ಆಲಿಯಾ​ ರೀತಿ ದಿಶಾ ಪಟಾನಿಗೂ ರಣಬೀರ್ ಕಪೂರ್ ​ಮೇಲೆ ಇತ್ತು ಕ್ರಶ್; ಇದರಿಂದ ಆದ ತೊಂದರೆ ಒಂದೆರಡಲ್ಲ

ದಿಶಾ ಪಟಾನಿ ನಟನೆಯ ‘ಏಕ್​ ವಿಲನ್​ ರಿಟರ್ನ್ಸ್​’ ಸಿನಿಮಾ ಈ ವಾರ ತೆರೆಗೆ ಬರುತ್ತಿದೆ. ಈ ಸಿನಿಮಾದ ಪ್ರಚಾರ ಕಾರ್ಯದಲ್ಲಿ ದಿಶಾ ಬ್ಯುಸಿ ಆಗಿದ್ದಾರೆ. ಈ ವೇಳೆ ಅವರು ರಣಬೀರ್ ಬಗ್ಗೆ ಮಾತನಾಡಿದ್ದಾರೆ.

ಆಲಿಯಾ​ ರೀತಿ ದಿಶಾ ಪಟಾನಿಗೂ ರಣಬೀರ್ ಕಪೂರ್ ​ಮೇಲೆ ಇತ್ತು ಕ್ರಶ್; ಇದರಿಂದ ಆದ ತೊಂದರೆ ಒಂದೆರಡಲ್ಲ
ರಣಬೀರ್​-ದಿಶಾ
TV9kannada Web Team

| Edited By: Rajesh Duggumane

Jul 27, 2022 | 6:30 AM

ರಣಬೀರ್ ಕಪೂರ್ (Ranbir Kapoor) ಅವರು ಸ್ಟಾರ್ ಕಿಡ್. ಅವರು ಹಲವು ವರ್ಷಗಳಿಂದ ಚಿತ್ರರಂಗದಲ್ಲಿ ಇದ್ದಾರೆ. ಸಾಕಷ್ಟು ಹಿಟ್ ಚಿತ್ರಗಳನ್ನು ಅವರು ನೀಡಿದ್ದಾರೆ. ಅವರ ಮೇಲೆ ಅನೇಕರಿಗೆ ಕ್ರಶ್ ಇದೆ. ಆಲಿಯಾ ಭಟ್ ಅವರಿಗೆ ಚಿಕ್ಕ ವಯಸ್ಸಿನಲ್ಲೇ ರಣಬೀರ್ ಕಪೂರ್ ಮೇಲೆ ಮನಸ್ಸು ಇತ್ತು. ಈ ವಿಚಾರವನ್ನು ಆಲಿಯಾ ಭಟ್ (Alia Bhatt) ಸಂದರ್ಶನ ಒಂದರಲ್ಲಿ ಹೇಳಿಕೊಂಡಿದ್ದರು. ಈಗ ದಿಶಾ ಪಟಾನಿ ಕೂಡ ಇದೇ ರೀತಿಯ ವಿಚಾರ ಹೇಳಿಕೊಂಡಿದ್ದಾರೆ.

ದಿಶಾ ಪಟಾನಿ ನಟನೆಯ ‘ಏಕ್​ ವಿಲನ್​ ರಿಟರ್ನ್ಸ್​’ ಸಿನಿಮಾ ಈ ವಾರ ತೆರೆಗೆ ಬರುತ್ತಿದೆ. ಈ ಚಿತ್ರದಲ್ಲಿ ಅರ್ಜುನ್ ಕಪೂರ್, ಜಾನ್ ಅಬ್ರಾಹಂ ಮುಖ್ಯಭೂಮಿಕೆಯಲ್ಲಿದ್ದಾರೆ. ‘ಏಕ್​ ವಿಲನ್’ ಚಿತ್ರ ದೊಡ್ಡ ಮಟ್ಟದಲ್ಲಿ ಯಶಸ್ಸು ಕಂಡಿತ್ತು. ಈಗ ಈ ಚಿತ್ರಕ್ಕೆ ಸೀಕ್ವೆಲ್ ಬರುತ್ತಿದೆ. ಮೊದಲ ಪಾರ್ಟ್​ಗೂ ಎರಡನೇ ಪಾರ್ಟ್​ಗೂ ಕನೆಕ್ಷನ್ ಇದೆ ಎಂಬುದನ್ನು ಟ್ರೇಲರ್​ನಲ್ಲಿ ತೋರಿಸಲಾಗಿದೆ. ಈ ಸಿನಿಮಾದ ಪ್ರಚಾರ ಕಾರ್ಯದಲ್ಲಿ ದಿಶಾ ಬ್ಯುಸಿ ಆಗಿದ್ದಾರೆ. ಈ ವೇಳೆ ಅವರು ರಣಬೀರ್ ಬಗ್ಗೆ ಮಾತನಾಡಿದ್ದಾರೆ.

