Aryavardhan Guruji: ‘ಬಿಗ್ ಬಾಸ್ ಒಟಿಟಿ’ಯ ಮೊದಲ ಸ್ಪರ್ಧಿಯಾಗಿ ಮನೆ ಸೇರಿದ ಆರ್ಯವರ್ಧನ್ ಗುರೂಜಿ
Bigg Boss OTT Kannada: ಆರ್ಯವರ್ಧನ್ ಗುರೂಜಿ ಬಗ್ಗೆ ಅನೇಕರಿಗೆ ಗೊತ್ತಿದೆ. ಅವರು ಐಪಿಎಲ್ ಸಂದರ್ಭದಲ್ಲಿ ಖಾಸಗಿ ವಾಹಿನಿಯ ಕಾರ್ಯಕ್ರಮವೊಂದಕ್ಕೆ ತೆರಳಿ ಯಾವ ತಂಡ ಗೆಲ್ಲುತ್ತದೆ, ಯಾವ ತಂಡ ಸೋಲುತ್ತದೆ ಎಂಬುದನ್ನು ಊಹಿಸುತ್ತಿದ್ದರು.
‘ಬಿಗ್ ಬಾಸ್ ಒಟಿಟಿ’ (Bigg Boss OTT) ಇಂದು (ಆಗಸ್ಟ್ 6) ಸಂಜೆ 7 ಗಂಟೆಗೆ ಗ್ರ್ಯಾಂಡ್ ಓಪನಿಂಗ್ ಪಡೆದುಕೊಳ್ಳುತ್ತಿದೆ. ಈ ಶೋಗೆ ಯಾರೆಲ್ಲ ಸ್ಪರ್ಧಿಗಳಾಗಿ ಬರಲಿದ್ದಾರೆ ಎಂಬ ಕುತೂಹಲ ಎಲ್ಲರಲ್ಲೂ ಮೂಡಿದೆ. ಈಗ ಮೊದಲ ಸ್ಪರ್ಧಿಯ ಹೆಸರನ್ನು ರಿವೀಲ್ ಮಾಡಲಾಗಿದೆ. ಮೊದಲ ಸ್ಪರ್ಧಿಯಾಗಿ ಆರ್ಯವರ್ಧನ್ ಗುರೂಜಿ (Aryavardhan Guruji) ಅವರು ದೊಡ್ಮನೆ ಸೇರಿದ್ದಾರೆ. ಈ ಬಗ್ಗೆ ವೂಟ್ ಕಡೆಯಿಂದ ಅಧಿಕೃತ ಘೋಷಣೆ ಆಗಿದೆ. ಅವರ ಎಂಟ್ರಿ ಸಾಕಷ್ಟು ಕುತೂಹಲ ಮೂಡಿಸಿದೆ.
ಆರ್ಯವರ್ಧನ್ ಗುರೂಜಿ ಬಗ್ಗೆ ಅನೇಕರಿಗೆ ಗೊತ್ತಿದೆ. ಅವರು ಐಪಿಎಲ್ ಸಂದರ್ಭದಲ್ಲಿ ಖಾಸಗಿ ವಾಹಿನಿಯ ಕಾರ್ಯಕ್ರಮವೊಂದಕ್ಕೆ ತೆರಳಿ ಯಾವ ತಂಡ ಗೆಲ್ಲುತ್ತದೆ, ಯಾವ ತಂಡ ಸೋಲುತ್ತದೆ ಎಂಬುದನ್ನು ಊಹಿಸುತ್ತಿದ್ದರು. ಯಾವ ಆಟಗಾರ ಹೆಚ್ಚು ರನ್ ಬಾರಿಸುತ್ತಾರೆ, ಯಾರು ಹೆಚ್ಚು ವಿಕೆಟ್ ಕೀಳುತ್ತಾರೆ ಎಂಬುದನ್ನೂ ಹೇಳುತ್ತಿದ್ದರು. ಆದರೆ, ಅವರ ಪ್ರಿಡಿಕ್ಷನ್ ತಪ್ಪಾಗಿದ್ದೇ ಹೆಚ್ಚು. ಈ ವಿಚಾರಕ್ಕೆ ಸೋಶಿಯಲ್ ಮೀಡಿಯಾದಲ್ಲಿ ಅವರು ಸಾಕಷ್ಟು ಟ್ರೋಲ್ ಆಗಿದ್ದರು.
