AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ವಿಚ್ಛೇದನದ ಮೂಲಕ ಸುದ್ದಿ ಆಗಿದ್ದ ನಟಿ ಚೈತ್ರಾ ಹಳ್ಳಿಕೇರಿ ಬಿಗ್​ ಬಾಸ್ ಒಟಿಟಿ​ಗೆ ಎಂಟ್ರಿ

Bigg Boss OTT kannada: ‘ನನಗೆ ಸಿನಿಮಾದಿಂದ ತುಂಬಾ ಆಫರ್ ಬರುತ್ತಿತ್ತು. ಆದರೆ, ಒಪ್ಪಿಕೊಳ್ಳಲಿಲ್ಲ. ಮದುವೆ ಆದ್ಮೇಲೆ ರಿಯಾಲಿಟಿ ಗೊತ್ತಾಯ್ತು’ ಎಂದು ತಮ್ಮ ಬಗ್ಗೆ ಮಾತು ಆರಂಭಿಸಿದ್ದಾರೆ ಚೈತ್ರಾ.

ವಿಚ್ಛೇದನದ ಮೂಲಕ ಸುದ್ದಿ ಆಗಿದ್ದ ನಟಿ ಚೈತ್ರಾ ಹಳ್ಳಿಕೇರಿ ಬಿಗ್​ ಬಾಸ್ ಒಟಿಟಿ​ಗೆ ಎಂಟ್ರಿ
ಚೈತ್ರಾ
TV9 Web
| Edited By: |

Updated on:Aug 06, 2022 | 10:31 PM

Share

Bigg Boss OTT Kannada Season 1: ತಮಗೆ ಸೇರಿದ ಬ್ಯಾಂಕ್ ಖಾತೆಯನ್ನು ಕುಟುಂಬದವರೇ ದುರ್ಬಳಕೆ ಮಾಡಿದ್ದಾರೆ ಎಂದು ನಟಿ ಚೈತ್ರಾ ಹಳ್ಳಿಕೇರಿ ಇತ್ತೀಚೆಗೆ ಆರೋಪಿಸಿದ್ದರು. ಈ ಪ್ರಕರಣಕ್ಕೆ ಸಂಬಂಧಿಸಿ ಮಾಜಿ ಪತಿ ಮತ್ತು ಮಾಜಿ ಮಾವನ ವಿರುದ್ಧವೇ ಪೊಲೀಸರಿಗೆ ಅವರು ದೂರು ನೀಡಿದ್ದರು. ಈಗ ಅವರು ‘ಬಿಗ್ ಬಾಸ್ ಒಟಿಟಿ’ಗೆ ಕಾಲಿಟ್ಟಿದ್ದಾರೆ. ಅವರು ತಮ್ಮ ಜೀವನದ ಕಷ್ಟದ ದಿನಗಳನ್ನು ಬದಿಗೊತ್ತಿ ಈಗ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ.

‘ನಾನು ಹ್ಯಾಪಿ ಸೋಲ್. ನನ್ನೊಳಗೆ ಖುಷಿ ನೋಡ್ತೀನಿ. ನನ್ನ ಇಡೀ ಫ್ಯಾಮಿಲಿಯಲ್ಲಿ ನಾನೊಬ್ಬಳೇ ಆರ್ಟಿಸ್ಟ್. ನನಗೆ ಸಿನಿಮಾದಿಂದ ತುಂಬಾ ಆಫರ್ ಬರುತ್ತಿತ್ತು. ಆದರೆ, ಒಪ್ಪಿಕೊಳ್ಳಲಿಲ್ಲ. ಮದುವೆ ಆದ್ಮೇಲೆ ರಿಯಾಲಿಟಿ ಗೊತ್ತಾಯ್ತು’ ಎಂದು ತಮ್ಮ ಬಗ್ಗೆ ಮಾತು ಆರಂಭಿಸಿದ್ದಾರೆ ಚೈತ್ರಾ.

‘ಮದುವೆ ಆದಮೇಲೆ ಕಿರುಕುಳ ಶುರುವಾಯ್ತು. ಅವರು ಕೂರು ಅಂದರೆ ಕೂರುತ್ತಿದ್ದೆ, ಏಳು ಅಂದರೆ ಏಳುತ್ತಿದ್ದೆ. ಮದುವೆಯಿಂದಾಗಿ ನನ್ನ ಜೀವನದ ಹಲವು ವರ್ಷ ಅಳಿಸಿ ಹೋಯ್ತು. ಆ ವರ್ಷಗಳಿಂದ ಸಿಕ್ಕಿದ್ದು ನನ್ನ ಈ ಇಬ್ಬರು ಮಕ್ಕಳು ಮಾತ್ರ. ನಾನು ಮೇಕಪ್ ಆರ್ಟಿಸ್ಟ್​ ಕೂಡ ಹೌದು. ಆ್ಯಕ್ಟಿಂಗ್ ಆಫರ್ ಬರುತ್ತಿದೆ. ಎಲ್ಲವನ್ನೂ ಒಪ್ಪಿಕೊಳ್ಳುತ್ತಿಲ್ಲ. ಮತ್ತೊಂದು ಡೋರ್ ಓಪನ್ ಆಗ್ತಿದೆ’ ಎಂದರು ಚೈತ್ರಾ ಹಳ್ಳಿಕೇರಿ.

ಇದನ್ನೂ ಓದಿ
Image
Bigg Boss OTT Kannada: ಬಿಗ್ ಬಾಸ್ ಓಟಿಟಿ ಶುರುವಾಗುತ್ತಿದ್ದಂತೆ ಬಿಗ್ ಸರ್​ಪ್ರೈಸ್ ನೀಡಿದ ಕಿಚ್ಚ ಸುದೀಪ್: ಏನದು?
Image
Roopesh Shetty: ಬಿಗ್ ​ಬಾಸ್ ಮನೆಗೆ ಎಂಟ್ರಿಕೊಟ್ಟ ಕರಾವಳಿಯ ಸೂಪರ್ ಸ್ಟಾರ್: ಯಾರು ಗೊತ್ತಾ ಈ ರೂಪೇಶ್ ಶೆಟ್ಟಿ?
Image
Aryavardhan Guruji: ಜಿಂಗಲಕಾ ಲಕಾ ಲಕಾ: ‘ಬಿಗ್ ಬಾಸ್’ ಮನೆ ಸೇರಿದ ಈ ಆರ್ಯವರ್ಧನ್​ ಗುರೂಜಿ ಯಾರು?
Image
Sonu Srinivas Gowda: ‘ಬಿಗ್ ಬಾಸ್ ಒಟಿಟಿ’ ಎರಡನೇ ಸ್ಪರ್ಧಿಯಾಗಿ ಸೋನು ಶ್ರೀನಿವಾಸ್ ಗೌಡ ಎಂಟ್ರಿ

ವಿವಾದ ಮೂಲಕ ಸುದ್ದಿ ಆಗಿದ್ದ ಚೈತ್ರಾ ಹಳ್ಳಿಕೇರಿ

‘ನನ್ನ ಹೆಸರಲ್ಲಿ ಒಂದು ಬ್ಯಾಂಕ್ ಅಕೌಂಟ್ ತೆರೆಯಲಾಗಿದೆ. ನನಗೆ ಗೊತ್ತಿಲ್ಲದೆ ಆ ಖಾತೆಯಲ್ಲಿ ವ್ಯವಹಾರ ಮಾಡಲಾಗಿದೆ. ಇದ್ಯಾವುದೂ ನನ್ನ ಗಮನಕ್ಕೆ ಬಂದಿಲ್ಲ. ನಾವು ಈ ಬ್ಯಾಂಕ್​ನವರಲ್ಲಿ ಪ್ರಶ್ನೆ ಮಾಡಿದೆವು. ಆದರೆ, ಅವರು ನಮಗೆ ಮಾಹಿತಿ ನೀಡಿಲ್ಲ. ಮದುವೆ ನಂತರ ಈ ಬ್ಯಾಂಕ್ ಖಾತೆ ಓಪನ್ ಮಾಡಲಾಗಿತ್ತು’ ಎಂದು ಚೈತ್ರಾ ಈ ಮೊದಲು ಮಾಜಿ ಪತಿ ವಿರುದ್ಧ ಆರೋಪ ಮಾಡಿದ್ದರು.

