ಈ ಬಾರಿ ಕನ್ನಡ ‘ಬಿಗ್ ಬಾಸ್ ಒಟಿಟಿ’ ಮನೆ ಹೇಗಿರಲಿದೆ? ಇಲ್ಲಿದೆ ಫೋಟೋ

6 ವಾರಗಳ ಕಾಲ ನಡೆಯುವ ಈ ಶೋನಲ್ಲಿ ಯಾರೆಲ್ಲ ಇರಲಿದ್ದಾರೆ ಎಂಬ ಕುತೂಹಲ ಮೂಡಿದೆ. ಅದಕ್ಕೂ ಮೊದಲು ಕಲರ್ಸ್ ಕನ್ನಡ ಬಿಸ್ನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಅವರು ಬಿಗ್ ಬಾಸ್ ಮನೆಯ ಝಲಕ್ ತೋರಿಸಿದ್ದಾರೆ.

ಈ ಬಾರಿ ಕನ್ನಡ ‘ಬಿಗ್ ಬಾಸ್ ಒಟಿಟಿ’ ಮನೆ ಹೇಗಿರಲಿದೆ? ಇಲ್ಲಿದೆ ಫೋಟೋ
ಬಿಗ್ ಬಾಸ್
TV9kannada Web Team

| Edited By: Rajesh Duggumane

Aug 04, 2022 | 10:02 PM

ಕನ್ನಡ ‘ಬಿಗ್ ಬಾಸ್​ ಒಟಿಟಿ 1’ (Bigg Boss OTT) ಆರಂಭಕ್ಕೆ ಕ್ಷಣಗಣನೆ ಆರಂಭ ಆಗಿದೆ. ಪ್ರತಿ ಬಾರಿ ಬಿಗ್ ಬಾಸ್ ಆರಂಭವಾಗುವಾಗ ಒಂದಷ್ಟು ಕುತೂಹಲ ಇದ್ದೇ ಇರುತ್ತದೆ. ‘ಈ ಬಾರಿ ಬಿಗ್ ಬಾಸ್ ಮನೆ ಪ್ರವೇಶಿಸುವ ಸ್ಪರ್ಧಿಗಳು ಯಾರು’ ಎಂಬ ಪ್ರಶ್ನೆ ಮೊದಲು ಮೂಡುತ್ತದೆ. ಆ ಬಳಿಕ ಎದುರಾಗುವುದು ‘ಈ ಬಾರಿಯ ಬಿಗ್ ಬಾಸ್ ಮನೆ ಹೇಗಿದೆ’ ಎಂಬ ಪ್ರಶ್ನೆ. ಮೊದಲ ಪ್ರಶ್ನೆಗೆ ಆಗಸ್ಟ್ 6ರಂದೇ ಉತ್ತರ ಸಿಗಬೇಕಿದೆ. ಈಗ ಎರಡನೇ ಪ್ರಶ್ನೆಗೆ ಉತ್ತರ ಸಿಕ್ಕಿದೆ. ಈ ಬಾರಿ ‘ಬಿಗ್ ಬಾಸ್’ ಮನೆ ಹೇಗಿರಲಿದೆ ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದೆ.

ಪ್ರತಿ ಬಾರಿ ‘ಬಿಗ್​ ಬಾಸ್’ ಟಿವಿಯಲ್ಲಿ ಪ್ರಸಾರವಾಗುತ್ತಿತ್ತು. ಆದರೆ, ಈ ಬಾರಿ ಮೊದಲು ಒಟಿಟಿಯಲ್ಲಿ ಪ್ರಸಾರ ಕಾಣುತ್ತಿದೆ. ಆಗಸ್ಟ್ 6ರಿಂದ ‘ಬಿಗ್ ಬಾಸ್​ ಒಟಿಟಿ’ಯ ಮೊದಲ ಸೀಸನ್ ಪ್ರಾರಂಭವಾಗಲಿದೆ. ಕಿಚ್ಚ ಸುದೀಪ್ ಅವರ ಸಾರಥ್ಯ ಇದಕ್ಕೆ ಇರಲಿದೆ. ಆರು ವಾರಗಳ ಕಾಲ ನಡೆಯುವ ಈ ಶೋನಲ್ಲಿ ಯಾರೆಲ್ಲ ಇರಲಿದ್ದಾರೆ ಎಂಬ ಕುತೂಹಲ ಮೂಡಿದೆ. ಅದಕ್ಕೂ ಮೊದಲು ಕಲರ್ಸ್ ಕನ್ನಡ ಬಿಸ್ನೆಸ್ ಹೆಡ್ ಪರಮೇಶ್ವರ್ ಗುಂಡ್ಕಲ್ ಅವರು ಬಿಗ್ ಬಾಸ್ ಮನೆಯ ಝಲಕ್ ತೋರಿಸಿದ್ದಾರೆ.

ಪ್ರತಿ ಬಾರಿ ‘ಬಿಗ್ ಬಾಸ್’ ಆರಂಭವಾಗುವಾಗ ಮನೆಗೆ ಹೊಸ ಲುಕ್ ನೀಡಲಾಗುತ್ತದೆ. ಈ ಬಾರಿಯೂ ಅಷ್ಟೇ, ದೊಡ್ಮನೆಗೆ ಹೊಸ ವಿನ್ಯಾಸ ನೀಡಲಾಗಿದೆ. ಈ ಫೋಟೋ ನೋಡಿ ವೀಕ್ಷಕರು ಸಾಕಷ್ಟು ಕುತೂಹಲಕ್ಕೆ ಒಳಗಾಗಿದ್ದಾರೆ. ಕಳೆದ ಬಾರಿಗಿಂತ ಈ ಬಾರಿ ಮನೆಯಲ್ಲಿ ಯಾವ ರೀತಿಯ ವಿಶೇಷತೆಗಳು ಇರಲಿವೆ ಎಂಬ ಕುತೂಹಲಕ್ಕೆ ಆಗಸ್ಟ್​ 6ರಂದು ತೆರೆ ಬೀಳಲಿದೆ.

ಇದನ್ನೂ ಓದಿ: ‘ಬಿಗ್ ಬಾಸ್’ ಮಾಜಿ ಸ್ಪರ್ಧಿಯ ಮೇಲೆ ನಡೆಯಿತು ಹಲ್ಲೆ; ಪಾಲಕರ ಎದುರೇ ಥಳಿಸಿದ ಆಗಂತುಕ

ಇದನ್ನೂ ಓದಿ

‘ಕಿಚ್ಚ’ ಸುದೀಪ್ ಅವರು ‘ವಿಕ್ರಾಂತ್ ರೋಣ’ ಯಶಸ್ಸಿನ ಅಲೆಯಲ್ಲಿ ತೇಲುತ್ತಿದ್ದಾರೆ. ಈ ಸಿನಿಮಾ ಯಶಸ್ಸಿನ ಬೆನ್ನಲ್ಲೇ ಅವರು ‘ಬಿಗ್ ಬಾಸ್ ಒಟಿಟಿ’ಗೆ ನಿರೂಪಣೆ ಮಾಡುತ್ತಿದ್ದಾರೆ. ಪ್ರತಿ ಶನಿವಾರ ಹಾಗೂ ಭಾನುವಾರ ಅವರು ಈ ಶೋ ನಡೆಸಿಕೊಡಲಿದ್ದಾರೆ. ‘ಬಿಗ್ ಬಾಸ್ ಒಟಿಟಿ’ ಬಳಿಕ ‘ಬಿಗ್ ಬಾಸ್ ಕನ್ನಡ ಸೀಸನ್ 9’ ಆರಂಭ ಆಗಲಿದೆ.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada