Akshata kuki: ಬಿಗ್ ಬಾಸ್ ಮನೆಗೆ ಏಳನೇ ಸ್ಪರ್ಧಿಯಾಗಿ ಕಾಲಿಟ್ಟ ಅಕ್ಷತಾ ಕುಕ್ಕಿ

Bigg Boss OTT kannada: ಮೊದಲಿಗೆ ಫ್ಯಾಶನ್ ಶೋನಲ್ಲಿ ಭಾಗವಹಿಸಿ ಎಲ್ಲರ ಮೆಚ್ಚುಗೆ ಪಡೆದುಕೊಂಡ ಅಕ್ಷತಾಗೆ ಸಿನಿಮಾ ಆಫರ್ ಕೂಡ ಬಂದು ಅದರಲ್ಲಿ ಯಶಸ್ಸು ಸಾಧಿಸಿದರು. ಅಂದಿನಿಂದಲೂ ಬಿಗ್ ಬಾಸ್​ಗೆ ಬರಬೇಕು ಎಂಬ ಆಸೆ ಇವರಿಗಿತ್ತಂತೆ.

Akshata kuki: ಬಿಗ್ ಬಾಸ್ ಮನೆಗೆ ಏಳನೇ ಸ್ಪರ್ಧಿಯಾಗಿ ಕಾಲಿಟ್ಟ ಅಕ್ಷತಾ ಕುಕ್ಕಿ
Akshata kuki
Follow us
TV9 Web
| Updated By: Vinay Bhat

Updated on:Aug 06, 2022 | 9:30 PM

ಕನ್ನಡ ಬಿಗ್ ಬಾಸ್ ಓಟಿಟಿ (Bigg Boss Kannada OTT) ರಿಯಾಲಿಟಿ ಶೋಗೆ ಅದ್ಧೂರಿ ಚಾಲನೆ ಸಿಕ್ಕಿದ್ದು ಈಗಾಗಲೇ ಆರು ಸ್ಪರ್ಧಿಗಳು ಮನೆಯೊಳಗೆ ಕಾಲಿಟ್ಟಿದ್ದಾರೆ. ಇದೀಗ ಏಳನೇ ಸ್ಪರ್ಧಿಯಾಗಿ ನಟಿ ಅಕ್ಷತಾ ಕುಕ್ಕಿ (Akshata kuki) ಪ್ರವೇಶ ಪಡೆದಿದ್ದಾರೆ. ಮೂಲತಃ ಉತ್ತರ ಕನ್ನಡ ಜಿಲ್ಲೆ ದಾಂಡೇಲಿಯವರಾಗಿರುವ ಅಕ್ಷತಾ ಮನೆಯವರೆಲ್ಲ ಸರ್ಕಾರಿ ನೌಕರರು. ಇವರುಕೂಡ ಸರ್ಕಾರಿ ಕೆಲಸಕ್ಕೇ ಸೇರಬೇಕು ಎಂದು ಅಂದುಕೊಡಿದ್ದರಂತೆ. ಆದರೆ, ಸಿನಿಮಾ ಜಗತ್ತಿನ ಬಗ್ಗೆ ಕುತೂಹಲ ಇದ್ದ ಕಾರಣ ಬಣ್ಣದ ಲೋಕಕ್ಕೆ ಕಾಲಿಟ್ಟರು. ನಂತರ ಹಿಂತಿರುಗಿ ನೋಡಿದ್ದೇ ಇಲ್ಲ.

ಮೊದಲಿಗೆ ಫ್ಯಾಶನ್ ಶೋನಲ್ಲಿ ಭಾಗವಹಿಸಿ ಎಲ್ಲರ ಮೆಚ್ಚುಗೆ ಪಡೆದುಕೊಂಡ ಅಕ್ಷತಾಗೆ ಸಿನಿಮಾ ಆಫರ್ ಕೂಡ ಬಂದು ಅದರಲ್ಲಿ ಯಶಸ್ಸು ಸಾಧಿಸಿದರು. ಅಂದಿನಿಂದಲೂ ಬಿಗ್ ಬಾಸ್​ಗೆ ಬರಬೇಕು ಎಂಬ ಆಸೆ ಇವರಿಗಿತ್ತಂತೆ. ಅದರಂತೆ ಇದೀಗ ದೊಡ್ಮಮನೆಯೊಳಗೆ ಪ್ರವೇಶ ಪಡೆದುಕೊಂಡಿದ್ದಾರೆ. ಸದಾ ನಗುಮುಖದಿಂದ ಇರುವ ಅಕ್ಷತಾ ಬಿಗ್ ಬಾಸ್ ಮನೆಯೊಳಗೂ ಖುಷಿಯಿಂದ ಇರುತ್ತೇನೆ ಎಂದು ವೇದಿಕೆ ಮೇಲೆ ಸುದೀಪ್ ಜೊತೆ ಹೇಳಿದ್ದಾರೆ.

