AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

‘ಕೆಜಿಎಫ್ 2’ ಎದುರು ಬರದೆ ನಾವು ಬದುಕಿದೆವು; ಆಮಿರ್ ಖಾನ್​ಗೂ ಭಯ ಹುಟ್ಟಿಸಿದ್ದ ಯಶ್ ಚಿತ್ರದ ಅಬ್ಬರ

‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಏಪ್ರಿಲ್ 14ರಂದು ತೆರೆಗೆ ಬರಬೇಕಿತ್ತು. ಆದರೆ, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ವಿಳಂಬ ಆದ ಕಾರಣ ಸಿನಿಮಾ ರಿಲೀಸ್ ದಿನಾಂಕ ಆಗಸ್ಟ್ 11ಕ್ಕೆ ಮುಂದೂಡಲ್ಪಟ್ಟಿತ್ತು. ಈ ಬಗ್ಗೆ ಆಮಿರ್ ಖಾನ್ ಮಾತನಾಡಿದ್ದಾರೆ.

‘ಕೆಜಿಎಫ್ 2’ ಎದುರು ಬರದೆ ನಾವು ಬದುಕಿದೆವು; ಆಮಿರ್ ಖಾನ್​ಗೂ ಭಯ ಹುಟ್ಟಿಸಿದ್ದ ಯಶ್ ಚಿತ್ರದ ಅಬ್ಬರ
ಆಮಿರ್ ಖಾನ್-ಯಶ್
TV9 Web
| Edited By: |

Updated on: Jul 26, 2022 | 2:44 PM

Share

ಅದು 2018ರ ಸಮಯ. ‘ಕೆಜಿಎಫ್’ ಚಿತ್ರದ (KGF) ಎದುರು ಶಾರುಖ್ ಖಾನ್ ನಟನೆಯ ‘ಜೀರೋ’ ಚಿತ್ರ ತೆರೆಗೆ ಬಂತು. ಶಾರುಖ್ ಚಿತ್ರ ಮಕಾಡೆ ಮಲಗಿತು. ‘ಜೀರೋ’ ಚಿತ್ರದ ಎದುರು ‘ಕೆಜಿಎಫ್’ ಗೆದ್ದು ಬೀಗಿತು. ಈ ಇತಿಹಾಸ ಮರುಕಳಿಸಲಿದೆ ಎಂದೇ ಹೇಳಲಾಗಿತ್ತು. ‘ಕೆಜಿಎಫ್ 2’ ಎದುರು ಆಮಿರ್ ಖಾನ್ ನಟನೆಯ ‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ (Laal Singh Chaddha) ತೆರೆಗೆ ಬರುವುದರಲ್ಲಿತ್ತು. ಆದರೆ, ಸಿನಿಮಾ ತಂಡದವರು ಬಿಡುಗಡೆ ದಿನಾಂಕವನ್ನು ಮುಂದೂಡಿದರು. ಈ ಬಗ್ಗೆ ಆಮಿರ್ ಖಾನ್ ಈಗ ಮಾತನಾಡಿದ್ದಾರೆ. ‘ನಾವು ಬದುಕಿದೆವು’ ಎಂದು ಆಮಿರ್ ಖಾನ್ ಹೇಳಿದ್ದಾರೆ.

‘ಲಾಲ್ ಸಿಂಗ್ ಚಡ್ಡಾ’ ಸಿನಿಮಾ ಏಪ್ರಿಲ್ 14ರಂದು ತೆರೆಗೆ ಬರಬೇಕಿತ್ತು. ಆದರೆ, ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ವಿಳಂಬ ಆದ ಕಾರಣ ಸಿನಿಮಾ ರಿಲೀಸ್ ದಿನಾಂಕ ಆಗಸ್ಟ್ 11ಕ್ಕೆ ಮುಂದೂಡಲ್ಪಟ್ಟಿತ್ತು. ಈ ಬಗ್ಗೆ ಆಮಿರ್ ಖಾನ್ ಮಾತನಾಡಿದ್ದಾರೆ. ‘ಕೆಜಿಎಫ್ 2 ರಿಲೀಸ್ ಆಗುವುದರಲ್ಲಿತ್ತು. ಈ ಬಗ್ಗೆ ಪ್ರೇಕ್ಷಕರಲ್ಲಿ ಸಾಕಷ್ಟು ನಿರೀಕ್ಷೆ ಇತ್ತು. ವಿಶೇಷ ಎಂದರೆ ನನ್ನ ಗೆಳೆಯರ ಬಳಗದವರು ಈ ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದರು’ ಎಂದಿದ್ದಾರೆ ಆಮಿರ್ ಖಾನ್.

