AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

Roopesh Shetty: ಬಿಗ್ ಬಾಸ್ ಮನೇಲಿ ಯಾರಾದ್ರು ಸಿಕ್ಕಿದ್ರೆ ಬಿಡಲ್ಲ: ಕಿಚ್ಚ ಕಾಲೆಳೆದಿದ್ದಕ್ಕೆ ನೇರ ಉತ್ತರ ಕೊಟ್ಟ ರೂಪೇಶ್

Bigg Boss OTT kannada: ಈಗಾಗಲೇ ಆರ್ಯವರ್ಧನ್​ ಗುರೂಜಿ, ಸೋನು ಶ್ರೀನಿವಾಸ್ ಗೌಡ, ಸ್ಪೂರ್ಥಿ ಗೌಡ, ಹಾಸ್ಯ ಕಲಾವಿದ ಲೋಕೇಶ್ ಅವರು ಬಿಗ್​ ಬಾಸ್ ಮನೆ ಸೇರಿದ್ದಾರೆ. ಇವರ ಜೊತೆಗೆ ಕರಾವಳಿಯ ಸೂಪರ್ ಸ್ಟಾರ್ ರೂಪೇಶ್ ಶೆಟ್ಟಿ ಕೂಡ ಬಿಗ್ ಬಾಸ್​ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

TV9 Web
| Edited By: |

Updated on: Aug 06, 2022 | 8:59 PM

Share
ಕನ್ನಡದ ಅತಿ ದೊಡ್ಡ ರಿಯಾಲಿಟಿ ಶೋ ‘ಬಿಗ್ ಬಾಸ್​ ಒಟಿಟಿ’ಗೆ (Bigg Boss OTT) ಇಂದು (ಆಗಸ್ಟ್ 6) ಸಂಜೆ 7 ಗಂಟೆಗೆ ಅದ್ಧೂರಿ ಚಾಲನೆ ಸಿಕ್ಕಿದೆ. ಅಭಿನಯ ಚಕ್ರವರ್ತಿ ಕಿಚ್ಚ ಸುದೀಪ್ (Kiccha Sudeep) ಬಿಗ್ ಬಾಸ್ ಮನೆಯೊಳಗೆ ಪ್ರವೇಶ ಮಾಡಿ ದೇವರಿಗೆ ಪೂಜೆ ಸಲ್ಲಿಸಿದ್ದಾರೆ. ಇದರ ಬೆನ್ನಲ್ಲೇ ಒಬ್ಬೊಬ್ಬರು ಸ್ಫರ್ಧಿಗಳು ದೊಡ್ಮನೆಯೊಳಗೆ ಎಂಟ್ರಿ ನೀಡುತ್ತಿದ್ದಾರೆ.

1 / 7
ಈಗಾಗಲೇ ಆರ್ಯವರ್ಧನ್​ ಗುರೂಜಿ, ಸೋನು ಶ್ರೀನಿವಾಸ್ ಗೌಡ, ಸ್ಪೂರ್ಥಿ ಗೌಡ, ಹಾಸ್ಯ ಕಲಾವಿದ ಲೋಕೇಶ್ ಅವರು ಬಿಗ್​ ಬಾಸ್ ಮನೆ ಸೇರಿದ್ದಾರೆ. ಇವರ ಜೊತೆಗೆ ಕರಾವಳಿಯ ಸೂಪರ್ ಸ್ಟಾರ್ ರೂಪೇಶ್ ಶೆಟ್ಟಿ ಕೂಡ ಬಿಗ್ ಬಾಸ್​ ಮನೆಗೆ ಎಂಟ್ರಿ ಕೊಟ್ಟಿದ್ದಾರೆ.

