AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Rakesh Adiga: ‘ಬಿಗ್​ ಬಾಸ್​’ ಮನೆಗೆ ರಾಕೇಶ್ ಅಡಿಗ ಎಂಟ್ರಿ; ಆರಂಭ ಆಗುತ್ತಾ ಸೆಕೆಂಡ್ ಇನ್ನಿಂಗ್ಸ್​?

Bigg Boss OTT Kannada: ರಾಕೇಶ್ ಅಡಿಗ ಅವರ ಮೊದಲ ಸಿನಿಮಾ 2009ರ ‘ಜೋಶ್​’. ಈ ಚಿತ್ರ ವಿಮರ್ಶಕರಿಂದ ಮೆಚ್ಚುಗೆ ಪಡೆದುಕೊಂಡಿತು. ಕಾಲೇಜ್ ಕಥೆ ಹೊಂದಿದ್ದ ಈ ಚಿತ್ರದಿಂದ ಅವರಿಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿತು.

Rakesh Adiga: ‘ಬಿಗ್​ ಬಾಸ್​’ ಮನೆಗೆ ರಾಕೇಶ್ ಅಡಿಗ ಎಂಟ್ರಿ; ಆರಂಭ ಆಗುತ್ತಾ ಸೆಕೆಂಡ್ ಇನ್ನಿಂಗ್ಸ್​?
ರಾಕೇಶ್ ಅಡಿಗ
TV9 Web
| Edited By: |

Updated on: Aug 06, 2022 | 9:18 PM

Share

‘ಬಿಗ್ ಬಾಸ್​ ಒಟಿಟಿ’ (Bigg Boss OTT) ಆರಂಭ ಆಗಿದೆ. ಆಗಸ್ಟ್​ 6ರ ಸಂಜೆ 7 ಗಂಟೆಗೆ ಒಟಿಟಿಯ ಮೊದಲ ಸೀಸನ್ ಶುರುವಾಗಿದೆ. ಈ ಶೋನಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಸಾಕಷ್ಟು ಖ್ಯಾತಿ ಗಳಿಸಿದವರು ಎಂಟ್ರಿ ಕೊಟ್ಟಿದ್ದಾರೆ. ಇದರ ಜತೆಗೆ ಸಿನಿಮಾ ಹಾಗೂ ಧಾರಾವಾಹಿಗಳಲ್ಲಿ ಫೇಮಸ್ ಆದವರೂ ಇದ್ದಾರೆ. ಆ ಪೈಕಿ ರಾಕೇಶ್ ಅಡಿಗ (Rakesh Adiga) ಕೂಡ ಒಬ್ಬರು. ‘ಬಿಗ್ ಬಾಸ್ ಒಟಿಟಿ’ಗೆ ಅವರು ಸ್ಪರ್ಧಿಯಾಗಿ ಎಂಟ್ರಿ ಕೊಟ್ಟಿದ್ದಾರೆ. ಅವರ ಬಗ್ಗೆ ಅಭಿಮಾನಿಗಳಿಗೆ ನಿರೀಕ್ಷೆ ಇದೆ.

ರಾಕೇಶ್ ಅಡಿಗ ಅವರ ಮೊದಲ ಸಿನಿಮಾ 2009ರ ‘ಜೋಶ್​’. ಈ ಚಿತ್ರ ವಿಮರ್ಶಕರಿಂದ ಮೆಚ್ಚುಗೆ ಪಡೆದುಕೊಂಡಿತು. ಕಾಲೇಜ್ ಕಥೆ ಹೊಂದಿದ್ದ ಈ ಚಿತ್ರದಿಂದ ಅವರಿಗೆ ಸಾಕಷ್ಟು ಜನಪ್ರಿಯತೆ ಸಿಕ್ಕಿತು. ಮೊದಲ ಚಿತ್ರದಲ್ಲಿ ದೊಡ್ಡ ಯಶಸ್ಸು ಪಡೆದ ಅವರಿಗೆ ಹಲವು ಆಫರ್​ಗಳು ಹುಡುಕಿಕೊಂಡು ಬಂದವು. ಹಲವು ಸಿನಿಮಾಗಳಲ್ಲಿ ರಾಕೇಶ್ ಅಡಿಗ ನಟಿಸಿದರು.

‘ಅಲೆಮಾರಿ’, ‘ಕೋಟಿಗೊಂದ್​ ಲವ್​ ಸ್ಟೋರಿ’ ಮೊದಲಾದ ಚಿತ್ರಗಳಲ್ಲಿ ರಾಕೇಶ್ ನಟಿಸಿದರು. ಆದರೆ, ಅವರಿಗೆ ಮೊದಲ ಸಿನಿಮಾದಷ್ಟು ಯಶಸ್ಸು ಸಿಗಲಿಲ್ಲ. 2019ರಲ್ಲಿ ತೆರೆಗೆ ಬಂದ ‘ನೈಟ್ ಔಟ್’ ಅವರ ಕೊನೆಯ ಸಿನಿಮಾ. ಅದಾದ ಬಳಿಕ ಅವರು ಯಾವ ಸಿನಿಮಾದಲ್ಲೂ ನಟಿಸಿಲ್ಲ.

ಇದನ್ನೂ ಓದಿ
Image
‘ಬಿಗ್ ಬಾಸ್’ ಮನೆಯಲ್ಲಿ ಸುದೀಪ್ ಹೋಲುವ ಮೂರ್ತಿ; ಪ್ರತಿ ವಿಚಾರಕ್ಕೂ ವಿವರಣೆ ನೀಡಿದ ಕಿಚ್ಚ
Image
Bigg Boss OTT: ‘ಬಿಗ್ ಬಾಸ್​ ಒಟಿಟಿ’ಗೆ ವಾಸುಕಿ ವೈಭವ್ ಎಂಟ್ರಿ; ಮಾಜಿ ಸ್ಪರ್ಧಿ ಕಂಡು ಫ್ಯಾನ್ಸ್ ಖುಷ್
Image
Bigg Boss OTT Kannada: ಈ ಬಾರಿಯ ‘ಬಿಗ್ ಬಾಸ್ ಒಟಿಟಿ’ ಪ್ರಸಾರ ಎಷ್ಟು ಗಂಟೆಗೆ, ಎಲ್ಲಿ ವೀಕ್ಷಿಸಬಹುದು? ಇಲ್ಲಿದೆ ಉತ್ತರ
Image
ಹಿಂದಿಗೆ ಡಬ್, ಮರಾಠಿಗೆ ರಿಮೇಕ್​ ಆದ ‘ಕನ್ನಡತಿ’: ಈ ಧಾರಾವಾಹಿಗೆ ಹೇಗಿದೆ ರೆಸ್ಪಾನ್ಸ್? ಇಲ್ಲಿದೆ ಉತ್ತರ

‘ಬಿಗ್​ ಬಾಸ್​’ಗೆ ಎಂಟ್ರಿ ಪಡೆದ ನಂತರ ಮತ್ತೆ ಜನಪ್ರಿಯತೆ ಸಿಕ್ಕ ಸಾಕಷ್ಟು ಉದಾಹರಣೆ ಇದೆ. ಬಿಗ್ ಬಾಸ್​ನಿಂದ ಬಣ್ಣದ ಲೋಕದಲ್ಲಿ ಸೆಕೆಂಡ್ ಇನ್ನಿಂಗ್ಸ್​​ ಚಾನ್ಸ್​ ಅನೇಕರಿಗೆ ಸಿಕ್ಕಿದೆ. ರಾಕೇಶ್ ಅಡಿಗ ಅವರು ದೊಡ್ಮನೆಯಲ್ಲಿ ಒಳ್ಳೆಯ ಪರ್ಫಾರ್ಮೆನ್ಸ್ ನೀಡಿದರೆ ಖಂಡಿತವಾಗಿಯೂ ಅವರ ವೃತ್ತಿ ಜೀವನದಲ್ಲಿ ಎರಡನೇ ಇನ್ನಿಂಗ್ಸ್​ ಶುರುವಾಗುವುದರಲ್ಲಿ ಅನುಮಾನ ಇಲ್ಲ.

ಇದನ್ನೂ ಓದಿ:  ‘ಬಿಗ್ ಬಾಸ್ ಒಟಿಟಿ’ ಎರಡನೇ ಸ್ಪರ್ಧಿಯಾಗಿ ಸೋನು ಶ್ರೀನಿವಾಸ್ ಗೌಡ ಎಂಟ್ರಿ

‘ಬಿಗ್​ ಬಾಸ್​’ಗೆ ಈಗಾಗಲೇ ಸೋನು ಶ್ರೀನಿವಾಸ್​ ಗೌಡ, ಆರ್ಯವರ್ಧನ್​ ಗುರೂಜಿ ಮೊದಲಾದವರು ಕಾಲಿಟ್ಟಿದ್ದಾರೆ. ಸೋಶಿಯಲ್ ಮೀಡಿಯಾ, ಟಿವಿ, ಎಫ್​ಎಂ ಮೊದಲಾದ ಕ್ಷೇತ್ರಗಳಿಂದ ಸ್ಪರ್ಧಿಗಳನ್ನು ಆಯ್ಕೆ ಮಾಡಿ ಕರೆತರಲಾಗಿದೆ. ಈ ಕಾರಣದಿಂದಲೂ ‘ಬಿಗ್​ ಬಾಸ್​ ಒಟಿಟಿ’ ಸಾಕಷ್ಟು ಗಮನ ಸೆಳೆಯುತ್ತಿದೆ. ಒಂದೂವರೆ ತಿಂಗಳ ಕಾಲ ಈ ಶೋ 24 ಗಂಟೆ ಒಟಿಟಿಯಲ್ಲಿ ಪ್ರಸಾರ ಕಾಣಲಿದೆ.

ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಭಾರತದ ಪ್ರಧಾನಿ ಮೋದಿಗೆ ಓಮನ್​ನ ಅತ್ಯುನ್ನತ ರಾಷ್ಟ್ರೀಯ ಪ್ರಶಸ್ತಿ ಪ್ರದಾನ
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಹೈವೇನಲ್ಲಿ ಭಯಾನಕ ಅಪಘಾತ: ಬುಗುರಿ ತಿರುಗಿದಂತೆ ತಿರುಗಿದ ಕಾರು
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಪ್ರೀತಿ ಬಲೆಗೆ ಬಿದ್ದ ವಿದ್ಯಾರ್ಥಿನಿ ಲೈಫೇ ಬರ್ಬಾದ್​​: ಯುವತಿ ಮೇಲೆ ವಿಕೃತಿ
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಮುಡಾ ಹಗರಣ: ಲೋಕಾಯುಕ್ತ ವಿರುದ್ಧವೇ ಸ್ನೇಹಮಯಿ ಕೃಷ್ಣ ಬಿಗ್​​ಬಾಂಬ್
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಕರ್ತವ್ಯದಲ್ಲಿದ್ದ ಎಎಸ್ಐ ಮಾಂಗಲ್ಯಸರವನ್ನೇ ಕದ್ದ ಕಳ್ಳರು!
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಬಿಗ್​​ಬಾಸ್ ಮನೆಯಲ್ಲಿ ತಮ್ಮ ಮೊದಲ ಪ್ರೀತಿಯ ಕತೆ ಹೇಳಿದ ರವಿಚಂದ್ರನ್
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಸ್ಮಶಾನ, ಕೆರೆ ಜಮೀನು ಕೃಷ್ಣಭೈರೇಗೌಡರ ಪಿತ್ರಾರ್ಜಿತ ಆಸ್ತಿಯಾ?
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಶಕ್ತಿ ಯೋಜನೆಗೆ 4 ಸಾವಿರ ಕೋಟಿ ಬಾಕಿ ಒಪ್ಪಿಕೊಂಡ ಸಾರಿಗೆ ಸಚಿವ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಕೆಪಿಸಿಸಿ ಅಧ್ಯಕ್ಷರ ಬದಲಾವಣೆಗೆ ಆ ಪತ್ರವೇ ಸಾಕ್ಷಿ! ರಾಜಣ್ಣ
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್
ಬಿಗ್ ಬಾಸ್ ಮುಗಿದ ಬಳಿಕ ಬರಲಿರೋ ಧಾರಾವಾಹಿ ಯಾವುದು? ಪ್ರೋಮೋ ರಿಲೀಸ್