ಇದನ್ನೂ ಓದಿ: ‘ಬಿಗ್ ಬಾಸ್ ಒಟಿಟಿ ಸ್ಪರ್ಧಿ’ ಸಾನ್ಯಾ ಅಯ್ಯರ್ ಸಖತ್ ಬೋಲ್ಡ್​; ಇಲ್ಲಿವೆ ಚಿತ್ರಗಳು

‘ಮದುವೆ ನಂತರ ನಟನೆ ಬಿಡಬೇಕು ಎಂಬ ಷರತ್ತನ್ನು ನಾನು ಪಾಲಿಸಿದ್ದೆ. ಆದರೆ, ನನಗೆ ತುಂಬಾ ಕಷ್ಟವಾಗುತ್ತಿತ್ತು. ಹೇಗೋ ಕಷ್ಟಪಟ್ಟು ಧಾರಾವಾಹಿ ನಿರ್ಮಿಸಿದ್ದೆ. ಅದರಲ್ಲಿ ಆದ ಸಂಪಾದನೆಯನ್ನೂ ಪತಿ ಕಿತ್ತುಕೊಂಡಿದ್ದರು. ಅಷ್ಟೇ ಅಲ್ಲದೆ ನನ್ನನ್ನು ಥಳಿಸಿದ್ದರು’ ಎಂದು ಮಾರ್ಚ್ 14, 2018ರಂದು ಚೈತ್ರಾ ಬಸವನಗುಡಿ ಪೊಲೀಸ್ ಠಾಣೆಗೆ ದೂರು ಕೊಟ್ಟಿದ್ದರು.

Published On - 10:31 pm, Sat, 6 August 22

Follow Us
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಇನ್ನೇನು ವಿಶೇಷ ಚೇತನರಿಗೆ ಹಸ್ತಾಂತರಿಸಬೇಕಿದ್ದ ವಾಹನಗಳು ಸುಟ್ಟು ಭಸ್ಮ
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಬಂಗಾಳದ ಮತಗಟ್ಟೆಗೆ ಕಾಡಾನೆ ಎಂಟ್ರಿ; ಕಂಗಾಲಾದ ಮತದಾರರು
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ಟಿಎಂಸಿಯ ಗೂಂಡಾಗಿರಿ ಅಂತ್ಯವಾಗುವ ಸಮಯ ಬಂದಿದೆ; ಬಂಗಾಳದಲ್ಲಿ ಅಮಿತ್ ಶಾ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ದೆಹಲಿಯಲ್ಲಿ ಡಿಕೆಶಿ ಸ್ಫೋಟಕ ಹೇಳಿಕೆ, ರಾಜ್ಯ ರಾಜಕಾರಣದಲ್ಲಿ ಸಂಚಲನ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬಂಗಾಳದ ಹೌರಾದಲ್ಲಿ ಪ್ರಧಾನಿ ಮೋದಿ ಬೃಹತ್ ರೋಡ್ ಶೋ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ಬೆಂಗಳೂರಿನಲ್ಲಿ ಭಾರೀ ಅಗ್ನಿ ದುರಂತ, 10ಕಿ.ಮೀ ವರೆಗೂ ಗೋಚರಿಸಿದ ದಟ್ಟ ಹೊಗೆ
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ತಂದೆ ಸಾವಿನ ನಡುವೆ ಪರೀಕ್ಷೆ ಬರೆದಿದ್ದ ವಿದ್ಯಾರ್ಥಿ SSLC ಪಾಸ್​​
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಬಂಗಾಳದಲ್ಲಿ ಬಿಜೆಪಿ ಅಭ್ಯರ್ಥಿಯನ್ನು ಅಟ್ಟಾಡಿಸಿಕೊಂಡು ಹೋಗಿ ಹಲ್ಲೆ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಶುರುವಾಯ್ತು ಸಲ್ಮಾನ್ ಖಾನ್-ನಯನತಾರಾ ಸಿನಿಮಾ: ವಿಡಿಯೋ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ
ಮದುವೆ ಮಂಟಪದಿಂದ ಮತಗಟ್ಟೆಗೆ; ತಿರುನಲ್ವೇಲಿಯಲ್ಲಿ ನವವಿವಾಹಿತರ ಮತದಾನ