‘ಪಿಂಕ್ ವಿಲ್ಲಾ’ ವೆಬ್​ಸೈಟ್​ಗೆ ನೀಡಿದ ಸಂದರ್ಶನದಲ್ಲಿ ದಿಶಾ ಪಟಾನಿ ಮಾತನಾಡಿದ್ದಾರೆ. ರ್ಯಾಪಿಡ್ ಫೈರ್ ರೌಂಡ್​ನಲ್ಲಿ ‘ಮೊದಲ ಸೆಲೆಬ್ರಿಟಿ ಕ್ರಶ್​ ಯಾರು’ ಎಂದು ದಿಶಾಗೆ ಪ್ರಶ್ನೆ ಮಾಡಲಾಯಿತು. ಇದಕ್ಕೆ ಉತ್ತರಿಸಿದ ಅವರು, ‘ರಣಬೀರ್ ಕಪೂರ್ ನನ್ನ ಮೊದಲ ಸೆಲೆಬ್ರಿಟಿ ಕ್ರಶ್​. ಚಿಕ್ಕವಳಿದ್ದಾಗ ಅವರ ಮೇಲೆ ಕ್ರಶ್ ಇತ್ತು. ಅವರ ಪೋಸ್ಟರ್ ನೋಡುತ್ತಾ ಹೋಗುವಾಗ ಅಪಘಾತ ಆಗುವುದರಲ್ಲಿತ್ತು. ಸ್ಕೂಟಿಯಲ್ಲಿ ಹೋಗುವಾಗ ಅವರ ಪೋಸ್ಟರ್​ ನೋಡುತ್ತಾ ಬೇರೆಯವರಿಗೆ ಡಿಕ್ಕಿ ಹೊಡೆದಿದ್ದೂ ಇದೆ’ ಎಂದು ಹೇಳುತ್ತಲೇ ದಿಶಾ ಅವರು ನಾಚಿದ್ದಾರೆ.

ಇದನ್ನೂ ಓದಿ: ದಿಶಾ ಪಟಾನಿ ಹಾಟ್ ಅವತಾರಕ್ಕೆ ಸೆನ್ಸಾರ್ ಮಂಡಳಿ ಕತ್ತರಿ; ‘ಏಕ್ ವಿಲನ್ ರಿಟರ್ನ್ಸ್​’ ತಂಡದವರು ಏನಂದ್ರು?

ಈ ಮೊದಲು ಆಲಿಯಾ ಭಟ್ ಕೂಡ ಇದೇ ರೀತಿಯ ಹೇಳಿಕೆ ನೀಡಿದ್ದರು. ‘ನಾನು ಮೊಟ್ಟ ಮೊದಲ ಬಾರಿಗೆ ಅವರನ್ನು (ರಣಬೀರ್) ತೆರೆಮೇಲೆ ನೋಡಿದಾಗಲೇ ಮದುವೆ ಆದರೆ ಇವರನ್ನೇ ಆಗೋದು ಅಂತ ನಿರ್ಧಾರ ಮಾಡಿದ್ದೆ. ಆಗಿನ್ನೂ ನಾನು ಚಿಕ್ಕ ಹುಡುಗಿ ಆಗಿದ್ದೆ. ಆದರೂ ಆಗ ನಾನು ಆ ನಿರ್ಧಾರ ತೆಗೆದುಕೊಂಡಿದ್ದೆ. ಅದು ಒಂದು ರೀತಿಯ ಮನಸ್ಥಿತಿ’ ಎಂದು ಆಲಿಯಾ ಈ ಮೊದಲು ಹೇಳಿದ್ದರು.

ಇದನ್ನೂ ಓದಿ

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada