ಮೀಸೆ, ತಲೆ ಬೋಳಿಸಿಕೊಂಡ ಆರ್ಯವರ್ಧನ್​; ಗುರೂಜಿ ಹೊಸ ಲುಕ್ ಹೇಗಿದೆ ನೋಡಿ

ಆರ್ಯವರ್ಧನ್ ಬಿಗ್ ಬಾಸ್​ ಮನೆಗೆ ಕಾಲಿಡುವ ಮೂಲಕ ಜನಪ್ರಿಯತೆ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಮನೆಯಲ್ಲಿ ಹಿರಿಯವರಾಗಿ ಎಲ್ಲರಿಗೂ ಮಾರ್ಗದರ್ಶನ ನೀಡುತ್ತಾ ಸಾಗುತ್ತಿದ್ದಾರೆ.

ಮೀಸೆ, ತಲೆ ಬೋಳಿಸಿಕೊಂಡ ಆರ್ಯವರ್ಧನ್​; ಗುರೂಜಿ ಹೊಸ ಲುಕ್ ಹೇಗಿದೆ ನೋಡಿ
Follow us
TV9 Web
| Updated By: ರಾಜೇಶ್ ದುಗ್ಗುಮನೆ

Updated on:Aug 08, 2022 | 6:07 PM

ಆರ್ಯವರ್ಧನ್​ ಗುರೂಜಿ (Aryavardhan Guruji) ಅವರು ‘ಬಿಗ್ ಬಾಸ್ ಒಟಿಟಿ’ ಮೂಲಕ ಎಲ್ಲರ ಗಮನ ಸೆಳೆಯುತ್ತಿದ್ದಾರೆ. ಅವರು ದೊಡ್ಮನೆಗೆ ಎಂಟ್ರಿ ನೀಡಿದ್ದು ಸಾಕಷ್ಟು ಕುತೂಹಲ ಹುಟ್ಟು ಹಾಕಿದೆ. ಸೋಶಿಯಲ್ ಮೀಡಿಯಾದಲ್ಲಿ ಆರ್ಯವರ್ಧನ್ ಅವರಿಗೆ ದೊಡ್ಡ ಅಭಿಮಾನಿ ಬಳಗ ಇದೆ. ಈ ಕಾರಣಕ್ಕೂ ಅನೇಕರು ಅವರನ್ನು ಬೆಂಬಲಿಸುತ್ತಿದ್ದಾರೆ. ಈಗ ಮನೆಗೆ ಬಂದ ಮರುದಿನವೇ ಅವರ ಲುಕ್ ಬದಲಾಗಿದೆ. ತಲೆ ಹಾಗೂ ಮೀಸೆ ಬೋಳಿಸಿಕೊಂಡು ಭಿನ್ನರೀತಿಯಲ್ಲಿ ಆರ್ಯವರ್ಧನ್ ಕಾಣಿಸಿಕೊಂಡಿದ್ದಾರೆ. ಈ ಎಪಿಸೋಡ್ ಇಂದು (ಆಗಸ್ಟ್ 8) ಪ್ರಸಾರ ಆಗುತ್ತಿದೆ.

