ಹ್ಯಾಟ್ರಿಕ್ ಹೀರೋ ಶಿವರಾಜ್ಕುಮಾರ್, ಡಾಲಿ ಧನಂಜಯ್, ಪೃಥ್ವಿ ಅಂಬರ್ ಅಭಿನಯದ ‘ಬೈರಾಗಿ’ (Bairagee) ಚಿತ್ರ ದೊಡ್ಡ ಮಟ್ಟದ ನಿರೀಕ್ಷೆ ಮೂಡಿಸಿದೆ. ಇತ್ತೀಚೆಗೆ ಚಿತ್ರತಂಡ ಮೊದಲ ಹಾಡು ‘ರಿದಮ್ ಆಫ್ ಶಿವಪ್ಪ’ ರಿಲೀಸ್ ಮಾಡಿದೆ. ಆ ಹಾಡು ಹಿಟ್ ಆಗಿರುವುದಲ್ಲದೇ ಚಿತ್ರದ ಬಗ್ಗೆ ಕುತೂಹಲ ಹುಟ್ಟಿಸಿದೆ. ವಿಜಯ್ ಮಿಲ್ಟನ್ ನಿರ್ದೇಶನದ ಚಿತ್ರಕ್ಕೆ ಅನೂಪ್ ಸೀಳಿನ್ ಸಂಗೀತ ನೀಡಿದ್ದಾರೆ. ಹಾಡನ್ನು ಹಾಡಿದವರು ಶರಣ್ ಹಾಗೂ ಶಿವರಾಜ್ಕುಮಾರ್. ಇದೀಗ ಶಿವಣ್ಣ (Shivarajkumar) ಹಾಡಿನ ಬಗ್ಗೆ ಅಚ್ಚರಿಯ ವಿಚಾರ ಹೊರಹಾಕಿದ್ದಾರೆ. ವಾಸ್ತವವಾಗಿ ಶಿವಣ್ಣ ಹಾಗೂ ಪುನೀತ್ ರಾಜ್ಕುಮಾರ್ ಈ ಹಾಡನ್ನು ಹಾಡಬೇಕಿತ್ತಂತೆ. ಆದರೆ ಆ ಭಾಗ್ಯ ನಮಗೆ ಸಿಗಲಿಲ್ಲ ಎಂದಿದ್ದಾರೆ ಅವರು. ಶಿವರಾಜ್ಕುಮಾರ್ ಈ ಬಗ್ಗೆ ಮಾತನಾಡುತ್ತಾ, ‘‘ಬೈರಾಗಿ ಚಿತ್ರವೇ ಭಿನ್ನವಾದ ಚಿತ್ರವಾಗಿದ್ದು, ‘ರಿದಮ್ ಆಫ್ ಶಿವಪ್ಪ’ ಕೂಡ ಬಹಳ ಡಿಫರೆಂಟ್ ಆಗಿದೆ. ಆ ಹಾಡನ್ನು ನಾನು ಮತ್ತು ಅಪ್ಪು ಹಾಡಬೇಕಿತ್ತು. ಈ ಹಾಡನ್ನು ಅಪ್ಪು ಕೇಳಿ 2 ದಿನ ಆದ ಮೇಲೆ ಬರುತ್ತೇನೆ. ಒಟ್ಟಿಗೆ ಹಾಡೋಣ ಎಂದಿದ್ದ. ಆದರೆ ಆ ಭಾಗ್ಯ ಬರಲಿಲ್ಲ’’ ಎಂದಿದ್ದಾರೆ.
ನಂತರ ಶರಣ್ ಅವರ ಹಾಡನ್ನು ಹಾಡಿದರು. ಪುನೀತ್ಗೂ ಅವರ ಧ್ವನಿ ಬಹಳ ಇಷ್ಟ. ಶರಣ್ ಒಳ್ಳೆಯ ಸಿಂಗರ್ ಕೂಡ. ಹೀಗಾಗಿ ಅವರೇ ಹಾಡನ್ನೂ ಹಾಡಿದರು. ಬಹಳ ಅದ್ಭುತವಾಗಿ ಮೂಡಿಬಂದಿದೆ ಎಂದಿದ್ದಾರೆ ಶಿವಣ್ಣ.
ಮತ್ತಷ್ಟು ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