2 / 7
ವೇದಿಕೆ ಮೇಲೆ ಬಂದಂತೆ ರೂಪೇಶ್ ಅವರವನ್ನು ಸುದೀಪ್ ಚೆನ್ನಾಗಿ ಕಾಲೆಳೆದರು. ಅದರಲ್ಲೂ ಮನೆಯೊಳಗೆ ಯಾಕಾಗಿ ಹೋಗುತ್ತೀರಿ ಎಂದು ಕಿಚ್ಚ ಕೇಳಿದ್ದಕ್ಕೆ ಚೆನ್ನಾಗಿ ಆಡಬೇಕು, ಗೆಲ್ಲಬೇಕು ಎಂದು ರೂಪೇಶ್ ಹೇಳಿದರು. ಇದಕ್ಕೆ ತಿರುಗೇಟು ನೀಡಿದ ಸುದೀಪ್ 30 ವರ್ಷ ಕಳೆದರೂ ಬ್ಯಾಚುಲರ್ ಆಗಿದ್ದೀರಿ, ಒಳಗಡೆ ಬೇರೇನಾದ್ರು ಮಾಡ್ಬೇಕಲ್ವಾ ಎಂದು ಹೇಳಿದ್ದಾರೆ. ಆಗ ರೂಪೇಶ್ ಅವರು ಒಳಗಡೆ ಹಾಗೇನಾದ್ರು ಸಿಕ್ಕಿದ್ರೆ ಬಿಡಲ್ಲ ಎಂದು ನಗೆ ಚಟಾಕಿ ಹಾರಿಸಿದ್ದಾರೆ.

3 / 7
ರೂಪೇಶ್ ಶೆಟ್ಟಿ ಕನ್ನಡ ಮತ್ತು ತುಳು ಚಿತ್ರರಂಗದ ಪ್ರತಿಭಾವಂತ ನಟ. ಇವರು ಕನ್ನಡದಲ್ಲಿ ನಿಶಬ್ಧ 2, ಡೇಂಜರ್ ಜೋನ್, ಪಿಶಾಚಿ 2 ಮುಂತಾದ ಚಿತ್ರಗಳಲ್ಲಿ ಅಭಿನಯಿಸಿದ್ದಾರೆ. ಮೂಲತಃ ಕಾಸರಗೋಡಿನವರಾದ ರೂಪೇಶ್ ಮಂಗಳೂರಿನಲ್ಲಿರುವ ಚಾನೆಲ್​ ನಲ್ಲಿ ನಿರೂಪಕನಾಗಿ ಹೆಸರು ಮಾಡಿದ್ದಾರೆ.

4 / 7
ಚಿತ್ರರಂಗದಲ್ಲಿ ಏನಾದರೂ ಸಾಧನೆ ಮಾಡಬೇಕೆಂದು ಸಾಕಷ್ಟು ಶ್ರಮ ಪಟ್ಟ ಇವರು ದಿಬ್ಬಣ ಎಂಬ ತುಳು ಚಿತ್ರದಲ್ಲಿ ನಟಿಸುವ ಮೂಲಕ ಖ್ಯಾತಿ ಗಳಿಸಿದರು. 2015 ರಲ್ಲಿ ಡೇಂಜರ್ ಜ಼ೋನ್ ಎಂಬ ಕನ್ನಡ ಚಿತ್ರದಲ್ಲಿ ನಟಿಸುವ ಮೂಲಕ ಪ್ರಾಮುಖ್ಯತೆಯನ್ನು ಪಡೆದರು. ನಂತರ ಐಸ್ ಕ್ರೀಮ್, ಪಿಶಾಚಿ 2 , ನಿಶಬ್ಧ 2 ಮತ್ತು ಸ್ಮೈಲ್ ಪ್ಲೀಜ್ ಎಂಬ ಕನ್ನಡ ಚಲನಚಿತ್ರಗಳಲ್ಲೂ ಕಾಣಿಸಿಕೊಂಡರು.

5 / 7
2018 ರಲ್ಲಿ ರೂಪೇಶ್ ಶೆಟ್ಟಿ ನಾಯಕನಾಗಿ ನಟಿಸಿ ತುಳುವಿನಲ್ಲಿ ಬಿಡುಗಡೆ ಆದ ಅಮ್ಮೆರ್ ಪೊಲೀಸ ಚಿತ್ರ ದೊಡ್ಡ ಮಟ್ಟದಲ್ಲಿ ಹಿಟ್ ಆಗಿತ್ತು. ನಂತರ 2019 ರಲ್ಲಿ ನಿರ್ದೇಶನಕ್ಕೂ ಇಳಿದು ನಟಿಸಿದ ಗಿರ್ಗಿಟ್ (ತುಳು ಸಿನಿಮಾ) ಸಿನಿಮಾ ಬಾಕ್ಸ್​ ಆಫೀಸ್​ ಕೊಳ್ಳೆ ಹೊಡೆದಿತ್ತು. ತುಳು ಚಿತ್ರರಂಗದ ಇತಿಹಾಸದಲ್ಲೇ ಅತಿ ಹೆಚ್ಚು ಕಲೆಕ್ಷನ್ ಮಾಡಿದ ಚಿತ್ರ ಇದಾಯಿತು.