ಆರ್ಯವರ್ಧನ್ ಅವರು ಸಂಖ್ಯಾಶಾಸ್ತ್ರಜ್ಞರು. ಅದೃಷ್ಟ ಸಂಖ್ಯೆ, ಹುಟ್ಟಿದ ದಿನಾಂಕ ಮತ್ತಿತ್ಯಾದಿ ವಿಚಾರಗಳನ್ನು ಇಟ್ಟುಕೊಂಡು ಅವರು ಭವಿಷ್ಯ ನುಡಿಯುತ್ತಾರೆ. ಐಪಿಎಲ್​ ಸಂದರ್ಭದಲ್ಲಿ ಅವರು ನೀಡುತ್ತಿದ್ದ ಪ್ರಿಡಿಕ್ಷನ್​ನಿಂದ ಸಾಕಷ್ಟು ಟ್ರೋಲ್​ಗೆ ಒಳಗಾಗಿದ್ದರು. ಈಗ ಆರ್ಯವರ್ಧನ್ ಬಿಗ್ ಬಾಸ್​ ಮನೆಗೆ ಕಾಲಿಡುವ ಮೂಲಕ ಜನಪ್ರಿಯತೆ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಮನೆಯಲ್ಲಿ ಹಿರಿಯವರಾಗಿ ಎಲ್ಲರಿಗೂ ಮಾರ್ಗದರ್ಶನ ನೀಡುತ್ತಾ ಸಾಗುತ್ತಿದ್ದಾರೆ. ಈ ಮಧ್ಯೆ ಅವರ ಹೊಸ ಲುಕ್ ವೈರಲ್ ಆಗಿದೆ.

ನಟ, ರಾಜಕಾರಣಿ ಅರ್ಜುನ್ ರಮೇಶ್ ಅವರು ಆರ್ಯವರ್ಧನ್​ ಅವರ ಗಡ್ಡ ಬೋಳಿಸಿದ್ದಾರೆ. ‘ಮೀಸೆ ಕತ್ತರಿಸಬೇಡಿ. ಕೆಂಪೇಗೌಡ ಸುದೀಪ್ ರೀತಿ ಕಾಣುತ್ತಿದ್ದೀರಿ’ ಎಂದು ಬಾಯ್ತುಂಬ ಹೊಗಳಿದ್ದಾರೆ. ಪ್ರೋಮೋದಲ್ಲಿ ಇಷ್ಟೇ ವಿಚಾರ ತೋರಿಸಲಾಗಿದೆ. ನಂತರದ ವಿಡಿಯೋದಲ್ಲಿ ಗುರೂಜಿ ಅವರು ಮೀಸೆ ಹಾಗೂ ತಲೆ ಕೂದಲು ಇಲ್ಲದೆ ಕಾಣಿಸಿಕೊಂಡಿದ್ದಾರೆ. ಅವರ ಹೊಸ ಲುಕ್ ಸಾಕಷ್ಟು ವೈರಲ್ ಆಗುತ್ತಿದೆ.

ಇದನ್ನೂ ಓದಿ
Image
ಆರ್ಯವರ್ಧನ್​ ಗುರೂಜಿ ಕುಟುಂಬದ ಆಸ್ತಿ 5 ಸಾವಿರ ಕೋಟಿ ರೂಪಾಯಿ; ಶಾಕ್​ ಆದ ಸ್ಪರ್ಧಿಗಳು
Image
Aryavardhan Guruji: ಈ ಬಾರಿ ‘ಬಿಗ್ ಬಾಸ್​’ ಗೆಲ್ಲೋರು ಯಾರು? ಮೊದಲ ದಿನವೇ ಭವಿಷ್ಯ ನುಡಿದ ಆರ್ಯವರ್ಧನ್​ ಗುರೂಜಿ
Image
Aryavardhan Guruji: ಜಿಂಗಲಕಾ ಲಕಾ ಲಕಾ: ‘ಬಿಗ್ ಬಾಸ್’ ಮನೆ ಸೇರಿದ ಈ ಆರ್ಯವರ್ಧನ್​ ಗುರೂಜಿ ಯಾರು?
Image
Aryavardhan Guruji: ‘ಬಿಗ್ ಬಾಸ್ ಒಟಿಟಿ’ಯ ಮೊದಲ ಸ್ಪರ್ಧಿಯಾಗಿ ಮನೆ ಸೇರಿದ ಆರ್ಯವರ್ಧನ್​ ಗುರೂಜಿ

