JGM: ವಿಜಯ್ ದೇವರಕೊಂಡ- ಪುರಿ ಜಗನ್ನಾಥ್ ಕಾಂಬಿನೇಷನ್​ನಲ್ಲಿ ಹೊಸ ಚಿತ್ರ ಅನೌನ್ಸ್​; ರಿಲೀಸ್​ ಯಾವಾಗ?

Vijay Deverakonda | Puri Jagannadh: ‘ಲೈಗರ್’ ಚಿತ್ರದ ರಿಲೀಸ್​ಗೂ ಮುನ್ನವೇ ವಿಜಯ್ ದೇವರಕೊಂಡ ಹಾಗೂ ಪುರಿ ಜಗನ್ನಾಥ್ ಕಾಂಬಿನೇಷನ್​ನಲ್ಲಿ ಹೊಸ ಚಿತ್ರ ಅನೌನ್ಸ್ ಆಗಿದೆ. 2023ರ ಆಗಸ್ಟ್ 3ರಂದು ತೆರೆಗೆ ಬರಲು ಚಿತ್ರತಂಡ ಯೋಜಿಸಿದೆ.

JGM: ವಿಜಯ್ ದೇವರಕೊಂಡ- ಪುರಿ ಜಗನ್ನಾಥ್ ಕಾಂಬಿನೇಷನ್​ನಲ್ಲಿ ಹೊಸ ಚಿತ್ರ ಅನೌನ್ಸ್​; ರಿಲೀಸ್​ ಯಾವಾಗ?
‘ಜೆಜಿಎಮ್​’ ಪೋಸ್ಟರ್
Follow us
TV9 Web
| Updated By: shivaprasad.hs

Updated on:Mar 29, 2022 | 3:51 PM

ವಿಜಯ್ ದೇವರಕೊಂಡ ಹಾಗೂ ಪುರಿ ಜಗನ್ನಾಥ್ ಕಾಂಬಿನೇಷನ್​ನಲ್ಲಿ ‘ಲೈಗರ್’ (Liger) ಚಿತ್ರ ಬರುತ್ತಿರುವುದು ಗೊತ್ತೇ ಇದೆ. ಪ್ಯಾನ್ ಇಂಡಿಯಾ ಮಾದರಿಯ ಈ ಚಿತ್ರ ರಿಲೀಸ್​ಗೂ ಮುನ್ನವೇ ಹೊಸ ಚಿತ್ರವನ್ನು ಅನೌನ್ಸ್ ಮಾಡಿದ್ದಾರೆ ಪುರಿ ಹಾಗೂ ವಿಜಯ್ ಜೋಡಿ. ಹೌದು, ಇಂದು ಮುಂಬೈನಲ್ಲಿ ನಡೆದ ಅದ್ದೂರಿ ಕಾರ್ಯಕ್ರಮದಲ್ಲಿ ಚಿತ್ರತಂಡ ಹೊಸ ಚಿತ್ರವನ್ನು ಅನೌನ್ಸ್ ಮಾಡಿದ್ದು, ರಿಲೀಸ್ ದಿನಾಂಕವನ್ನೂ ಘೋಷಿಸಿದೆ. ವಿಜಯ್ ದೇವರಕೊಂಡ (Vijay Deverakonda) ಹಿಂದೆಂದೂ ಕಾಣದಂತಹ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದು, ಮಿಲಿಟರಿ ಆಫೀಸರ್ ಆಗಿ ಬಣ್ಣಹಚ್ಚಲಿದ್ದಾರೆ. ಇದಕ್ಕೆ ತಕ್ಕಂತೆ ಅವರು ಮಿಲಿಟರಿ ವೇಷದಲ್ಲಿಯೇ ಕಾರ್ಯಕ್ರಮಕ್ಕೂ ಆಗಮಿಸಿದ್ದು ಎಲ್ಲರ ಗಮನ ಸೆಳೆಯಿತು. ಈ ಹೊಸ ಚಿತ್ರಕ್ಕೆ ‘ಜೆಜಿಎಮ್​’ (JGM) ಎಂದು ಹೆಸರಿಡಲಾಗಿದೆ. ವರದಿಗಳ ಪ್ರಕಾರ ಜೆಜಿಎಮ್​ ಎಂದರೆ ‘ಜನ ಗಣ ಮನ’. 2023ರ ಆಗಸ್ಟ್ 3ರಂದು ವಿಶ್ವಾದ್ಯಂತ ಈ ಚಿತ್ರ ರಿಲೀಸ್ ಆಗಲಿದೆ.

ಚಿತ್ರದ ಬಗ್ಗೆ ಮಾತನಾಡಿದ ವಿಜಯ್ ದೇವರಕೊಂಡ, ‘‘ಇದು ಚಾಲೆಂಜಿಂಗ್ ಸ್ಕ್ರಿಪ್ಟ್ ಆಗಿದ್ದು ಕಾತರನಾಗಿದ್ದೇನೆ. ಪ್ರತಿಯೊಬ್ಬ ಭಾರತೀಯನಿಗೆ ಈ ಸ್ಟೋರಿ ಕನೆಕ್ಟ್ ಆಗಲಿದೆ. ಪುರಿ ಜಗನ್ನಾಥ್ ಕನಸಿನ ಚಿತ್ರ ಇದಾಗಿದ್ದು, ಶೂಟಿಂಗ್ ಆರಂಭವಾಗಲು ಎದುರು ನೋಡುತ್ತಿದ್ದೇನೆ’’ ಎಂದಿದ್ದಾರೆ.