6 / 7
ಇತ್ತೀಚೆಗಷ್ಟೆ ಕನ್ನಡದಲ್ಲೂ ಸುಮಂತ್ ಹಾಗೂ ಭಾವನಾ ಜೊತೆ ಗೋವಿಂದ ಗೋವಿಂದ ಎಂಬ ಚಿತ್ರದಲ್ಲಿ ನಟಿಸಿದ್ದರು. ಹೀಗೆ ತೆರೆ ಹಿಂದೆ ಕಷ್ಟ ಪಟ್ಟು, ಬಣ್ಣದ ಪರದೆ ಮೇಲೆ ಕಾಣಿಸಿಕೊಳ್ಳುವ ಮಹೋತ್ತರ ಕನಸು ಹೊತ್ತು, ಕಷ್ಟದ ದಿನಗಳನ್ನು ಅನುಭವಿಸಿ ಇಂದು ತುಳು ಭಾಷೆಯ ಸೂಪರ್ ಸ್ಟಾರ್ ಆಗಿರುವ ನಟ ರೂಪೇಶ್ ಶೆಟ್ಟಿ ಇದೀಗ ಬಿಗ್ ಬಾಸ್ ಮನೆಗೆ ಕಾಲಿಟ್ಟಿದ್ದಾರೆ.

7 / 7
TV9 Web
TV9 Web

TV9 Kannada

Read More
Follow Us
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ನಿಮ್ಮ ರಾಶಿಯ ಆರ್ಥಿಕ, ವೃತ್ತಿ ಜಾತಕ ಹೇಗಿದೆ?
ಮಂಗಳೂರಿಗೆ ಮರಳಿದ 'ಚಿನ್ನದ ಹುಡುಗಿ' ಪೂವಮ್ಮಗೆ ಅದ್ಧೂರಿ ಸ್ವಾಗತ

ಆಷಾಢದಲ್ಲೂ ನವದಂಪತಿಯನ್ನು ಒಂದುಗೂಡಿಸುವ ಚಾಮರಾಜೇಶ್ವರ ಜಾತ್ರೆ

ಕಬ್ಬು ಬೆಳಗಾರರ ಪ್ರತಿಭಟನೆ ಬೆನ್ನಲ್ಲೇ ಅ.12ರಂದು ದಿಲ್ಲಿಯಲ್ಲಿ ಸಭೆ

ಮೂರೂ ಪಕ್ಷಗಳಿಂದ ಲಿಂಗಾಯತ ಸಮುದಾಯಕ್ಕೆ ಮಣೆ: 2028ಕ್ಕೆ ಮಾಸ್ಟರ್ ಪ್ಲಾನ್

‘ಪಟ್ಟ ಕಷ್ಟ ಅಷ್ಟಿಷ್ಟಲ್ಲ’, ‘ಪ್ರೇಮದ ಊರಲಿ’ ಯಶಸ್ಸಿನ ಬಗ್ಗೆ ನಾಯಕ ಶ್ರೀರಾಮ

ಬಿಗ್​​ಬಾಸ್ ಮನೆಯಲ್ಲಿ ಆಸಿಯಾ, ಯಶಸ್​​ ‘ಮಿಡ್ ನೈಟ್ ಆಪರೇಷನ್’

ಎಸ್​​ಐಆರ್ ವೇಳೆ ಮೈಸೂರಿನಲ್ಲಿ ಫಾರ್ಮ್​​ 7 ದುರ್ಬಳಕೆ: ಕೇಸ್ ಬುಕ್

ಕಡಿಮೆ ಬಜೆಟ್, ಸೂಪರ್ ಕಲೆಕ್ಷನ್: ಪ್ರೇಮದ ಊರಲಿ ಬಗ್ಗೆ ಚಿತ್ರಮಂದಿರದವರ ಮಾತು

ಚೆನಾಬ್- ಅಂಜಿ ಸೇತುವೆ ಮೇಲೆ 100 ಕಿ.ಮೀ. ವೇಗದಲ್ಲಿ ಚಲಿಸಿದ ವಂದೇ ಭಾರತ್