ಇನ್ನು ಬಿಗ್ ಬಾಸ್ ಮನೆಗೆ ಈಗಾಗಲೇ ಆರು ಜನರು ಕಾಲಿಟ್ಟಾಗಿದೆ. ಆರ್ಯವರ್ಧನ್​ ಗುರೂಜಿ, ಸೋನು ಶ್ರೀನಿವಾಸ್ ಗೌಡ, ರೂಪೇಶ್ ಶೆಟ್ಟಿ, ಸಾನ್ಯಾ ಅಯ್ಯರ್, ಸ್ಪೂರ್ಥಿ ಗೌಡ, ಹಾಸ್ಯ ಕಲಾವಿದ ಲೋಕೇಶ್ ಅವರು ಬಿಗ್​ ಬಾಸ್ ಮನೆ ಸೇರಿದ್ದಾರೆ.

ಇದನ್ನೂ ಓದಿ
Image
Rakesh Adiga: ‘ಬಿಗ್​ ಬಾಸ್​’ ಮನೆಗೆ ರಾಕೇಶ್ ಅಡಿಗ ಎಂಟ್ರಿ; ಆರಂಭ ಆಗುತ್ತಾ ಸೆಕೆಂಡ್ ಇನ್ನಿಂಗ್ಸ್​?
Image
ಭಿಕ್ಷೆ ಬೇಡುತ್ತಿದ್ದ ಈ ವ್ಯಕ್ತಿ ಬಿಗ್​ ಬಾಸ್​​ಗೆ ಸ್ಪರ್ಧಿ; ಈ ಕಲಾವಿದನ ಬದುಕು ಎಷ್ಟು ಕಷ್ಟ ಇತ್ತು ಗೊತ್ತಾ?
Image
Roopesh Shetty: ಬಿಗ್ ಬಾಸ್ ಮನೇಲಿ ಯಾರಾದ್ರು ಸಿಕ್ಕಿದ್ರೆ ಬಿಡಲ್ಲ: ಕಿಚ್ಚ ಕಾಲೆಳೆದಿದ್ದಕ್ಕೆ ನೇರ ಉತ್ತರ ಕೊಟ್ಟ ರೂಪೇಶ್
Image
Saanya Iyer: ಬಿಗ್ ಬಾಸ್ ಕನ್ನಡ ಓಟಿಟಿ ಶೋಗೆ ಪುಟ್ಟಗೌರಿ ಮದುವೆ ಖ್ಯಾತಿಯ ಸಾನ್ಯಾ ಅಯ್ಯರ್ ಎಂಟ್ರಿ

ಬಿಗ್​ ಬಾಸ್ ಓಟಿಟಿ ಸೀಸನ್ ಒಟ್ಟು 40 ದಿನಗಳ ವರೆಗೆ ನಡೆಯಲಿದೆ. 40 ದಿನಗಳ ಬಳಿಕ ಟಿವಿ ಯಲ್ಲಿ 100 ದಿನಗಳ 9ನೇ ಸೀಸನ್​ ಬಿಗ್ ಬಾಸ್ ಕನ್ನಡ ಶುರುವಾಗಲಿದೆ. ಇಲ್ಲಿ ಓಟಿಟಿ ಬಿಗ್ ಬಾಸ್​ನಲ್ಲಿ ಕೊನೆಯ ವರೆಗೂ ಇದ್ದ ಟಾಪ್ ಸ್ಪರ್ಧಿಗಳು ನೇರವಾಗಿ 9ನೇ ಸೀಸನ್ ಬಿಗ್​ ಬಾಸ್​ಗೆ ಅರ್ಹತೆ ಪಡೆದುಕೊಳ್ಳುತ್ತಾರೆ ಎಂದು ಸುದೀಪ್ ಹೇಳಿದ್ದಾರೆ. ಅಷ್ಟೇ ಅಲ್ಲದೆ, ಈ ಸೀಸನ್​ನ ವೇಗವಾಗಿ ಸಾಗಲಿದ್ದು 50 ಓವರ್​ಗಳ ಕ್ರಿಕೆಟ್ ಪಂದ್ಯದಂತೆ 20 ಬಾಲ್ ಆಡಿ ಸೆಟಲ್ ಆಗಲು ಸಾಧ್ಯವಿಲ್ಲ, ಟಿ20 ಪಂದ್ಯದಂತೆ ಮೊದಲ ಎಸೆತದಿಂದಲೇ ಆಟ ಶುರು ಮಾಡಬೇಕು ಎಂದು ಸ್ಪರ್ಧಿಗಳಿಗೆ ಕಿವಿ ಮಾತು ಹೇಳಿದ್ದಾರೆ.

