ನವದೆಹಲಿ: ಅಕ್ರಮ ಹಣ ವರ್ಗಾವಣೆಗೆ ಸಂಬಂಧಿಸಿದಂತೆ ಜಾಮೀನು ಅರ್ಜಿ ಸಲ್ಲಿಸಿರುವ ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (KPCC) ಅಧ್ಯಕ್ಷ ಡಿಕೆ ಶಿವಕುಮಾರ (DK Shivakumar) ಶುಕ್ರವಾರ ಬೆಳಗ್ಗೆ ದೆಹಲಿಯಲ್ಲಿರುವ ಜಾರಿ ನಿರ್ದೇಶನಾಲಯ (Enforcement Directorate) ವಿಶೇಷ ನ್ಯಾಯಾಲಯದ ಎದುರು ಹಾಜರಾದ ಬಳಿಕ ಕೋರ್ಟ್ ಅವರ ಅರ್ಜಿ ವಿಚಾರಣೆಯನ್ನು ಜುಲೈ 30 ಕ್ಕೆ ಮುಂದೂಡಿತು. ಶಿವಕುಮಾರ ಸಲ್ಲಿಸಿರುವ ಅರ್ಜಿಗೆ ಆಕ್ಷೇಪಣೆ ಸಲ್ಲಿಸಲು ಈಡಿ ಸಮಯಾವಕಾಶ ಕೋರಿದ್ದರಿಂದ ನ್ಯಾಯಾಲಯವು ವಿಚಾರಣೆಯನ್ನು ಮುಂದೂಡಿತು. ಕೋರ್ಟಿನಿಂದ ಹೊರಬಂದ ಬಳಿಕ ಶಿವಕುಮಾರ ಅವರು ಪತ್ರಕತರ್ರಿಗೆ ಕೈಮುಗಿದು ಅಲ್ಲಿಂದ ಹೊರಟರು, ಅವರ ಪ್ರಶ್ನೆಗಳಿಗೆ ಉತ್ತರಿಸಲಿಲ್ಲ.
ಇದನ್ನೂ ಓದಿ: ಆಂಬುಲೆನ್ಸ್ಗೆ ದಾರಿ ಬಿಡದೆ ದುಷ್ಕೃತ್ಯ ಮೆರೆದ ಕಾರು ಚಾಲಕ ! ವಿಡಿಯೋ ವೈರಲ್