ಬೆಳಗಾವಿ: ಗ್ರಾಮಸ್ಥರು ಈ ಮೊಸಳೆಯನ್ನು (crocodile) ಹಿಡಿಯುವ ಭರದಲ್ಲಿ ಅದನ್ನು ಅರೆಜೀವ ಮಾಡಿದ್ದಾರೆ. ಅಸಲಿಗೆ ವಿಷಯವೇನೆಂದರೆ, ಬೆಳಗಾವಿ (Belagavi) ಜಿಲ್ಲೆ ಕಾಗವಾಡದಲ್ಲಿ ಕಾತ್ರಾಳ (Kathral) ಹೆಸರಿನ ಗ್ರಾಮವೊಂದಿದೆ. ಗ್ರಾಮದ ಹಳ್ಳವೊಂದರಲ್ಲಿ ಈ ಮೊಸಳೆ ಪ್ರತ್ಯಕ್ಷವಾಗಿ ಬಿಟ್ಟಿದೆ. ವಿಷಯವನ್ನು ಅರಣ್ಯ ಇಲಾಖೆಯವರಿಗೆ ತಿಳಿಸಿದರೆ ಸಾಕಿತ್ತು. ತಿಳಿಸುವುದನ್ನು ಅವರು ಮಾಡಿದ್ದಾರೆ ನಿಜ, ಆದರೆ ಅವರು ಬರುವ ಮುಂಚೆಯೇ ಅದನ್ನು ಹಿಡಿದು ಹಿರೋಗಳೆನ್ನಿಸಿಕೊಳ್ಳುವ ಉಮೇದಿ ಅವರಲ್ಲಿ ಹುಟ್ಟಿದೆ. ಹಿಡಿಯಲು ಅವರು ಬಳಸಿರುವ ವಿಧಾನಗಳನ್ನು ನೋಡಿ. ಕೊನೆ ಹಂತದಲ್ಲಂತೂ ಅದು ಮೂರ್ಛೆ ಹೋದಹಾಗೆ ಭಾಸವಾಗುತ್ತಿದೆ. ಅರಣ್ಯ ಇಲಾಖೆಯವರು ಅದನ್ನು ಸುರಕ್ಷಿತವಾದ ಸ್ಥಳಕ್ಕೆ ತೆಗೆದುಕೊಂಡು ಹೋದರಂತೆ.
ಇದನ್ನೂ ಓದಿ: ಒಂದೇ ಸ್ಕೂಟರ್ ಮೇಲೆ ಇಬ್ಬರು ಸವಾರರೊಂದಿಗೆ 7 ಕುರಿಗಳು! ತಮಾಷೆ ಅಲ್ಲ ಮಾರಾಯ್ರೇ, ವಿಡಿಯೋ ನೋಡಿ