ.

ಹಲವು ಪ್ಯಾನ್ ಇಂಡಿಯಾ ಸಿನಿಮಾಗಳಲ್ಲಿ ಬ್ಯುಸಿಯಾದ ವಿಜಯ್ ದೇವರಕೊಂಡ:

‘ಜೆಜಿಎಮ್​’ ಚಿತ್ರದ ಹೊರತಾಗಿ ವಿಜಯ್ ದೇವರಕೊಂಡ ‘ಲೈಗರ್’ ಚಿತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಬಾಕ್ಸಿಂಗ್ ಲೆಜೆಂಡ್ ಮೈಕ್ ಟೈಸನ್​ ಕೂಡ ನಟಿಸುತ್ತಿರುವ ಈ ಚಿತ್ರಕ್ಕೆ ಅನನ್ಯಾ ಪಾಂಡೆ ನಾಯಕಿಯಾಗಿದ್ದಾರೆ. ಧರ್ಮ ಪ್ರೊಡಕ್ಷನ್ಸ್ ನಿರ್ಮಾಣದ ಈ ಪ್ಯಾನ್ ಇಂಡಿಯಾ ಚಿತ್ರ ಆಗಸ್ಟ್​ 25ರಂದು ರಿಲೀಸ್ ಆಗಲಿದೆ.

ಸಮಂತಾ ಜತೆ ‘ಖುಷಿ’ ಚಿತ್ರದಲ್ಲೂ ವಿಜಯ್ ದೇವರಕೊಂಡ ನಟಿಸುತ್ತಿದ್ದಾರೆ. ಈ ಸಿನಿಮಾದ ಕೆಲಸಗಳು ನಡೆಯುತ್ತಿದ್ದು, ಡಿಸೆಂಬರ್ 23ರಂದು ರಿಲೀಸ್ ಆಗಲಿದೆ. ಕನ್ನಡ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ಚಿತ್ರ ರಿಲೀಸ್ ಆಗಲಿದೆ.

ಇತ್ತ ಪೂಜಾ ಹೆಗ್ಡೆ ‘ರಾಧೆ ಶ್ಯಾಮ್’ ಚಿತ್ರದಲ್ಲಿ ಬಣ್ಣಹಚ್ಚಿದ್ದರು. ಸಲ್ಮಾನ್ ಖಾನ್ ನಟನೆಯ ‘ಕಭಿ ಈದ್ ಕಭಿ ದಿವಾಲಿ’ ಚಿತ್ರದಲ್ಲಿ ಪೂಜಾ ನಟಿಸುತ್ತಿದ್ದಾರೆ. ರಣವೀರ್ ಸಿಂಗ್ ಜತೆಗೆ ‘ಸರ್ಕಸ್’ನಲ್ಲೂ ಕಾಣಿಸಿಕೊಳ್ಳುತ್ತಿದ್ದಾರೆ.

ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಇದನ್ನೂ ಓದಿ

Follow us on

Related Stories

Most Read Stories

Click on your DTH Provider to Add TV9 Kannada