ಚಿತ್ರದ ಮೊದಲ ಪೋಸ್ಟರ್ ಗಮನ ಸೆಳೆದಿದ್ದು, ಸೈನಿಕರ ಚಿತ್ರಗಳನ್ನು ಒಳಗೊಂಡಿದೆ. ಜತೆಗೆ ಭಾರತದ ನಕಾಶೆಯನ್ನೂ ಒಳಗೊಂಡಿದ್ದು ಕುತೂಹಲ ಮೂಡಿಸಿದೆ. ಗುಂಡುಗಳು ಹಾರಾಡುತ್ತಿದ್ದು, ದೊಡ್ಡ ಮಟ್ಟದ ಆಕ್ಷನ್ ಚಿತ್ರ ಇದಾಗಿದೆ ಎನ್ನುವುದರ ಕುರುಹು ನೀಡಿದೆ.​​

ಜೆಜಿಎಮ್​ ಅನೌನ್ಸ್ ಮಾಡಿ ವಿಜಯ್ ದೇವರಕೊಂಡ ಟ್ವೀಟ್:

ಚಿತ್ರ ಅನೌನ್ಸ್ ಆದ ನಂತರ ಮಾತನಾಡಿದ ನಿರ್ದೇಶಕ ಪುರಿ ಜಗನ್ನಾಥ್, ‘‘ಇದೊಂದು ದೊಡ್ಡ ಮಟ್ಟದಲ್ಲಿ ಮೂಡಿಬರಲಿರುವ ಆಕ್ಷನ್ ಚಿತ್ರ. ವಿಜಯ್ ದೇವರಕೊಂಡ ಜತೆ ಮತ್ತೆ ಕೆಲಸ ಮಾಡಲು ಖುಷಿಯಾಗುತ್ತಿದೆ’’ ಎಂದಿದ್ದಾರೆ. ಈ ಚಿತ್ರಕ್ಕಾಗಿ ವಿಜಯ್ ದೇವರಕೊಂಡ ‘ಲೈಗರ್’ ಚಿತ್ರದ ಬಾಕ್ಸರ್ ಅವತಾರದಿಂದ ಸೈನಿಕನ ಪಾತ್ರಕ್ಕೆ ಸಂಪೂರ್ಣ ಬದಲಾಗಲಿದ್ದಾರೆ.

Vijay Deverakonda

‘ಜೆಜಿಎಮ್’ ಸಿನಿಮಾ ಅನೌನ್ಸ್ ಕಾರ್ಯಕ್ರಮಕ್ಕೆ ವಿಜಯ್ ದೇವರಕೊಂಡ ಆಗಮಿಸಿದ್ದು ಹೀಗೆ

‘ಜೆಜಿಎಮ್​’ ಚಿತ್ರವು ತೆಲುಗು, ಕನ್ನಡ, ಹಿಂದಿ, ಮಲಯಾಳಂ ಹಾಗೂ ತಮಿಳಿನಲ್ಲಿ ತೆರೆಕಾಣಲಿದೆ. ಪುರಿ ಜಗನ್ನಾಥ್ ಚಿತ್ರಕತೆ ಹಾಗೂ ಸಂಭಾಷಣೆಯ ಜತೆಗೆ ನಿರ್ದೇಶನ ಮಾಡಲಿದ್ದಾರೆ. ಚಾರ್ಮೆ ಕೌರ್, ವಂಶಿ ಪೈಡಿಪಲ್ಲಿ ಹಾಗೂ ಪುರಿ ಜಗನ್ನಾಥ್ ಚಿತ್ರವನ್ನು ನಿರ್ಮಾಣ ಮಾಡುತ್ತಿದ್ದಾರೆ. 2022ರ ಏಪ್ರಿಲ್​ನಿಂದ ಚಿತ್ರೀಕರಣ ಆರಂಭಿಸಲು ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ವಿಶ್ವದ ಹಲವೆಡೆ ಶೂಟಿಂಗ್ ನಡೆಯಲಿದೆ.

ಇದನ್ನೂ ಓದಿ:

ರಣಬೀರ್ ಪತ್ನಿ ಪಾತ್ರದಲ್ಲಿ ರಶ್ಮಿಕಾ? ‘ಅರ್ಜುನ್ ರೆಡ್ಡಿ’ ನಿರ್ದೇಶಕನ ಹೊಸ ಚಿತ್ರದ ಬಗ್ಗೆ ಅಚ್ಚರಿಯ ಮಾಹಿತಿ ಬಹಿರಂಗ

ಕುಕ್ಕೆ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ನಟ ಪವನ್ ಕಲ್ಯಾಣ್​ ಭೇಟಿ; ಇಲ್ಲಿದೆ ವಿಡಿಯೋ

Published On - 3:36 pm, Tue, 29 March 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