Published On - 9:30 pm, Sat, 6 August 22

‘ಸಂಗೊಳ್ಳಿ ರಾಯಣ್ಣ’ ಮರು ಬಿಡುಗಡೆ, ಚಿತ್ರಮಂದಿರ ಖಾಲಿ: ಅಭಿಮಾನಿಗಳ ಆಕ್ರೋಶ
‘ಸಂಗೊಳ್ಳಿ ರಾಯಣ್ಣ’ ಮರು ಬಿಡುಗಡೆ, ಚಿತ್ರಮಂದಿರ ಖಾಲಿ: ಅಭಿಮಾನಿಗಳ ಆಕ್ರೋಶ
ಯತ್ನಾಳ್ ಮತ್ತು ವಿಜಯೇಂದ್ರ ನಡುವೆ ಪ್ರತಿಷ್ಠೆಯ ಹೋರಾಟ ನಡೆದಿದೆ: ಪಾಟೀಲ್
ಯತ್ನಾಳ್ ಮತ್ತು ವಿಜಯೇಂದ್ರ ನಡುವೆ ಪ್ರತಿಷ್ಠೆಯ ಹೋರಾಟ ನಡೆದಿದೆ: ಪಾಟೀಲ್
ಸರ್ಕಾರದ ಬಗ್ಗೆ ಪರಮೇಶ್ವರ್ ಯಾವ ಅರ್ಥದಲ್ಲಿ ಮಾತಾಡಿದ್ದು ಗೊತ್ತಿಲ್ಲ:ಡಿಕೆಶಿ
ಸರ್ಕಾರದ ಬಗ್ಗೆ ಪರಮೇಶ್ವರ್ ಯಾವ ಅರ್ಥದಲ್ಲಿ ಮಾತಾಡಿದ್ದು ಗೊತ್ತಿಲ್ಲ:ಡಿಕೆಶಿ
ಗಯಾನಾದಲ್ಲಿ ಗಾಂಧಿಗೆ ನಮನ ಸಲ್ಲಿಸಿ, ರಾಮ ಭಜನೆಗೆ ತಾಳ ನುಡಿಸಿದ ಮೋದಿ
ಗಯಾನಾದಲ್ಲಿ ಗಾಂಧಿಗೆ ನಮನ ಸಲ್ಲಿಸಿ, ರಾಮ ಭಜನೆಗೆ ತಾಳ ನುಡಿಸಿದ ಮೋದಿ
ಅವಾಚ್ಯ ಶಬ್ದ ಬಳಕೆ ಮಾಡಿದ ರಜತ್​ಗೆ ದೊಡ್ಡ ಶಿಕ್ಷೆ
ಅವಾಚ್ಯ ಶಬ್ದ ಬಳಕೆ ಮಾಡಿದ ರಜತ್​ಗೆ ದೊಡ್ಡ ಶಿಕ್ಷೆ
ಅಯ್ಯಪ್ಪ ಮಾಲೆಯ ವಸ್ತ್ರದ ಬಗ್ಗೆ ನಿಮಗೆ ಗೊತ್ತಿರದ ವಿಚಾರ
ಅಯ್ಯಪ್ಪ ಮಾಲೆಯ ವಸ್ತ್ರದ ಬಗ್ಗೆ ನಿಮಗೆ ಗೊತ್ತಿರದ ವಿಚಾರ
ಇಂದಿನ ರಾಶಿಫಲ: ಮೇಷ, ವೃಷಭ, ಮಿಥುನ ಸೇರಿದಂತೆ 12 ರಾಶಿಗಳ ದೈನಂದಿನ ಭವಿಷ್ಯ
ಇಂದಿನ ರಾಶಿಫಲ: ಮೇಷ, ವೃಷಭ, ಮಿಥುನ ಸೇರಿದಂತೆ 12 ರಾಶಿಗಳ ದೈನಂದಿನ ಭವಿಷ್ಯ
ಮ್ಯಾಂಗೋ ಲಸ್ಸಿಗೆ ಜರ್ಮನ್ ಸ್ನೇಹಿತರನ್ನು ಭಾರತಕ್ಕೆ ಆಹ್ವಾನಿಸಿದ ವೈಷ್ಣವ್
ಮ್ಯಾಂಗೋ ಲಸ್ಸಿಗೆ ಜರ್ಮನ್ ಸ್ನೇಹಿತರನ್ನು ಭಾರತಕ್ಕೆ ಆಹ್ವಾನಿಸಿದ ವೈಷ್ಣವ್
ಭಾರತದ ಬೆಳವಣಿಗೆಗೆ ಪ್ರಮುಖ 4 ಪಿಲ್ಲರ್​ಗಳನ್ನು ಬಹಿರಂಗಪಡಿಸಿದ ಎ ವೈಷ್ಣವ್
ಭಾರತದ ಬೆಳವಣಿಗೆಗೆ ಪ್ರಮುಖ 4 ಪಿಲ್ಲರ್​ಗಳನ್ನು ಬಹಿರಂಗಪಡಿಸಿದ ಎ ವೈಷ್ಣವ್
ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?
ಜರ್ಮನಿಯಲ್ಲೇ ನ್ಯೂಸ್​9 ಜಾಗತಿಕ ಶೃಂಗಸಭೆ ನಡೆಯುತ್ತಿರುವುದೇಕೆ?