ಇದನ್ನೂ ಓದಿ: ಆರ್ಯವರ್ಧನ್​ ಗುರೂಜಿ ಕುಟುಂಬದ ಆಸ್ತಿ 5 ಸಾವಿರ ಕೋಟಿ ರೂಪಾಯಿ; ಶಾಕ್​ ಆದ ಸ್ಪರ್ಧಿಗಳು

ಆರ್ಯವರ್ಧನ್ ಅವರು ಹಲವು ವಿಚಾರಗಳಲ್ಲಿ ಹೆಚ್ಚು ಚರ್ಚೆಯಲ್ಲಿದ್ದಾರೆ. ತಾವು ನಿಜ ಜೀವನದಲ್ಲಿ ದೆವ್ವ ನೋಡಿರುವ ಬಗ್ಗೆ ಅವರು ಹೇಳಿದ್ದರು. ಜತೆಗೆ ಅವರ ಆಸ್ತಿ ಮೌಲ್ಯ ಕೇಳಿ ಎಲ್ಲರೂ ಅಚ್ಚರಿಗೊಂಡಿದ್ದರು. ‘ಹಾಸನ ಮತ್ತು ಬೇಲೂರು ಮಧ್ಯೆ ನಮ್ಮದು 40 ಎಕರೆ ಜಮೀನು ಇದೆ. ಸುತ್ತಲೂ ಕಾಡು-ಬೆಟ್ಟ ಇದೆ. ಮೂರು ಕೆರೆ ಇದೆ. ಸುತ್ತ ಮುತ್ತ ಯಾವುದೇ ಮನೆ ಇಲ್ಲ. ಇಂದು ಎಲ್ಲರೂ ಸಿಟಿಯಲ್ಲಿ ದುಡ್ಡು ಸಂಪಾದನೆ ಮಾಡಿ ಹಳ್ಳಿಗೆ ಹೋಗುತ್ತಾರೆ. ಆದರೆ ನಾವು ಹಳ್ಳಿಯಲ್ಲಿ ಇದ್ದು ಬೆಂಗಳೂರಿಗೆ ಬಂದವರು. ನಮಗೆ ಹಳ್ಳಿ ಎಂದರೆ ಬೋರು. ಸಾಕಷ್ಟು ಜಮೀನು ನಮಗೆ ಇದೆ. ನಾನು ಸುಳ್ಳು ಹೇಳಲ್ಲ. ನಮ್ಮ ಅಜ್ಜನ ಆಸ್ತಿ ಏನಿಲ್ಲವೆಂದರೂ 5 ಸಾವಿರ ಕೋಟಿ ರೂಪಾಯಿ ಬೆಲೆ ಬಾಳುತ್ತದೆ’ ಎಂದು ಆರ್ಯವರ್ಧನ್​ ಗುರೂಜಿ ಹೇಳಿದ್ದರು.

ಹೆಚ್ಚಿನ ಸಿನಿಮಾ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ.

Published On - 5:52 pm, Mon, 8 August 22

ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ಅಪ್ಪ ಸಿಎಂ ಆದಾಗ ವಿಜಯೇಂದ್ರ ದುಡ್ಡು ಮಾಡಿದ್ದೆಷ್ಟು ಅಂತ ಗೊತ್ತಿದೆ:ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ವಿಜಯೇಂದ್ರ ಒಂದು ಹೊಡೆದರೆ ನಾವು ನಾಲ್ಕು ಹೊಡೆಯುತ್ತೇವೆ: ಯತ್ನಾಳ್
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ಸೀಸನ್​ನ ಕೊನೆಯ ಪಂಚಾಯಿತಿ ಮಾಡಲು ತೋಳೆರಿಸಿಕೊಂಡೇ ಬಂದ ಕಿಚ್ಚ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ
ವರಿಷ್ಠರು ನನ್ನನ್ನೇ ಅಧ್ಯಕ್ಷನಾಗಿ ಮುಂದುವರಿಸುವ ಭರವಸೆ ಇದೆ: ವಿಜಯೇಂದ್ರ