‘ಐದು ವರ್ಷಗಳ ಪ್ರಯಾಣಕ್ಕೆ ಈಗ ನೆಮ್ಮದಿ ಸಿಕ್ಕಿದೆ’; ನಟ ಸತೀಶ್ ನೀನಾಸಂ

‘ಡಿಯರ್ ವಿಕ್ರಮ್’ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಿದೆ. ಸೆಲೆಬ್ರಿಟಿಗಳಿಗಾಗಿ ಈ ಚಿತ್ರದ ವಿಶೇಷ ಶೋ ಏರ್ಪಡಿಸಲಾಗಿತ್ತು. ಮಿಲನಾ ನಾಗರಾಜ್ (ಡಾರ್ಲಿಂಗ್ ಕೃಷ್ಣ ಸೇರಿ ಅನೇಕರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ.

TV9kannada Web Team

| Edited By: Rajesh Duggumane

Jun 30, 2022 | 4:02 PM

ನಟ ಸತೀಶ್ ನೀನಾಸಂ (Sathish Ninasam) ಅವರ ‘ಡಿಯರ್ ವಿಕ್ರಮ್’ ಸಿನಿಮಾ ಒಟಿಟಿಯಲ್ಲಿ ರಿಲೀಸ್ ಆಗಿದೆ. ಸೆಲೆಬ್ರಿಟಿಗಳಿಗಾಗಿ ಈ ಚಿತ್ರದ ವಿಶೇಷ ಶೋ ಏರ್ಪಡಿಸಲಾಗಿತ್ತು. ಮಿಲನಾ ನಾಗರಾಜ್ (Milana Nagara), ಡಾರ್ಲಿಂಗ್ ಕೃಷ್ಣ ಸೇರಿ ಅನೇಕರು ಸಿನಿಮಾ ನೋಡಿ ಮೆಚ್ಚಿಕೊಂಡಿದ್ದಾರೆ. ಈ ಚಿತ್ರಕ್ಕೆ ಎಲ್ಲ ಕಡೆಗಳಿಂದ ಸಿಗುತ್ತಿರುವ ಪ್ರತಿಕ್ರಿಯೆ ನೋಡಿ ಸತೀಶ್ ಸಂತಸಗೊಂಡಿದ್ದಾರೆ. ಈ ಸಿನಿಮಾ ಕೆಲಸ ಆರಂಭಗೊಂಡು ಐದು ವರ್ಷಗಳ ನಂತರ ಚಿತ್ರ ರಿಲೀಸ್ ಆಗಿದೆ. ಈ ಬಗ್ಗೆ ಅವರು ಮಾತನಾಡಿದ್ದಾರೆ. ‘ಸಿನಿಮಾ ಅದ್ಭುತವಾಗಿ ಮೂಡಿ ಬಂದಿದೆ. ಜಾಸ್ತಿ ಖುಷಿ ಆಗಿದೆ. ನೆಮ್ಮದಿ ಸಿಕ್ಕಿದೆ. ಐದು ವರ್ಷ ಚಿತ್ರವನ್ನು ಎದೆಮೇಲೆ ಹೊತ್ತುಕೊಂಡು ಓಡಾಡಿದ್ದಕ್ಕೂ ಸಾರ್ಥಕ ಎನಿಸುತ್ತಿದೆ’ ಎಂದಿದ್ದಾರೆ ಸತೀಶ್.

ಇದನ್ನೂ ಓದಿ: Milana Nagaraj: ‘ಡಿಯರ್​​ ವಿಕ್ರಮ್​’ ಹೇಗಿದೆ? ಸತೀಶ್​ ನೀನಾಸಂ, ಶ್ರದ್ಧಾ ಶ್ರೀನಾಥ್​ ನಟನೆಯ ಚಿತ್ರಕ್ಕೆ ಮಿಲನಾ ವಿಮರ್ಶೆ

‘ಡಿಯರ್ ವಿಕ್ರಂ  ಆಗಿ ಬದಲಾದ ‘ಗೋಧ್ರಾ’; ಸತೀಶ್ ನೀನಾಸಂ ಸಿನಿಮಾ ಟೈಟಲ್​ ಬದಲು

Follow us on

Click on your DTH Provider to Add TV9 Kannada