ತುಮಕೂರು ಜೈಲಿಗೆ ತೆರಳಿ ಪಕ್ಷದ ಕಾರ್ಯಕರ್ತರನ್ನು ಶಿವಕುಮಾರ ಮಾತಾಡಿಸಿದರು

ತುಮಕೂರು ಜೈಲಿಗೆ ತೆರಳಿ ಪಕ್ಷದ ಕಾರ್ಯಕರ್ತರನ್ನು ಶಿವಕುಮಾರ ಮಾತಾಡಿಸಿದರು

TV9 Web
| Updated By: ಅರುಣ್​ ಕುಮಾರ್​ ಬೆಳ್ಳಿ

Updated on: Jun 04, 2022 | 8:04 PM

ಪಕ್ಷದ ಕಿರಿಯ ಸ್ತರದ ಕಾರ್ಯಕರ್ತರು ಪ್ರತಿಭಟನೆ ನಡೆಸುವಾಗ ಪೊಲೀಸರು ಬಂಧಿಸಿ ಜೈಲಿಗೆ ಒಯ್ದಾಗ ಅವರನ್ನು ಭೇಟಿಯಾಗಲು ಹಿರಿಯ ನಾಯಕರು, ಪಕ್ಷದ ಅಧ್ಯಕ್ಷ ಸ್ಥಾನದಲ್ಲಿರುವವರು ಹೋಗೋದು ಬಹಳ ಅಪರೂಪ.

Tumakuru: ಕೆಪಿಸಿಸಿ ಅಧ್ಯಕ್ಷ ಡಿಕೆ ಶಿವಕುಮಾರ (DK Shivakumar) ಅವರು ನಿಸ್ಸಂದೇಹವಾಗಿ ಉತ್ತಮ ನಾಯಕತ್ವದ ಗುಣಗಳನ್ನು ಪ್ರದರ್ಶಿಸುತ್ತಿದ್ದಾರೆ ಅಂತ ರಾಜಕೀಯ ವಲಯಗಳಲ್ಲಿ ಚರ್ಚೆಯಾಗುತ್ತಿದೆ. ದೇವನಹಳ್ಳಿಯಲ್ಲಿ (Devanahalli) ಗುರುವಾರ ಮತ್ತು ಶುಕ್ರವಾರ-ಎರಡು ದಿನಗಳ ಕಾಲ ದೇವನಹಳ್ಳಿಯಲ್ಲಿ ನಡೆದ ಕರ್ನಾಟಕ ಕಾಂಗ್ರೆಸ್ ನವ ಸಂಕಲ್ಪ ಶಿಬಿರದಲ್ಲೂ ಅವರು ಗೆಲುವುನಿಂದ ಬೀಗುತ್ತಿದ್ದರು. ರಾಜ್ಯಸಭೆ ಚುನಾವಣೆಯಲ್ಲಿ (RS polls) ಪಕ್ಷದ ವತಿಯಿಂದ ಎರಡನೇ ಅಭ್ಯರ್ಥಿ ಬೇಡ ಅಂತ ಅನ್ನುತ್ತಿದ್ದರೂ ಹೈಕಮಾಂಡ್ ನ ಆದೇಶ ಎಂದು ಹೇಳಿ ಸಿದ್ದರಾಮಯ್ಯ, ಮನ್ಸೂರ್ ಅಲಿಖಾನ್ ಅವರನ್ನು ಕಣಕ್ಕಳಿಸಿದ ಬಳಿಕ ಅವರ ಮತ್ತು ಶಿವಕುಮಾರ ನಡುವಿನ ಭಿನ್ನಾಭಿಪ್ರಾಯಗಳು ಮತ್ತಷ್ಟು ಬಿಗಡಾಯಿಸಲಿದೆ ಅಂತ ಮಾತಾಡಿಕೊಳ್ಳಲಾಗುತಿತ್ತು. ಆದರೆ ಶಿವಕುಮಾರ ಅದಕ್ಕೆ ಅವಕಾಶ ನೀಡಲಿಲ್ಲ.

ಪಕ್ಷದ ಕಿರಿಯ ಸ್ತರದ ಕಾರ್ಯಕರ್ತರು ಪ್ರತಿಭಟನೆ ನಡೆಸುವಾಗ ಪೊಲೀಸರು ಬಂಧಿಸಿ ಜೈಲಿಗೆ ಒಯ್ದಾಗ ಅವರನ್ನು ಭೇಟಿಯಾಗಲು ಹಿರಿಯ ನಾಯಕರು, ಪಕ್ಷದ ಅಧ್ಯಕ್ಷ ಸ್ಥಾನದಲ್ಲಿರುವವರು ಹೋಗೋದು ಬಹಳ ಅಪರೂಪ. ತಿಪಟೂರಿನಲ್ಲಿರುವ ಬಿಸಿ ನಾಗೇಶ ಅವರ ಮನೆಗೆ ಎನ್ ಎಸ್ ಯು ಐ ಕಾರ್ಯಕರ್ತರು ಶುಕ್ರವಾರ ಮುತ್ತಿಗೆ ಹಾಕಿದ ಕಾರಣ ಪೊಲೀಸರು ಬಂಧಿಸಿ ತುಮಕೂರಿನ ಜೈಲಿನಲ್ಲಿರಿಸಿದ್ದಾರೆ. ಅವರನ್ನು ಭೇಟಿಯಾಗಿ ಮಾತಾಡಿಸಲು ಶಿವಕುಮಾರ ಶನಿವಾರ ಬೆಳಗ್ಗೆ ಆಗಮಿಸಿದರು. ಅವರು ಜೈಲಿಗೆ ಬಂದಿರುವುದನ್ನು ಈ ವಿಡಿಯೋನಲ್ಲಿ ನೀವು ನೋಡಬಹುದು. ಒಳಗಿದ್ದ ಕಾರ್ಯಕರ್ತರಿಗೆ ಅವರು ಹಣ್ಣು-ಬಿಸ್ಕತ್ತು ನೀಡಿ ಧೈರ್ಯ ಹೇಳಿದರೆಂಬ ಮಾಹಿತಿ ಇದೆ.

ಪಕ್ಷದ ಹಲವಾರು ಕಾರ್ಯಕರ್ತರು ಅವರ ಆಗಮನಕ್ಕಾಗಿ ಕಾಯುತ್ತಿದ್ದರು. ಅವರೊಂದಿಗೆ ಜೈಲಿನೊಳಗೆ ಯಾರೂ ಬರುವುದು ಬೇಡ ಅಂತ ಪೊಲೀಸರು ಹೇಳಿದ್ದರಿಂದ ಯಾರೂ ತಮ್ಮೊಂದಿಗೆ ಬರೋದು ಬೇಡ ಅಂತ ಹೇಳುವುದು ವಿಡಿಯೋನಲ್ಲಿ ಕೇಳಿಸುತ್ತದೆ. ಶಿವಕುಮಾರ ಅವರೊಂದಿಗೆ ಬಿ ವಿ ಶ್ರೀನಿವಾಸ ಮತ್ತು ಶಾಸಕ ರಂಗನಾಥ ಇದ್ದರು.

ರಾಜ್ಯದ ಇನ್ನಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ. ಪ್ರಮುಖ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.