‘ಲಾಲ್ ಸಿಂಗ್ ಚಡ್ಡಾ ಸಿನಿಮಾ ಅಂದೇ (ಏಪ್ರಿಲ್ 14) ತೆರೆಗೆ ಬರಬೇಕಿತ್ತು. ಆದರೆ, ರೆಡ್​ ಚಿಲ್ಲೀಸ್ ಸ್ಟುಡಿಯೋದವರು ವಿಎಫ್​ಎಕ್ಸ್​ ಕೆಲಸ ವಿಳಂಬ ಮಾಡಿದರು. ಅದು ನಮ್ಮ ಅದೃಷ್ಟ. ನಾವು ಬದುಕಿದೆವು. ಇಲ್ಲವಾದರೆ ನಾವು ಕೆಜಿಎಫ್ 2 ಎದುರು ಸ್ಪರ್ಧಿಸಬೇಕಿತ್ತು’ ಎಂದಿದ್ದಾರೆ ಆಮಿರ್ ಖಾನ್.  ‘ಕೆಜಿಎಫ್ 2’ ಚಿತ್ರ ಬಾಕ್ಸ್ ಆಫೀಸ್​ನಲ್ಲಿ 1200 ಕೋಟಿ ರೂಪಾಯಿಗೂ ಅಧಿಕ ಕಲೆಕ್ಷನ್ ಮಾಡಿದೆ. ‘ಕೆಜಿಎಫ್ 2’ ಎದುರು ಸ್ಪರ್ಧೆ ಮಾಡಲಾಗದೆ ಅನೇಕ ಬಾಲಿವುಡ್ ಚಿತ್ರಗಳು ಸೋಲು ಒಪ್ಪಿಕೊಂಡಿವೆ. ‘ಲಾಲ್ ಸಿಂಗ್ ಚಡ್ಡಾ’ ರಿಲೀಸ್ ಆಗಿದ್ದರೆ ಈ ಸಾಲಿನಲ್ಲಿ ಈ ಚಿತ್ರ ಕೂಡ ಇರುತ್ತಿತ್ತು ಎಂಬುದು ಅನೇಕರ ಅಭಿಪ್ರಾಯ.

ಇದನ್ನೂ ಓದಿ: ರಾಜಮೌಳಿ, ಚಿರಂಜೀವಿಗೆ ‘ಲಾಲ್ ಸಿಂಗ್ ಚಡ್ಡಾ’ ಸ್ಪೆಷಲ್ ಶೋ; ಸ್ಟಾರ್​ಗಳ ಪ್ರತಿಕ್ರಿಯೆ ನೋಡಿ ಕಣ್ಣೀರಿಟ್ಟ ಆಮಿರ್ ಖಾನ್

1994ರಲ್ಲಿ ಬಂದ ‘ಫಾರೆಸ್ಟ್ ಗಂಪ್​’ ಚಿತ್ರದ ರಿಮೇಕ್ ‘ಲಾಲ್ ಸಿಂಗ್​ ಚಡ್ಡಾ’. ಈ ಚಿತ್ರದ ಟ್ರೇಲರ್ ಈಗಾಗಲೇ ರಿಲೀಸ್ ಆಗಿ ಮಿಶ್ರ ಪ್ರತಿಕ್ರಿಯೆ ಪಡೆದುಕೊಂಡಿದೆ. ಅನೇಕ ಸೆಲೆಬ್ರಿಟಿಗಳು ಈ ಚಿತ್ರ ನೋಡಿ ಮೆಚ್ಚಿಕೊಂಡಿದ್ದಾರೆ.