ಆರ್ಯವರ್ಧನ್ ಅವರು ‘ರಾಯಲ್ ಚಾಲೆಂಜರ್ಸ್ ಬೆಂಗಳೂರು’ ತಂಡವನ್ನು ಸಪೋರ್ಟ್ ಮಾಡುತ್ತಾ ಬರುತ್ತಿದ್ದಾರೆ. ಈ ಕಾರಣದಿಂದಲೂ ಅವರು ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಹೆಸರು ಮಾಡಿದ್ದಾರೆ. ಈಗ ಅವರು ಬಿಗ್ ಬಾಸ್ ಮನೆ ಒಳಗೆ ಹೋಗಿರುವುದು ಸಾಕಷ್ಟು ಕುತೂಹಲ ಮೂಡಿಸಿದೆ.
ಸೋಶಿಯಲ್ ಮೀಡಿಯಾದಲ್ಲಿ ಆರ್ಯವರ್ಧನ್ ವಿಡಿಯೋಗಳು, ಅವರ ಹೇಳಿಕೆಗಳು ಸಾಕಷ್ಟು ಮನರಂಜನೆ ನೀಡಿವೆ. ಈಗ ಬಿಗ್ ಬಾಸ್ ಮನೆ ಒಳಗೆ ತೆರಳಿ ಅವರು ಯಾವ ರೀತಿಯಲ್ಲಿ ಎಂಟರ್ಟೇನ್ ಮಾಡುತ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ. ಈ ಮೊದಲು ಬಿಗ್ ಬಾಸ್ ಮನೆಗೆ ಎಂಟ್ರಿ ನೀಡಿದ ಅನೇಕ ಗುರೂಜಿಗಳು ಸಾಕಷ್ಟು ಮನರಂಜನೆ ನೀಡಿದ್ದಾರೆ. ಆ ಸಾಲಿಗೆ ಆರ್ಯವರ್ಧನ್ ಕೂಡ ಸೇರ್ಪಡೆ ಆಗುತ್ತಾರಾ ಎಂಬುದು ಸದ್ಯದ ಕುತೂಹಲ.
ಇದನ್ನೂ ಓದಿ: Sonu Srinivas Gowda: ‘ಬಿಗ್ ಬಾಸ್ ಒಟಿಟಿ’ ಎರಡನೇ ಸ್ಪರ್ಧಿಯಾಗಿ ಸೋನು ಶ್ರೀನಿವಾಸ್ ಗೌಡ ಎಂಟ್ರಿ
ಈ ಮೊದಲು ಬಿಗ್ ಬಾಸ್ ಟಿವಿಯಲ್ಲಿ ಪ್ರಸಾರ ಆಗುತ್ತಿತ್ತು. ಆದರೆ, ಈ ಬಾರಿ ಒಟಿಟಿಯಲ್ಲಿ ಮಾತ್ರ ಪ್ರಸಾರವಾಗುತ್ತಿದೆ. ಇದನ್ನು ವೀಕ್ಷಕರು ಯಾವ ರೀತಿಯಲ್ಲಿ ಸ್ವೀಕರಿಸುತ್ತಾರೆ ಅನ್ನೋದನ್ನು ಕಾದು ನೋಡಬೇಕಿದೆ.
ವೀಕ್ಷಿಸೋದು ಎಲ್ಲಿ?
ಈ ಬಾರಿ ‘ಬಿಗ್ ಬಾಸ್’ ಅನ್ನು ಒಟಿಟಿಯಲ್ಲಿ ಮಾತ್ರ ವೀಕ್ಷಿಸಬಹುದು. ವೂಟ್ ಆ್ಯಪ್ನ ಚಂದಾದಾರರಾದರೆ ಮಾತ್ರ ‘ಬಿಗ್ ಬಾಸ್ ಒಟಿಟಿ’ ವೀಕ್ಷಣೆ ಸಾಧ್ಯ. ಇಲ್ಲವಾದರೆ, ನೀವು ‘ಬಿಗ್ ಬಾಸ್’ ನೋಡಲು ಆಗುವುದಿಲ್ಲ. ದಿನದ 24 ಗಂಟೆ ವೂಟ್ ಆ್ಯಪ್ನಲ್ಲಿ ಲೈವ್ ವೀಕ್ಷಿಸಬಹುದು. ಇದರ ಜತೆಗೆ ನಿತ್ಯ ಏನೆಲ್ಲ ಆಯಿತು ಎಂಬುದನ್ನು ಒಂದು ಅಥವಾ ಒಂದೂವರೆ ಗಂಟೆ ಸಂಚಿಕೆ ಮೂಲಕ ಪ್ರೇಕ್ಷಕರ ಎದುರು ಇಡಲಾಗುತ್ತದೆ. ಈ ಸಂಚಿಕೆ ಪ್ರಸಾರದ ಸಮಯ ಇನ್ನಷ್ಟೇ ನಿಗದಿ ಆಗಬೇಕಿದೆ.
Published On - 2:54 pm, Sat, 6 August 22